14 Jan 2010

ಕಾಲ


ನಿನ್ನೆ .....
ಮಹಾಕಾವ್ಯಗಳ ಸಾಲುಗಳನ್ನೇ ಉದಾಹರಿಸುತ್ತ
ಅನೇಕರ ಗೊಂದಲಗಳನ್ನು ಪರಿಹರಿಸುತ್ತ
ಮೊಮ್ಮಕ್ಕಳ ನಡುವೆ ನಲಿಯುತ್ತ
ಜೀವಂತಿಕೆಯೇ ಮೂರ್ತಿವೆತ್ತಂತ್ತಿದ್ದವರು
ಇಂದು ....
ಸದ್ದಿಲ್ಲದೇ ಮಾತು ಬಾರದವರಂತೆ ಮಲಗಿದ್ದಾರೆ
ಹೃದಯಕ್ಕೆ ಸುಸ್ತಾಗಿದೆ ವೈದ್ಯರೆನೋ ಹೇಳುತ್ತಾರೆ
ನಿನಗೊಂದು ನೆಪ ಬೇಕಿದೆ ಅಷ್ಟೇ
ನಿನ್ನ ಶಕ್ತಿಗೆ ಸಮನಾರು?
ಎಂತಹ ವ್ಯಕ್ತಿತ್ವವನ್ನೂ ಮಸುಕಾಗಿಸಬಲ್ಲೆ
ಸೂರ್ಯನನ್ನೇ ಮರೆಮಾಚುವ ಮೋಡದಂತೆ
ಇರಬಹುದು ನಮ್ಮಲ್ಲಿ ವಿಜ್ಞಾನ , ತಂತ್ರಜ್ಞಾನ , ದುಡ್ಡು ಕಾಸು
ತರಲಾದೀತೆ ಸಂದ ಕಾಲವನ್ನು ವಾಪಸು?