8 Oct 2009

ಮುನಿದ ಮಳೆರಾಯ

ಛೆ!! ಮನಸ್ಸೆಲ್ಲ ಭಾರವಾಗಿದೆ. ಪೇಪರ‍್,ಟಿ.ವಿ ಗಳಲ್ಲಿ ನೋಡಿದ ಜಲಪ್ರಳಯದ ದೃಶ್ಯಗಳು ಕನಸಲ್ಲೂ ಕಾಡುತ್ತವೆ. ಮುನಿದ ಮಳೆರಾಯ ಉತ್ತರ ಕರ್ನಾಟಕ,ಆಂಧ್ರದ ಅನೇಕ ಪ್ರದೇಶಗಳಲ್ಲಿ ನರಕ ಸೃಷ್ಠಿಸಿದ್ದಾನೆ.ಸಂಭಂಧಿಕರು,ಮನೆ, ಜಮೀನು,ಜಾನುವಾರು ಎಲ್ಲವನ್ನು ಕಳೆದುಕೊಂಡ ಜನರ ಗೋಳು ನೋಡಲಾಗದು.ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ.ಮಳೆಯ ನೀರಿನಲ್ಲಿ ಅನೇಕರ ಭವಿಷ್ಯವೆ ಕೊಚ್ಚಿಹೋಗಿದೆ.

ಮಾನವೀಯತೆಯ ದರ್ಶನವಾಗುವುದು ಸಹ ಇಂತಹ ವಿಪತ್ತು ಎದುರಾದಾಗಲೆ. ಹಣ, ಬಟ್ಟೆ, ಆಹಾರಸಾಮಗ್ರಿ ಎಲ್ಲವನ್ನು ದಾನವಾಗಿ ನೀಡುವ ಸಹಸ್ರ ಸಹಸ್ರ ಮಂದಿಯಿಂದ ನೊಂದವರಿಗೆ ಸ್ವಲ್ಪ ಮಟ್ಟಿನ ಆಸರೆ ದೊರಕೀತು.ಆದರೆ ಸಂಗ್ರಹವಾದ ವಸ್ತುಗಳನ್ನು ಅವಶ್ಯಕತೆಯಿರುವವರಿಗೆ ಸರಿಯಾಗಿ ಹಂಚಬೇಕಾದದ್ದು ಅವಶ್ಯಕ. ನಿಜವಾದ ಕಾಳಜಿಯಿಂದ ಸಂಗ್ರಹಿಸುವವರಿಗೆ ದಾನವನ್ನು ಕೊಡುವುದೊಳಿತು.

ಇನ್ನು ಇಂತಹ ವಿಚಾರದಲ್ಲೂ ರಾಜಕೀಯವನ್ನು ಮಾಡುವ, ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವ ಪಕ್ಷಗಳು, ಫುಢಾರಿಗಳು ,ಇದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಚಾರಪ್ರಿಯರು, ಹೇಳಲಾಗದಷ್ಟು ಅಸಹ್ಯ ಹುಟ್ಟಿಸುತ್ತಾರೆ.

ಪ್ರತೀಬಾರಿ ಇಂತಹ ಅವಗಢ ನಡೆದಾಗ ನನ್ನಲ್ಲೇಳುವ ಪ್ರಶ್ನೆ ಇದನ್ನು ತಡೆಯುವುದು ಸಾಧ್ಯವಿಲ್ಲವೆ? ನಿಜ ಪ್ರಕೃತಿಯ ಮುಂದೆ ಹುಲುಮಾನವರಾದ ನಾವು ಕುಬ್ಜರು. ಆದರೆ ಚಂದ್ರಲೋಕವನ್ನು ಪ್ರವೇಶಿಸಲು ತಯಾರಿರುವ ನಾವು {ನಾನು ನಮ್ಮ ದೇಶದ ಬಗ್ಗೆ ಹೇಳುತ್ತಿದ್ದೇನೆ}ಇಂತಹ ಪ್ರಾಕೃತಿಕ ವಿಕೋಪವನ್ನೆದುರಿಸಲು ಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಹವಾಮಾನ ಇಲಾಖೆ ಮುಂದಿನ ೨೪ಘಂಟೆ ಭರ್ಜರಿ ಮಳೆಯಾಗುತ್ತದೆ ಎಂದರೆ ಅಲ್ಲಿ ಬಿಸಿಲು ಬೀಳುತ್ತದೆ ಎಂದೆ ತಿಳಿದುಕೊಳ್ಳಬಹುದು.ಇನ್ನು ಭೂಕಂಪವಾದ ಮೇಲೆ ನಾವು ಮೊದಲೆ ಸೂಚಿಸಿದ್ದೆವು ,ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಅವರು , ಹಾಗೇನಿಲ್ಲ ನಮಗೆ ಯಾವುದೇ ಸೂಚನೆ ದೊರೆತಿರಲಿಲ್ಲ ಎಂದು ಸರ್ಕಾರಗಳು ಜಾರಿಕೊಳ್ಳುತ್ತವೆ.
ಇಂತಹ ವಿಪತ್ತುಗಳ ಸಂಭವನೀಯತೆಯನ್ನು ಅರಿಯುವ ವಿಚಾರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು.ಅದನ್ನು ಸಮರ್ಥವಾಗಿ ಎದುರಿಸುವ ರೀತಿಯನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಇದು ಇಂದಿನ ಅತ್ಯಂತ ಅವಶ್ಯಕ ಕಾರ್ಯ ಎಂದು ನನ್ನ ಅಭಿಪ್ರಾಯ.

7 comments:

  1. ನೀವು ಹೇಳುವದು ನಿಜ. ಜನರೇನೋ ಈ ಸಮಯದಲ್ಲಿ ಕೈಯೆತ್ತಿ ನೆರವು ನೀಡುತ್ತಿದ್ದಾರೆ. ಆದರೆ ಈ ನೆರವು ಸಂತ್ರಸ್ತರಿಗೆ ಸಕಾಲದಲ್ಲಿ ದೊರೆಯುವದೇ ದೊಡ್ಡ ಸವಾಲಾಗದೆ.

    ReplyDelete
  2. ಸುಮ ಮೇಡಮ್,

    ನಿಮ್ಮ ಮಾತು ಸರಿಯಾಗಿದೆ. ಈ ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತೊ ಗೊತ್ತಾಗುತ್ತಿಲ್ಲ. ಕೊನೆ ಪಕ್ಷ ಮುನ್ನೆಚ್ಚರಿಕೆಯನ್ನಾದರೂ ಸರಿಯಾಗಿ ಕೊಡಬೇಕು.

    ReplyDelete
  3. ಸುಮಾ ಮೇಡಂ,
    ನೆರವು ಅಹ್ರರಿಗೆ ಸಿಕ್ಕಾಗ ಮಾತ್ರ ಸಾರ್ತಕಥೆ ಸಿಗಲು ಸಾದ್ಯ.
    ಸುಮ್ಮನೆ ಪತ್ರಿಕೆಯ ಮುಕಪುತಕ್ಕಾಗಿ ನೆಅರವು ನೀಡಿದರೆ ಯಾವ ಪ್ರಯೋಜನವೂ ಇಲ್ಲ
    ಸಕಾಲದಲ್ಲಿ ಒಳ್ಳೆಯ ಲೇಖನ

    ReplyDelete
  4. ಸಕಾಲಿಕ ಲೇಖನ, ಎಲ್ಲವನ್ನು ಮಾನವ ಸಂಬಾಳಿಸುವ , ಕಂಟ್ರೋಲ್ ಮಾಡುವ ಹಾಗಿದ್ದರೆ ನಾವೇ ದೇವರಾಗುತ್ತಿದ್ದೆವು....ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ... ನೆರೆ ಬಂದಾಗ ಜೋಳಿಗೆ ಹಿಡಿದು ಹೊರಡುವವರ ಬಗ್ಗೆ ಜಾಗ್ರತೆಯಿಂದ ಇದ್ದು, ನಿಜವಾದ ಕಾಳಜಿಯಿದ್ದವರ ಕೈಗೆ ನಮ್ಮ ಸಹಾಯ ತಲುಪಿಸೋಣ.....

    ReplyDelete
  5. ಸುಮಾ, ಒಂದು ವಿಷಯ ಅಂತೂ ನಿಜ ಕಣ್ಣಿಗೆ ಕಾಣದ ಕಲ್ಪನೆಗೆ ನಿಲುಕದ ಪ್ರಕೃತಿ ವಿಕೋಪಗಳನ್ನು ಅಂದಾಜಿಸಬಹುದೇ ಹೊರತು ಕರಾರುವಕ್ಕಾಗಿ ಹೇಳಲು ವಿಜ್ಜಾನದಲ್ಲಿ ಮೇರು ಸಾಧನೆಗೈದಿರುವ ಅಮೇರಿಕನ್ನರಿಂದಲೂ ಸಾಧ್ಯವಿಲ್ಲ. ಇನ್ನು ನಮ್ಮ ಹವಾಮಾನ ಪೂರ್ವಾನುಮಾನ (ಇದನ್ನು ಪೂರ್ವಾನುಮಾನ ಎಂದೇ ಹೇಳಲಾಗುತ್ತೆ!!!) ಒಂದು ಭೂಕ್ಷೇತ್ರದ ಬಹುದೊಡ್ದ ಭಾಗಕ್ಕೆ ಅನ್ವಯಿಸುವಂತೆ ಅಂದಾಜಿಸಲಾಗುತ್ತದೆ, ನಮ್ಮ ಅತಿವ್ರ‍ಿಷ್ಟಿಯ ಅಂದಾಜನ್ನು ಸೆಪ್ಟಂಬರ್ ೨೭ಕ್ಕೇ ನೀಡಲಾಗಿತ್ತಂತೆ. ಅಪಾಯದ ಸುಳಿವಿದ್ದಲ್ಲಿ ಮುಂಜಾಕರೋಕರಾಗುವುದರಲ್ಲಿ ತಪ್ಪಿಲ್ಲ ಅದು ಒಂದು ಪಕ್ಷ ನಿಜವಾಗದಿದ್ದರೂ ಪರ್ವಾಯಿಲ್ಲ ಅದೇ ಉದಾಸೀನರಾದರೆ...???
    ನಮ್ಮ ಜನಪ್ರತಿನಿಧಿಗಳಲ್ಲಿ ನಿಜ ಕಾಳಜಿ ಬರದಿದ್ದರೆ....ಬಿ.ಬಿ.ಎಮ್.ಪಿ ಗಟಾರಕ್ಕೆ ಬಲಿಯಾದಂತೆ ಜನ ಬಲಿ ತಪ್ಪಿದ್ದಲ್ಲ

    ReplyDelete
  6. ಸುಮ....

    ಪ್ರಕೃತಿಯ ಎದುರಲ್ಲಿ ಮನುಷ್ಯ ಬಹಳ ಕುಬ್ಜ...
    ಎಷ್ಟೇ ಹಾರಾಡಿದರೂ...
    ಸೃಷ್ಟಿಯ ಎದುರಲ್ಲಿ ನಿಲ್ಲಲಾರ...

    ತುಂಬ ಚೆನ್ನಾಗಿ...
    ಸಕಾಲಿಕವಾಗಿ ಬರೆದಿದ್ದೀರಿ....

    ಅಭಿನಂದನೆಗಳು...

    "ನಾಗಂದಿಗೆ" ಲಿಂಕ್ ನೋಡಿದೆ...
    ಸೊಗಸಾಗಿದೆ...
    ತುಂಬಾ ಚೆನ್ನಾಗಿ ಬರೆಯುತ್ತಾರೆ...
    ಅಂದು ಚಿಟ್ಟಾಣಿಯವರ ಸಭೆಯಲ್ಲಿ "ಸುಧಾಕಿರಣ್" ಅವರ ಮಾತಿನ ಮೋಡಿಗೆ ಬೆರಗಾಗಿದ್ದೇನೆ...
    ಅವರಿಗೆ ನನ್ನ ಅಭಿನಂದನೆ ತಿಳಿಸಿ...

    ReplyDelete
  7. ಸ್ವಲ್ಪ ತಡವಾದರು ಸರ್ಕಾರ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸುತ್ತಿರುವುದು ಸಂತೋಷ.ಸದಾ ನೆರೆ ಹಾನಿಗೊಳಗಾಗುವ ಹಳ್ಳಿಗಳ ಸ್ಥಳಾಂತರದ ಬಗ್ಗೆ ಕೂಡ ಚಿಂತನೆ ಸರ್ಕಾರ ಚಿಂತನೆ ನಡೆಸುತ್ತಿದೆಯೆಂದು ವರದಿಯಾಗಿದೆ. ಇವೆಲ್ಲ ಕಾರ್ಯರೂಪಕ್ಕೆ ಬರಬೇಕಷ್ಟೆ.
    ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete