ನಮಸ್ಕಾರ.... ಯಾರೂಂತ ಗೊತ್ತಾಗ್ಲಿಲ್ವ .... ನಾನ್ರೀ ನಿಮ್ಮೆಲ್ಲರ ಮೆಚ್ಚಿನ ಹೂವು . ಗುಲಾಬಿ , ಮಲ್ಲಿಗೆ , ಸಂಪಿಗೆ , ಜಾಜಿ , ನಂದಿಬಟ್ಟಲು , ಜರ್ಬೆರ , ಲಿಲ್ಲಿ , ಕಮಲ ........... ಇನ್ನೂ ಅನೇಕ ಹೆಸರಿನಿಂದ ನನ್ನನ್ನು ಗುರುತಿಸುತ್ತೀರಲ್ಲವೆ . ಇನ್ನೂ ನಿಮಗೆ ಹೆಸರಿಸಲಾಗದ ಅದೆಷ್ಟೋ ವಿಧಗಳಲ್ಲಿ ನಾನಿದ್ದೇನೆ . ಕಾಡಿನ ದೈತ್ಯಾಕಾರದ ಮರಗಳಲ್ಲಿ .... ಚಿಕ್ಕ ಪುಟ್ಟ ಗಿಡಗಳಲ್ಲಿ ..... ಕಾಂಕ್ರೀಟ್ ಕಾಡಿನ ಬಾಲ್ಕನಿಯ ಪಾಟ್ ನಲ್ಲಿ ......ಮರಳುಗಾಡಿನ ಮುಳ್ಳಿನ ಗಿಡಗಳಲ್ಲಿ.....ನೀರಿನಲ್ಲಿ ..... ಎಲ್ಲೆಲ್ಲೂ ನಾನಿದ್ದೇನೆ .
ಅಬ್ಬಬ್ಬ ನೀವು ಮನುಷ್ಯರಿಗೆ ನನ್ನನ್ನು ಕಂಡರೆ ಅದೆಷ್ಟು ಇಷ್ಟ ...... ವಾಕಿಂಗ್ ನೆಪದಲ್ಲಿ ಹೊರಟು ಅಕ್ಕಪಕ್ಕದವರು ಬೆಳೆಸಿರುವ ಹೂವುಗಳನ್ನು ಕೊಯ್ದು ದೇವರ ಪೂಜೆ ಮಾಡುವ ಆ ತಾತ ....... ತನ್ನ ಅಂದ ಹೆಚ್ಚಿಸಿಕೊಳ್ಳಲು ತಾನೇ ಬೆಳೆಸಿದ ಸೇವಂತಿಗೆಯನ್ನು ಮುಡಿಗೇರಿಸುವ ಈ ಆಂಟಿ ...... ಮುನಿದ ಮಡದಿಯನ್ನು ಸಂತೈಸಲು ಆಫಿಸಿಂದ ಬರುವಾಗ ಹೂಗೊಂಚಲು ತರುವ ಆ ಅಂಕಲ್ ....... ಅಜ್ಜಿ ನನ್ನ ಜುಟ್ಟಿಗೆ ಹೂ ಮುಡಿಸು ಎನ್ನುವ ಮೊಮ್ಮಗಳಿಗಾಗಿ , ಹೂ ಮಾರುವವಳ ಬಳಿ ಚೌಕಾಶಿ ಮಾಡಿ ಹೂ ಕೊಳ್ಳುವ ಅಜ್ಜಿ ..... ರಿಸಲ್ಟ್ ದಿನ ದೇವರ ಮೇಲೆ ಎಲ್ಲಿಲ್ಲದ ಭಕ್ತಿ ಹುಟ್ಟಿ ದೇವಸ್ಥಾನದ ಬಳಿಯ ಹೂವಿನಂಗಡಿಯಲ್ಲಿ ಆತ ಹೇಳಿದಷ್ಟು ದುಡ್ದು ಕೊಟ್ಟು ಹೂ ಕೊಂಡು ದೇವರಿಗೆ ಲಂಚವಾಗಿ ನೀಡುವ ಈ ಕಿಶೋರಿ ..........ನಡುಗುವ ಹೃದಯದೊಂದಿಗೆ ಪ್ರಥಮ ಬಾರಿ ಪ್ರೇಮಪತ್ರದ ಜೊತೆ ಕೆಂಗುಲಾಬಿಯಿರಿಸಿ ತನ್ನ ಹುಡುಗಿಯ ಕಣ್ಣಿಗೆ ಬೀಳುವಂತೆ ಇಟ್ಟು ಓಡಿ ಬರುವ ಹುಡುಗ ......ಹಾಂ ....ಎಲ್ಲರಿಗೂ ನಾನು ಬೇಕು.ಇನ್ನು ನಿಮ್ಮಲ್ಲಿ ಒಂದು ವಿಚಿತ್ರ ವರ್ಗವಿದೆಯಲ್ಲ , ಅದೇನೊ ಕವಿಗಳೂಂತ ಕರೀತೀರಲ್ಲ .... ಅವರಿಗಂತೂ ನಾನು ಸ್ಫೂರ್ತಿದೇವತೆ . ಹೆಣ್ಣಿನ ಮುಖ , ಕಣ್ಣು , ಮೂಗು , ಬಾಯಿ ಎಲ್ಲವನ್ನೂ ನನಗೇ ಹೋಲಿಸಿ ಹೊಗಳುತ್ತಾರೆ ಅವರು. ಸೌಂದರ್ಯಕ್ಕೆ ಇನ್ನೊಂದು ಹೆಸರೇ ನಾನೇನೊ ಎಂಬಂತೆ .
ಇತ್ತೀಚೆಗಂತೂ ನನ್ನ ಬೇಡಿಕೆ ಎಷ್ಟು ಹೆಚ್ಚಿದೆ ಗೊತ್ತಾ? ನಿಮ್ಮ ಹುಟ್ಟು ...ಸಾವು...ಬರ್ತಡೇ ..ಮದುವೆ ...ಹಬ್ಬ ..ಹೀಗೆ ಎಲ್ಲ ಸಂದರ್ಭಗಳಲ್ಲೂ ನನ್ನಿರುವು ತುಂಬ ಮುಖ್ಯವಾಗಿಬಿಟ್ಟಿದೆ . ಅದರಲ್ಲೂ ಶ್ರೀಮಂತರ ಮನೆಗಳಲ್ಲಿ ಇಂತಹ ಸಂದರ್ಭಗಳೆಂದರೆ ನನಗೋಸ್ಕರ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ . ನನ್ನನ್ನು ಉಪಯೋಗಿಸಿಕೊಂಡು ಸಮಾರಂಭಗಳಲ್ಲಿ ಅಲಂಕಾರ ಮಾಡುವವರು ಎಷ್ಟೋ ಹಣ ಗಳಿಸುತ್ತಾರೆ . ಅನೇಕ ರೈತರೂ ಕೂಡ ತಾವು ತಿನ್ನುವ ಆಹಾರ ಬೆಳೆ ಬೆಳೆಯುವುದನ್ನು ಬಿಟ್ಟು , ನನ್ನನ್ನೇ ಬೆಳೆಸಿ ಶ್ರೀಮಂತರಾಗಿದ್ದಾರೆ . ನನ್ನದೇ ಹೆಸರಿನಲ್ಲಿ ಮೇಳಗಳನ್ನು ನೆಡೆಸುವುದು ದಂದೆಯಾಗಿಬಿಟ್ಟಿದೆ ನಿಮಗೆ .
ನನಗಿಷ್ಟೆಲ್ಲ ಬೇಡಿಕೆಯುಂಟಾಗಿರುವುದು ಸಂತೋಷವಾದರೂ ಒಮ್ಮೊಮ್ಮೆ ನನ್ನ ದುಸ್ಥಿತಿ ನೆನೆದು ದುಖಃವೂ ಆಗುತ್ತದೆ .
ಹೀಗೆಲ್ಲ ನನ್ನನ್ನು ನಿಮ್ಮನುಕೂಲಕ್ಕಾಗಿ ಬೆಳೆಸುತ್ತೀರಲ್ಲ ನನ್ನ ತಾಯಿಯಾದ ಸಸ್ಯ ಯಾವ ಉದ್ದೇಶಕ್ಕಾಗಿ ನನ್ನನ್ನು ಹಡೆಯುತ್ತಾಳೊ ..ಆ ಉದ್ದೇಶವೇ ಸಫಲವಾಗದಂತೆ ಮಾಡುವುದರಲ್ಲಿ ನೀವು ಸಿದ್ಧಹಸ್ತರು ಬಿಡಿ.
ನಾನು ನನ್ನ ಸುಂದರವಾದ ಬಣ್ಣ ರೂಪ ವಾಸನೆಗಳ ಮುಖಾಂತರ ಕೀಟ , ಹಕ್ಕಿಗಳು , ಬಾವಲಿಗಳು ಮುಂತಾದ ಪ್ರಾಣಿಗಳನ್ನಾಕರ್ಷಿಸಿ , ಅವುಗಳಿಗೆ ನನ್ನ ಸಿಹಿಯಾದ ಮಕರಂದ ನೀಡಿ ತಣಿಸಿ , ಜೊತೆಗೇ ಅವುಗಳ ಸಹಾಯದಿಂದ ನನ್ನ ಪರಾಗಸ್ಪರ್ಶ ಕ್ರಿಯೆ ನಡೆಸಿಕೊಂಡು ಫಲವತಿಯಾಗುತ್ತೆನೆ . ಆ ಮೂಲಕ ನನ್ನ ತಾಯಿ ಸಸ್ಯದ ವಂಶಾಭಿವೃದ್ಧಿ ಮಾಡುತ್ತೇನೆ .
ನೀವು ಮಾತ್ರ ನನ್ನ ಈ ಗುಣವನ್ನೇ ಮರೆತು ನಾನಿರುವುದು ನಿಮಗಾಗಿಯೇ ಎಂಬಂತೆ ನಡೆಸಿಕೊಳ್ಳುತ್ತೀರಲ್ಲ . ದುಖಃವಾಗುತ್ತದೆ . "ಹೂವಿನ ಸಾರ್ಥಕತೆ ದೇವರ ಮುಡಿಗೇರಿದಾಗ ಅಥವಾ ಸುಂದರ ಹೆಣ್ಣಿನ ಮುಡಿಗೇರಿದಾಗ " ಎಂದೆಲ್ಲ ನೀವು ಹೇಳುವಾಗ ನನಗೆ ನಗಬೇಕೋ ಅಳಬೇಕೋ ತಿಳಿಯದಾಗುತ್ತದೆ .
ನನ್ನ ಪಾಲಿಗೆ ನನ್ನ ಪರಾಗಸ್ಪರ್ಶ ನಡೆಸುವ ಜೀವಿಗಳೇ ದೇವರು . ಅವು ನನ್ನ ಮಕರಂದವನ್ನು ಹೀರಿದಾಗಲೇ ನನ್ನ ಜನ್ಮ ಸಾರ್ಥಕವಾಗಿವುದು .
ಹುಂ ... ನಿಮಗಿದೆಲ್ಲ ಎಲ್ಲಿ ಅರ್ಥವಾಗಬೇಕು ಹೇಳಿ .... ನಿಮ್ಮ ಬುದ್ಧಿಬಲದಿಂದ ಈ ಜಗತ್ತನ್ನೇ ನಿಮ್ಮ ಮುಷ್ಟಿಯಟ್ಟುಕೊಂಡು ಬೀಗುತ್ತಿದ್ದೀರಿ ನೀವು....ಧಿಕ್ಕಾರವಿರಲಿ ನಿಮ್ಮ ಜಾತಿಗೆ.
ಬಹಳ ಸುಂದರ ಹೂಗಳ ಸುಂದರ ಚಿತ್ರಗಳು. ಕುವೆಂಪು ರವರ ಉಕ್ತಿಯನ್ನು ಕೆಮ್ಮಣ್ಣುಗುಂಡಿಯಲ್ಲಿ ಬರೆದಿಟ್ಟಿರುವುದು ನೆನಪಾಯ್ತು,,, ನೀ ಸೃಷ್ಟಿಸಲಾರದ ಹೂವಿಗೆ ನಿನ್ನಿಂದೇತಕೆ ಸಾವು ಅಂತ. ಬರಹ ಕೂಡ ಚೆನ್ನಾಗಿದೆ.
ReplyDelete"ಹೂ"ವಿನ ಸ್ವಾಗತ ಪ್ರಾರಂಭಾವಾದಾಗಲೇ ನನಗೆ ಅನುಮಾನ ಹತ್ತಿತ್ತು!!
ReplyDeleteಸುಮಾರವರು ಏನೋ ದೊಡ್ಡದೇ ಹೇಳೋಕ್ಕೆ ಹೊರಟಿದ್ದಾರೆ ಅಂಥಾ...
ನಿಮ್ಮ ಮಾತು ಎಷ್ಟು ಸತ್ಯ!!!
ಗುಡಿಸೇರದ ಮುಡಿಯೇರದ ಕದೆಗಾಣಿಪ ಹೂವಿಲ್ಲಾ
ಅಂಥಾ ಹಾಡಿ ಅದರ ಅಸ್ತಿತ್ವನ್ನ ಅಷ್ಟಕ್ಕೇ ಸೀಮಿತ ಮಾಡಿ ಅದರ ಬದುಕಿನ ಮೂಲೋದ್ಧೇಶ ನಡಯದ೦ತೆ ಮಾಡೋ ಮನುಜ ನಿಜಕ್ಕೂ ಸ್ವಾರ್ಥ ಕಟುಕ ಜೀವಿ!!
ಬಹಳ ಅದ್ಭುತವಾದ ತ೦ತ್ರಗಾರಿಕೆಯಲ್ಲಿ ಸರಳ ಸಾಲಿನಲ್ಲಿ ಹೂವಿನ ಮನದಾಲವನ್ನು ಹೊರಹಾಕಿದ್ದಿರಾ...
ಹೂವೆಲ್ಲ ನಮ್ ಮೇಲೆ ದಿಕ್ಕಾರ ಕೂಗಿದರೆ ನಮ್ ಗತಿ ಎಂತೆ ಸುಮಕ್ಕಾ?...:(
ReplyDeletenice write up ... :-)
ಸುಮಾ,
ReplyDeleteನಿಮ್ಮ ಭಾವನೆ ತಿಳಿದು ಸಂತೋಷವಾಯಿತು. ನಾನೂ ಸಹ ಹೂವು ಹರಿಯುವದಿಲ್ಲ, ಯಾವುದೇ ಕಾರಣಕ್ಕೂ ; ದೇವರಾದರೂ ಮುನಿಸಿಕೊಳ್ಳಲಿ,ಮಡದಿಯಾದರೂ ಬಿಗಡಾಯಿಸಲಿ!
ಸುಮ, ಪ್ರಕೃತಿಯನ್ನು ಮನುಷ್ಯ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಲೇ ಬಂದಿದ್ದಾನೆ.
ReplyDeleteಫೋತೋ ಮತ್ತು ಲೇಖನ ಹೃದಯಸ್ಪರ್ಶಿ.
ಸುಮಾ ಅವರೇ,
ReplyDeleteಪ್ರಕೃತಿಗೂ ತನ್ನದೇ ಆದ ಕರ್ತವ್ಯಗಳಿವೆ, ಅದರ ಕರ್ತವ್ಯಕ್ಕೆ ಮನುಷ್ಯರು ಎಷ್ಟು ತೊಂದರೆ ಕೊಡುತ್ತಿದ್ದೇವೆ ಅಲ್ವಾ?
ನಿಮ್ಮ ಪ್ರಕೃತಿ ಕಾಳಜಿ ಸಂತೋಷ ಕೊಟ್ಟಿತು.
ಸುಮ ಮೇಡಮ್,
ReplyDeleteನಿಮ್ಮ ಭಾವನೆಗಳೇ ನನ್ನ ಭಾವನೆಗಳು ಕೂಡ. ನನಗೂ ಹೂ ಕಂಡರೆ ತುಂಬಾ ಇಷ್ಟ. ಆದರೂ ನಾವೆಲ್ಲಾ ಎಷ್ಟು ತೊಂದರೆ ಕೊಡುತ್ತೇವೆ ಅಲ್ವಾ...
ನಿಮ್ಮ ಕಾಳಜಿ ಇಷ್ಟವಾಯಿತು.
ತುಂಬಾ ಚೆನ್ನಾಗಿ ಹೂಗಳ ಚಿತ್ರ ಹಾಕಿ..ಅವುಗಳ ಮನಸ್ಸಿನ ಮಾತನ್ನು ಹೇಳಿದ್ದಿರಿ.
ReplyDeleteನಿಮ್ಮವ,
ರಾಘು.
ಸುಮ ಮೇಡಂ;ಒಳ್ಳೆಯ ಬರಹ.ಸೊಗಸಾದ ಚಿತ್ರಗಳು.
ReplyDeleteತುಂಬಾ ಚನ್ನಾಗಿದೆ..ಅವುಗಳ ಶೋಷಣೆ ನಮಗೆ ಅನಿವಾರ್ಯವಾಗಿದೆ!
ReplyDelete--
tumbaaaaaaaaaaa sundara photogalu..... chennaagi tegediddeeri...... hoovu, nanagoo ishta.... naavu adanna, keeLadeiddaroo avugaLa aayushya swalpa allavaa.....
ReplyDeletewow beautiful
ReplyDeleteಹೂ ಸ್ವಗತ ಬಲು ಹಿತ, ಮನಕಾಯ್ತು ಸಂತಸ ಸತತ! ಬರಲಿ ನಿಮ್ಮ ಲೇಖನಗಳು ಅನವರತ!
ReplyDeleteಸುಮ ,
ReplyDeleteಕಮಲವೆಲ್ಲಿ..!?
ಕಮಲಕ್ಕೆ ಅಲ್ಲವೇ ಕವಿಕಲ್ಪನೆ ಹೆಣ್ಣಿನ ಮುಖಾರವಿಂದವನ್ನು ಹೋಲಿಸುವುದು..
ಅಂದವಾಗಿದೆ..
I love flowers, but i like them on the plants and trees that bear them
ReplyDeletehere is a old post
http://malathisanchiyinda.blogspot.com/2009/08/blog-post_28.html
(u may have to copy paste this link on the browser)
We could not go to Bhimeshwar this time when i visited t'halli, instead we revisited jog and went to Ikkeri. will post that soon
thanks for coming to my blog
:-)
malathi S
ಚೆನ್ನಾಗಾಗಿದೆ ಬರೆದದ್ದು .. ಸುಂದರವಾದ ಲೇಖನಕ್ಕಾಗಿ ಧನ್ಯವಾದಗಳು .
ReplyDeleteಸುಮಾ ಅವರೇ,
ReplyDeleteಒಳ್ಳೆಯ ಬರಹ,ಸುಂದರ ಹೂಗಳ ಚಿತ್ರಗಳು.
ಚೆನ್ನಾಗಿದೆ ಹೂವಿನ ಅಂತರಂಗದ ಮಾತುಗಳು.. ಇದೇ ರೀತಿ ಹಿಂದೆ ನಾನು ಮಿಡತೆಯ ಅಂತರಂಗದ ಮಾತುಗಳನ್ನು ಹೇಳಿದ್ದೆ, ಆಸಕ್ತಿ ಇದ್ದರೆ ಇಲ್ಲಿ ನೋಡಬಹುದು: http://palachandra.blogspot.com/2009/04/blog-post.html
ReplyDeleteFlowers..flowers flowers galore
ReplyDeletebutterflies to cherish every where
bahala chennaagide nimma lekhana....system restore maadide Baraha downlaod maadbeku...
ಹೂಗಳು ಮತ್ತು ಬರಹ ಎರಡೂ ಚೆ೦ದ.
ReplyDeleteಶುಭಾಶಯಗಳು
ಅನ೦ತ್
ಚಿತ್ರಗಳು ತುಂಬ ಸುಂದರವಾಗಿವೆ
ReplyDelete