05-Jan-2011

ಮನತಣಿಸುವ ನಾಮದ ಚಿಲುಮೆ - ದೇವರಾಯನ ದುರ್ಗ

ಬೆಂಗಳೂರಿನ ಕಾರ್ಬನ್ ತುಂಬಿದ ಗಾಳಿ ಕುಡಿದು ಶ್ವಾಸಕೋಶಗಳು ನೊಂದಿವೆಯೆ ? ಇಲ್ಲಿನ ಕಾಂಕ್ರೀಟ್ ಕಟ್ಟಡಗಳು , ಕೆಟ್ಟ ಟ್ರಾಫಿಕ್, ಕೊಳಚೆ ಚರಂಡಿ ನೋಡಿ ಕಣ್ಣು ಕೆಂಪಾಗಿದೆಯೆ? ವಾಹನಗಳ ಕರ್ಕಶ ಶಬ್ದದಿಂದ ಕಿವಿ ನೋವಾಗಿದೆಯೆ? ಹಾಗಾದರೊಮ್ಮೆ ನಾಮದಚಿಲುಮೆಗೆ ಹೋಗಿಬನ್ನಿ.


ಇಲ್ಲಿನ ಹಸಿರು ಕಣ್ಣು ತಣಿಸುತ್ತದೆ. ಶುದ್ದಗಾಳಿ , ಕಾಡಿನ ಮೌನ ಮನತಣಿಸುತ್ತದೆ.
ಸಮಯವೇ ಇಲ್ಲ ಎಲ್ಲಿಗೆ ಹೋಗೋದು ಎನ್ನುತ್ತೀರಾ? ನಾಮದ ಚಿಲುಮೆ ಎಂಬ ಈ ಪುಟ್ಟ ಊರು ಬೆಂಗಳೂರಿನಿಂದ ಕೇವಲ ೭೦ ಕಿಲೋಮೀಟರ್ ದೂರವಿದೆ ಅಷ್ಟೆ. ತುಮಕೂರಿನಿಂದ ೧೪ ಕಿಲೋಮೀಟರ್ ದೂರದಲ್ಲಿರುವ ನಾಮದ ಚಿಲುಮೆ ಮತ್ತು ಅದರ ಸನಿಹದಲ್ಲೇ ಇರುವ ದೇವರಾಯನ ದುರ್ಗ , ಬೆಂಗಳೂರಿಗರಿಗೆ ಐಡಿಯಲ್ ಪಿಕ್ನಿಕ್ ಸ್ಪಾಟ್.ಇಲ್ಲಿ ಬಂಡೆಯೊಂದರಿಂದ ಹೊರಬರುವ ನೀರಿನ ಚಿಲುಮೆಯಿದೆ . ಎಂತಹ ಬೇಸಗೆಯಲ್ಲೂ ಇದು ಬತ್ತುವುದಿಲ್ಲವೆನ್ನುತ್ತಾರೆ ಸ್ಥಳೀಯರು. ಇಂತಹ ಯಾವುದೇ ಪ್ರಕೃತಿವಿಸ್ಮಯವನ್ನೂ ರಾಮಾಯಣ , ಮಹಾಭಾರತದ ಜೊತೆ ತಳಕುಹಾಕುವ ಅಭ್ಯಾಸ ನಮ್ಮ ದೇಶದ ಎಲ್ಲಾ ಪ್ರದೇಶಗಳಲ್ಲೂ ಕಂಡುಬರುತ್ತದೆ. ಅಂತೆಯೆ ಈ ಪ್ರದೇಶಕ್ಕೂ ಒಂದು ಕಥೆಯಿದೆ.ಹಿಂದೆ ರಾಮ ತನ್ನ ವನವಾಸದ ಕಾಲದಲ್ಲಿ ಇಲ್ಲಿ ಕೆಲಕಾಲ ತಂಗಿದ್ದನಂತೆ. ಒಂದು ದಿನ ಹಣೆಗೆ ತಿಲಕವನ್ನಿಡಲು ಸನಿಹದಲ್ಲೆಲ್ಲೂ ನೀರು ಸಿಗದಿರಲು ಕುಳಿತಿದ್ದ ಬಂಡೆಗೆ ಬಾಣ ಬಿಟ್ಟನಂತೆ . ಆಗ ಆ ಕಲ್ಲುಬಂಡೆಯಿಂದ ನೀರಿನ ಚಿಲುಮೆ ಚಿಮ್ಮಿತಂತೆ . ಆದ್ದರಿಂದಲೇ ಈ ಸ್ಥಳ ನಾಮದ ಚಿಲುಮೆ ಎಂದೇ ಪ್ರಖ್ಯಾತವಾಯಿತಂತೆ.

ಇಲ್ಲಿ ಜಿಂಕೆವನ ಕೂಡ ಇದೆ. ತಲೆಮೇಲೆ ಕಿರೀಟದಂತಹ ಕೊಂಬನ್ನು ಹೊತ್ತಿರುವ , ಕಂದು ಬಣ್ಣದ ಮೇಲೆ ಬಿಳಿ ಚುಕ್ಕಿಗಳಿಂದಲಕೃತವಾದ ಮೈಬಣ್ಣದ ಈ ಜಿಂಕೆಗಳನ್ನು ನೋಡುವುದೇ ಸೊಗಸು .
ಇಲ್ಲಿನ ಕಾಡನ್ನು ಅರಣ್ಯ ಇಲಾಖೆ ಜೈವಿಕವನವೆಂದು ಘೋಷಿಸಿದೆ .

ಇಲ್ಲಿ ಫಾರೆಸ್ಟ್ ಗೆಸ್ಟ್ ಹೌಸ್ ಒಂದಿದೆ . ಅದು ಬಿಟ್ಟರೆ ಬೇರಾವುದೇ ಹೋಟೆಲ್ಗಳಾಗಲೀ ಅಂಗಡಿಗಳಾಗಲೀ ಇಲ್ಲ. ಆದ್ದರಿಂದ ಹೋಗುವವರು ಆಹಾರ , ನೀರು ತೆಗೆದುಕೊಂಡು ಹೋಗುವುದು ಉತ್ತಮ .

ಸನಿಹದಲ್ಲೇ ಇರುವ ದೇವರಾಯನ ದುರ್ಗ ಕೂಡ ತುಂಬ ಸುಂದರವಾಗಿದೆ. ಬೆಟ್ಟದ ಮೇಲಿನಿಂದ ಕಾಣುವ ವಿಹಂಗಮ ನೋಟ ಪ್ರಪಂಚವನ್ನೇ ಮರೆಸುತ್ತದೆ.ಅಲ್ಲಿನ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ರೌಡಿ ಮಂಗಗಳಿವೆ . ಯಾರ ಕೈಯಲ್ಲಾದರೂ ಹಣ್ಣುಕಾಯಿಯ ಕವರ್ ಅಥವಾ ತಿಂಡಿ , ಸೌತೆಕಾಯಿ , ಹೀಗೆ ಏನೇ ಕಂಡರೂ ಅಡ್ಡಗಟ್ಟಿ ಹಲ್ಲುಕಿರಿದು ಹೆದರಿಸಿ ದೋಚಿಬಿಡುತ್ತವೆ.


ಒಟ್ಟಿನಲ್ಲಿ ಬೆಂಗಳೂರಿನ ಜಂಜಡಗಳಿಂದ ಬೇಸರವಾಗಿದ್ದರೆ ಒಮ್ಮ ರಿಫ್ರೆಶ್ ಆಗಿಬರಲು ಮಲೆನಾಡಿನ ಅನುಭವ ನೀಡುವ ನಾಮದಚಿಲುಮೆ, ದೇವರಾಯನದುರ್ಗಕ್ಕೆ ಭೇಟಿ ನೀಡಬಹುದು.

ಈ ಲೇಖನ ೧೧-೧೨-೨೦೧೦ ರ "ಹೊಸದಿಗಂತ "ದಲ್ಲಿ ಪ್ರಕಟವಾಗಿದೆ .

24 comments:

 1. uttama chitra lekhana..

  photo chennaagi bandive...

  ReplyDelete
 2. ಚಂದದ ಫೋಟೋಗಳು-ಉತ್ತಮ ವಿವರಣೆ. ಸದ್ಯವೇ ಗಗನಚುಕ್ಕಿ-ಭರಚುಕ್ಕಿ ಪುರಾಣ ಹೊತ್ತು ನಾನೂ ಬರುತ್ತಿದ್ದೇನೆ!!!

  ReplyDelete
 3. ಉತ್ತಮ ಮಾಹಿತಿಗಾಗಿ ತುಂಬ ಧನ್ಯವಾದಗಳು.

  ReplyDelete
 4. ಸುಮ, ಮಾಹಿತಿ ಮತ್ತು ಫೋಟೋಗಳು ತುಂಬಾ ಚನ್ನಾಗಿವೆ...ಅದ್ರಲ್ಲೂ ಕಟ್ಟಕಡೆಯ ಫೋಟೋದಲ್ಲಿ,,,ಶಂಕರನ ಮೇಲೆ ಕೂತ ಮಂಗ...ಹಹಹಹ....

  ReplyDelete
 5. ಒಳ್ಳೆಯ ಮಾಹಿತಿ,,, ನಾನು ತುಂಬಾ ಚಿಕ್ಕವನಾಗಿದ್ದಾಗ ಇಲ್ಲಿಗೆ ಬೇಟಿ ಕೊಟ್ಟಿದ್ದೆ.... ಮತ್ತೊಮ್ಮೆ ಹೋಗಬೇಕು ಅಂತ ಅನ್ನಿಸ್ತಾ ಇದೆ.....

  ReplyDelete
 6. ಉತ್ತಮ ಮಾಹಿತಿಗಾಗಿ ಧನ್ಯವಾದಗಳು!!

  ReplyDelete
 7. naavu tumba sari noDiddeevi ee place tumba chennagide

  ReplyDelete
 8. Sooper Sumakka..nangu ee jagakke hogaku... :-)

  ReplyDelete
 9. ಸುಮಾ ಚಿತ್ರ ದೊಂದಿಗೆ ಒಳ್ಳೆಯ ವಿವರಣೆ.ಕೊನೆಯ ಎರಡು ಮಂಗಗಳ ಚಿತ್ರ ತುಂಬಾ ಹಿಡಿಸಿತು..

  ReplyDelete
 10. Ammi...Thummba chendada Baravanige, Photo Chenda iddu. Thanks for the Article.

  ReplyDelete
 11. ಚಂದದ ಚಿತ್ರಗಳು, ಮಹಿತಿಪೂರ್ಣ ಲೇಖನ....

  ReplyDelete
 12. ಸುಮಾ ಮೇಡಮ್,

  ಎರಡು ವರ್ಷದ ಹಿಂದೆ ನಾನು ಕೂಡ ಇಲ್ಲಿಗೆ ಹೋಗಿದ್ದೆ. ಅದರ ಬಗ್ಗೆ ಲೇಖನವನ್ನು ಬರೆದಿದ್ದೆ. ನೀವು ಬರೆದ ಲೇಖನ ಮತ್ತು ಚಿತ್ರಗಳು ಚೆನ್ನಾಗಿವೆ.

  ReplyDelete
 13. Good article Keep on

  ReplyDelete
 14. ಸುಂದರ ಚಿತ್ರಗಳ ಜೊತೆ ಒಳ್ಳೆಯ ವಿವರಣೆ.
  ನಿಮ್ಮ ಬರಹ ಇಷ್ಟವಾಯ್ತು ಸುಮಾ ಅವರೇ.

  ReplyDelete
 15. ನಾನು ಬಹಳ ದಿನಗಳಿಂದ ದೇವರಾಯನದುರ್ಗಕ್ಕೆ ಹೋಗಬೇಕೆಂದುಕೊಂಡಿದ್ದೆ.. ಸಾಧ್ಯವಾಗಿರಲಿಲ್ಲ.. ನೀವೆಉ ಮತ್ತೊಮ್ಮೆ ನೆನಪಿಸಿದಿರಿ. ಧನ್ಯವಾದಗಳು

  ReplyDelete
 16. ದೇವರಾಯನದುರ್ಗದ ಪ್ರವಾಸಗಥೆ ಚೆನ್ನಾಗಿದೆ.

  ReplyDelete
 17. ಎರಡು ವರ್ಷದ ಹಿಂದೆ ನಾನು ಹೋದ ನೆನಪು ಮರುಕಳಿಸಿತು...

  ReplyDelete
 18. hagadre next time plan haakteeni.. thanks for the info :)

  ReplyDelete