ಗೂಡು ಕಟ್ಟುವಿಕೆ ಹಕ್ಕಿಗಳ ವೈಶಿಷ್ಟ್ಯತೆಗಳಲ್ಲಿ ಮುಖ್ಯವಾದುದು. ಮಣ್ಣಿನಲ್ಲಿ ಕುಳಿ ತೋಡಿ ಮೊಟ್ಟೆಯಿಡುವ ಆಸ್ಟ್ರಿಚ್ ನಂತಹ ಹಕ್ಕಿಗಳಿಂದ ಹಿಡಿದು ಸುಂದರವಾದ ಕೊಳವೆಯಂತಹ ಗೂಡು ಕಟ್ಟುವ ಗೀಜಗನವರೆಗೆ ವೈವಿಧ್ಯಮಯ ಗೂಡುಗಳನ್ನು ಕಟ್ಟಬಲ್ಲ ಹಕ್ಕಿಗಳಿವೆ. ಗೂಡು ಕಟ್ಟಲು ಅವು ಬಳಸುವ ಸಾಮಗ್ರಿಗಳಲ್ಲೂ ವೈವಿಧ್ಯತೆಯಿದೆ. ಒಣ ಹುಲ್ಲು ಕಡ್ದಿಗಳು , ಎಲೆಗಳು , ಜೇಡರ ಬಲೆಗಳು , ಮಣ್ಣು , ಹೀಗೆ ಆಯಾ ಪ್ರದೇಶದಲ್ಲಿ ದೊರಕುವ ವಸ್ತುಗಳನ್ನುಪಯೋಗಿಸಿಕೊಳ್ಳುತ್ತವೆ. ನಮ್ಮ ಮನೆಯ ಬಾಲ್ಕನಿಯಲ್ಲಿದ್ದ ಖಾಲಿ ಪಾಟ್ ನಲ್ಲಿ ಪಾರಿವಾಳವೊಂದು ಒಂದಿಷ್ಟು ಹುಲ್ಲು ಕಡ್ಡಿಗಳ ಜೊತೆಗೆ ಕಬ್ಬಿಣದ ತಂತಿಗಳನ್ನೂ ಸೇರಿಸಿ ಗೂಡು ಕಟ್ಟಿತ್ತು !
ಆದರೆ ಇದೊಂದು ಹಕ್ಕಿ ಇವೆಲ್ಲವನ್ನೂ ಮೀರಿಸಿ ಮುಂದೆ ಹೋಗಿದೆ. ಇದು ಪಕ್ಷಿಲೋಕದ ಇಂಟೀರಿಯರ್ ಡೆಕೊರೇಟರ್ . ಇದು ತನ್ನ ಗೂಡನ್ನು ಬಣ್ಣ ಬಣ್ಣದ ವಸ್ತುಗಳಿಂದ ಅಲಂಕರಿಸುತ್ತದೆ. ಇದೇ ಬಾವರ‍್ ಬರ್ಡ್. ಆಸ್ಟ್ರೇಲಿಯಾ , ನ್ಯೂ ಜಿನಿಯಾದ ಮಳೆಕಾಡುಗಳಲ್ಲಿ ವಾಸಿಸುತ್ತದೆ. ಸುಮಾರು ಇಪ್ಪತ್ತು ಜಾತಿಯ ಬಾವರ್ ಹಕ್ಕಿಗಳಿವೆ. ಪುಟ್ಟ ಗಾತ್ರ , ನೋಡಲು ಆಕರ್ಷಕವಾಗಿಲ್ಲ. ಕೀಟಗಳು , ಹಣ್ಣು ಕಾಯಿಗಳು ಇದರ ಆಹಾರ.
ಇದರಲ್ಲಿ ಗಂಡು ಹಕ್ಕಿಯು ತನ್ನ ಸಂಗಾತಿಯನ್ನು ಆಕರ್ಷಿಸಲು ಹುಲ್ಲುಕಡ್ಡಿಗಳಿಂದ ಕಮಾನಿನಂತಹ ಗೂಡೊಂದನ್ನು ನಿರ್ಮಿಸುತ್ತದೆ . ನಂತರ ಆ ಗೂಡಿನ ಒಳ ಹೊರಗೆ ಉಜ್ವಲಬಣ್ಣಗಳಾದ ಕೆಂಪು , ನೀಲಿ , ಕಪ್ಪು , ಕೇಸರಿ ಬಣ್ಣದ ವಸ್ತುಗಳನ್ನು ಆಯ್ದು ತಂದು ಜೋಡಿಸುತ್ತದೆ. ಹೂವು , ಎಲೆಗಳು , ಕೀಟಗಳ ಆಕರ್ಷಕ ಚಿಪ್ಪುಗಳು , ಕಾಯಿಹಣ್ಣುಗಳು , ಕೊನೆಗೆ ಮಾನವ ನಿರ್ಮಿತ ಬಾಟಲ್ ಕ್ಯಾಪ್ , ಕ್ಲಿಪ್ ಗಳು ಯಾವುದಾದರೂ ಸರಿ ಅವುಗಳ ಅಲಂಕಾರಕ್ಕೆ .
ಹೆಣ್ಣುಹಕ್ಕಿ ಇಂತಹ ಕೆಲ ಗಂಡುಗಳ ಮನೆಯನ್ನು ನೋಡಿ ತನಗೆ ಹೆಚ್ಚು ಇಷ್ಟವಾದ ಮನೆಯ ಗಂಡನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತದೆ.
ವಿಪರ್ಯಾಸವೆಂದರೆ ಗಂಡು ಇಷ್ಟೆಲ್ಲ ಕಷ್ಟಪಟ್ಟು ಮನೆ ನಿರ್ಮಿಸುವುದು ಹೆಣ್ಣನ್ನು ಆಕರ್ಷಿಸಲು ಮಾತ್ರ. ಒಮ್ಮೆ ಒಂದು ಹೆಣ್ಣು ಒಲಿದು, ಅದರೊಂದಿಗೆ ನಲಿದಾದ ಮೇಲೆ ಹೆಣ್ಣು ಹಕ್ಕಿ ಬೇರೆ ಜಾಗದಲ್ಲಿ ತಾನೆ ಗೂಡು ನಿರ್ಮಿಸಿ , ಮೊಟ್ಟೆಯಿಡುತ್ತದೆ. ಕಾವು ಕೊಡುವುದು , ಮರಿಗಳನ್ನು ಸಾಕುವುದು ಮೊದಲಾದ ಎಲ್ಲ ಕಾರ್ಯಗಳನ್ನು ಹೆಣ್ಣುಹಕ್ಕಿಯೊಂದೇ ನಿಭಾಯಿಸುತ್ತದೆ. ಹೆಣ್ಣು ಹೀಗೆ ತನ್ನ ಮರಿಗಳನ್ನು ಬೆಳೆಸುವ ಕಾಯಕದಲ್ಲಿರುವಾಗ ಅದರ ಸಂಗಾತಿಯಾಗಿದ್ದ ಗಂಡು ಹಕ್ಕಿ ತನ್ನ ಸುಂದರವಾದ ಗೂಡಿನೊಂದಿಗೆ ಬೇರೊಂದು ಹೆಣ್ಣನ್ನು ಆಕರ್ಷಿಸುವ ಕೆಲಸದಲ್ಲಿರುತ್ತದೆ .
ಇಷ್ಟು ಪುಟ್ಟ ಹಕ್ಕಿ ಗಂಟೆಗಟ್ಟಲೆ ಶ್ರಮವಹಿಸಿ ಹೆಣ್ಣನ್ನು ಆಕರ್ಷಿಸುವುದನ್ನು ನೋಡಿದಾಗ ಇದು ತನ್ನ ಸಂತತಿಯನ್ನು ಬೆಳೆಸಿಕೊಳ್ಳಲು ಪ್ರಕೃತಿ ನೀಡಿರುವ ವರವೇ ಅನ್ನಿಸದಿರದು . ವಿಶ್ವಪರಿಸರ ದಿನವಾದ ಇಂದು ಇಂತಹ ವೈಶಿಷ್ಟ್ಯಗಳಿಂದ ಕೂಡಿರುವ ಈ ನಮ್ಮ ಪ್ರಕೃತಿಮಾತೆಗೊಂದು ನಮಸ್ಕಾರ
ಚಿತ್ರಕೃಪೆ - ಅಂತರ್ಜಾಲ
ಇದರ ಕೆಲಸವನ್ನು ಈ ಲಿಂಕ್ನಲ್ಲಿ ನೋಡಬಹುದು - http://www.youtube.com/watch?v=GPbWJPsBPdA

ನನ್ನ ಹಳ್ಳಿ ಬದುಕಿನಲ್ಲಿ ಸದಾ ಅಚ್ಚರಿಗೆ ಕೆಡವುವ ಹಕ್ಕಿ ಗೂಡುಗಳ ವಿನ್ಯಾಸವನ್ನು ಇಲ್ಲಿ ಅತ್ಯದ್ಭುತವಾಗಿ ತೆರೆದಿಟ್ಟಿದ್ದೀರಾ.
ReplyDeletehttp://www.badari-poems.blogspot.in/
ಸುಮಾ ಮೇಡಮ್,
ReplyDeleteಇದು ನಿಜಕ್ಕೂ ವಿಸ್ಮಯದ ಸಂಗತಿಯೇ ಸರಿ...ಈ ಹಕ್ಕಿಗಳಿಗಿರುವ ಅಭಿರುಚಿಯನ್ನು ಹುಡುಕಿ ತಂದ ನಿಮಗೆ ಧನ್ಯವಾದಗಳು.
ಹೌದು. ಬಿ.ಬಿ.ಸಿ.ಡಾಕ್ಯುಮೆಂಟರಿಯೊಂದರಲ್ಲಿ ಈ ಹಕ್ಕಿಯ ಪೂರ್ತಿ ವಿಡಿಯೋ ನೋಡಿದ್ದೆ. ನಿಜ್ವಾಗ್ಲೂ ಎಷ್ಟು ಆಶ್ಚರ್ಯ ಅಗಿತ್ತು ಅಂದ್ರೆ !! ಪ್ರಕೃತಿ ವಿಸ್ಮಯ !
ReplyDeleteದೇವರ ಕೃಪೆ ಹೇಗಿದೆ ಅಂತ ಹೇಳೋದೇ ಒಂದು ಖುಷಿ. ಸಣ್ಣ ಕೆಲಸ ಎಂದು ಮನುಜ ಅಸಡ್ಡೆ ತೋರಿಸಿ ಬಿಡುವ ಪರಿ ಹೆಚ್ಚು. ಆದರೆ ಈ ಹಕ್ಕಿ ಪಡುವ ಪರಿಶ್ರಮ ಮತ್ತು ನಂತರ ಆ ಗೂಡನ್ನು ಬಿಟ್ಟು ಹೋಗುವುದು ಎಲ್ಲಾ ಆಶ್ಚರ್ಯ ಅನ್ನಿಸುತ್ತದೆ. ಸುಂದರ ಪರಿಚಯ ಸುಂದರ ಬರಹ
ReplyDeleteಭೂರಮೆಯ ವಿಸ್ಮಯದ ಲೋಕ ಕಂಡು ಖುಷಿಯಾಯಿತು, ನಿಮ್ಮ ಬರಹ ಮಾಹಿತಿ ಯುಕ್ತವಾಗಿದೆ. ಹಕ್ಕಿಯ ಬಗ್ಗೆ ಸಂಪೂರ್ಣ ವಿವರ ಕೊಟ್ಟ ನಿಮಗೆ ಥಂಕ್ಸ್.
ReplyDeletehi suma...ds s reshma ...May i get ur email id?
ReplyDeleteReshma my mail id - sumaks77@gmail.com
ReplyDeletetumbaa vivara iratte nimma barahagaLalli.... thank you...
ReplyDeleteಪ್ರಾಣಿ ಜಜಗತ್ತು ಹತ್ತು ಹಲವು ವಿಸ್ಮಯಕಾರಿವಾಸ್ತವಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಇವುಗಳನ್ನು ನೋಡುವ ಅಭ್ಯಸಿಸುವ ವ್ಯವಧಾನ ಬೇಕು. ಸುಮ ಆಸಕ್ತಿದಾಯಕ ಮತ್ತು ಮಾಹಿತಿಪೂರ್ಣ ಲೇಖನ.
ReplyDelete