23 Jul 2009

ನಕಲು

ಪ್ರತಿಯೊಂದು ಜೀವಿಯ ಮುಖ್ಯ ಗುರಿ ತಾನು ಬದುಕುಳಿಯುವುದು ಮತ್ತು ತನ್ನ ಸಂತತಿಯನ್ನು ಬೆಳೆಸುವುದು. ಈ ಉದ್ದೇಶದಲ್ಲಿ ಎದುರಾಗುವ ಅನೇಕ ಅಡೆತಡೆಗಳಿಂದ ಪಾರಾಗುವ ಜೀವಿಗಳಷ್ಟೇ ಈ ಜಗತ್ತಿನಲ್ಲಿ ಉಳಿಯುತ್ತವೆ. ಹೀಗೆ ಯಶಸ್ವಿಯಾಗಿ ಬಾಳಲು ಪ್ರತಿಯೊಂದು ಜೀವಿಯು ಅನೇಕ adaptetion ಗಳನ್ನೂ , ಉಪಾಯಗಳನ್ನು ಬಳಸುತ್ತದೆ.
ಪ್ರಕೃತಿಯಲ್ಲಿ ಸಹಜವಾಗಿ ಕಾಣಸಿಗುವ ಇಂತಹ ಉಪಾಯಗಳನ್ನು ಮಾನವನು ತನ್ನ ಅನುಕೂಲಕ್ಕಾಗಿ ಅನುಕರಿಸಿ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸುವ ವಿಜ್ಞಾನದ ಶಾಖೆಗೆ ' biomimicry' ಎಂದು ಹೆಸರು. ನೇರವಾಗಿ ಹೇಳಬೇಕೆಂದರೆ ಪ್ರಕೃತಿಯಿಂದ technalogy ಯನ್ನು ಕದಿಯುವುದು ,ಅದೂ royalti ಕೊಡದೆ .

  • ಗೆದ್ದಲಿನಿಂದ ಕದ್ದ ಕಟ್ಟಡವಿನ್ಯಾಸ : ಚಿಕ್ಕವಳಿದ್ದಾಗ ತೋಟ ಗದ್ದೆಗಳಲ್ಲಿರುವ ಹುತ್ತಗಳ ಒಳರಚನೆಯನ್ನು ನೋಡುವುದು ನನ್ನ ಪ್ರಿಯ ಹವ್ಯಾಸಗಳಲ್ಲೊಂದಾಗಿತ್ತು. ಭೂಮಿಯನ್ನು ಕೊರೆದು ಅರಮನೆಯನ್ನೇ ನಿರ್ಮಿಸಿಕೊಳ್ಳುವ ಗೆದ್ದಲುಗಳು ಅದನ್ನು ತುಂಬ ತಂಪಾಗಿರುವಂತೆ ನೋಡಿಕೊಳ್ಳುತ್ತವೆ. ಅನೇಕ ಹೊರರಂದ್ರಗಳನ್ನು ನಿರ್ಮಿಸುವುದು ಎತ್ತರದ ಚಿಮಿನಿಗಳನ್ನು ರಚಿಸಿ ಸದಾ ಗಾಳಿಯ ಚಲನೆಯಿರುವಂತೆ ಮಾಡುವುದು ಗೂಡನ್ನು ತಂಪಾಗಿ ಇಟ್ಟುಕೊಳ್ಳಲು ಅವು ಕಂಡುಕೊಂಡ ಉಪಾಯ. ಇದೆ ತತ್ವವನ್ನು ಆಧರಿಸಿ ಜಿಂಬಾಬ್ವೆಯಲ್ಲಿ 'ಈಸ್ಟ್ ಗೇಟ್ ಸೆಂಟರ್ ' ಎಂಬ ಕಟ್ಟಡವನ್ನು ನಿರ್ಮಿಸಲಾಗಿದೆ. ಯಾವುದೇ ಎ. ಸಿ ,ಫ್ಯಾನ್ ಗಳ ಸಹಾಯವಿಲ್ಲದೆ ಇಲ್ಲಿಯ ವಾತಾವರಣ ಹೊರಗಿನದಕ್ಕಿಂತ ಶೇ/೧೦ ರಷ್ಟು ತಣ್ಣಗಿರುತ್ತದಂತೆ. ಗೆದ್ದಲುಗಳಿಗ ಈ ವಿಚಾರ ತಿಳಿದಿದ್ದರೆ ಯಾವ ಕೋರ್ಟಿನಲ್ಲಿ ಕೇಸಹಾಕುತ್ತಿದ್ದವೋ!!!!



  • ಗೋಡೆ ನಡುಗೆ :ಮುಗಿಲೆತ್ತರದ ಕಟ್ಟಡದ ಗೋಡೆಗಳನ್ನು ಸರಸರನೆ ಏರುವ ಗೋಡೆಗೆ ಅಂಟಿಕೊಂಡು ನಿಲ್ಲುವ 'ಸುಪರ್ ಹೀರೋ' ಗಳನ್ನೂ ಸಿನೆಮಾದಲ್ಲಿ ನೋಡಿ ಆನಂದಿಸಿದ್ದೆವಲ್ಲ ಅದು ನಿಜ ಆಗುವ ಕಾಲ ದೂರವಿಲ್ಲ. 'Andre geim' ಮತ್ತು ಆತನ ಸಹೋದ್ಯೋಗಿಗಳು ಗೋಡೆಗೆ ,ಸೂರಿಗೆ ಅಂಟಿಕೊಳ್ಳುವ ಟೇಪನ್ನು ತಯಾರಿಸಿದ್ದಾರೆ. ತಮ್ಮ ಕೈ ಕಾಲಿಗೆ ಇದನ್ನು ಹಾಕಿಕೊಂಡು ಯಾರಾದರು ಗೋಡೆಯ ಮೇಲೆ spiderman ನಂತೆ ನಡೆಯಬಹುದು . ಅವರ ಈ ಸಂಶೋಧನೆಗೆ ಸ್ಪೂರ್ತಿಯಾದದ್ದು Gacko ಎಂಬ lizard ಜಾತಿಗೆ ಸೇರಿದ ಪ್ರಾಣಿ. ಅವುಗಳ ಕಾಲುಗಳಲ್ಲಿ ಇರುವ ಚಿಕ್ಕ ಚಿಕ್ಕ ಕೂದಲುಗಳ ಸಹಾಯದಿಂದ ಇದು ಎಂತಹ ಜಾರುವ ಮೇಲ್ಮೈಗಳಲ್ಲು ಸುಲಭವಾಗಿ ಚಲಿಸಬಲ್ಲದು.(van-der waals force ನಿಂದಾಗಿ ಇದು ಸಾದ್ಯ.)


  • ಸ್ವಚ್ಚ ಕಮಲ : ಕಮಲದ ಗಿಡ ಕೆಸರಿನಲ್ಲೇ ಬೆಳೆದರೂ ಅದರ ಎಲೆಗಳ ಮೇಲೆ ಸ್ವಲ್ಪವೂ ನೀರು ಕೆಸರು ನಿಲ್ಲುವುದಿಲ್ಲ. ಕಾರಣ ಅದರ ಎಲೆಗಳ ಮೇಲ್ಮೈಯಲ್ಲಿರುವ ಸೂಕ್ಷ್ಮವಾದ ಉಬ್ಬುಗಳು. ನೀರಿನ ಹನಿಗಳು ಅಲ್ಲಿ ನಿಲ್ಲಲಾಗದೆ ಕೆಸರಿನೊಂದಿಗೆ ಜಾರಿಹೊಗುತ್ತವೆ. ಇದೆ ತತ್ವವನ್ನಾಧರಿಸಿ ತಯಾರಿಸಿದ ಪ್ಲಾಸ್ಟಿಕ್,ಲೋಹಗಳು ಬಣ್ಣಗಳು ಮುಂತಾದವುಗಳ ಮೇಲೆ ಧೂಳು ನಿಲ್ಲುವುದೇ ಇಲ್ಲ.ಇವುಗಳನ್ನು ಕಟ್ಟಡಗಳಲ್ಲಿ ವಿಮಾನದ ಹೊರಕವಚಗಳಲ್ಲಿ ಹೀಗೆ ಅನೇಕ ಕಡೆ ಬಳಸಬಹುದು. ಕೊಳಕಾಗುವ ಭಯವೇ ಇವಕ್ಕಿಲ್ಲ.


  • ಕೀಟ ರೊಬೋಟ್ : ಕೀಟಗಳ ಕಾಲುಗಳು ಪ್ರಕೃತಿಯ ಉತ್ಕೃಷ್ಟ ಸೃಷ್ಟಿ . ಕಾಲುಗಳ ವಿಶಿಷ್ಟ ರಚನೆಯಿದ ನೀರಿನಲ್ಲಿ ನೆಲದಲ್ಲಿ ಗೋಡೆಯ ಮೇಲೆ ಹೀಗೆ ಎಲ್ಲ ಮೇಲ್ಮೈಗಳಲ್ಲಿ ಸುಲಭವಾಗಿ ಚಲಿಸುವ ಸಾಮರ್ಥ್ಯ ಅವಕ್ಕಿದೆ. ಯೋಚಿಸಿ ನಮ್ಮ ಕಾಲುಗಳಿಂದ ಇದು ಸಾಧ್ಯವೇ? ಜಪಾನಿನ ವಿಜ್ಞಾನಿಗಳು ಪ್ರಕೃತಿಯ ಈ ಟೆಕ್ನಾಲಜಿಯನ್ನು ಅಪಹರಿಸುವ ಯತ್ನದಲ್ಲಿದ್ದಾರೆ. ರೊಬೋಟ್ ಗಳಿಗೆ ಕೀಟಗಳಂತ ಕಾಲುಗಳನ್ನು ತೊಡಿಸಿ ಎಲ್ಲೆಂದರಲ್ಲಿ ಚಲಿಸಬಲ್ಲ ಸಾಮರ್ಥ್ಯ ಕೊಡುತ್ತಿದ್ದಾರೆ .


  • ಇವೆಲ್ಲ ಕೇವಲ ಕೆಲವು ಉದಾಹರಣೆ ಮಾತ್ರ . ಪ್ರಕೃತಿಯಿಂದ ನಾವು ಕಲಿತಿರುವುದು, ಕಲಿಯಬೇಕಾಗಿರುವುದು ತುಂಬಾ ಇದೆ ಅಲ್ಲವೇ?

5 comments:

  1. Nimma baravanige chennaagide...

    keep it up....

    ReplyDelete
  2. ಲೇಖನ ಚೆನ್ನಾಗಿದೆ...

    ಪ್ರಕ್ರತಿಯಿಂದ ನಾವು ಕಲಿಯ ಬೇಕಾದದ್ದು ಬಹಳಷ್ಟು ಇವೆ...
    ಗೊತ್ತಿದ್ದರೂ ..
    ಮತ್ತೆ ಮತ್ತೆ ತಪ್ಪು ಮಾಡುತ್ತೇವೆ ಅಲ್ಲವಾ...?

    ಉಪಯುಕ್ತ ಮಾಹಿತಿಗಳಿಗಾಗಿ ಅಭಿನಂದನೆಗಳು...

    ReplyDelete
  3. ಪ್ರತಿಯೊ೦ದು ಜೀವಿಯಿ೦ದ ಕಲಿಯುವದಿದೆ. ಚಾರ್ಲೆಸ್. ಡಾರ್ವಿನ್-ರ ವಿಕಾಸವಾದದ ಮುಖ್ಯ ಸೂತ್ರ ಗಳಾದ
    "ಅಸ್ತಿತ್ವಕ್ಕಾಗಿ ಸೆಣಸಾಟ","ಸದ಼ಡರ ಉಳಿವು" ಮತ್ತು "ಸಹಜ ಆಯ್ಕೆ" ಸಾ೦ಧರ್ಭಿಕ ಸೂಕ್ತ ಊಕ್ತಿ. ಅನುಕರಣೆಯು ಉಳಿವಿನ ಹೊರಾಟದ ಒ೦ದು ಅಯ್ಕೆ ವಿಧ. ಜೀವ ವೈವಿಧ್ಯಗಳ ಇ೦ತಹ ವೈಶಿಷ್ಟ್ಯಗಳ ಮಾನವನ ಅನುಕರಣೆಗಳನ್ನು ಸ೦ಗ್ರಹಿಸಿ ಪರಿಚಯಿಸಿದ ತಮಗೆ ವ೦ದನೆಗಳು.

    ReplyDelete
  4. ಧನ್ಯವಾದಗಳು ಪ್ರಕಾಶ್ ಮತ್ತು ಸೀತಾರಾಮ್ ಅವರೆ.

    ReplyDelete
  5. ಸುಮ ಮೇಡಮ್,

    ನಿಜಕ್ಕೂ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಕಲಿಕೆಯೆನ್ನುವುದಕ್ಕೆ ಅಂತ್ಯವಿಲ್ಲ. ಈ ಪರಿಸರದಿಂದ ಕಲಿಯುವುದು ತುಂಬಾ ಇದೆಯಲ್ಲಾ....ಒಳ್ಳೆಯ ಮಾಹಿತಿಯುಕ್ತ ಲೇಖನವನ್ನು ಬರೆದಿದ್ದೀರಿ...ಧನ್ಯವಾದಗಳು.

    ReplyDelete