12 Aug 2009

ಪಾರಿವಾಳ ಪುರಾಣ

ಅಕ್ಟೋಬರ್ ತಿಂಗಳ ಒಂದು ದಿನ ಎರಡು ಪಾರಿವಾಳಗಳು ನಮ್ಮ ಮನೆಯ ಚಿಕ್ಕ ಬಾಲ್ಕನಿಯಲ್ಲಿ ಬಂದು ಕುಳಿತು ಗುಟುರ್.... ಗುಟುರ್ .....ಎಂದು ಕೂಗುತ್ತಿದ್ದವು. ನನಗೆ ಹೇಗಾದರು ಅವು ಇಲ್ಲೇ ಇದ್ದು ಮೊಟ್ಟೆ ಇಟ್ಟರೆ ಅನಾಯಾಸವಾಗಿ ಅವುಗಳನ್ನು ಅಬ್ಯಾಸಿಸುವ ಅವಕಾಶ ಸಿಗುತ್ತದೆ ಎಂಬ ಆಸೆ . ಹಳ್ಳಿಯ ನಮ್ಮ ಮನೆಯಲ್ಲಿ ಪ್ರತಿ ವರ್ಷವೂ ಚಳಿಗಾಲದಲ್ಲಿ ಒಂದು ಜೋಡಿ ಪಾರಿವಾಳಗಳು ಬಂದು ಮೊಟ್ಟೆ ಇಟ್ಟು ಮರಿಗಳು ಬೆಳೆದ ಮೇಲೆ ಹಾರಿಹೋಗುತ್ತಿದ್ದವು. ಅವು ಎತ್ತರದ ಮಾಡಿನ ಮೂಲೆಯಲೆಲ್ಲೋ ಇರುತ್ತಿದ್ದಿದರಿಂದ ಅವುಗಳ ಧ್ವನಿ ಕೆಳುತ್ತಿತ್ತೆ ಹೊರತು ಹತ್ತಿರದಿಂದ ನೋಡಲು ಸಿಗುತ್ತಿರಲಿಲ್ಲ. ಈಗ ಇಲ್ಲೇ ಹತ್ತಿರದಿಂದ ಅವುಗಳನ್ನು ಅರಿಯುವ ಅವಕಾಶ ಕಳೆದುಕೊಳ್ಳಲು ನಾನು ತಯಾರಿರಲಿಲ್ಲ. ಆದ್ದರಿಂದಲೇ ಅವುಗಳಿಂದ ತೊಂದರೆಯಾಗಬಹುದು ಓಡಿಸು ಎಂದ ಸುಧಾಕಿರಣ ಮತ್ತು ಕೆಲಸದಾಳು ರುಕ್ಕಮ್ಮನ ಮಾತನ್ನು ತಿರಸ್ಕರಿಸಿ ಆ ಜೋಡಿಯನ್ನ ಸ್ವಾಗತಿಸಿದೆ. ಅಂದರೆ ಅವುಗಳಿಗೆ ಧಾನ್ಯ , ನೀರುಗಳನ್ನು ಹಾಕುವುದು , ಅವುಗಳಿಗೆ ತೊಂದರೆಯಾಗದಂತೆ ಬಾಲ್ಕನಿಯ ಹೋಗದಿರುವುದು ಇತ್ಯಾದಿ....

ಹೀಗೆ ಸುಮಾರು ಒಂದು ವಾರ ನಾನು ಅವುಗಳನ್ನು ಗಮನಿಸುವುದು ಅವು ನಮ್ಮನ್ನು ಗಮನಿಸುವುದು ಮುಂದುವರೆಯಿತು. ಬಹುಶ ಅವಕ್ಕೆ ಇಲ್ಲಿ ಯಾವುದೇ ಅಪಾಯವಿಲ್ಲವೆಂದು ಮನವರಿಕೆಯಯಿತೇನೋ ಒಂದಷ್ಟು ಒಣಗಿದ ಹುಲ್ಲು ಕಡ್ಡಿಗಳು ತಂತಿಗಳನ್ನು ಒಂದು ಒಣಗಿದ ಕುಂಡದಲ್ಲಿ ಹಾಕಿ ಒಂದು ಮೊಟ್ಟೆಯನ್ನು ಮರುದಿನ ಇನ್ನೊಂದನ್ನು ಇಟ್ಟಿತು. ಎರಡೂ ಹಕ್ಕಿಗಳು ಸರದಿಯ ಪ್ರಕಾರ ಕಾವು ಕೊಡುತ್ತಿದ್ದವು. ಬಾಲ್ಕನಿಯ ಬಳಿ ಹೋದರೂ ಹೆಜ್ಜೆ ಶಬ್ದಕ್ಕೆ ಹೆದರಿ ಹಾರುತ್ತಿದ್ದವು. ಆದ್ದರಿಂದ ಈಗ ನಾನು ಮನೆಯಲ್ಲಿ ಶಬ್ದ ಮಾಡುವುದನ್ನೇ ನಿಷೆಧಿಸಿದ್ದೆ.


ಹೆಚ್ಹಾಗಿ ಹಗಲು ಒಂದು ಹಕ್ಕಿ ಕಾವು ಕೊಡುತ್ತಿತ್ತು ರಾತ್ರಿ ಇನ್ನೊಂದು . ಮೊಟ್ಟೆಯಿಟ್ಟು ಹದಿನಾರನೇ ದಿನ ಬೆಳಗ್ಗೆ ಒಂದು ಮರಿ ಹೊರಗೆ ಬಂದಿತು. ಅದು ಮೊಟ್ಟೆಯೊಡೆದು ಸಂಪೂರ್ಣವಾಗಿ ಹೊರಬರಲು ಸುಮಾರು ಅರ್ಧ ತಾಸು ಬೇಕಾಯಿತು ಮರುದಿನ ನೋಡಿದಾಗ ಇನ್ನುಂದು ಮರಿ ಕೂಡ ಹೊರಬಂದಿತ್ತು.


ಮೈತುಂಬ ಕೂದಲಿದ್ದ ಕಣ್ಣು ಕಾಣದ ಆ ಮರಿಗಳನ್ನು ನೋಡಿ ನನ್ನ ಮಗಳಿಗೆ ಆಶ್ಚರ್ಯ. ಈಗ ಸಹ ದೊಡ್ಡ ಹಕ್ಕಿ ಅವುಗಳನ್ನು ತನ್ನ ಗರಿಗಳ ನಡುವೆ ಅಡಗಿಸಿಕೊಂಡು ಕುಳಿತಿರುತ್ತಿತ್ತು. ಅದನ್ನು ನೋಡಿದ ಮಗಳು ಅದು ಹಾಲು ಕುಡಿಸುತ್ತಾ ಎಂದಳು. ಇಲ್ಲ ಅದು ಸಸ್ತನಿಯಲ್ಲ . ಧಾನ್ಯಗಳನ್ನು ತಿನ್ನಿಸುತ್ತದೆಯೆಂದೆ. ಅಷ್ಟು ಚಿಕ್ಕ ಮರಿ ಹೆಗಮ್ಮ ಗಟ್ಟಿ ಆಹಾರ ತಿನ್ನುತ್ತದೆ? ಮಗಳ ಪ್ರಶ್ನೆ ತಯಾರಿತ್ತು.


ಈಗ ನಾನು ನೆಟ್ ಆಶ್ರಯಿಸಿದೆ. ಅಲ್ಲಿ ಸಿಕ್ಕ ಮಾಹಿತಿ ಬೆರಗುಗೊಳಿಸಿತು.
ಪಾರಿವಾಳದ ಕಥೆ
'Rock Pigeon' ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಪಾರಿವಾಳಗಳನ್ನು ಅವುಗಳ ಮಾಂಸಕ್ಕಾಗಿ ಸಾಕುತ್ತಾರೆ. ಹೆಚ್ಹಾಗಿ ಮನುಷ್ಯರ ವಸತಿಯ ಬಳಿಯಲ್ಲೇ ಇವುಗಳ ವಾಸ. ಧವಸ ಧಾನ್ಯ ಹಣ್ಣುಗಳು ಚಿಕ್ಕ ಪುಟ್ಟ ಕ್ರಿಮಿ ಕೀಟಗಳು ಇವುಗಳ ಆಹಾರ. ಒಂದೇ ಸಂಗಾತಿಯೊಡನೆ ಜೀವನ. ಅಂದರೆ ರಾಮನಂತೆ. ಕ್ರಷ್ಣನಂತೆ ಅಲ್ಲ . ಛಳಿಗಾಲ ಬೇಸಗೆಲ್ಲಿ ಹೆಚ್ಚಾಗಿ ಮೊಟ್ಟೆ ಇಡುತ್ತದೆ.(ನಮ್ಮ ಮನೆಯಲ್ಲಿ ಈ ಮಳೆಗಾಲದಲ್ಲೂ ಮೊಟ್ಟೆ ಇಡುತ್ತಿವೆ.) ತಂದೆ ತಾಯಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತವೆ.(ಮಾನವರಂತೆ ಲಿಂಗ ತಾರತಮ್ಯವಿಲ್ಲ.) ವಿಶೇಷವೆಂದರೆ ಇವುಗಳು ಸಸ್ತನಿಗಳಂತೆ ಹಾಲು ಉತ್ಪಾದಿಸುತ್ತವೆ. ಆದರೆ ರೀತಿ ಬೇರೆ. 'crop milk' ಎಂದು ಹೆಸರಿಸುವ ಈ ಹಾಲು ಇವುಗಳ ಹೊಟ್ಟೆಯ ಕೋಶಗಳಿಂದ ಸ್ರವಿಸಲ್ಪದುತ್ತವೆ. ಮೊಟ್ಟೆ ಒಡೆಯುವ ಎರಡು ದಿನ ಮೊದಲೇ ಗಂಡು ಮತ್ತು ಹೆಣ್ಣು ಎರಡೂ ಪಕ್ಷಿಗಳಲ್ಲಿ ಈ ಹಾಲು ತಯಾರಾಗುತ್ತದೆ. ಇದನ್ನೇ ಅವು ತಮ್ಮ ಮರಿಗಳಿಗೆ ಮೊದಲ ಎರಡು ವಾರಗಳ ವರೆಗೆ ಕೊಡುತ್ತವೆ. ನಂತರ ನಿಧಾನವಾಗಿ ತಮ್ಮ ಆಹಾರವನ್ನೇ ಕೊಡಲು ಪ್ರಾರಂಭಿಸುತ್ತವೆ. Posted by Picasaಮುಂದೆ ನನ್ನ ಕಥೆ ಕೇಳಿ.
ಹುಟ್ಟುವಾಗ ಮೈತುಂಬ ಇದ್ದ ಕೂದಲು ದಿನಕಳೆದಂತೆ ಕಡಿಮೆ ಆಗುತ್ತಿತ್ತು. ಮರಿಗಳು ಬೆಳೆದಂತೆಲ್ಲ ಕುಂಡದ ಬಳಿ ಅವುಗಳ ವಿಸರ್ಜನೆ ಹೆಚ್ಚತೊಡಗಿತು . ಈಗ ನಾವು ಬಾಲ್ಕನಿಗೆ ಹೋಗಿ ಗುಡಿಸಿದರು ಅವು ಹೆದರುತ್ತಿರಲಿಲ್ಲ.
ದಿನದಿಂದ ದಿನಕ್ಕೆ ಅವು ಬೆಳೆಯುತ್ತಿದ್ದವು .ಅವುಗಳ ವಿಸರ್ಜನೆಯ ಪ್ರಮಾಣವು ಹೆಚ್ಚುತ್ತಿತ್ತು. ಈಗ ಅವುಗಳನ್ನು ನೋಡಲು ಪಾರಿವಾಳಗಳ ಪರಿವಾರದವರು ಬರಲು ಪ್ರಾರಂಭಿಸಿದವು. ಅವುಗಳಲ್ಲೇ ಕೆಲ ಜೋಡಿಗಳು ಈ ಪ್ರಶಸ್ತವಾದ ಸ್ಥಳವನ್ನು ನೋಡಿ ತಾವು ಮೊಟ್ಟೆ ಇಟ್ಟವು.ಒಟ್ಟಿಗೆ ಹತ್ತು ಇಪ್ಪತ್ತು ಪಾರಿವಾಳಗಳು ಕುಳಿತು ಗುಟುರು ಹಾಕುವಾಗ ನಮಗೆ ನಾವು ಮಾತಾಡಿದ್ದೆ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು. ಗಿಡಗಳೆಲ್ಲ ಇವುಗಳ ದಾಳಿಯಿಂದ ಸೊರಗಿದವು. ಕೆಲಸದವಳು ಅವುಗಳ ಹಿಕ್ಕೆಯ ವಾಸನೆ ತಾಳಲಾರದೆ ನನ್ನನ್ನು ಅವುಗಳನ್ನು ಒಟ್ಟಿಗೆ ಬೈಯ್ಯಲು ಪ್ರಾರಂಭಿಸಿದ್ದಳು.
ಆದರು ನನಗೆ ಮರಿಗಳು ಹಾರುವುದನ್ನು ಹೇಗೆ ಕಲಿಯುತ್ತವೆಂದು ತಿಳಿಯುವ ಕುತೂಹಲವಿತ್ತು . ಮರಿಗಳು ಸಂಪೂರ್ಣ ಬೆಳೆದು ರೆಕ್ಕೆಗಳು ಬೆಳೆದು ತಂದೆ ತಾಯಿಯ ಗಾತ್ರ ತಲುಪಿದ ಮೇಲೆ ಅವು ನಿಧಾನವಾಗಿ ಅಲ್ಲೇ ಹಾರಲು ಪ್ರಾರಂಭಿಸಿದವು. ಸ್ವಲ್ಪ ದೂರ ಹಾರಿ ವಾಪಸ್ ಬರುತ್ತಿದ್ದವು. ಕೆಲವು ದಿನಗಳ ನಂತರ ಹಗಲಿಡಿ ಎಲ್ಲೋ ಇದ್ದು ರಾತ್ರಿ ಮರಳಿ ಬರುತ್ತಿದ್ದವು.
ಈ ನಡುವೆ ಇನ್ನು ಕೆಲವು ಜೋಡಿಗಳು ಮೊಟ್ಟೆಯಿಟ್ಟು ಮರಿಯಾಗಿದ್ದವು. ಅವುಗಳ ಹಿಕ್ಕೆ ವಾಸನೆ ಮನೆಯೊಳಗೂ ಬರಲು ಪ್ರಾರಂಭವಾಗಿ ನನ್ನ ಉತ್ಸಾಹ ಇಳಿದಿತ್ತು. ರುಕ್ಕಮ್ಮನಂತು ಇನ್ನು ನಾನು ಅಲ್ಲಿ ಸ್ವಚ್ಚ ಮಾಡಲಾರೆ ಎಂದು ಧಮಕಿ ಹಾಕಿದ್ದಳು.
ಈಗ ನಮ್ಮ ಮನೆಯಲ್ಲದೆ ಅಪಾರ್ಟ್ಮೆಂಟಿನ ಉಳಿದ ಮನೆಗಳು ಪಾರಿವಾಳಗಳ ದಾಳಿಗೆ ತುತ್ತಾಗಿವೆ .ಎಲ್ಲರು ನನ್ನನು ದೂಷಿಸುತ್ತಿದ್ದಾರೆ. ಸುಧಕಿರಣ ನನ್ನ ಅವಸ್ಥೆಗೆ ಮೀಸೆಯಡಿ ನಗುತ್ತ 'ನಮ್ಮ ಪ್ರಾಣಿ ಶಾಸ್ತ್ರಜ್ಞರಿಗೆ ಆಹಾರ ತಿನ್ನುವ ಜೀವಿಗಳು ವಿಸರ್ಜಿಸುತ್ತವೆ ಎಂದು ಮರೆತುಹೊಗಿತ್ತಲ್ಲವೇ'ಎಂದು ಅಣಕಿಸುತ್ತ ಇದ್ದಾರೆ.

8 comments:

  1. ಮಾಲಾ ಮೇಡಮ್,

    ಪಾರಿವಾಳದ ಕತೆ ತುಂಬಾ ಚೆನ್ನಾಗಿದೆ. ಅವುಗಳ ಪ್ರತಿಯೊಂದು ಅಂತವನ್ನು ತಾಳ್ಮೆಯಿಂದ ಚೆನ್ನಾಗಿ ಗಮನಿಸಿದ್ದೀರಿ, ಜೊತೆಗೆ ಫೋಟೋವನ್ನು ತೆಗೆದಿದ್ದೀರಿ..
    ಮತ್ತೆ ನಾನು ನಮ್ಮ ಮನೆಯ ಸಜ್ಜೆಯ ಮೇಲೆ ಹೀಗೆ ನಡೆದ ಪಾರಿವಾಳ ಸಂಸಾರ ಕತೆಯನ್ನು ಎರಡು ತಿಂಗಳು ಗಮನಿಸಿ..ಫೋಟೋಗಳನ್ನು ತೆಗೆದು ನಂತರ ಪತ್ರಿಕೆಗೆ ಕಳುಹಿಸಿದ್ದೆ. ಪ್ರಕಟವಾಗಿತ್ತು. ಮತ್ತೆ ಅದನ್ನು ಬ್ಲಾಗಿನಲ್ಲೂ ಹಾಕಿದ್ದೇನೆ...ಇಲ್ಲಿ ಲಿಂಕ್ ಕೊಟ್ಟಿದ್ದೇನೆ. ಬಿಡುವಾದರೆ ನೋಡಿ...

    ನಾಚಿಕೆಯಿಲ್ಲದ ಪಾರಿವಾಳ ಕುಟುಂಬ http://chaayakannadi.blogspot.com/2008/10/blog-post_19.html

    ಶಿವು.ಕೆ

    ReplyDelete
  2. ಪಾರಿವಾಳದ ಚಿತ್ರ ನೋಡಿದ ಕೂಡಲೇ ನಾನು ನನ್ನ ಬಾಲ್ಕನಿಯನ್ನು ನೋಡಿದೆ ಕಾರಣ ಹೇಳಬೇಕಾಗಿಲ್ಲ ಇದೆ ಅವಸ್ತೆ ಇಲ್ಲಿ. ಆದರೆ ಇದು Glazed ಬಾಲ್ಕನಿಯಾದ್ರಿಂದ ಹೊರಗೆ ನಾವು ಹೋಗಲು ಸಾದ್ಯವಿಲ್ಲ ಹಾಗಾಗಿ ಒಳಗಿನಿಂದಲೇ ಎಲ್ಲವನ್ನು ನೋಡುತ್ತೇನೆ ರೈಲಿಂಗ್ ಪೂರ್ತಿ ಗಲೀಜು ಮಾಡಿವೆ, ಆದರು ಅದರ " ಗುಟುರ್ " ಗುಟುರ್ " ಶಬ್ದ ಕೇಳಲು ಕುಶಿ ಕಾರಣ ನನಗೆ ನನ್ನೂರನ್ನು ನೆನಪಿಸುತ್ತದೆ.
    ಬಹಳ ಚೆನ್ನಾಗಿ ಬರೆದಿದ್ದೀರ ಧನ್ಯವಾದಗಳು

    ReplyDelete
  3. ಪಾರಿವಾಳಗಳ ಬಗೆಗಿನ ಕುತೂಹಲ ಒಳ್ಳೆಯದೇ..ಆದರೆ, ಕೊನೆಗೆ ಸ್ವಲ್ಪ ತೊಂದರೆ ಆಗುವುದಂತೂ ಸಹಜವೇ. ಒಂದು ನಾಯಿಮರಿ ಸಾಕಿದರೂ ಪ್ರಾರಂಭದಲ್ಲಿ ಅದರ ತೊಂದರೆ ಸಹಿಸಿಕೊಳ್ಳಲೇ ಬೇಕಲ್ಲವೇ.. ಆಮೇಲೆ, ಏನು ಮಾಡಿದ್ರಿ, ಪಾರಿವಾಳಗಳನ್ನೆಲ್ಲ ಓಡಿಸಿಬಿಟ್ರಾ?

    ಚಂದದ ಚಿತ್ರ-ಲೇಖನ.. ಅಭಿನಂದನೆಗಳು.

    - ಉಮೇಶ್

    ReplyDelete
  4. ಪಾರಿವಾಳವನ್ನು ನಿಮ್ಮ ಕುಟುಂಬದೊಂದಿಗೆ ಇರಲು ಬಿಟ್ಟು, ಅದು ಕೊಟ್ಟ ಕಷ್ಟ ಕೂಡ ಸಹಿಸಿಕೊಂಡು , ಫೋಟೋ ತೆಗೆದಿದ್ದೀರ. ನಿಮಗೆ ಕಷ್ಟವಾದರೂ ಓದುವ ನಮಗೆ ಖುಷಿಯಾಯ್ತು.

    ReplyDelete
  5. ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗು ಧನ್ಯವಾದಗಳು.

    ಶಿವು ಸರ‍್ ನಿಮ್ಮ ’ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ’ ಓದಿದೆ. ಫೋಟೊಗಳು,ಬರಹ ಚೆನ್ನಾಗಿವೆ .ಇನ್ನೊಂದು ವಿಷಯ ಸರ‍್, ನನ್ನ ಹೆಸರು ಸುಮ.ನೀವು ಮಾಲ ಎಂದು ಹೆಸರಿಸಿದ್ದೀರಿ .ಕಣ್ತಪ್ಪಿನಿಂದ ಆಗಿರಬಹುದಲ್ಲವೆ?

    ಇಸ್ಮಾಯಿಲ್ ಅವರೆ ನೀವೆಂದಂತೆ ಪಾರಿವಾಳಗಳ ಕೂಗು ನಮ್ಮ ಊರನ್ನು ನೆನಪಿಸುತ್ತಿದ್ದುದು ನಿಜ.

    ಉಮೇಶ್ ಅವರೆ ನಾನು ಮೊದಲು ಸ್ವಲ್ಪ ತೊಂದರೆ ತಾನೆ ಎಂದೇ ತಿಳಿದಿದ್ದೆ.ಆದರೆ ನಂತರ ತಿಳಿಯುತು ಅಂದುಕೊಂಡಷ್ಟು ಸುಲಭವಲ್ಲವೆಂದು. ಈಗ ನಾನು ಓಡುಸಿದರೂ ಅವು ಹೋಗುತ್ತಿಲ್ಲ.

    ಧನ್ಯವಾದಗಳು ಮಲ್ಲಿಕಾರ್ಜುನ ಅವರೆ.ಮರಿಗಳ ಬೆಳವಣಿಗೆಯ ಪ್ರತಿಹಂತದ ಚಿತ್ರ ತೆಗೆದಿದ್ದೆ. ಆದರೆ ಬೇರೇನೊ ಸಮಸ್ಯೆಯಿಂದಾಗಿ ಎಲ್ಲವನ್ನು ಇಲ್ಲಿ ಹಾಕಲಾಗಲಿಲ್ಲ.

    ReplyDelete
  6. ತಮ್ಮ ಪಾರಿವಾಳಗಳ ಅಧ್ಯಯನದ ಲೇಖನ ಛಾಯಚಿತ್ರಗಳೊ೦ದಿಗೆ ಅದ್ಭುತವಾಗಿ ಮೂಡಿ ಬ೦ದಿದೆ. ಈ ಅಧ್ಯಯನದಲ್ಲಿ ತಾವು ಪಟ್ಟ ಪಾಡು ಫಜೀತಿಗೆ ಬೇಜಾರಾಯಿತು. ತಮ್ಮ ವೈಜ್ನಾನಿಕ ಮನೋಸ್ವಭಾವ ಅದ್ಭುತ. ಆದನ್ನು ವಿವರಿಸುವ ಹಾಗು ಎಲ್ಲರೊ೦ದಿಗೆ ಹ೦ಚಿಕೊಳ್ಳುವ ಸಹ್ರುದಯತೆ ಇನ್ನು ಅದ್ಭುತ್. ಇನ್ನು ಹಲವು ನೀರೀಕ್ಷೆಗಳೊ೦ದಿಗೆ ತಮ್ಮ ಲೇಖನ ಎದುರು ನೋಡುತ್ತಿರುವೆ.

    ReplyDelete
  7. ಸುಮಾ ಅವರೇ ನಮಸ್ಕಾರಗಳು,
    ನೇರ ಬರವಣಿಗೆ , ಪಾರಿವಾಳದ ಸ೦ಸಾರ ಚಿತ್ರ ನೋಡಿದಾಗ ನಾವು ಹೀಗೆ ಬದುಕಿಬಂದ್ದಿದು ಅಂಥ ಅನಿಸುವುದುಅಲ್ವೇ.ರೆಕ್ಕೆ ಪುಕ್ಕ ಬಂದಮೇಲೆ ಮರಿಗಳು ಹಾರುವಹಾಗೆ ನಾವು ಹಾರಿಬಂದು ನಮ್ಮ ಸ೦ಸಾರ ಬೆಳಿಸಿ,ಅಮ್ಮ ಅಪ್ಪನ ನೆನೆದು,ಅವ್ರು ಹೀಗೆ ನಮ್ಮನು ಬೆಳಸಿ,ನಮ್ಮ ಕಿರಿಕಿರಿ ಸಹಿಸಿಕೊಂಡು, ಬದುಕು ಸವಿಸಿದ್ದು ನೋಡಿದರೆ ಅಬ್ಬ ಅಂಥ ಅನಿಸುತೆ. ಹೀಗೆ ಬರಿತಾಇರಿ .
    Posted by nagaraj kalmane at 7:59 AM 0 comments

    ReplyDelete
  8. Good narration and experience Suma. In our terrace garden, only the parents used to visit the chicks (no relatives visited!).

    ReplyDelete