23 Sept 2009

ಹೀಗೊಂದು ದ್ವಂದ್ವ.....

  • ಸುನಾಮಿ, ಭೂಕಂಪ, ನೆರೆ, ಬರ-ಸಾವಿರಾರು ಮುಗ್ಧ ಜೀವಗಳ ಬಲಿ-----ನೀನೆಲ್ಲಿದ್ದೀಯ?
ಮತ್ತೆ ಕೊನರುವ ಕೊರಡು, ಬದುಕಬಯಸುವ ಬರಡು, ಎಲ್ಲಿಂದಲೊ ಚಾಚುವ ಸಹಾಯಹಸ್ತ, ಚಿಗುರುವ ಬದುಕು----
ನೀನಿದ್ದೀಯೇನೋ
  • ನಿನ್ನ ಹೆಸರಿನಲ್ಲೇ ನಡೆಯುವ ಕೊಲೆ ಸುಲಿಗೆ ಮಾರಣಹೋಮ-----ಉಹ್ಹೂ.... ನೀನಿಲ್ಲ ಬಿಡು

ಮತ್ತೆಲ್ಲೊ ನಿನ್ನ ಹೆಸರಿನಲ್ಲೆ ನಡೆಯುವ ಅನ್ನದಾನ, ವಿದ್ಯಾದಾನ, ನಿಸ್ವಾರ್ಥಸೇವೆ----ಹ್ಹೂ...ನೀನಿರಬಹುದೇನೋ

  • ತಿನ್ನುವುದಕ್ಕಿಂತ ಚೆಲ್ಲುವುದನ್ನೇ ನಾಗರೀಕತೆಯೆಂದುಕೊಂಡಿರುವ ಶ್ರೀಮಂತರು - ಅವರೆಸೆಯುವ ಎಂಜಲೆಲೆಗಾಗಿ ಕಾಯುವ ಹಸಿದ ಮುಗ್ಧ ಕಣ್ಗಳು----ಛೇ... ನೀನಿಲ್ಲವೆ ಇಲ್ಲ

ಬೀದಿಯಲ್ಲೆಲ್ಲೊ ಹಸಿವಿನಿಂದ ಅಳುವ ಕಂದಮ್ಮನಿಗೆ ತನ್ನ ಕೈಲಿರುವ ರೊಟ್ಟಿಯನ್ನೆ ಕೊಟ್ಟುಬಿಡುವ ಚಿಕ್ಕ ಪೋರಿ----ನಿನ್ನಿಂದಲೇ ಎಲ್ಲ

  • ಕುಡುಕರ ಅಮಲು, ಕಾಮುಕರ ತೆವಲು-ಬಲಿಯಾಗಿ ನರಳುವ ಬಾಲೆಯರು----ನೀನಿಲ್ಲವೇನೋ

ನೊಂದವರ ನೋವಿಗೆ ಹೆಗಲಾಗಿ, ಬಾಳಿಗೆ ಬೆಳಕಾಗುವವರು----ನೀನಿರಬಹುದೇನೋ

  • ಭೂಮಿಯಲ್ಲಿರುವುದೆಲ್ಲವನ್ನು ತನ್ನ ಅನುಕೂಲಕ್ಕೆ ಬಳಸುವ, ಹಾಳುಗೆಡವುವ ತನಗೆ ಬೇಡದ್ದನ್ನು ನಾಶಪಡಿಸುವ ಮಾನವ----ಸಕಲ ಚರಾಚರ ರಕ್ಷಕ ನೀನಾ???

ಎಲ್ಲ ಅತ್ಯಾಚಾರವನ್ನು ಸಹಿಸಿ ಮನುಕುಲಕ್ಕೆ ಸಹಾಯವನ್ನೇ ಮಾಡುವ ಭೂತಾಯಿ, ಅಕೆಯನ್ನು ರಕ್ಷಿಸಲು ಪ್ರಾಮಾಣಿಕವಾಗಿ ದುಡಿಯುವವರು ------ನೀನಿದ್ದರೂ ಇರಬಹುದು.

9 comments:

  1. ಸುಮ ಗಿಡದ ಕೊಡುಗೆ ಜಗಕ್ಕೆ ಸುವಾಸನೆ
    ಅದೇ ಗಿಡ ಕೊಡುತ್ತೆ ಮುಳ್ಳು ಚುಚ್ಚು ಯಾತನೆ
    simply super, ನಿಮ್ಮ ಈ ದ್ವಂದ್ವಗಳಲ್ಲಿ ನಿರಾಸೆ ಜೊತೆಗೆ ಹುಗಿದಿರುವ ಅಶಾಭಾವದ ಪ್ರಸ್ತಾವನೆ...
    ಒಂದಂತೂ ನಿಜ ನಿಸರ್ಗ ಪ್ರೇಮದ ಜೊತೆಗೆ ಅಶಾವಾದ ನಿಮ್ಮ ಛಾಪು..ಹಾಗೇ ಈ ಸುತ್ತಮುತ್ತಲ ಕೇಡು-ಕೆಡಕುಗಳ ಬಗ್ಗೆ ಅರಿವು.
    ಅಭಿನಂದನೆಗಳು...ಮುಂದುವರೆಸಿ

    ReplyDelete
  2. ಸುಮಾ...

    ತುಂಬಾ ಭಾವಪೂರ್ಣವಾಗಿದೆ...
    ಪ್ರತಿಯೊಬ್ಬರ ಮನದಲ್ಲಿನ ದ್ವಂದ್ವ ಇದು..
    ಚೆನ್ನಾಗಿ ಬಿಡಿಸಿಟ್ಟಿದ್ದೀರಿ...

    ಕೊನೆಯಲ್ಲಿ ನಿರಾಶಾವಾದಿಯಾಗದೆ..

    ಭರವಸೆ ಮೂಡಿಸಿದ್ದು ಇಷ್ಟವಾಯಿತು...

    ಅಭಿನಂದನೆಗಳು...

    ReplyDelete
  3. Suma Congrats

    ದಿನದ ಬ್ಲಾಗ್ ನಿಮ್ಮ ದ್ವಂದ್ವ - ವನ್ನ ಕೆಂಡ ಸಂಪಿಗೆಯಲ್ಲಿ ಪ್ರಸ್ತಾಪಿಸಿದೆ..ನೋಡಿ..
    ಇಲ್ಲಿದೆ ಲಿಂಕ್
    http://www.kendasampige.com/article.php?id=1774

    ReplyDelete
  4. ಧನ್ಯವಾದಗಳು ಜಲನಯನ ಅವರೆ. ಕೆಂಡಸಂಪಿಗೆಯ ದಿನದ ಬ್ಲಾಗ್ ಅಂಕಣದಲ್ಲಿ ನನ್ನ ಬ್ಲಾಗ್ ಬಗ್ಗೆ ಬರೆದಿರುವುದನ್ನು ನೋಡಿ ಸಂತೋಷವಾಗುತ್ತಿದೆ.ಇದನ್ನು ಮೊದಲು ನೋಡಿ ನನಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್.
    ಪ್ರಕಾಶಣ್ಣ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  5. ಸುಮಾ ಮೇಡಮ್,

    ದೇವರ ಬಗ್ಗೆ ನೀವು ಬರೆದಿರುವ ಈ ದ್ವಂದ್ವ ಬರಹ ನಿಜಕ್ಕೂ ಸೊಗಸಾಗಿದೆ. ಒಮ್ಮೆ ನನಗೂ ಹಾಗೆ ಅನ್ನಿಸಿತು...

    ReplyDelete
  6. ಕೆಂಡಸಂಪಿಗೆ ಯಲ್ಲಿ ನಿಮ್ಮ ಬರಹದ ಬಗ್ಗೆ ಬರೆದಿದ್ದನ್ನು ನೋಡಿ ಭೆತಿಯಿತ್ತೆ.. ನಿರಾಸೆಯಾಗಲಿಲ್ಲ... ತುಂಬಾ ಚೆನ್ನಾಗಿದೆ.. ನಿಮ್ಮ ಆಶಾವಾದಿ ದ್ವಂದ್ವಗಳು ಇಷ್ಟವಾದವು.. ಹೀಗೆ ಬರೆಯುತ್ತಿರಿ..

    ReplyDelete
  7. manavana vaividhyathe haagu vairudhyagalu railu haligalanthe. konegaanada dikku...kavana good.

    ReplyDelete
  8. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಶಿವು ,ರವಿಕಾಂತ ಹಾಗು ಚುಕ್ಕಿಚಿತ್ತಾರ ಅವರೆ.

    ReplyDelete
  9. ಸುಮಾ,
    ನಿಮ್ಮ ಬರಹಗಳಲ್ಲಿ ಒಂದು ಗಟ್ಟಿತನವಿದೆ, ಶೈಲಿ ಬಹಳ ಇಷ್ಟವಾಯಿತು,
    ಬರೆಯುತ್ತಿರಿ

    ReplyDelete