ದೀಪಾವಳಿ .......
ಮಕ್ಕಳಿಗೆ ------ಹೊಸಬಟ್ಟೆ ..ಪಟಾಕಿ ..ಸಿಹಿತಿಂಡಿ
ಕನಸುಗಂಗಳ ಯುವಕ ಯುವತಿಯರಿಗೆ --------ಕಣ್ಣೋಟಗಳ ವಿನಿಮಯಕ್ಕೊಂದು ಅವಕಾಶ.....
ಹೆಂಗಸರಿಗೆ -----ಕ್ಲೀನಿಂಗು ...ಗಂಡ ಮಕ್ಕಳಿಗೆ ಎಣ್ಣೆ ಸ್ನಾನ ....ಹೊಸ ಹೊಸ ತಿಂಡಿಗಳ ತಯಾರಿಯ ಗಡಿಬಿಡಿ.... ನಡುವೆಯೆ ಪಕ್ಕದಮನೆಯಾಕೆಯ ಹೊಸಸೀರೆಯ ಮೇಲೊಂದು ಉರಿನೋಟ.....
ಗಂಡಸರಿಗೆ -----ಅಪ್ಪ ಪಟಾಕಿ ಹೋಡೆಯಲು ಬಾ ಎಂಬ ಮಕ್ಕಳ ವರಾತ ....ಕೈಯಲ್ಲಿ ಟಿವಿ ರಿಮೋಟ್ ....ಬದಲಾಗುವ ಉದಯಟಿವಿ ,ಈಟಿವಿ, ಸುವರ್ಣ, ಜೀಟಿವಿಗಳು.........ಮನದಲ್ಲಿ ಹಬ್ಬದ ನೆಪದಲ್ಲಿ ಪರ್ಸಿಗೆ ಬಿದ್ದ ಕನ್ನದ ಚಿಂತೆ ....
ದೀಪಾವಳಿ .....
ಪೇಟೆಯಲ್ಲಿ....ನೂರೆಂಟು ಸೇಲುಗಳ ಭರಾಟೆ ...ಹೂವಿಂದ ಹಿಡಿದು ಕಾರುಗಳವರೆಗೂ ರೇಟ್ ಏರಿಸಿ ನಂತರ ಡಿಸ್ಕೌಂಟ್ ಎಂದು ಟೋಪಿ ಹಾಕುವವರು.....ಎಲ್ಲಾ ಗೊತ್ತಿದ್ದೂ ಟೋಪಿ ಹಾಕಿಸಿಕೊಳ್ಳುವವರು
ಹಳ್ಳಿಯಲ್ಲಿ ..... ಅಕಾಲದಲ್ಲಿ ಸುರಿಯುವ ಮಳೆಗೆ ಹಿಡಿಶಾಪ ಹಾಕುತ್ತ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲಾಗದೆ ಒದ್ದಾಡುವ ರೈತ .... ಹಬ್ಬಕ್ಕೆಂದು ಸಾಲ ಮಾಡಿ ಹೋಳಿಗೆ ತುಪ್ಪ ತಿಂದು ....ತೀರಿಸುವ ದಾರಿಯೆಂತೆಂದು ಕೊರಗುತ್ತಾ ವರ್ಷಪೂರ್ತಿ ಗಂಜಿ ಕುಡಿಯುವವ.
ಒಟ್ಟಿನಲ್ಲಿ ಬೆಳಕಿನ ಹಬ್ಬ ಮತ್ತೆ ಬಂದಿದೆ .....ಎಲ್ಲರಿಗೂ ಹಬ್ಬದ ಶುಭಾಷಯಗಳು.
ಸುಮಾ, ಎಲ್ಲ ಹಬ್ಬವೂ ಒಂದೊಂದು ಕನಸನ್ನು ಹೊತ್ತು ತರುತ್ತದೆ..ನನಗೆ ಕನಸ ಹೊತ್ತುತರುವ ನೆನಪುಗಳೇ ಮಧುರ..ನಿಮ್ಮ ಲೇಖನ ನೋಡಿ ನನಗೆ ಹಳ್ಳಿ ನೆನಪು ಸ್ನೇಹಿತರು ನಮಗೆ ಕೊಡುತ್ತಿದ್ದ ಪಟಾಕಿ ಮತ್ತು ಕಜ್ಜಾಯಗಳ ಉಡುಗೊರೆ..ಓಹ್...
ReplyDeleteಸುಮಾ ಮೇಡಂ,
ReplyDeleteಹಬ್ಬದ ಶುಭಾಶಯಗಳು.
ಸುಮಾ ಮೇಡಮ್,
ReplyDeleteದೀಪಾವಳಿಗೆ ಪಕ್ಕಾ ರೂಪಕಗಳು...ಚೆನ್ನಾಗಿವೆ. ನಿಮಗೂ ಶುಭಾಶಯಗಳು.
ellara manada bhaavagaLannu idaralli heLiddiraa ...
ReplyDeletechennaagide....
nimagu habbada subhaashaya madam....
ತುಂಬ ಚೆನ್ನಾಗಿದೆ, ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು
ReplyDeletehabbada shubhashayagalu
ReplyDeleteದೀಪಾವಳಿಯ ಹಾರ್ದಿಕ ಶುಭಾಶಯಗಳು.....
ReplyDeleteದೀಪಾವಳಿ ಹಬ್ಬದ ಶುಭಾಶಯಗಳು - ಅವರವರ ಭಾವಕ್ಕೆ - ಚೆನ್ನಾಗಿ ವರ್ಣಿಸಿದ್ದೀರಿ.
ReplyDeleteಅನ೦ತ್
ಸುಮಾಜೀ,
ReplyDeleteದೀಪಾವಳಿಯ ಹಾರ್ದಿಕ ಶುಭಾಶಯಗಳು.
ಸುಮ ಅವರೇ,
ReplyDeleteದೀಪಾವಳಿಯ ಮುಖ್ಯಾಂಶಗಳೆಲ್ಲವು ಲೇಖನದಲ್ಲಿ ಮೂಡಿಬಂದಿವೆ :)
ನಿಮಗೆ ಮತ್ತು ಕುಟುಂಬದವರಿಗೆಲ್ಲಾ ದೀಪಾವಳಿ ಶುಭಾಶಯಗಳು
ಸುಂದರ ಸಾಲುಗಳಲ್ಲಿನ ಅಮೋಘ ಅರ್ಥ ಉಣಬಡಿಸಿದ ನಿಮಗೆದೀಪಾವಳಿ ಹಬ್ಬದ ಶುಭಾಶಯಗಳು
ReplyDelete4m SATISH N GOWDA
http://nannavalaloka.blogspot.com/
ಹಬ್ಬದ ಶುಭಾಶಯ, ಚೆನ್ನಾಗಿವೆ ಪಟಾಕಿಯ೦ತಹ ನಿಮ್ಮ ಸಾಲುಗಳು
ReplyDeleteತುಂಬಾ ಚೆನ್ನಾಗಿ ದೀಪಾವಳಿಯನ್ನ ವರ್ಣಿಸಿದ್ದಿರಿ.. ಓದಿ ದೀಪಾವಳಿಯ ಹೋಳಿಗೆ ತಿಂದಷ್ಟು ಖುಶಿಯಾಯಿತು.
ReplyDelete