25 Oct 2010

ಚಿತ್ರದುರ್ಗದ ಕೋಟೆ



ಚಿತ್ರದುರ್ಗದ ಕೋಟೆಯನ್ನು ನೋಡದ ಅಥವ ಅದರ ಬಗ್ಗೆ ಕೇಳದ ಕನ್ನಡಿಗರು ವಿರಳ. ಭಾರತದ ಎರಡನೆಯ ದೊಡ್ಡ ಕೋಟೆಯೆಂಬ ಹೆಗ್ಗಳಿಕೆಯ ಅದರ ಭವ್ಯತೆಯನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ.
ಸುಮಾರು ೧೦ನೇ ಶತಮಾನದಲ್ಲೀ ಈ ಕೋಟೆಯನ್ನು ಕಟ್ಟಲು ಪ್ರಾರಂಭಿಸಿದ್ದರೂ ಸಂಪೂರ್ಣವಾಗಿದ್ದು ಸುಮಾರು ಹದಿನೆಂಟನೇ ಶತಮಾನದಲ್ಲಿ , ಪಾಳೆಗಾರರ ಆಳ್ವಿಕೆಯಲ್ಲಿ . ಇಲ್ಲಿಯೇ ಹೇರಳವಾಗಿರುವ ಕಲ್ಲುಗಳನ್ನು ಉಪಯೋಗಿಸಿಯೇ ಕೋಟೆ ಕಟ್ಟಲಾಗಿದೆ . ಇದು ಏಳು ಸುತ್ತಿನ ಕಲ್ಲಿನ ಕೋಟೆ ಏಳು ಬೆಟ್ಟಗಳನ್ನು ಸುತ್ತುವರೆದಿದೆ. ಹೊರಭಾಗದಲ್ಲಿ ಕಂದಕ , ಪ್ರತೀ ಸುತ್ತಿಗೂ ಒಂದು ಮುಖಮಂಟಪ ಮತ್ತು ದೊಡ್ಡ ಬಾಗಿಲು ಹಾಗೂ ದಿನನಿತ್ಯ ಉಪಯೋಗಿಸಲೆಂದು ಚಿಕ್ಕದಾದ ಒಂದು ಬಾಗಿಲುಗಳಿವೆ .
ದೊಡ್ಡ ಬಾಗಿಲುಗಳನ್ನು ನೇರವಾಗಿ ಒಂದೇ ಸಾಲಿನಲ್ಲಿ ಬರುವಂತೆ ನಿಲ್ಲಿಸಿದರೆ ಶತ್ರುಗಳು ಆನೆಗಳಿಂದ ತಳ್ಳಿಸಬಹುದೆಂಬ ಕಾರಣಕ್ಕೆ ಜೆಡ್ ಆಕಾರ ಬರುವಂತೆ ಕಟ್ಟಲಾಗಿದೆ. ಕೋಟೆಯ ಸುತ್ತಲೂ ಹೊರಭಾಗದ ವೀಕ್ಷಣೆಗೆ ಅನುಕೂಲವಾಗುವಂತೆ ಎತ್ತರವಾದ ಬತೇರಿಗಳಿವೆ . ಕಾವಲುಗಾರರು ಇಲ್ಲಿಂದ ಸುತ್ತ ಎರಡು ಕಿಮೀವರೆಗೂ ವೀಕ್ಷಿಸುತ್ತಿದ್ದರಂತೆ.
ಆನೆಗಳಿಗೆ
ನೀರುಣಿಸಲು ಉಪಯೋಗಿಸುತ್ತಿದ್ದ ಕಲ್ಲಿನ ಬಾನಿ ,
ಕಲ್ಲಿನಲ್ಲೇ
ಕೊರೆದ ಎಣ್ಣೆ ಸಂಗ್ರಹಿಸುತ್ತಿದ್ದ ಎಣ್ಣೆ ಕೊಳ , ಆಯುಧಗಳು ತುಕ್ಕು ಹಿಡಿಯದಂತೆ ತುಪ್ಪದಲ್ಲಿ ಮುಳುಗಿಸಿಡುತ್ತಿದ್ದ ಕಲ್ಲಿನ ತುಪ್ಪದ ಕೊಳಗಳು ಶಿಲ್ಪಿಗಳ ಶ್ರಮವನ್ನು ಸಾರುತ್ತವೆ.
ಇನ್ನೊಂದು ಮುಖ್ಯವಾದ ಅಂಶವೆಂದರೆ ಕೋಟೆಯಲ್ಲಿ ನೀರಿನ ನಿರ್ವಹಣೆಯಲ್ಲಿ ತೋರಿರುವ ಜಾಣ್ಮೆ . ಗುಡ್ಡದ ಮೇಲಿನಿಂದ ಬಿದ್ದ ಮಳೆನೀರು ಸುವ್ಯವಸ್ಥಿತವಾಗಿ ಹರಿದು ಅಲ್ಲಲ್ಲಿ ನಿರ್ಮಿಸಿರುವ ಕೊಳಗಳಲ್ಲಿ ಸಂಗ್ರಹವಾಗುವಂತೆ ಮಾಡಲಾಗಿತ್ತು . ಹೆಚ್ಚಾದ ನೀರು ಕೋಟೆಯಿಂದ ಹರಿದು ಕೆಳಭಾಗದ ಒಂದು ಕೊಳದಲ್ಲಿ ಸಂಗ್ರಹವಾಗಿ ಊರಿನ ಜನರಿಂದ ಉಪಯೋಗಿಸಲ್ಪಡುತ್ತಿತ್ತು.
ಕೋಟೆಯ ಮೇಲ್ಭಾಗದಲ್ಲಿರುವ ಗಣೇಶ , ಸಂಪಿಗೆ ಸಿದ್ಧೇಶ್ವರ , ಹನುಮಂತ , ಉಚ್ಚಂಗಿ ಎಲ್ಲಮ್ಮ ಮೊದಲಾದ ಕಲ್ಲಿನ ತಂಪಾದ ದೇವಾಲಯಗಳು ನಿರಾಭರಣ ಸುಂದರಿಯರಂತೆ ಮನತಣಿಸುತ್ತವೆ.
ಇಲ್ಲಿ
ಪುರಾತನ ಹಿಡಿಂಬಾ ದೇವಾಲಯವೊಂದಿದೆ. ಮಾಹಾಭಾರತದ ಹಿಡಿಂಬೆಯ ವಾಸಸ್ಥಾನವಿದೆಂದು ಪ್ರತೀತಿ.
ಧೀರವನಿತೆ ಒನಕೆ ಓಬವ್ವನ ಶೌರ್ಯದ ಸಂಕೇತವಾದ ಓಬವ್ವನ ಕಿಂಡಿಯನ್ನು ನಾವೀಗಲೂ ಇಲ್ಲಿ ನೋಡಬಹುದು . ಪುಟ್ಟಣ್ಣ ಕಣಗಾಲರ ನಾಗರಹಾವು ಚಿತ್ರದಲ್ಲಿ ತೋರಿಸಿರುವಂತೆ ಓಬವ್ವನ ವೀರಾವೇಷ , ಹೈದರಾಲಿಯ ಸೈನಿಕರ ಶವಗಳು , ಕುದುರೆಗಳ ಖರಪುಟ ಶಬ್ದ .... ಎಲ್ಲವೂ ಇಲ್ಲಿ ನಿಂತಾಗ ಮನದಲ್ಲಿ ಹಾದು ಹೋಗುತ್ತವೆ. ಓಬವ್ವನ ಕಿಂಡಿ
ಹಿಂದೆ ಚಿತ್ರಕಲ್ಲು ದುರ್ಗವೆಂಬ ಅನ್ವರ್ಥನಾಮವಿದ್ದ ಈ ಊರು ಕ್ರಮೇಣ ಚಿತ್ರದುರ್ಗವೆಂದಾಯ್ತಂತೆ. ಹೆಸರಿಗೆ ತಕ್ಕಂತೆ ಇಲ್ಲಿ ಬೃಹದಾಕಾರದ ಬಂಡೆಗಳು ಚಿತ್ರ ವಿಚಿತ್ರ ಆಕಾರದಲ್ಲಿ ನಿಂತಿವೆ.
ಕುಳಿತಿರುವ ಆನೆ , ಹಡಗು , ಮೊಲದ ಮುಖದ ಪಾರ್ಶ್ವ , ಬೃಹತ್ ಶಂಖ , ಮಂಚ ...... ನೋಡುತ್ತಾ ನಿಂತರೆ ಹೀಗೆ ನಾನಾ ಆಕಾರ ತಳೆಯುತ್ತವೆ ಆ ಬಂಡೆಗಳು.

ಇಲ್ಲಿನ ಆಕರ್ಷಣೆಗೀಗೊಂದು ಹೊಸ ಸೇರ್ಪಡೆ ಮಂಕಿ ಮ್ಯಾನ್ ಎಂದೇ ಪ್ರಸಿದ್ದನಾಗಿರುವ ರಾಜು.
ಇಲ್ಲಿನ ಬೃಹತ್ ಕಲ್ಲಿನ ಗೋಡೆಯನ್ನೋ , ಬಂಡೆಯನ್ನೊ ಯಾವುದೇ ಹಗ್ಗ ಇತ್ಯಾದಿಗಳ ಸಹಾಯವಿಲ್ಲದೇ ಸರಸರನೆ ಆತ ಏರುವುದನ್ನು ನೋಡಿದಾಗ ಮೈ ಜುಮ್ಮೆನ್ನುತ್ತದೆ . ಒಂದಷ್ಟು ಎತ್ತರ ಏರಿ, ಕೈಬಿಟ್ಟು ಸ್ವಲ್ಪ ಜಾರಿ ಗಾಳಿಯಲ್ಲಿ ಪಲ್ಟೀ ಹೊಡೆದು , ಮತ್ತೆ ಬಂಡೆಯ ಬಿರುಕನ್ನು ಹಿಡಿದು ಉಲ್ಟಾ ನಿಲ್ಲುವ ಆತನ ನಿಖರತೆ ಬೆರಗು ಹುಟ್ಟಿಸುತ್ತದೆ. ಎಷ್ಟೇ ಎತ್ತರದ ಮರವನ್ನಾಗಲೀ ಸಲೀಸಾಗಿ ಏರಬಲ್ಲ ಕೋತಿಗಳೆ ತನ್ನ ಈ ಸಾಹಸಕ್ಕೆ ಪ್ರೇರಣೆಯೆನ್ನುವ ಈತನ ಸಾಹಸ ಇಲ್ಲಿ ಬರುವವರಿಗೆ ಅಡಿಷನಲ್ ಎಂಟರ್ಟೇನ್ಮೆಂಟ್.

ವಿಜಯನಗರದ ಅರಸರ ಸಾಮಂತರಾಗಿದ್ದ ಪಾಳೇಗಾರರು ಮುಖ್ಯವಾದ ರಾಜಧಾನಿ ವಿಜಯನಗರದಲ್ಲೇ ಇಲ್ಲದ ಇಂತಹ ಭವ್ಯವಾದ ಕೋಟೆಯನ್ನು ಏಕಾಗಿ ಕಟ್ಟಿಸಿದರೋ ...ಅದಕ್ಕೆ ತಗುಲಿರಬಹುದಾದ ಜನಬಲ , ಧನಬಲ ಇತ್ಯಾದಿಗಳನ್ನು ಊಹಿಸಿದರೆ ಒಮ್ಮೆ what a waste! ಅನ್ನಿಸದಿರದು . ಬಹುಶಃ ಹಿಂದಿನ ರಾಜಾಡಳಿತ ಪದ್ಧತಿಯಲ್ಲಿ ರಾಜ ಮತ್ತು ಆತನ ಸುತ್ತಮುತ್ತಲಿನವರ ಚಿಂತೆ ಸದಾ ಶತ್ರುದಾಳಿಗಳಿಂದ ತಪ್ಪಿಸಿಕೊಳ್ಳುವುದು ಅಥವಾ ಹೊಸ ರಾಜ್ಯ ಕಬಳಿಸುವುದರತ್ತಲೇ ಇರುತ್ತಿತ್ತೇನೊ . ಸಂಸ್ಥಾನಗಳ ನಡುವೆ ಪರಸ್ಪರ ಸೌಹಾರ್ದ ತುಂಬ ಕಡಿಮೆಯಿರುತ್ತಿತ್ತೆಂದೆನಿಸುತ್ತದೆ.

ಇಂದಿನ ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೇ ಇಂತಹ ದೊಡ್ಡ ದೊಡ್ಡ , ಮಳೇ ಗಾಳಿ , ಬಿಸಿಲಿಗೆ ಜಗ್ಗದ ಕೋಟೆ ಕೊತ್ತಲ , ದೇವಾಲಯಗಳನ್ನು ನಿರ್ಮಿಸಿದ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಎನಿಸುತ್ತದೆ .

18 comments:

  1. ಸುಮಾ, ಚಿತ್ರದುರ್ಗದ ಪ್ರವಾಸದೊಂದಿಗೆ ಚಿತ್ರದೊಂದಿಗಿನ ವಿವರಣೆ, ಮತ್ತೆ ರಾಜು, ಓಹ್ ಇವನ ನೈಸರ್ಗಿಕ ಸಾಮರ್ಥ್ಯ...ಎಲ್ಲಾ ನನ್ನನ್ನ ಕುವೈತಿಂದ ತೆಗೆದೆ ದುರ್ಗದ ಕೋಟೆಗೆ ಕೊಂಡೊಯ್ದವು...ನೈಸ್ ಪ್ರವಾಸ ಕಥನ.

    ReplyDelete
  2. This comment has been removed by the author.

    ReplyDelete
  3. ಸುಮಾ ಅವರೇ ಚಿತ್ರ ದುಗದ ಕೋಟೆಯ ಸುಂದರ ದರ್ಶನ ,ಕೋಟೆ ಏರುವ ಮಂಕಿ ಮ್ಯಾನ್ ಸಾಹಸ ,ಓಬವ್ವನ ಕಿಂಡಿ ಚೆನ್ನಾಗಿದೆ. ಇತಿಹಾಸದ ಖಣಜ ಚಿತ್ರದುರ್ಗದ ದರ್ಶನ ಮಾಡಿಸಿದ್ದೀರಿ ಧನ್ಯವಾದಗಳು.ಅಲ್ಲಿ ರಾಮಾಚಾರಿಯ ,ಚಾಮಯ್ಯ ಮೇಷ್ಟ್ರ ನೆನಪು ಬಂದಿರಬೇಕಲ್ವ!!

    ReplyDelete
  4. ಸುಮಾ ಮೇಡಂ, ಚಿತ್ರದುರ್ಗದ ಕೋಟೆ, ಓಬವ್ವನ ಕಿಂಡಿ, ಮಂಕಿಮ್ಯಾನ್‌ ಎಂಬ ಸಾಹಸಿ, ಇವೆಲ್ಲದರ ದರ್ಶನ ಮಾಡಿಸಿದಿರಿ. ಬಸ್ಸಿನಲ್ಲಿ ಹರಿಹರಕ್ಕೆ ಹೋಗುವಾಗ ದೂರದಿಂದ ಕೋಟೆಯ (ದುರ್ಗ) ದರ್ಶನ ಮಾಡಿದ್ದೆ. ನಿಮ್ಮ ಬರಹ-ಚಿತ್ರಗಳನ್ನು ಓದಿ-ನೋಡಿ ಖುಷಿಯಾಯಿತು.

    ಇದರೊಂದಿಗೆ, ನಾಗರಹಾವಿನ ಚಲನಚಿತ್ರದ ನೆನಪು ಹಾಗೆಯೇ ಕಾಡಿತು.

    ಧನ್ಯವಾದಗಳೂ.

    ReplyDelete
  5. ಸುಂದರವಾದ ಪ್ರವಾಸ ಕಥನ ಸುಮಕ್ಕ. ಚಿತ್ರದುರ್ಗದ ಕೋಟೆಯ ದರ್ಶನವನ್ನು ಮಾಡಿಸಿದ್ದಕ್ಕೆ ಧನ್ಯವಾದಗಳು.. :)

    ReplyDelete
  6. ನಾನು ಹಿಂದಿನ ವಾರ ಹೋಗಿದ್ದೆ :)

    ReplyDelete
  7. ಚಿತ್ರ-ಲೇಖನ ತು೦ಬಾ ಚೆನ್ನಾಗಿದೆ. ಹೋಗಬೇಕೆನಿಸಿದೆ.

    ReplyDelete
  8. chitragaLa jote vivaraNe kooda chennaagide...

    ReplyDelete
  9. ಸುಂದರವಾದ ಪ್ರವಾಸ ಕಥನ. ಚಿತ್ರದುರ್ಗದ ಪರಿಚಯ ಚೆಂದದಲ್ಲಿ ಮಾಡಿದ್ದಿರಿ ಜೊತೆಗೆ ಸುಂದರ ಚಿತ್ರಗಳು.

    ReplyDelete
  10. ಇಂದಿನ ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೇ ಇಂತಹ ದೊಡ್ಡ ದೊಡ್ಡ , ಮಳೇ ಗಾಳಿ , ಬಿಸಿಲಿಗೆ ಜಗ್ಗದ ಕೋಟೆ ಕೊತ್ತಲ , ದೇವಾಲಯಗಳನ್ನು ನಿರ್ಮಿಸಿದ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಎನಿಸುತ್ತದೆ..nimmaa matigae nanna sahamatavidae

    channagidae ..baraha mattu vivarane

    ReplyDelete
  11. ಸುಂದರ ಪ್ರವಾಸ ಕೂತಲ್ಲೇ ಮಾಡಿಸಿದಿರಿ ಸುಮಾ .ಲೇಖನ ಚೆನ್ನಾಗಿದೆ

    ReplyDelete
  12. ಸುಮಾ ಮೇಡಂ,
    ಚೆಂದದ ಚಿತ್ರಗಳೊಂದಿಗೆ ಚಿತ್ರದುರ್ಗದ ಕೋಟೆಯ ಪೂರ್ಣ ಮಾಹಿತಿ ಕೊಟ್ಟಿದ್ದೀರಾ......
    ಧನ್ಯವಾದಗಳು.

    ReplyDelete
  13. ಸುಮ ಅವರೇ,
    ದುರ್ಗದ ಕೋಟೆ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು..
    ನಿಮ್ಮ ಮಾತು ನಿಜ..ಯಾವುದೇ ಯಂತ್ರಗಳಿಲ್ಲದೆ ಹೇಗೆ ಇಂತಹವುಗಳನ್ನು ಕಟ್ಟಿದರು ?

    ಅಂದಾಗೆ ಮಂಕಿಮ್ಯಾನ್ ರಾಜು , ಇಲ್ಲಿನ ಹಿಸ್ಟರಿ ಚ್ಯಾನಲ್‍ನಲ್ಲಿ ಸೂಪರ್ ಹ್ಯೂಮನ್ಸ್ ಎಂಬ ಕಾರ್ಯಕ್ರಮದಲ್ಲಿ ಅಧ್ಯಯನದ ಕೇಂದ್ರವಾಗಿದ್ದ..

    ReplyDelete
  14. ಸುಂದರ ಪ್ರವಾಸ ಮಾಡಿಸಿದಿರಿ ಸುಮಾ .ಲೇಖನ ಚೆನ್ನಾಗಿದೆ

    ReplyDelete
  15. ಸುಮಾ ಮೇಡಮ್,
    ನಾನು ಕೋಟೆಯನ್ನು ಅನೇಕ ಬಾರಿ ನೋಡಿದ್ದೇನೆ. ನೀವು ಅದರ ಅನೇಕ ವಿವರಗಳನ್ನು ಕೊಡುತ್ತಾ ಉತ್ತಮ ಚಿತ್ರಗಳನ್ನು ಕೊಟ್ಟಿದ್ದೀರಿ..ಮತ್ತೊಮ್ಮೆ ನೋಡಿದ ಹಾಗೆ ಆಯ್ತು ಅದಕ್ಕಾಗಿ ಥ್ಯಾಂಕ್ಸ್.

    ReplyDelete
  16. nanage vishayavu tiliitu projetu mugiitu.Danayavadagalu madam nimage

    ReplyDelete