11 Dec 2010

ಆಗ - ಈಗ

ನಿನಗಾಗಿ ಆಕಾಶದ ತಾರೆಗಳನ್ನು ಬೇಕಾದರೂ ತರಬಲ್ಲೆ ಎನ್ನುತ್ತಿದ್ದವನಿಗೆ
ಈಗ
ರಾತ್ರಿ ತಾರೆಗಳನ್ನು ತೋರಿಸಲೂ ಸಮಯವಿಲ್ಲ.
ಕಾರಣ
ಅವರ ಮದುವೆಯಾಗೀಗ ಹತ್ತು ವರ್ಷ

----- ------ ------ ---------

ನನ್ನ ಗಿಡ್ಡ ಕೂದಲನ್ನು ಅಣಕಿಸುತ್ತಿದ್ದ ಪಕ್ಕದಮನೆ ಹುಡುಗ ,
ಈಗ
ಗಿಡ್ಡ ಕೂದಲು ಒಳ್ಳೆಯದೆನ್ನುತ್ತಿದ್ದಾನೆ .
ಕಾರಣ
ಅವನ ಹೆಂಡತಿಯಾಗುವವಳ ಮೋಟುಕೂದಲು.

------- ------- -------- --------

ಛೆ .. ಏನು ಗಲಾಟೇ ಸುಮ್ಮನಿರಿ ಎಂದು ಪಕ್ಕದಮನೆ ಮಕ್ಕಳನ್ನು ಗದರಿದವಳು
ಈಗ
ಮಕ್ಕಳಲ್ಲದೇ ದೊಡ್ಡವರು ಗಲಾಟೆ ಮಾಡಲಾಗುತ್ತದೆಯೆ ಎನ್ನುತ್ತಾಳೆ.
ಕಾರಣ
ಅವಳಿಗೀಗ ಎರಡು ಮಕ್ಕಳು.

------- -------- ------- -------

ತನ್ನ ತಂದೆ ತಾಯಿಯರನ್ನು ನೂರೆಂಟು ನೆಪ ಹೇಳಿ ವೃದ್ಧಾಶ್ರಮಕ್ಕೆ ಅಟ್ಟಿದವನು ,
ಈಗ
ಹೆತ್ತವರನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಗ್ಗೆ ಲೇಖನ ಬರೆಯುತ್ತಾನೆ.
ಕಾರಣ
ಅವನಿಗೀಗ ವರ್ಷ ಅರವತ್ತು.

------- -------- ------ --------

ಆಫೀಸಿಂದ ನೇರವಾಗಿ ಮನೆಗೆ ಹೋಗುವ ಗೆಳಯನ್ನು "ಅಮ್ಮಾವ್ರ ಗಂಡ" ಎಂದು ಛೇಡಿಸುತ್ತಿದ್ದವನು
ಈಗ
ಹೆಂಡತಿಯರ ಮಾತು ಕೇಳುವವನೇ ನಿಜವಾದ ಗಂಡ ಎನ್ನುತ್ತಾನೆ
ಕಾರಣ
ತಿಳಿಯಿತಲ್ಲವೆ ? ಅವನಿಗೀಗ ಮದುವೆಯಾಗಿದೆ.

-------- ------ ------- -------

ಅಮ್ಮ ಎಲ್ಲಿಗೆ ಹೊರಟಿರುವೆ ಎಂದು ಕೇಳಿದರೆ ಸಿಡಿಮಿಡಿಗುಟ್ಟುತ್ತಿದ್ದವಳು ,
ಈಗ
ಎಲ್ಲಿಗೆ ಹೊರಟರು ಅಮ್ಮನಿಗೆ ತಿಳಿಸಿಯೇ ಹೋಗುತ್ತಾಳೆ ..
ಕಾರಣ
ಅವಳಿಗೀಗ ಹದಿಹರೆಯದ ಮಗಳಿದ್ದಾಳೆ .

17 comments:

  1. ಅಂದು -ಇಂದಿನ ವೈತ್ಯಾಸವನ್ನು ಸರಳವಾಗಿ ತಿಳಿಸಿದ್ದೀರಿ
    ಕೆಲವು ವಿಷಯಗಳೇ ಹಾಗೆನಿಸುತ್ತದೆ ಸ್ವತ: ಅನುಭವ ಪಡೆಯುವವರೆಗೂ ಅದರ ಅರಿವಿರಲಾರದೇನೊ
    ಒಳ್ಳೆಯ ಪಾಠ ಹೇಳುತ್ತದೆ ನಿಮ್ಮ ಲೇಖನ

    ಹಾಗೆ ಜೀವಜಗತ್ತಿನ ಹಲವು ವಿಸ್ಮಯಗಳನ್ನು ತೆರೆದಿಟ್ಟಿದ್ದೀರ
    nice Information

    ReplyDelete
  2. ಸುಮ...ಬಹಳ ಚನಾಗಿದೆ..ಹೊಸ ರೀತಿ..ಬಹಳ ಬಹಳ ನೈಸೂ....ಆಗ..ಈಗ..

    ವಾರಾಂತ್ಯ ಅಂದ್ರೆ ಬೆಳಿಗ್ಗೆಯಿಂದಲೇ ಸಡಗರ .ಸಿನಿಮಾ ನೋಡೋಕೆ ಆಗ
    ವಾರಾಂತ್ಯ ಬಂದ್ರೆ ಎಲ್ಲೆಲ್ಲೂ ಜಡ-ಜಡ ..ಹೊರಗೋಗೋಕೆ ಭಯ ಈಗ

    ReplyDelete
  3. ಸುಮಾ..

    ಎಲ್ಲ ಚುಟುಕು ಸಾಲುಗಳು..
    ಅವುಗಳ ಪಂಚ್ ಮಸ್ತ್ ಇವೆ...


    ಈ ಹೊಸರೀತಿಯ ಸಾಲುಗಳು ಇನ್ನಷ್ಟು ಬರಲಿ... ಜೈ ಹೋ.. !!

    ReplyDelete
  4. ತುಟಿಯಂಚಿನಲ್ಲಿ ಮುಗುಳುನಗೆ ತರಿಸುವ ನ್ಯಾನೋಗಳು!

    ReplyDelete
  5. for a change.. ಸಕತ್ತಾಗಿವೆ.

    ReplyDelete
  6. ಎಲ್ಲವೂ ನಮ್ಮ ಕಾಲ ಬುಡಕ್ಕೆ ಬಂದಾಗ ಜ್ಞಾನೋದಯವಾಗುವುದು... ಸರಳ ನಿರೂಪಣೆ... ಚೆನ್ನಾಗಿದೆ...

    ReplyDelete
  7. ಸುಮಾ ಮೇಡಂ,

    ಕಲ್ ಆಜ್ ಔರ್‍ ಕಲ್ ಎಂಬಂತೆ ಆಗ-ಈಗ ಚುಟುಕಗಳು ಎಲ್ಲ ಕಾಲಕ್ಕೂ ಅನ್ವಯಿಸುವಂತಿದೆ.
    ಧನ್ಯವಾದಗಳು.

    ReplyDelete
  8. thumba chennagide summakka ! katu vasthava satyagalannu saralavaagi bidissittiddde.

    ReplyDelete
  9. ಅನುಭವ ಸಾರ್ ಅನುಭವ!!
    ಚನ್ನಾಗಿದೆ.

    ReplyDelete
  10. ಸುಧಾ ಆಗ-ಈಗ ಸೊಗಸಾಗಿದೆ..ಕೊನೆಯ ಮೂರು ಚುಟುಕುಗಳು ತುಂಬಾ ಹಿಡಿಸಿತು..

    ReplyDelete
  11. ಸುಮ,

    ಚೊಕ್ಕದಾದ ಸಾಲುಗಳು..
    ಎಷ್ಟೊಂದು ಸತ್ಯಗಳಿವೆ ಅವುಗಳಲ್ಲಿ !

    ReplyDelete
  12. ನಿನಗಾಗಿ ಆಕಾಶದ ತಾರೆಗಳನ್ನು ಬೇಕಾದರೂ ತರಬಲ್ಲೆ ಎನ್ನುತ್ತಿದ್ದವನಿಗೆ
    ಈಗ
    ರಾತ್ರಿ ತಾರೆಗಳನ್ನು ತೋರಿಸಲೂ ಸಮಯವಿಲ್ಲ.
    ಕಾರಣ
    ಅವರ ಮದುವೆಯಾಗೀಗ ಹತ್ತು ವರ್ಷ

    aadare... nanidannu opputtilla...
    taaregalannu torisuttiddene... noduva kannugalu bere!
    madilallondu magu...
    torisalee beku...

    ReplyDelete