26 May 2011

ಕುಪ್ಪಳ್ಳಿಯಲ್ಲೊಂದು ಸುತ್ತು

ಮಹಾಕವಿ ಕುವೆಂಪು ನಮ್ಮ ಮನೆಯಲ್ಲಿ ನಿತ್ಯ ಚರ್ಚಿತವಾಗುವ ಹೆಸರು. ನಾನು ಅವರ ಕಾದಂಬರಿಗಳ ಬಗ್ಗೆ , ಸುಧಾಕಿರಣ್ ಅವರ ಕಾವ್ಯದ ಬಗ್ಗೆ ಒಬ್ಬರಿಗೊಬ್ಬರು ಕೊರೆಯುತ್ತೇವೆ. ಹಾಗಾಗಿ ಅವರ ಹುಟ್ಟೂರು ಕುಪ್ಪಳ್ಳಿಗೊಮ್ಮೆ ಹೋಗಬೇಕೆಂಬ ಆಸೆ ಇಬ್ಬರಲ್ಲೂ ಇತ್ತು. ಇತ್ತೀಚೆಗೆ ಊರಿಗೆ ಹೋದಾಗ ಅಲ್ಲಿಗೂ ಹೋಗಿದ್ದು ಸಾರ್ಥಕಭಾವ ಮೂಡಿಸಿತ್ತು.
ಕವಿಮನೆ


ಮಲೆನಾಡಿನ ಸೆರಗು ತೀರ್ಥಹಳ್ಳಿಯ ಸಮೀಪವಿದೆ ಕುಪ್ಪಳ್ಳಿ. ಅಲ್ಲಿ ಕವಿ ವಾಸಿಸುತ್ತಿದ್ದ ಮನೆಯನ್ನು ಮೊದಲಿದ್ದಂತೆಯೆ ಪುನರ್ನಿರ್ಮಾಣ ಮಾಡಿ ಸುಂದರವಾದ ಸ್ಮಾರಕವನ್ನಾಗಿಸಿದ್ದಾರೆ.
ಹಳೆಯ ಕಾಲದ ಮಲೆನಾಡಿನ ಭವಂತಿ ಮನೆ , ಅದರ ದೊಡ್ಡ ದೊಡ್ಡ ಮರದ ಕಂಭ , ತೊಲೆಗಳು , ಆ ಕಾಲದ ಪಣತ , ಮರದ , ಹಿತ್ತಾಳೆಯ ಪಾತ್ರ ಪರಡಿಗಳು , ಬೆತ್ತದ ವಸ್ತುಗಳು ಸ್ವಲ್ಪ ಕಾಲ ನಮ್ಮನ್ನು ಮಲೆನಾಡಿನ ಗತವೈಭವಕ್ಕೆ ಮರಳಿಸಿತ್ತು.

ಉಪ್ಪರಿಗೆಯಲ್ಲಿದ್ದ ಕವಿಯ ವಾಕ್ಯಗಳನ್ನು ಓದುತ್ತ , ಅವರಿಗೆ ಸಂದ  ಪ್ರಶಸ್ತಿ ಸಮ್ಮಾನಗಳನ್ನು ನೋಡುತ್ತ ಇವರು ನಮ್ಮ ನಾಡಿನವರೆಂಬ ಹೆಮ್ಮೆ ಹೆಚ್ಚಿತ್ತು. ಮೇಲುಪ್ಪರಿಗೆಯ ಪುಟ್ಟ ಕಿಟಕಿಗೆ ಮುಖವೊಡ್ಡಿ ನಿಂತಾಗ ಕಾಣಿಸಿದ ಪ್ರಕೃತಿಯ ದೃಶ್ಯವೈಭವ ಕಣ್ತುಂಬಿತ್ತು.  


 ಗೊರಬು    

ಪಣತ 
ಅಲ್ಲಿ ಕವಿಯ ಜೀವನ ಚಿತ್ರ ಬಿಂಬಿಸುವ ಫೋಟೋ ಗ್ಯಾಲರಿಯಲ್ಲಿನ ಒಂದು ಚಿತ್ರ ಗಮನಸೆಳೆಯಿತು. ಅದು ನಮ್ಮ ನಾಡಿನ ಮೇರು ಸಾಹಿತಿಗಳಾದ ಬೇಂದ್ರೆ ಮತ್ತು ಕುವೆಂಪು ಒಟ್ಟಿಗೆ ನಿಂತಿದ್ದ ಫೋಟೊ. ತಮ್ಮ ಕಾವ್ಯದಲ್ಲಿ ಶಬ್ದಗಳೊಡನೆ ನರ್ತಿಸುವ ಬೇಂದ್ರೆ , ನರ್ತನಭಂಗಿಯಲ್ಲೆ ನಿಂತು ಏನನ್ನೋ ವಿವರಿಸುತ್ತಿದ್ದರು.  ಬೇಂದ್ರೆಯವರ ಲವಲವಿಕೆ , ಕುವೆಂಪು  ಅವರ ಮಾತಿನಲ್ಲಿ ಮಗ್ನರಾಗಿ ನೋಡುತ್ತಿದ್ದ ರೀತಿ ಅದನ್ನೊಂದು ಅದ್ಭುತ ಫೋಟೋವಾಗಿಸಿದೆ.





 ಎತ್ತಿನ ಬಂಡಿ   

ಕವಿಶೈಲ

ಕವಿಯ ಮನೆಯ ಹಿಂಭಾಗದಲ್ಲಿನ ಚಿಕ್ಕ ಬೆಟ್ಟವೆ ಅವರ ಕಾವ್ಯಗಳಿಗೆ ಸ್ಫೂರ್ತಿಯಾದ " ಕವಿಶೈಲ" . ಅದೊಂದು ಚಿಕ್ಕ ಕಲ್ಲುಗುಡ್ಡ. ಸುತ್ತಲೂ ಮಲೆನಾಡಿನ ಸುಂದರ ಕಣಿವೆ ಕಾನನಗಳು.
 ಅಲ್ಲಿಯ ಸೌಂದರ್ಯವನ್ನು ಅವರ ಸಾಲುಗಳಲ್ಲೇ ಹೇಳುವುದಾದರೆ
.........ಓ ಕವಿಶೈಲ ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ!
            
 
    

ಕವಿಶೈಲದ ಶಿಲಾಸ್ಮೃತಿ   
ಕವಿಶೈಲದ ಬಂಡೆಯೊಂದರ ಮೇಲೆ ಸಾಹಿತಿಗಳ ಹಸ್ತಾಕ್ಷರ  



ಕವಿಶೈಲದಲ್ಲಿರುವ ಮಾನವ ನಿರ್ಮಿತ ದೊಡ್ಡ ದೊಡ್ಡ ಕಲ್ಲುಕಂಭಗಳ ಮಂಟಪ ಅಲ್ಲಿನ ಸಹಜ ಪ್ರಕೃತಿಗೆ ಅಡ್ಡಿಯಾದಂತೆ ನನಗನ್ನಿಸಿತು . ಆದರೆ ಸುಧಾಕಿರಣ ಮತ್ತು ಅಮ್ಮ ಅಪ್ಪ ಎಲ್ಲರಿಗೂ ಆ ಕಂಭಗಳು ಅಲ್ಲಿನ ವಾತಾವರಣಕ್ಕೆ ಪೂರಕವಾದ ಮೌನದ ಸಂಕೇತವೆಂದು ತೋರಿದವಂತೆ .
ಮಹಾಕವಿಯ ಜೀವನವನ್ನೊಮ್ಮೆ ಹೊಕ್ಕು ಹೊರಬಂದ ಅನುಭವದೊಂದಿಗೆ ವಾಪಾಸ್ ಹೊರಟಾಗ ಅವರದೇ ಸಾಲಿನಂತೆ : "ಆಗಸದಲ್ಲಿ ದೇವರು ರುಜು ಮಾಡುತ್ತಿದ್ದನು" .

13 comments:

  1. ಕಾಲಬುಡದಲ್ಲಿದ್ದರೂ ನಾವು ಹೋಗುವುದೇ ಅಪರೂಪ!!!

    ReplyDelete
  2. ಸುಮ ರಾಷ್ಟ್ರಕವಿಯ ನೆನಪನ್ನು ಮಾಡಿಕೊಟ್ಟಿದ್ದಲ್ಲದೇ ಕುಪ್ಪಳ್ಳಿಯ ಆ ಕವಿಧಾಮದ ಚಿತ್ರಸಹಿತ ವಿವರಣೆ,,,ನಮ್ಮನ್ನೂ ಅಲ್ಲಿಗೆ ಕೊಂಡೊಯ್ದಿದ್ದು ನಿಜ...ಧನ್ಯವಾದ..

    ReplyDelete
  3. lastyear i also had been to there. lovelly place .its an amazing feeling to wnder around the place as its the same place wherein kuvempu had walked

    ReplyDelete
  4. kuvempu ravara 'malenaadina chithragalu' pusthakadalli avara mane mattu sutta muttala pradeshada bagge barediddare..ille neevu adara chithragalannu torisiddira..dhanyavaadhagalu...

    ReplyDelete
  5. nice photos & good info...thanks Suma.

    ReplyDelete
  6. naanu Degree yalli oduttiddaaga allige pravaasa hogiddevu.. thumba sundhara sthaLa... kavishailadalli ninthare romaanchanavaaguttade.... thumba chennagi barediddeeri :)

    ReplyDelete
  7. ನೀವು ಹಾಗು ಸುಧಾಕಿರಣರು ಸಾಹಿತ್ಯದಲ್ಲಿ ಸಮಾನ ಆಸಕ್ತಿ ತಳೆದಿರುವದು ಸಂತಸದ ಸಂಗತಿ. ಇಂತಹ ದಾಂಪತ್ಯ ಅಪರೂಪವಾದದ್ದು.

    ReplyDelete
  8. naave hogi nodidantnisitu chitramaahitige dhanyavaadagalu

    ReplyDelete
  9. ಬರಹ ಚೆನ್ನಾಗಿದೆ... ಆದರೆ, ಅದು ಕುಪ್ಪಳ್ಳಿ ಅಲ್ಲ.... "ಕುಪ್ಪಳಿ" ಅಲ್ಲವೆ?

    ReplyDelete
  10. ಎಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.
    --ಶಾಲ್ಮಲಿಯವರೆ ನಿಜ ಅದು ಕುಪ್ಪಳಿ ಆದರೆ ಕುಪ್ಪಳ್ಳಿ ಎಂದೂ ಹೇಳುತ್ತಾರೆ. ಕವಿಮನೆಯಲ್ಲಿರುವ ಕುವೆಂಪು ಪ್ರತಿಷ್ಠಾನದ ಶಿಲಾನ್ಯಾಸದಲ್ಲೇ ಒಂದರಲ್ಲಿ "ಕುಪ್ಪಳಿ" ಎಂದಿದ್ದರೆ ಇನ್ನೊಂದರಲ್ಲಿ " ಕುಪ್ಪಳ್ಳಿ " ಎಂದು ಇದೆ.

    ReplyDelete
  11. ಮೇಡಮ್,
    ನನಗಿನ್ನು ಅಲ್ಲಿಗೆ ಹೋಗಲಿಕ್ಕಾಗಿಲ್ಲ. ನೀವೆಲ್ಲಾ ಹೋಗಿ ಅಲ್ಲಿನ ವಾತಾವರಣ ಚಿತ್ರಗಳನ್ನು ಕ್ಲಿಕ್ಕಿಸಿ enjoy ಮಾಡುತ್ತಿದ್ದೀರಿ..ಅದನ್ನು ಬ್ಲಾಗಿಗೆ ನಮಗೂ ತೋರಿಸುತ್ತಿದ್ದೀರಿ..ಅದಕ್ಕಾಗಿ ಧನ್ಯವಾದಗಳು.

    ReplyDelete