ಆಕೆ ಒಬ್ಬ ಪುಟ್ಟ ಬಾಲೆ. ಧಗಧಗಿಸುವ ತಂದೆಗಿಂತ ತುಂಬ ಭಿನ್ನವಾದ ಸ್ವಭಾವ ಅವಳದು. ಸುಂದರ ಆಕಾರ. ಬೆಳೆಯುತ್ತ ಬೆಳೆಯುತ್ತ ಇನ್ನಷ್ಟು ಸುಂದರಿಯಾದಳು . ಸಾಗರ , ಪವನ ಅವಳ ಅಂದವನ್ನೂ ಗುಣವನ್ನೂ ಹೆಚ್ಚಿಸಿದರು. ನವಯುವತಿಯನ್ನಾಗಿಸಿದರು. ತುಂಬ ಬುಧ್ದಿವಂತೆಯಾಗಿದ್ದ ಅವಳು ಶಿಸ್ತಿಗೂ ಹೆಸರಾದಳು.
ಹೊಸದೇನನ್ನೋ ಸೃಷ್ಟಿಸುವ ತಹತಹ ಅವಳಿಗೆ. ಪವನ , ಬೆಳಕು ಮತ್ತು ಸಾಗರನ ಜೊತೆಗೂಡಿ ಪ್ರಥಮ ಕೂಸೊಂದನ್ನು ಸೃಷ್ಟಿಸಿದಳು ಆ ಸುಂದರಿ . ಆಕೆಗೂ ಹೊಸದು ... ಮಗುವಿನ ಬೆಳವಣಿಗೆ ಆಶಾದಾಯಕವಾಗೇನೂ ಇರಲಿಲ್ಲ.
ಆಕೆಯೇನೂ ಸುಮ್ಮನಿರುವ ಜಾತಿಯಲ್ಲ. ಇನ್ನಷ್ಟು ಉತ್ತಮ ಜೀವಿಗಳನ್ನು ಸೃಷ್ಟಿಸುವ ಹೊಣೆ ಹೊತ್ತಳು. ಒಂದಾದ ಮೇಲೊಂದರಂತೆ ಅವಳ ಪ್ರಯೋಗಗಳು ಹೊಸ ಹೊಸ ಜೀವಿಗಳ ಜನನಕ್ಕೆ ಕಾರಣವಾಯ್ತು.
ಪ್ರತೀ ಜೀವಿಗೂ ವಿಶಿಷ್ಟ ಗುಣಲಕ್ಷಣಗಳು .... ಒಂದಕ್ಕಿಂತ ಒಂದು ಭಿನ್ನ ....ಕೆಲವು ದೈತ್ಯಾಕಾರದವು, ಕೆಲವು ಕಣ್ಣಿಗೂ ಕಾಣದಷ್ಟು ಸಣ್ಣವು.... ಕೆಲವು ಅವಳ ಮೈಮೇಲೆಲ್ಲ ಸಂಚರಿಸಬಲ್ಲವು ,ಇನ್ನು ಕೆಲವು ಅವಳ ದೇಹದಲ್ಲಿ ಬೇರೂರಿ , ಅವಳಿಂದಲೇ ಬೇಕಾದ ಸತ್ವವನ್ನು ಹೀರಿ ಬೆಳೆಯಬಲ್ಲಂಥವು...... ಸಾಗರದಾಳದಲ್ಲಿ , ಅವಳೊಡಲಲ್ಲಿ , ಆಕಾಶದ ಅವಕಾಶದಲ್ಲಿ ಬಾಳಬಲ್ಲಂತವು........ಹೀಗೆ ಅವಳ ಪ್ರಯೋಗಶಿಲತೆಗೆ ಕೊನೆಯೇ ಇಲ್ಲ.
ಆಕೆಯ ಪ್ರತೀ ಸೃಷ್ಟಿಯಲ್ಲೂ ಪರಿಪೂರ್ಣತೆಯಿತ್ತು. ತನ್ನ ಎಲ್ಲ ಮಕ್ಕಳಿಗೂ ಆಹಾರ ದೊರಕಿಸಿಕೊಂಡು ಬಾಳುವ , ತಮ್ಮ ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಲು ಬೇಕಾದ ಬುದ್ಧಿಯನ್ನಾಕೆ ನೀಡಿದ್ದಳು. ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ವಿದ್ಯೆಯನ್ನೂ ಅವಳು ದಯಪಾಲಿಸಿದ್ದಳು.
ಅದೇ ರೀತಿ ತನ್ನ ಮಕ್ಕಳ ಬಗ್ಗೆ ಕುರುಡು ಪ್ರೀತಿಯನ್ನೇನೂ ಅವಳು ಇಟ್ಟುಕೊಳ್ಳಲಿಲ್ಲ. ತನಗೆ ಹೊಂದಿಕೊಂಡು ಬಾಳುವ ಸಾಮರ್ಥ್ಯ ಅವಕ್ಕಿಲ್ಲ ಎನ್ನಿಸಿದರೆ ಅವುಗಳನ್ನು ನಾಮಾವಶೇಷಗೊಳಿಸಲು ಆಕೆಯೇನೂ ಹಿಂಜರಿಯಲಿಲ್ಲ.
ಎಷ್ಟು ಮಮತಾಮಯಿಯೋ ಅಷ್ಟೇ ನಿಷ್ಟುರಳಾದ ತಾಯಿ ಆಕೆ .
ಎಷ್ಟೋ ಲಕ್ಷ ಲಕ್ಷ ಜೀವಿಗಳನ್ನು ಸೃಷ್ಟಿಸಿದರೂ ಅವಳಿಗೆ ತೃಪ್ತಿಯಿಲ್ಲ.....ಕೊನೆಗೊಮ್ಮೆ ಒಂದು ಅದ್ಭುತ ನಡೆಯಿತು.... ಅವಳೊಂದು ಅದ್ಭುತ ಕೂಸಿಗೆ ಜನ್ಮವಿತ್ತಿದ್ದಳು . ಅದು ದೈಹಿಕವಾಗಿ ಅವಳ ಹಿಂದಿನ ಅನೇಕ ಮಕ್ಕಳಿಗಿಂತ ದುರ್ಬಲವಾಗೇ ಇತ್ತು. ಆದರೆ ಅದರ ಬುದ್ಧಿ ಮತ್ತು ಬುದ್ಧಿಯನ್ನು ಉಪಯೋಗಿಸುವ ಕಲೆ ಅತ್ಯಂತ ಉತ್ತಮವಾಗಿತ್ತು. ಸಹಜವಾಗೇ ಆ ಬುದ್ಧಿವಂತ ಕೂಸಿನ ಮೇಲೆ ಅವಳಿಗೆ ಪ್ರೀತಿ ಹೆಚ್ಚಿತು. ತನ್ನ ಪ್ರೀತಿಯ ಮಗುವಿನ ಆಟಪಾಠ ಅವಳಿಗೆ ಖುಷಿ ನೀಡಿತು. ಪೀಳಿಗೆಯಿಂದ ಪೀಳಿಗೆಗೆ ಆ ಕೂಸಿನ ಬೌದ್ಧಿಕ ಸಾಮರ್ಥ್ಯ ಬೆಳೆಯುವಂತೆ ಆಶೀರ್ವದಿಸಿದಳಾ ತಾಯಿ.
ತನ್ನ ಹೊಟ್ಟೆ ಸುಲಭದಲ್ಲಿ ತುಂಬಿಸಿಕೊಳ್ಳಲು ಕಲಿತ ಆ ಮಗು ಮೊದಮೊದಲು ತಾಯಿಯನ್ನು ದೇವರೆಂದೇ ಪೂಜಿಸುತ್ತಿತ್ತು. ಒಡಹುಟ್ಟಿದವರನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಆದರೆ ಅದರ ಬುದ್ಧಿ ವಿಕಾಸಹೊಂದಿದಂತೆಲ್ಲ ಅದರ ಗುಣಬದಲಾಗತೊಡಗಿತು.
ಕ್ರಮೇಣ ಅದು ತನ್ನ ಬುದ್ಧಿ ಸಾಮರ್ಥ್ಯದಿಂದ ತನ್ನ ಒಡಹುಟ್ಟಿದವರನ್ನೆಲ್ಲ ತನಗಾಗಿ ಉಪಯೋಗಿಸಿಕೊಳ್ಳತೊಡಗಿತು... ಪ್ರೀತಿಯ ಮಗುವಲ್ಲವೆ , ಎಲ್ಲಾಮಕ್ಕಳಿಗೂ ಹಿರಿಯಣ್ಣನಾಗಿರಲಿ ಎಂದುಕೊಂಡ ತಾಯಿ ಸುಮ್ಮನಿದ್ದಳು.
ತಾಯಿಯ ಮೇಲಿನ ಗೌರವ ಕಡಿಮೆಯಾಗಿ , ಕುತೂಹಲ ಹೆಚ್ಚಾಗಿ ಅವಳ ರಹಸ್ಯವನ್ನು ಶೋಧಿಸಲು ಪ್ರಾರಂಭಿಸಿತು! ಪ್ರೀತಿಯ ಮಗುವಿಗೆ ತನ್ನ ಅನೇಕ ಗುಟ್ಟು ಬಿಟ್ಟುಕೊಟ್ಟಳು ತಾಯಿ ... ಆ ಮಗುವಾದರೋ ಪ್ರಳಯಾಂತಕನಾಯ್ತು. ಅವನ್ನೆಲ್ಲ ತನ್ನ ಸ್ವಾರ್ಥಸಾಧನೆಗೆ ಉಪಯೋಗಿಸತೊಡಗಿತು. ತನ್ನೆಲ್ಲ ಒಡಹುಟ್ಟಿದವರನ್ನು ಮೆಟ್ಟಿ ನಿಂತುತು. ತಾಯಿಯನ್ನೇ ವಶಪಡಿಸಿಕೊಳ್ಳಲು ಯತ್ನಿಸಿತು .
ತಾಯಿಯೂ ಸಂಪೂರ್ಣವಾಗಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಆ ಮಗುವಿಗೆ ಆಧೀನನಾದಳು. ಆತನ ಪುಂಡಾಟವನ್ನು ಸಹಿಸಿಸಿದಳು . ಅನೇಕವೇಳೆ ಶಿಕ್ಷಿಸಿದರು , ಸಂಪೂರ್ಣವಾಗಿ ದಮನಗೊಳಿಸಲಿಲ್ಲ.
ಇದು ಆ ಮಗುವಿನ ಸೊಕ್ಕನ್ನು ಇನ್ನೂ ಹೆಚ್ಚಿಸಿ ಇನ್ನಷ್ಟು ದುಷ್ಟನನ್ನಾಗಿಸಿತು . ತನ್ನ ಅತೀ ಬುದ್ಧಿಯಿಂದ , ಸಂತಾನ ಹೆಚ್ಚಿಸಿಕೊಂಡು , ತನ್ನ ಅನೇಕ ಒಡಹುಟ್ಟಿದವರಿಗೆ ತಾಯಿಯೊಡಲಲ್ಲಿ ಸ್ಥಳವೇ ಇಲ್ಲದಂತೆ ಮಾಡಿ , ಅವರನ್ನು ನಾಶಪಡಿಸಿತು!!
ತಾಯಿಯ ಎಲ್ಲ ಸಹಜ ಕ್ರಿಯೆಗಳೂ ತನ್ನ ಅಣತಿಯಂತೆ ನಡೆಯಬೇಕೆಂಬ ಆಸೆ ಅದಕ್ಕೆ , ತನ್ನ ಸುಖ ಸಂತೋಷಗಳಷ್ಟೇ ಮುಖ್ಯ. ......ಅವಳೊಡಲನ್ನು ಬಗೆಯಿತು , ಜೀವಸೆಲೆಯನ್ನೇ ಬತ್ತಿಸಿತು, ಅವಳ ಗೆಳೆಯ ಪವನನನ್ನು ಮಲಿನಗೊಳಿಸಿತು .......ಹೀಗೆ ತನ್ನೆಲ್ಲ ಚಟುವಟಿಕೆಗಳಿಂದ ತಾಯಿಯ ಆರೋಗ್ಯವನ್ನು ಹಾಳುಗೆಡವಿದ ಮಗುವಿನ ಮೇಲೆ ತಾಯಿ ಕೋಪಗೊಂಡು ತನ್ನ ತಾಪ ಹೆಚ್ಚಿಸಿಕೊಂಡಳು.
ಅದರಿಂದಾದ ಪರಿಣಾಮಕ್ಕೆ ಈಗ ಸ್ವಲ್ಪ ಮಟ್ಟಿಗೆ ಭಯಗೊಂಡ ಮಗು ತಾನು ತಪ್ಪಿದ್ದೆಲ್ಲಿ ಎಂದು ಯೋಚಿಸತೊಡಗಿದೆ. ತಡವಾಗಿಯಾದರೂ ಅದಕ್ಕೆ ತನ್ನಮ್ಮನ ಬೆಲೆ ಅರ್ಥವಾಗುತ್ತಿದೆ. ಅವಳಿಲ್ಲದೇ ತಾನಿಲ್ಲ ಎಂಬ ಸತ್ಯ ಅದಕ್ಕೆ ಮನವರಿಕೆಯಾದಂತಿದೆ.
ಉಳಿದಾವ ಮಕ್ಕಳಿಗಿಲ್ಲದ ಸವಲತ್ತುಗಳನ್ನು ತನಗೆ ನೀಡಿ ಮಮತಾಮಯಿಯಾಗಿ ಕಾಪಾಡಿದ ತಾಯಿಯನ್ನು ರಕ್ಷಿಸುವ ಹೊಣೆ ಆ ಮಗುವಿನದಲ್ಲವೆ? ಹಿರಿಯಣ್ಣನಾಗಿ , ತನ್ನೆಲ್ಲ ಒಡಹುಟ್ಟಿದವರನ್ನು ರಕ್ಷಿಸಿ, ಆ ಮೂಲಕ ತಾಯಿಯನ್ನು ಸಂತೋಷಪಡಿಸಬೇಕಾದ ಹೊಣೆ ಆ ಮಗುವಿನದಲ್ಲವೇ?

ಸುಮಾ,
ReplyDeleteಭೂತಾಯಿಯ ಪ್ರೀತಿಯ ಮಗುವಿನ ಲಕ್ಷಣಗಳನ್ನು ಸರಿಯಾಗಿ ವಿವರಿಸಿದ್ದೀರಿ. ಆತನಿಗೆ ನೀವು ನೀಡುವ ಹಿತವಚನವೂ ಸಮಂಜಸವಾಗಿದೆ.
ನಿಜವಾಗಲು ಭೂ ತಾಯಿಯ ಸಂರಕ್ಷಣೆಯ ಹೊಣೆ ನಮ್ಮದೇ... ಭೂ ತಾಯಿಯ ಆರೋಗ್ಯ ಇನ್ನಷ್ಟು ಹದಗೆಡುವ ಮುಂಚೆ ನಾವು ಆಕೆಯನ್ನು ಶುಶ್ರೂಷೆ ಮಾಡಬೇಕಾಗಿದೆ...
ReplyDeleteನಾಗರಿಕರಾಗಿ ನಮ್ಮ ಹೊಣೆ ಮತ್ತು ಜವಾಬ್ದಾರಿ ತುಂಬ ಇದೆ..
ಚೆನ್ನಾಗಿದೆ ಹೇಳುವ ರೀತಿ..
ReplyDelete-Venkatraman Bhat
Ishta aatu...:-)
ReplyDeleteall i can say is ... ಸರಳ, ಸುಂದರ.... ಸುಮಕ್ಕ :))
ReplyDeleteಸುಮಕ್ಕ,
ReplyDeleteಅತ್ಯುತ್ತಮ, ಅರ್ಥಪೂರ್ಣ, ಪ್ರಬುದ್ಧ, ಸಂದರ್ಭೋಚಿತ ಲೇಖನ..ವೈಜ್ಞಾನಿಕ ಸ್ಪರ್ಶವೂ ಸೇರಿದೆ..
ಭೂಮಿಯ ಉಗಮ, ಜೀವಿಯ ಸೃಷ್ಠಿ, ಮನುಷ್ಯನ ದಬ್ಬಾಳಿಕೆ, ಪರಿಸರದ ಮಹತ್ವ ಹಾಗು ಅದರ ಮೇಲಿನ ಹಾನಿಯನ್ನು ಇದಕ್ಕಿಂತ ಸರಳವಾಗಿ ಹೇಳಲು ಸಾಧ್ಯವೇ ಇಲ್ಲ....ಭೇಷ್ ಅಕ್ಕ :)
ವಿಪರ್ಯಾಸ ಎಂದರೆ ನಮ್ಮ ಕರ್ತವ್ಯವನ್ನು ಪರಿಸರ ದಿನದಂಥ ಸಂದರ್ಭ ನೆನಪಿಸಬೇಕಿದೆ!
ವೈಚಾರಿಕತೆ, ಕಾಳಜಿವುಳ್ಳ ಇಂಥ ಲೇಖನಗಳು ಇನ್ನೂ ಹೆಚ್ಚಾಗಿ ಬರಲಿ...ವಂದನೆಗಳು
Awesome and very Apt! Liked it a lot :)
ReplyDeleteLekhana Arthapoornavagide..Tumba Saralavagide haagu.. prabhuddhavagide..
ReplyDeleteMaguvige beega buddi bandu eccharagollabeku..
ಹೇಳಿದ ರೀತಿ ತುಂಬಾ ಇಷ್ಟವಾಯಿತು. ಹೊಣೆ ನಮ್ಮೆಲ್ಲರದು.
ReplyDeleteBhooramege anantaananta koti namaskaaragalu.
ReplyDeleteMana muttuva post.
ಕಿವಿ ಹಿಂಡಿದ ರೀತಿಯೇ ಚೆನ್ನಾಗಿತ್ತು! ನಿರೂಪಣಾ ಶೈಲಿಯಲ್ಲಿ ಬೋಧನಾ ಕ್ರಮವಿದೆ. ಭೇಷ್!
ReplyDeleteನನ್ನ ಬ್ಲಾಗಿಗೂ ಸ್ವಾಗತ:
www.badari-poems.blogspot.com
www.badari-notes.blogspot.com
www.badaripoems.wordpress.com

£Á£Éà ¥ÀæZÀAqÀ C£ÀÌAr¢Ý. ¤Ã £À£ïQAvÀ eÉÆÃjzÉåÃ. . . ¸ÁUÀ° ¥ÀAiÀÄt ¤gÀAvÀgÀ. . .
ReplyDelete£Á£ÀÄ ¤£ÀßµÉÖ®è §jvÀ߯Éå. K£ÉÆà §jw PÉ®ªÉǪÉÄä £ÀAUÉ CxÀð DUÀÛ¯Éè... ©qÀÄ D PÀvÉ
K£ÁgÀÄ CVè ZÉ£ÁßVzÀÄÝ.
ªÀÄzsÀÄ ªÀiÁ¯Éé
ಸಾರಿ ಮಧು .. ನೀನು ಬರೆದ ಕಮೆಂಟ್ ಓದಲಾಗುತ್ತಿಲ್ಲ. ಯಾವ ಫಾಂಟ್ ಇದು?
ReplyDeleteಇರುವುದೊಂದೇ ಭೂಮಿ .. ಎಂಬರಿವು ನಮಗಿದ್ದರೆ ಭೂಮಿ ಉಳಿದೀತು..
ReplyDelete