15 Jun 2011

ಅಭಿವೃದ್ದಿ ... ವಿಶ್ವ ಪಾರಂಪರಿಕ ತಾಣ .....ಭೂರಮೆಯ ಬರ್ತಡೆ ...ಇತ್ಯಾದಿ

ಇದು   ಸಿಂಗಳೀಕ  (lion tailed macaque ) . ವಿಶ್ವದಲ್ಲಿ  ಕೇವಲ ಕರ್ನಾಟಕ , ಕೇರಳ , ತಮಿಳುನಾಡಿನ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಮಾತ್ರ ವಾಸಿಸುವ  ವಿಶಿಷ್ಟ ಮಂಗ. ಅಳಿವಿನಂಚಿನಲ್ಲಿರುವ ಇವುಗಳ ಸಂಖ್ಯೆ ಸುಮಾರು ಎರಡೂವರೆ ಸಾವಿರದಷ್ಟು
ಮಾತ್ರ ಇರಬಹುದೆಂಬ ಅಂದಾಜಿದೆ.

ಹಿಂದೊಮ್ಮೆ ಪಶ್ಚಿಮಘಟ್ಟದ ಕಾಡುಗಳಲ್ಲಿ ವಿಪುಲವಾಗಿದ್ದ ಈ ಸಿಂಗಳೀಕಗಳ ಸಂಖ್ಯೆ ಇಷ್ಟು ಗಣನೀಯವಾಗಿ ಕುಸಿಯಲು ಕಾರಣಗಳೇನು?
ಅವುಗಳ ವಿಶಿಷ್ಟ ಜೀವನಕ್ರಮ  ಮತ್ತು ಪ್ರಕೃತಿಯಲ್ಲಿ ಮಾನವನ ಆತಿಯಾದ ಹಸ್ತಕ್ಷೇಪ .
ಮೊದಲಿಗೆ ಅವುಗಳ ಜೀವನಕ್ರಮವನ್ನು ನೋಡೋಣ.

ಸಿಂಗಳೀಕಗಳು ಮರವಾಸಿಗಳು. ನೆಲದ ಮೇಲಿಳಿಯುವುದು ತುಂಬ ಅಪರೂಪ . ದೈತ್ಯ ಮರಗಳ ಮೇಲೆ ಹತ್ತರಿಂದ ಇಪ್ಪತ್ತು ಸದಸ್ಯರ ಚಿಕ್ಕ ಗುಂಪಿನಲ್ಲಿ ವಾಸಿಸತ್ತವೆ. ಹಗಲಿನಲ್ಲಿ ಎಚ್ಚರದಲ್ಲಿದ್ದು ರಾತ್ರಿ ಮಲಗುವ ಪ್ರಾಣಿ.

ಹೆಚ್ಚಾಗಿ ಕಾಡಿನಲ್ಲಿ ರುತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳೇ ಅದರ ಮುಖ್ಯ ಆಹಾರ. ಚಿಗುರು , ಹೂವು , ಚಿಕ್ಕ ಪುಟ್ಟ ಹುಳುಹಪ್ಪಟೆಗಳನ್ನೂ ತಿನ್ನುತ್ತದೆ.  ಆದ್ದರಿಂದ ಅದರ ವಾಸ ಸದಾ ಹಸಿರಿರುವ ನಿತ್ಯಹರಿದ್ವರ್ಣ ಕಾಡುಗಳಲ್ಲಿ .

ಸಾಮಾನ್ಯ ಮಂಗಗಳಂತೆ ಇವು ಮಾನವನ ವಾಸಸ್ಥಾನದ ಹತ್ತಿರ ಬರುವುದಿಲ್ಲ. ದುಷ್ಟರಿಂದ ದೂರವಿರುವುದೇ ಲೇಸು ಎಂಬಂತೆ ಮಾನವರಿಂದ ದೂರವಿರಲು ಬಯಸುತ್ತವೆ.  ಅವುಗಳ ಒಂದು ಗುಂಪಿನಲ್ಲಿ ಒಂದು ಅಥವಾ ಎರಡು ಗಂಡು ಮಂಗಗಳು , ಆರೆಂಟು ಹೆಣ್ಣು ಮಂಗಗಳು ಮತ್ತು ಮರಿ ಮಂಗಗಳಿರುತ್ತವೆ. ಗಂಡು ಮರಿಗಳು ವಯಸ್ಸಿಗೆ ಬರುತ್ತಿದ್ದಂತೆ ಬೇರೆಯಾಗುತ್ತವೆ.  ತಮ್ಮ ಗುಂಪಿನ ವಾಸಸ್ಥಾನವನ್ನು ಪ್ರವೇಶಿಸದಂತೆ ಬೇರೆ ಗುಂಪಿಗೆ ಕೂಗಿ ತಿಳಿಸುತ್ತವೆ.

 ಜನನ ಪ್ರಮಾಣ ತುಂಬಾ ಕಡಿಮೆ ...ಅಂದರೆ ಹೆಣ್ಣು ಸಿಂಗಳೀಕವೊಂದು ಗರ್ಭ ಧರಿಸುವುದು ಎರಡೋ ಮೂರೋ ವರ್ಷಗಳಿಗೊಮ್ಮೆಯಷ್ಟೇ.
ಮಾನವ ನಿರ್ಮಿತ plantation ಗಳಲ್ಲಿ ಇವು ವಾಸಿಸುವುದಿಲ್ಲ .  ಅಬಾಧಿತ ದಟ್ಟ ಅರಣ್ಯ ಇವುಗಳ ಉಳಿವಿಗೆ ಮುಖ್ಯ .

ಅಭಿವೃದ್ಧಿಯ ಹೆಸರಿನಲ್ಲಿ ಮಾನವ ಕಾಡಿನ ನಡುವೆ ನಿರ್ಮಿಸುವ ರಸ್ತೆ , ರೆಸಾರ್ಟ್ , ಎಸ್ಟೇಟ್ , plantation ಗಳು ಇವುಗಳ ವಾಸಸ್ಥಾನವನ್ನು ಚಿಕ್ಕ ಚಿಕ್ಕ ಭಾಗವಾಗಿ ವಿಭಜಿಸಿಬಿಡುತ್ತದೆ.

ಸಿಂಗಳೀಕಗಳಂತೆಯೇ ಕೇವಲ ಪಶ್ಚಿಮಘಟ್ಟದ ಕಾಡುಗಳಲ್ಲಿ ಮಾತ್ರ ವಾಸಿಸುವ ಅನೇಕ ಜೀವಿಗಳಿವೆ . ಸುಮಾರು ೮೪ ಜಾತಿಯ ಉಭಾಯವಾಸಿಗಳು , ಹದಿನಾರು ಜಾತಿಯ ಪಕ್ಷಿಗಳು , ಏಳು ಜಾತಿಯ ಸಸ್ತನಿಗಳು , ಸುಮಾರು ಸಾವಿರದ ಎಂಟುನೂರು ಸಸ್ಯಜಾತಿಗಳು ಕೇವಲ  ಇಲ್ಲಿ ಮಾತ್ರ ಇವೆ.   ಅವುಗಳಲ್ಲಿ ಅನೇಕ ಜೀವಿಗಳು ಅಳಿವಿನಂಚಿನಲ್ಲಿವೆ .
ಆದ್ದರಿಂದಲೇ ಪಶ್ಚಿಮಘಟ್ಟ ವಿಶ್ವದ "ಬಯೋ ಡೈವರ್ಸಿಟಿ ಹಾಟ್ ಸ್ಫಾಟ್ " ಗಳಲ್ಲೊಂದು.  

 ಇಂತಹ ವಿಶಿಷ್ಟ ಸ್ಥಳವಾದ ಪಶ್ಚಿಮಘಟ್ಟ ಸಾಲುಗಳಲ್ಲಿ  ಹತ್ತು ತಾಣಗಳನ್ನು ವಿಶ್ವ ಪಾರಂಪಾರಿಕ ತಾಣವಾಗಿ (http://whc.unesco.org/en/about/) ಘೋಷಿಸುವಂತೆ UNESCO ಗೆ  ಕೇಂದ್ರ ಸರಕಾರ  ೨೦೦೬ ರಲ್ಲಿ ಮನವಿ ಮಾಡಿದೆ. 
 ಆದರೆ ನಮ್ಮ ರಾಜ್ಯ ಸರಕಾರ "ದಯವಿಟ್ಟು ಈ ಶ್ರೇಯ ಕಲ್ಪಿಸಬೇಡಿ " ಎಂದು ಮನವಿ  ಮಾಡಲಿದೆಯಂತೆ . ಅರಣ್ಯ ಸಚಿವರು ಈ  ವಿಚಾರ ಪ್ರಕಟಿಸಿದ್ದಾರಂತೆ. " ಅದರಿಂದಾಗಿ ಅಲ್ಲಿ ನಾವು ಯಾವುದೇ ಅಭಿವೃದ್ಧಿ ಕಾರ್ಯ ನಡೆಸುವಂತಿಲ್ಲ  ಅಲ್ಲ್ಲದೆ ಆ ಗೌರವದಿಂದ ಬೇರಾವುದೇ ಪ್ರಯೋಜನವಿಲ್ಲ " ಎಂದು ಅವರು ಕಾರಣ ತಿಳಿಸಿದ್ದಾರಂತೆ .

ಈ ಸುದ್ದಿ ನನಗೆ ಗೊಂದಲ ಉಂಟುಮಾಡಿದೆ.  ವಿಶ್ವ ಪಾರಂಪರಿಕ ತಾಣ ಎಂಬ ಗೌರವದಿಂದ ಯಾವುದೇ ಪ್ರಯೋಜನವಿಲ್ಲವೆ ? 
ಅಭಿವೃದ್ಧಿಯೆಂದರೆ ಯಾವ ರೀತಿ?
ಅಭಿವೃದ್ಧಿಯ ಹೆಸರಿನಲ್ಲಿ  ಅ ಕಾಡುಗಳಲ್ಲಿ ಇನ್ನೆಷ್ಟು ರೆಸಾರ್ಟ ತೆರೆಯಬೇಕಿದೆ ? ಇನ್ನೆಷ್ಟು ಪ್ರವಾಸಿಗರನ್ನು ಆಕರ್ಷಿಸಿ ಅ ಕಾಡು   ಪ್ರಾಣಿಗಳಿಗೆ ತೊಂದರೆ ಕೊಡಬೇಕಿದೆ? ಇನ್ನೆಷ್ಟು ಪ್ರಾಣಿಗಳನ್ನು ನಾಶಪಡಿಸಬೇಕಿದೆ?  ಜಲವಿದ್ಯುತ್ , ಅಣುಸ್ಥಾವರ ಎಂದು ಎಷ್ಟು ಕಾಡುಗಳನ್ನು ಮುಳುಗಿಸಬೇಕಿದೆ?  ಹಾನಿಕಾರಕ ವಿಷವಾಯು ಉಗುಳುವ , ನದಿಮೂಲ ಕಲುಷಿತಗೊಳಿಸುವ ಫ್ಯಾಕ್ಟರಿಗಳನ್ನು  ಸ್ಥಾಪಿಸಬೇಕಿದೆ?  

( ಬ್ಲಾಗ್ ಬರೆಯಾರಂಭಿಸಿ ಇಂದಿಗೆ ಎರಡು ವರ್ಷಗಳು !!  ನಾನು ಬರೆದುದನ್ನು ಓದುವ , ಕಮೆಂಟಿಸುವ ಎಲ್ಲ ಓದುಗರಿಗೂ ಧನ್ಯವಾದಗಳು. )













 









 

16 comments:

  1. ಸುಮ,
    ಒಳ್ಳೆಯ ಲೇಖನ..
    ಭೂರಮೆ ಮೂರನೆ ವರ್ಷಕ್ಕೆ ಕಾಲಿಟ್ಟಿರುವುದಕ್ಕೆ ಶುಭಾಶಯಗಳು.ಮತ್ತಷ್ಟು ಬರಹಗಳು ಬರುತ್ತಿರಲಿ.

    ReplyDelete
  2. ಮತ್ತಷ್ಟು ಬರಹಗಳು ಬರಲಿ

    ReplyDelete
  3. bhuramege huttu habbada haardika shubhaashayagalu. blog heege sadaa nalanalisuttirali.
    uttama maahiti -sahyadri parvata shreni aagale vishwa parampare taanavagi ghoshisalaagide.

    ReplyDelete
  4. oLLeya lEkhana.. namagella uttama maahiti... dhanyavaadagaLondige huttu habbada shubhashayagaLu..

    ReplyDelete
  5. ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು.
    ಸೀತಾರಾಂ ಅವರೆ ಪಶ್ಚಿಮಘಟ್ಟದ ಹತ್ತು ಸ್ಥಳಗಳನ್ನು ವಿಶ್ವ ಪರಂರರೆಯ ತಾಣವೆಂದು ಘೋಷಿಸುವ ಪ್ರಸ್ತಾವನೆ ಇದೆಯಷ್ಟೇ. ಇನ್ನೂ ಘೋಷಿಸಿಲ್ಲ. ಈ ಲೇಖನ ಗಮನಿಸಿ.http://timesofindia.indiatimes.com/city/bangalore/State-against-heritage-site-tag-for-Western-Ghats/articleshow/8855553.cms

    ReplyDelete
  6. ಸುಮ,
    ಎರಡು ವರ್ಷಗಳಿಂದ ನಮಗೆಲ್ಲರಿಗೆ ಉತ್ತಮ ಲೇಖನಗಳನ್ನು ನೀಡುತ್ತಿರುವ ನಿಮಗೆ ಅಭಿನಂದನೆಗಳು.

    ReplyDelete
  7. Congrats...

    prasthutha baraha thumba visheshavaagittu....

    ReplyDelete
  8. ಅಭಿನಂದನೆಗಳು ಸುಮಕ್ಕ..'ಭೂರಮೆ'ಯ ಆಳ,ಅಗಲ ಇನ್ನಷ್ಟು ವಿಸ್ತರಿಸಲಿ..ಸದಭಿರುಚಿಯ ಲೇಖನಗಳನ್ನು ಹೀಗೆ ನಮಗೆ ಕರುಣಿಸಿ..

    ಪಶ್ಚಿಮಘಟ್ಟದ ಅಮೂಲ್ಯ ಅರಣ್ಯವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದು ಅತ್ಯಗತ್ಯ...they are World's only Monsoon Evergreen forests ಅಂತೆ..

    ReplyDelete
  9. ಉತ್ತಮ ಮಾಹಿತಿಯನ್ನು ನೀಡುವ ನಿಮ್ಮ ತಾಣ ಮೂರನೇ ವರುಷಕ್ಕೆ ಕಾಲಿಟ್ಟ ಸ೦ದರ್ಭದಲ್ಲಿ ಅಭಿನ೦ದನೆಗಳು ಮೇಡ೦.

    ಅನ೦ತ್

    ReplyDelete