18 Oct 2011

ಇದೇನೆಂದು ತಿಳಿಯಿತು.






 ಈ ಕೀಟವನ್ನು ಮೊದಲು ಗಮನಿಸಿ ನನಗೆ ತಿಳಿಸಿದವರು ನಮ್ಮ ಫ್ಯಾಮಿಲಿ ಫ್ರೆಂಡ್ ಮತ್ತು ನಮ್ಮವರ ಬಿಸಿನೆಸ್ ಪಾರ್ಟ್ನರ್ ಆಗಿರುವ ಕಿರಣ್ ಜಂಬಾನಿ. ದಸರಾ ರಜೆಯಲ್ಲಿ ಅವರ ತವರೂರಾದ ಸೊರಬದ ಬಳಿಯ ಬನಕೊಪ್ಪಕ್ಕೆ ನಾವೆಲ್ಲ ದಾಳಿಯಿಟ್ಟಿದ್ದೆವು. ಅಲ್ಲಿ ಒಂದು ಬೆಳಿಗ್ಗೆ ಬಚ್ಚಲೊಲೆಗೆ ಬೆಂಕಿಹಾಕುತ್ತ ಕುಳಿತ ಕಿರಣ್ ಅವರಿಗೆ ಈ ಕೀಟ ಕಾಣಿಸಿತು . ತಕ್ಷಣ ನನ್ನನ್ನು ಕರೆದು ತೋರಿಸಿದರು. ಒಣ ಕಟ್ಟಿಗೆಗಳ ನಡುವೆ ಧೂಳು ಕಸದಂತೆಯೆ ಇದ್ದ ಅದನ್ನು ಗುರುತಿಸುವುದೇ ಕಷ್ಟವಾಗಿತ್ತು. ನಂತರ ಅದರ ಫೋಟೋ ತೆಗೆದು ಅದರ ಹಿಂದೆ ಮುಂದೆ ,ಕಾಲು ಗೀಲು ಎಲ್ಲ ಗಮನಿಸಿದ ನಾನು ಇದು  class " Insects " ಎಂಬ ತೀರ್ಮಾನಕ್ಕೆ ಬಂದೆ.
ಮನೆಗೆ ವಾಪಾಸಾದ ನಂತರ ಗೂಗಲ್ ಮಹಾಶಯರು , ಮತ್ತು ಕೆಲ ಪುಸ್ತಕಗಳ ಸಹಾಯದಿಂದ  ಇಂದು " True bug (Hemiptera) " ಜಾತಿಗೆ ಸೇರಿದೆ ಎಂಬುದಷ್ಟು ತಿಳಿಯಿತು .  ಆದರೂ ಸಂಪೂರ್ಣವಾಗಿ ಅದರ ಗುರುತು ಸಿಗಲಿಲ್ಲ.
ಆಗ ಜಲನಯನ ಬ್ಲಾಗಿನ ಆಜಾದ್ ಸರ್ ಅವರು ಇದು ಬಗ್ ಜಾತಿಗೆ ಸೇರಿದ " masked bug ( Reduvius ) " ಎಂದು ಗುರುತಿಸಿ ಕೆಲ ಲಿಂಕ್ ಕಳುಹಿಸಿದರು . ಆಗ ನನ್ನ ಅನುಮಾನಗಳು ಪರಿಹಾರವಾಗಿತ್ತು.

ಇದು ಮಾಸ್ಕ್ಡ್ ಹಂಟರ್ ಕೀಟದ "ನಿಂಫ್" ಅಂದರೆ ಅದರ ಬಾಲ್ಯಾವಸ್ಥೆ.     
ಚಿಟ್ಟೆ ಪತಂಗ ಮುಂತಾದ ಕೀಟಗಳಲ್ಲಿ ಅದರ ಮರಿಗಳು ಬೆಳೆದ ಕೀಟವನ್ನು ಸ್ವಲ್ಪವೂ ಹೋಲುವುದಿಲ್ಲ . ಅದರಲ್ಲಿ ಮೊಟ್ಟೆ ಮತ್ತು ಚಿಟ್ಟೆಯ ನಡುವೆ  ಲಾರ್ವ , ಪ್ಯೂಪ ಎಂಬ ಎರಡು ಅವಸ್ಥೆಗಳಿವೆ.
ಆದರೆ ಬಗ್ ಗಳಲ್ಲಿ ಮರಿಗಳು ಹೆಚ್ಚಾಗಿ ದೊಡ್ಡ ಕೀಟವನ್ನು ಹೋಲುತ್ತವೆ. ಬೆಳೆಯುವ ಕೊನೇ ಹಂತದಲ್ಲಿ ರೆಕ್ಕೆಗಳು ಮೂಡುತ್ತವೆ. ಆಗ ಅದು ಅಡಲ್ಟ್ ಹಂತ ತಲುಪುತ್ತದೆ.
ಈ ಮಾಸ್ಕ್ ಹಂಟರ್ ಕೀಟವು  ಚಿಕ್ಕ ಪುಟ್ಟ ಕೀಟಗಳನ್ನು  ಹಿಡಿದು ತಿನ್ನುವ ಬೇಟೆಗಾರ. ತನ್ನ ಬಾಯಿಯ ಚೂಪಾದ ಭಾಗಗಳಿಂದ ತನ್ನ ಆಹಾರವನ್ನು ಚುಚ್ಚಿ , ವಿಷಜೊಲ್ಲು ಸುರಿಸಿ ಸಾಯಿಸಿ , ಅದರ ಜೀವದ್ರವ್ಯವನ್ನು ಹೀರುತ್ತದೆ. ಇದರ ಮರಿಗಳು ತಮ್ಮ ದೇಹಕ್ಕೆ ಸುತ್ತಮುತ್ತಲಿನ ಧೂಳು ಕಸ ಕಟ್ಟಿ ಅಂಟಿಸಿಕೊಂಡು ತನ್ನ ವೈರಿಗಳಿಂದ ರಕ್ಷಿಸಿಕೊಳ್ಳುವುದೇ ಅಲ್ಲದೆ ಆಹಾರವಾಗುವ ಕೀಟಗಳಿಗೂ ಸುಳಿವು ಸಿಗದಂತೆ ವೇಷ ಮರೆಸಿಕೊಳ್ಳುತ್ತವೆ.
ಪ್ರಕೃತಿಯ ವೈಚಿತ್ರಗಳಿಗೆ ಸರಿಸಾಟಿ ಎಲ್ಲಿದೆ?









12 comments:

  1. ಜೀವಶಾಸ್ತ್ರದಲ್ಲಿನ ನಿಮ್ಮ ಆಸಕ್ತಿಗೆ ಖುಷಿಯಾಯ್ತು. ಹೊಸ ಕೀಟವೊ೦ದನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ.

    ReplyDelete
  2. ನಿಜಕ್ಕೂ ಸುಮ, ಇದು ನಿಮ್ಮ ಆಸಕ್ತಿಯ ಫಲ, ಜೀವಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಇರುವ ನಿಮ್ಮ ಪ್ರಯತ್ನಕ್ಕೆ ನನ್ನ ಅಳಿಲು ಸೇವೆ...ಒಂದು ರೀತಿಯಲ್ಲಿ ನನ್ನ ಸಾಮಾನ್ಯ ಜ್ಞಾನದಲ್ಲಿ ಸೇರ್ಪಡೆಗೆ ನೀವೇ ಕಾರಣರು.....ಅಂದ ಹಾಗೆ ನಾನು ಕಂಡ ಹಲವಾರು ಫೋಟೋಗಳಲ್ಲಿ ನೀವು ಕಳುಹಿಸಿದ ಕೀಟಕ್ಕೆ ಹೋಲುವ ಪ್ರಜಾತಿಗಳೇ ಆಗಿದ್ದರೂ..ಸ್ವಲ್ಪ ವ್ಯತ್ಯಾಸ ಇದೆ ಅನ್ಸುತ್ತೆ...ಯಾರಿಗೆ ಗೊತ್ತು ಹೊಸ ಪ್ರಬೇಧದ ಗುರುತಿಸುವಿಕೆ ನಿಮ್ಮಿಂದ ಆಗುತ್ತೋ ಏನೋ....ಪ್ರಯತ್ನಿಸಿ.

    ReplyDelete
  3. wow.. thanks for the information..

    ReplyDelete
  4. Thank for the information madam.

    Nimma bloginalli nodidamele yavudo Jeda endu hudukadide .. but information sikkiralilla.

    Tfs.

    ReplyDelete
  5. Nanage gottagiddu ondu hula aste, istella vishya ide anta gottirlilla, Thanks for information

    KIRAN JAMBANI

    ReplyDelete
  6. ನಿಮ್ಮ ಆಸಕ್ತಿ ಹಾಗು ಪರಿಶ್ರಮದಿಂದಾಗಿ ನಮಗೆ ತುಂಬ ಉಪಯುಕ್ತ ಹಾಗು ಖುಶಿ ಕೊಡುವ ಮಾಹಿತಿ ಸಿಗುತ್ತಿದೆ.

    ReplyDelete
  7. ಉಪಯುಕ್ತ ಮಾಹಿತಿ :-) ಒಳ್ಳೇ ಮಾಹಿತಿ, ಲೇಖನಕ್ಕೆ ಅಭಿನಂದನೆಗಳು :-)

    ReplyDelete
  8. ಉಪಯುಕ್ತವಾದ ಮಾಹಿತಿ , ಧನ್ಯವಾದಗಳು ...
    http://nenapinasanchi.wordpress.com/

    ReplyDelete