13 Oct 2011

ಇದೇನು?

ಪ್ರಕೃತಿಯಲ್ಲಿ ಯಶಸ್ವಿಯಾಗಿ ಜೀವಿಸಲು ಪ್ರತಿಯೊಂದು ಜೀವಿಗೂ ಕೆಲ ಅರ್ಹತೆಗಳಿರಬೇಕು. ಆಹಾರ ದೊರಕಿಸಿಕೊಳ್ಳುವ ಸಾಮರ್ಥ್ಯ , ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ, ಮತ್ತು ತನ್ನನ್ನು ತಾನು ಬೇರೆ ಜೀವಿಗಳಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಇವೆಲ್ಲ  ಜೀವಿಗಳಿಗಿದ್ದಾಗಲಷ್ಟೇ ಅವು ಯಶಸ್ವಿಯಾಗಿ ಬದುಕಲು ಸಾಧ್ಯ.
ಬೇರೆ ಜೀವಿಗಳಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲು ಅನೇಕ ಉಪಾಯಗಳನ್ನು ಪ್ರತಿಯೊಂದು ಜೀವಿಯೂ ಅನುಸರಿಸುತ್ತದೆ.
ಕೆಲ ಜೀವಿಗಳಂತೂ ತಾವು ವಾಸಿಸುವ ಪರಿಸರದಲ್ಲಿ ಗೊತ್ತೇ ಆಗದಂತೆ ಬೆರೆತು ಹೋಗಿರುತ್ತವೆ. ಜಡ ವಸ್ತುಗಳಂತೆ , ಬಲಶಾಲಿಗಳಂತೆ , ಅಪಾಯಕಾರಿಯಂತೆ ಮಿಮಿಕ್ರಿ ಮಾಡುವ ಎಷ್ಟೋ ಜೀವಿಗಳಿವೆ.
ಎಲೆಯಂತೆಯೇ ಕಣುವ ಎಲೆ ಕೀಟ ,  ಒಣ ಕಡ್ಡಿಯಂತೆ ಕಾಣುವ ಕಡ್ಡಿ ಕೀಟ , ಬಣ್ಣ ಬದಲಿಸುವ ಗೋಸುಂಬೆ ,  ಕಪ್ಪೆಗಳು ಇತ್ಯಾದಿಗಳೆಲ್ಲ ಈ ಉಪಾಯದಿಂದಲೇ ಶತ್ರುಗಳಿಂದ ಪಾರಾಗುತ್ತವೆ.



ಅಂತಹುದೇ ಒಂದು ಅದ್ಭುತ ಸೃಷ್ಠಿಯನ್ನು ಇತ್ತೀಚೆಗೆ ನೋಡಿದೆ. ಇದೊಂದು ಪುಟ್ಟ ಕೀಟ . ಕಸದ ಧೂಳಿನ ಮುದ್ದೆಯಂತೆ ಕಾಣುತ್ತದೆ. ಒಲೆ ಉರಿಸಲು ಬಳಸುವ ಒಣಕಟ್ಟಿಗೆಯ ಮೇಲೆ ಇವುಗಳ ವಾಸ.  ತುಂಬ ದಿನಗಳಿಂದ ಕೂಡಿಟ್ಟಿರುವ ಒಣ ಕಟ್ಟಿಗೆಯ ಮಧ್ಯದಲ್ಲಿ ಜೀರ್ಣವಾಗುತ್ತಿರುವ ಕಟ್ಟಿಗೆಯ ಪುಡಿ, ಧೂಳು ಜೇಡರಬಲೆ ಇತ್ಯಾದಿಯೆಲ್ಲ ಸೇರಿಕೊಂಡು ಒಂದು ವಿಧವಾದ ಕಸದ ಚಿಕ್ಕ ಮುದ್ದೆಗಳು ತಯಾರಾಗುತ್ತವೆ. ಈ ಕೀಟಗಳು ಅದನ್ನೇ ಹೋಲುತ್ತವೆ ಗಮನಿಸಿ ನೋಡಿದ ಹೊರತು ಅದೊಂದು ಜೀವಿಯೆಂಬುದು ತಿಳಿಯುವುದೇ ಇಲ್ಲ.

ಇದರ ದೇಹದಲ್ಲಿ ಮುರು ಜೊತೆ ಕಾಲುಗಳಿವೆ , ತಲೆಯ ಭಾಗದಲ್ಲಿ ಒಂದು ಜೊತೆ ಮೀಸೆ(antenna)  ಇದೆ.  ಸ್ವರ್ಶಿಸಿದರೆ ಚುರುಕಾಗಿ ಓಡುತ್ತದೆ.

ಈ ಕೀಟದ ಬಗ್ಗೆ ಹೆಚ್ಚಿನ ಮಾಹಿತಿಗಳೇನಾದರು ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ.


13 comments:

  1. ಮೇಡಂ ನನಗಂತೂ ಈ ಬಗ್ಗೆ ತಿಳಿದ್ದಿಲ್ಲ....ಫೋಟೋ ನೋಡಿದ ಮೇಲೂ ನೆನಪಾಗುತ್ತಿಲ್ಲ....

    ReplyDelete
  2. ಹೌದು. ಇದನ್ನು ನೋಡಿದ್ದೇನೆ. ಜೀವವಿಕಾಸ ಎಷ್ಟು ವಿಚಿತ್ರ ಅಲ್ವಾ!!

    ReplyDelete
  3. ನನಗು ಇದರ ಬಗ್ಗೆ ಮಾಹಿತಿ ಇಲ್ಲ.

    ReplyDelete
  4. ಜೀವಲೋಕದ ವಿಸ್ಮಯ!

    ReplyDelete
  5. Madam, I have referred this article to my friend, who is a biology teacher. Once I will his mail, I will comment you back. :-)

    pl. Welcome to my blog :
    www.badari-poems.blogspot.com
    www.badari-notes.blogspot.com

    ReplyDelete
  6. ಸುಮ, ಮಾಹಿತಿ ಚನ್ನಾಗಿದೆ...ಆದರೆ ನಿಮ್ಮ ಆಸಕ್ತಿ ಮತ್ತು ಗಮನವಿಟ್ಟು ವಿಷಯಗಳನ್ನು ಗ್ರಹಿಸುವುದು ಅವುಗಳ ಬಗ್ಗೆ ಮಾಹಿತಿ ಕಲೆಹಾಕುವುದು, ಫೋಟೋ ತೆಗೆಯುವುದು ಮತ್ತು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು..ಇವೆಲ್ಲವುಗಳಿಗೆ..ಅಭಿನಂದನೆಗಳು.. ನಿಮ್ಮಲ್ಲಿ ಈ ಕೀಟದ ಅತಿ ಹತ್ತಿರದ ಚಿತ್ರವಿದ್ದರೆ ಕಳುಹಿಸಿ..ನಾನೂ ಪ್ರಯತ್ನಿಸುತ್ತೇನೆ.

    ReplyDelete
  7. ee keetada bagge astu tiLide iralilla... mahiti sikka kooDale matte post madi naavu tiLidukoLLuva aatura.

    ReplyDelete
  8. ಸುಮ..
    ಇದು ಬಹುಶ: ಬ್ಯಾಗ್ ವರ್ಮ್ ನ ಒ೦ದು ಜಾತಿ.. Psychidae ಅ೦ತ ಹೆಸ್ರು.Lepidoptera ಫ್ಯಾಮಿಲಿ. ಚಿಟ್ಟೆ ಅಥವಾ ಹಾತೆಯ ಫ್ಯಾಮಿಲಿ..

    ಸುಧಾದಲ್ಲಿ ಕೆಲವು ವಾರಗಳ ಹಿ೦ದೆ ಓದಿದ ನೆನಪು. ಕನ್ನಡದಲ್ಲಿ ಸ೦ಚಿ ಹುಳು ಹೇಳಿ ಲೇಖಕ ಬರೆದಿದ್ದ.

    ReplyDelete
  9. ಮೇಡಮ್,
    ಇದರ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್. ಇದನ್ನೇ ಮ್ಯಾಕ್ರೋ ಲೆನ್ಸಿನಲ್ಲಿ ಕ್ಲಿಕ್ಕಿಸಿದ್ದರೆ ಅದರ ಪೂರ್ತಿ ಇತಿಹಾಸ ಗೊತ್ತಾಗಿಬಿಡುತ್ತಿತ್ತು..
    ಧನ್ಯವಾದಗಳು.

    ReplyDelete
  10. ಅಕ್ಕ ಇದು ಬ್ಯಾಗ್ ವರ್ಮ್ ಅಲ್ಲ. ಬ್ಯಾಗ್ ವರ್ಮ್ ಅನ್ನೋದು ಹಾತೆಯ ಜಾತಿಗೆ ಸೇರಿದ ಕೀಟದ ಲಾರ್ವಲ್ ಮತ್ತು ಪೂಪಲ್ ಸ್ಟೇಜ್. ಅದರಲ್ಲಿ ನಾನು ಹೇಳಿದಂತೆ ಮೂರು ಜೊತೆ ಕಾಲುಗಳು ಮತ್ತು ಆಂಟೆನ ಇರುವುದಿಲ್ಲ( ಲಾರ್ವ ಮತ್ತು ಪ್ಯೂಪಗಳಲ್ಲಿ) ಮತ್ತು ಇದು ಹೆಚ್ಚಾಗಿ ಜೀವವಿರುವ ಗಿಡ ಮರಗಳಿಗೆ ಅಂಟಿ ಕೊಂಡಿರುತ್ತವೆ

    ಆದರೆ ನಾನು ಹೇಳಿದ ಕೀಟಕ್ಕೆ adult insect ನ ಎಲ್ಲ ಲಕ್ಷಣಗಳಿವೆ. ದೇಹದಲ್ಲಿ "ಹೆಡ್" ," ಥೊರಾಕ್ಸ್ "ಮತ್ತು "ಅಬ್ಡಾಮನ್ "...ಗುರುತಿಸಬಹುದು . ಮೂರು ಜೊತೆ ಕಾಲುಗಳು ಥೊರಾಕ್ಸ್ ಭಾಗದಿಂದ ಹೊರಬಂದಿದೆ. ತಲೆಯಲ್ಲಿ "ಆಂಟೇನಾ" ವನ್ನು ಸ್ಪಷ್ಟವಾಗಿ ಗುರುತಿಸಬಹುದು. ಯಾವುದೇ ರೀತಿಯ ರೆಕ್ಕೆಗಳಿಲ್ಲ.
    ಇವೆಲ್ಲ ಲಕ್ಷಣಗಳಿಂದ ಇದು ಬಹುಶಃ " ಬಗ್ "(Hemiptera) ಜಾತಿಗೆ ಸೇರಿದ ಕೀಟವಿರಬೇಕೆಂಬ ಅನುಮಾನ ನನ್ನದು.

    ReplyDelete
  11. Very interesting... informationgaagi naanU hudukuttene.

    ReplyDelete
  12. Interesting and informative. Thank you.

    ReplyDelete