11 Jan 2012

ಸಸ್ಯಲೋಕದ ಬಿನ್ನಾಣಗಿತ್ತಿಯರು

Heliconia

 mango ginger

 Mussaenda 


Euphorbia milii
Justicia
Lollipop Plant

 Anthurium 
poinsettia 




 wild Mussaenda  
ಈ ಎಲ್ಲ ಬಣ್ಣ ಬಣ್ಣದ ಹೂಗಳನ್ನು ನೋಡಿದಿರಲ್ಲ  :) ಇವೆಲ್ಲ ನಿಜಕ್ಕೂ ಹೂವುಗಳೇ?  ಅಲ್ಲ ! ಇವುಗಳಲ್ಲಿ ನಿಜವಾದ ಹೂವುಗಳು ತುಂಬಾ ಚಿಕ್ಕದಾಗಿದೆ . ಆಕರ್ಷಕವಾದ ಬಣ್ಣದಲ್ಲಿ  ಹೂವಿನ ದಳಗಳಂತೆ ಕಾಣುವ ರಚನೆಗಳು ' bract ' ಗಳು. ವೈಜ್ಞಾನಿಕವಾಗಿ ಈ  bract ಗಳು ಹೂವಿನ ಭಾಗಗಳಲ್ಲ . ಆದರೆ ಹೂವಿನ ದಳಗಳು ಏನೇನು ಕೆಲಸ ಮಾಡುತ್ತವೋ ಅದೆಲ್ಲವನ್ನು ಇವು ಮಾಡುತ್ತವೆ. ಅಂದರೆ ತಮ್ಮ ಮನಸೆಳೆವ ಬಣ್ಣಗಳಿಂದ ಕೀಟಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಕರಿಸುವುದು , ಹೂವಿನ ಕೋಮಲ ಭಾಗಗಳನ್ನು ರಕ್ಷಿಸುವುದು , ಕಿಟಾಹಾರಿ ಸಸ್ಯಗಳಲ್ಲಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ಹಿಡಿಯುವುದು , ಮುಂತಾದ ಕಾರ್ಯ ಇವುಗಳದ್ದು.

ಸಸ್ಯಗಳಲ್ಲಿ  ಹೂ ಬಿಡುವ  ಸಮಯಕ್ಕೆ  ಇವುಗಳ ಉದಯವಾಗುತ್ತದೆ.  bract ಗಳು  ಹೂವಿನ ಬುಡದಲ್ಲಿ ಇರಬಹುದು , ಅಥವಾ ಹೂ ಹೊಂಚಲಿನ ಬುಡದಲ್ಲಿ , ಪ್ರತಿ ಹೂಗಳ ಮಧ್ಯದಲ್ಲಿ  ಇರಬಹುದು

ವೈವಿಧ್ಯಮಯ ರಚನೆ ಇವುಗಳದು  . ಎಲೆಗಳಂತೆ  , ಹೂವಿನಂತೆ , ಹೂವಿನ ದಳಗಳಂತೆ ,  ತೊಟ್ಟಿನಂತೆ , ತೊಗಟೆಯಂತೆ ಕಾಣುವ bract ಗಳಿವೆ .   . ಇನ್ನು ಬಣ್ಣಗಳಲ್ಲಂತೂ ವರ್ಣಿಸಲಾಗದ ವೈವಿಧ್ಯತೆ .  ಕಾಡಿನ ಮಧ್ಯದಲ್ಲೆಲ್ಲೋ ಬೆಂಕಿ ಉರಿವಂತೆ ಕಾಣುವ ಕೆಂಪು , ಕಡು ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದಂತೆ ತೋರುವ ಬಿಳಿ ,  ಮುಳುಗುತ್ತಿರುವ ಸೂರ್ಯನ ಚಿನ್ನದ ಬಣ್ಣ , ಕಡು ನೇರಳೆ , ನಸುಗುಲಾಬಿ , ಹಳದಿ ಒಹ್ ಒಂದೆ ಎರಡೇ ....ಕಣ್ಣಿಗೆ ಹಬ್ಬ.
ತಮ್ಮ  ಆಕರ್ಷಕ ಬಣ್ಣ ಸೌಂದರ್ಯದಿಂದ ಈ bract ಇರುವ ಸಸ್ಯಗಳು ಕೈತೋಟ , ಉದ್ಯಾನವನ , ಮೊದಲಾದವುಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಅಲ್ಲದೆ ಹೂವಿನಿಂದ ಮಾಡುವ ಒಳಾಂಗಣ ಅಲಂಕಾರಗಳಲ್ಲು ಇವುಗಳನ್ನು ಉಪಯೋಗಿಸುತ್ತಾರೆ. 


 


 

14 comments:

  1. very nice pics and informative writing

    ReplyDelete
  2. ಬಿನ್ನಾಣಗಿತ್ತಿಯರ ಚಿತ್ರ ಹಾಗು ಮಾಹಿತಿ ಚೆನ್ನಾಗಿವೆ.

    ReplyDelete
  3. ಸೊಗಸಾದ ಚಿತ್ರಗಳು, ಮಾಹಿತಿಪೂರ್ಣ ಬರಹ. ಮತ್ತೆ... "ಭೂಮಿಗಿಂತ ಮಿಗಿಲಾದ ಸ್ವರ್ಗವೆಲ್ಲಿದೆ!!!!" ಎಂಬ ನಿಮ್ಮ ಅಭಿಪ್ರಾಯ ನನ್ನದೂ ಸಹಾ. -ಪ್ರೇಮಶೇಖರ

    ReplyDelete
  4. informative.. thanks for sharing

    ReplyDelete
  5. ಸುಮಕ್ಕ,ಫೋಟೋಸ್ ಮತ್ತು ಆ ಹೂಗಳ ಬಗೆಗಿನ ವಿವರಣೆ ತು೦ಬಾ ಚೆನ್ನಾಗಿದ್ದು.

    ReplyDelete
  6. ಆಕರ್ಷಕ..ಆಸಕ್ತಿದಾಯಕ..ಉಪಯುಕ್ತ ಮಾಹಿತಿ..ಧನ್ಯವಾದಗಳು ಅಕ್ಕ..

    ReplyDelete
  7. ಸುಂದರ ಬಿನ್ನಾಣಗಿತ್ತಿ ಸುಮಗಳು

    ReplyDelete
  8. ಸುಮ ಬಹಳ ಸುಂದರ ಚಿತ್ರಗಳು ಮತ್ತು ವೈಜ್ಞಾನಿಕ ಮಾಹಿತಿ.. ಇಷ್ಟವಾಯ್ತು..

    ReplyDelete
  9. very good information and photos too :) thanks for sharing sumakka :)

    ReplyDelete