ಏಕೋ ಅನೇಕ ದಿನಗಳಿಂದ ಬ್ಲಾಗ್ ನಲ್ಲಿ ಏನೂ ಬರೆಯಲಾಗಿರಲಿಲ್ಲ . ಏನನ್ನೋ ಬರೆಯಬೇಕೆನ್ನಿಸುವುದು , ಬರೆಯಲು ಪ್ರಾರಂಭಿಸಿದರೆ ಏನೋ ಕೊರತೆ ಎನ್ನಿಸಿ ಮತ್ತೆ ಡಿಲೀಟ್ ಮಾಡುವುದು ಮಾಡ್ತ ಇದ್ದೆ . ಈ ದಿನ ಏನಾದರೂ ಸರಿ ಡಿಲೀಟ್ ಮಾಡೋದಿಲ್ಲ ಅಂತ ನಿರ್ಧರಿಸಿ ಕುಳಿತಿದ್ದೀನಿ :) ಓದಿ ಬಯ್ಕೊಬೇಡಿ ಮತ್ತೆ ಆಯ್ತಾ :) ಈ ಅವಧಿಯಲ್ಲಿ ಪರೀಕ್ಷೆಗೆ ಕುಳಿತವರಂತೆ ಅನೇಕ ಪುಸ್ತಕಗಳನ್ನು ಓದಿದೆ ! ಅದರಲ್ಲೆ ಕೆಲವು ಪುಸ್ತಕಗಳ ಬಗ್ಗೆ ನನಗನ್ನಿಸಿದ್ದು ಹೀಗೆ .
ಸುಣ್ಣ ಬಳಿದ ಸಮಾಧಿಗಳು :
ಇದು "ನಾ . ಡಿಸೋಜ " ಅವರ ಕಾದಂಬರಿ. ನನ್ನ ತವರೂರು ಸಾಗರದಲ್ಲಿ ನೆಲೆಸಿರುವ ನಾಡಿ ನನ್ನ ಮೆಚ್ಚಿನ ಲೇಖಕರಲ್ಲೊಬ್ಬರು. ಇವರ ಸಣ್ಣ ಕಥೆಗಳು, ಮಕ್ಕಳ ಕಥೆಗಳು, ಕಾದಂಬರಿಗಳಲ್ಲಿ ಮಲೆನಾಡಿನ ಸಹಜ ಚಿತ್ರಣ ಸೊಗಸಾಗಿ ಮೂಡಿಬರುತ್ತದೆ. ಶರಾವತಿ ನದಿ ಅಣೆಕಟ್ಟಿನಿಂದಾದ ಸಾಂಸ್ಕೃತಿಕ , ಸಾಮಾಜಿಕ ಪಲ್ಲಟಗಳನ್ನು ಅವರಷ್ಟು ಚೆಂದವಾಗಿ ಕಟ್ಟಿಕೊಟ್ಟ ಲೇಖಕರಿಲ್ಲವೆಂದೆನ್ನಿಸುತ್ತದೆ. ಕ್ರಿಶ್ಚಿಯನ್ ಸಮುದಾಯದ ಸಂಸ್ಕೃತಿ , ಜೀವನ ವಿಧಾನ , ಆಚರಣೆ , ಅಪಸವ್ಯಗಳ ಬಗ್ಗೆ ನಿರ್ಮೋಹಿತರಾಗಿ ಬೆಳಕು ಚೆಲ್ಲುತ್ತಾರೆ ಅವರು.
" ಸುಣ್ಣ ಬಳಿದ ಸಮಾಧಿಗಳು" ಕಾದಂಬರಿಯು ಪಾದ್ರಿಯೊಬ್ಬನ ಅಂತರಾಳವನ್ನು ತೆರೆದಿಡುತ್ತದೆ. ಚಿಕ್ಕವಯಸ್ಸಿನಲ್ಲೆ ದೈವಶಕ್ತಿಯ ಮೇಲೆ ಅಪಾರ ನಂಬುಗೆಯಿಂದ , ಸಮಾಜಸೇವೆಯ ಉನ್ನತ ಆದರ್ಶದಿಂದ ಪಾದ್ರಿ ದೀಕ್ಷೆತೊಡುವ ಜಾನ್ ಎಂಬ ಯುವಕ ಮತ್ತು ಅದೇ ಉನ್ನತ ಉದ್ದೇಶದಿಂದ ನನ್ ಆಗುವ ರೋಜಿ ಎಂಬ ಯುವತಿ ನಂತರ ಭ್ರಮನಿರಸನದಿಂದ ಸನ್ಯಾಸತ್ವ ತ್ಯಜಿಸುತ್ತಾರೆ.
ಏಸುವಿನ ಉನ್ನತ ವಿಚಾರರಗಳನ್ನು ಜಗತ್ತಿಗೇ ಸಾರುವ ಹೊಣೆ ಹೊತ್ತ ಚರ್ಚ್ ಗಳಲ್ಲಿ ಆತನ ಎಲ್ಲ ಭೋಧನೆಗಳನ್ನು ಕೇವಲ ಒಣಆಚರಣೆಗಳ ಮಟ್ಟಕ್ಕಿಳಿಸಿ ನಿಜತತ್ವವನ್ನು ಮರೆತಿರುವುದನ್ನು, ಅಲ್ಲಿನ ಒಳರಾಜಕೀಯ, ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆ, ಆಷಾಡಭೂತಿತನಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಾರೆ ನಾ ಡಿಸೋಜ ಅವರು.
ಜನರನ್ನು ಸುಶಿಕ್ಷಿತವಾಗಿಸುವ ಹೊಣೆಯಿಂದ ಅಸ್ತಿತ್ವಕ್ಕೆ ಬಂದ ಕಾನ್ವೆಂಟುಗಳು, ಹಣದಾಹದಲ್ಲಿ , ಅರ್ಥವಿಲ್ಲದ ಅತಿ ಶಿಸ್ತಿನಲ್ಲಿ, ಕಳೆದುಹೋಗಿ ಮೂಲ ಉದ್ದೇಶವನ್ನೇ ಮರೆತ ಪರಿಯನ್ನು ಮನಗಾಣಿಸುತ್ತಾರೆ.
ದೇವರ ಹೆಸರಿನಲ್ಲಿ ಮುಗ್ಧಭಕ್ತರನ್ನು ಶೋಷಿಸುವ , ಸುಲಿಯುವ ಮಧ್ಯವರ್ತಿಗಳ ಕಾಟ ಯಾವ ಧರ್ಮವನ್ನೂ ಬಿಟ್ಟಿಲ್ಲ ಅಲ್ಲವೇ?
ಅಮ್ಮ ಸಿಕ್ಕಿದ್ದು :
ಇದು ರವಿ ಬೆಳಗೆರೆಯವರ ಪುಟ್ಟ ಕಾದಂಬರಿ . ತಾಯಿಯ ಬಗ್ಗೆ ಯಾವಾಗಲೂ ತುಂಬ ಭಾವನಾತ್ಮಕವಾಗಿ ಬರೆಯುತ್ತಾರೆ ಆರ್ ಬಿ. ಇದೂ ಕೂಡ ತಾಯಿಯ ಪ್ರೀತಿಯ ಶಕ್ತಿಯನ್ನು ಎತ್ತಿಹಿಡಿಯುವ ಕಥಾವಸ್ತುವನ್ನು ಹೊಂದಿದೆ.
ತನ್ನ ಕೆಟ್ಟ ಚಟಗಳಿಂದ , ಬೇಜವಾಬ್ದಾರನಾಗಿ ಹೆಂಡತಿ ಮಗನಿಂದ ,ಸಮಾಜದಿಂದ ತಿರಸ್ಕೃತನಾದರೂ ತಾಯಿಯ ಆತ್ಮೀಯತೆ, ಪ್ರೀತಿಯ ಸ್ಪರ್ಶದ ಅನುಭೂತಿಯಿಂದಲೇ ಸರಿದಾರಿಗೆ ಅಡಿಯಿಡುವವನ ಕಥೆಯಿದು.
ಒಂದೇ ತಾಸಿನಲ್ಲಿ ಓದಿ ಮುಗಿಸಿಬಿಡಬಹುದಾದ , ಓದಿದ ನಂತರ ನಮ್ಮ ತಾಯಿಯ ಬಗ್ಗೆ ಇನ್ನಷ್ಟು ಗೌರವ ಹುಟ್ಟಿಸಬಲ್ಲ ತಾಕತ್ತು ಈ ಕಿರು ಕಾದಂಬರಿಗಿದೆ.
ರವಿ ಬೆಳೆಗೆರೆಯವರ ಎಲ್ಲ ಬರಹಗಳಂತೆ ಇದನ್ನು ಅತಿ ರಂಜನಾತ್ಮಕ ಶೈಲಿಯಲ್ಲೆ ಹೆಣೆದಿದ್ದರೂ ಕನವರಿಕೆಯ ಸ್ತರದಲ್ಲೆ ಮುನ್ನೆಡೆಯುವ ಕಥಾವಸ್ತುವಿಗೆ ಅದು ಪೂರಕವಾಗೇ ಇದೆ.
ಪೆರುವಿನ ಪವಿತ್ರ ಕಣಿವೆಯಲ್ಲಿ:
ಇದು ನಾನು ಬೇಸರವಾದಾಗಲೆಲ್ಲ ಓದಿಕೊಳ್ಳುವ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರ ಕೃತಿ. ಅವರ ಕಥೆಗಳು , ದೇಶ ವಿದೇಶಗಳ ಸಾಧಕಿಯರ ಆತ್ಮಕಥೆಗಳು , ವಿಶಿಷ್ಟವಾದ ಪ್ರವಾಸ ಕಥನಗಳು ಎಲ್ಲವೂ ಅರ್ಥಪೂರ್ಣವಾಗಿರುತ್ತವೆ.
ಈ ಕೃತಿ ಅವರದೊಂದು ಅದ್ಭುತವಾದ ಪ್ರವಾಸ ಕಥನ. ದಕ್ಷಿಣ ಅಮೇರಿಕಾದ , ಅಮೆಜಾನ್ ಕೊಳ್ಳ , ಮಾಚುಪಿಚ್ಚು , ನಾಸ್ಕ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದ ರೊಚಕ ಅನುಭವಗಳನ್ನು ಕಣ್ಣಿಗೆ ಕಟ್ಟಿದಂತೆ , ನಾವೂ ಅವರ ಜೊತೆ ಪಯಣಿಸಿದ ಅನುಭವವಾಗುವಂತೆ ಬರೆಯುತ್ತಾರೆ ನೇಮಿಚಂದ್ರ.
ಯಾವುದೇ ರೇಜಿಗೆ ರಗಳೆಗಳಿಲ್ಲದೆ ಪ್ಯಾಕೇಜ್ ಟೂರ್ ಗಳಲ್ಲಿ ಕುಡಿದ ನೀರು ಅಲುಗದಂತೆ ಪಯಣಿಸಿ , ಅಲ್ಲಿಯ ಗೈಡ್ ಗಳು ಹೇಳಿದಷ್ಟಕ್ಕೆ ತಲೆಯಾಡಿಸಿ , ಒಂದಿಷ್ಟು ಅಲ್ಲಿ ಇಲ್ಲಿ ನಿಂತು ಫೋಟೊ ತೆಗೆಸಿಕೊಂಡು, ಐಷಾರಾಮಿ ಹೋಟೆಲ್ ಗಳಲ್ಲಿ ವಿಶ್ರಮಿಸಿ , ಒಂದಿಷ್ಟು ಬೇಕಾದ್ದು ಬೇಡವಾದ್ದನ್ನೆಲ್ಲ ಖರೀದಿಸಿ ವಾಪಾಸ್ ಬರುವುದೇ ಪ್ರವಾಸವೆಂದುಕೊಳ್ಳುವವರೇ ಹೆಚ್ಚು. ಆದರೆ ಒಂದು ಸ್ಥಳಕ್ಕೆ ಹೋಗುವಾಗ ಮಾಡಿಕೊಳ್ಳಬೇಕಾದ ಬೌದ್ದಿಕ ಸಿದ್ಧತೆಯ ಬಗ್ಗೆ ನೇಮಿಚಂದ್ರರ ಪ್ರವಾಸ ಕಥನಗಳು ತಿಳಿಸುತ್ತವೆ. ಅಪರಿಚಿತ ದೇಶದಲ್ಲಿ , ಭಾಷೆ ಬಾರದೇ , ಹಳ್ಳಿ ಮೂಲೆಗಳಲ್ಲಿ ಇಬ್ಬರೇ ಮಹಿಳೆಯರು ದಿಟ್ಟತನದಿಂದ ಅಲೆಯುವುದು ಓದಿದಾಗ ಸಂತೋಷವಾಗದಿರದು.
ಪೆರುವಿನ ಪುರಾತನ ನಾಗರೀಕತೆಯ ಬಗ್ಗೆ , ಈಗಿನ ಸಾಮಾಜಿಕ ಅರ್ಥಿಕ ಸ್ಥಿತಿಗತಿಗಳ ಬಗ್ಗೆ ವಿವರಗಳಿವೆ . ಅಲ್ಲಿಯ ಹಳ್ಳಿಗಳ ಚಿತ್ರಣ, ಜನಜೀವನ ಹೆಚ್ಚು ಕಡಿಮೆ ನಮ್ಮ ದೇಶವನ್ನೇ ಹೋಲುತ್ತದೆ ಎನ್ನುತ್ತಾರೆ ಅವರು.
ಮಾಚುಪಿಚ್ಚುವಿನ ಎತ್ತರದಲ್ಲಿ ಸುವ್ಯವಸ್ಥಿತವಾದ ನಗರ ನಿರ್ಮಿಸಿ , ಬೆಟ್ಟಗಳನ್ನೆ ಕಡಿದು ಟೆರಸ್ ಗಾರ್ಡನ್ ಗಳನ್ನಾಗಿಸಿ ಬೆಳೆ ಬೆಳೆದು , ಬಾಳಿದ ಇಂಕಾ ನಾಗರೀಕರು ಕುತೂಹಲ ಹುಟ್ಟಿಸುತ್ತಾರೆ.
ಅಮೆಜಾನ್ ನದಿಯ ವಿಸ್ತಾರ ಹರವಿನಲ್ಲಿ ಒಂದು ಪುಟ್ಟ ಬೋಟ್ ನಲ್ಲಿ ಅವರು ಪಯಣಿಸಿದ ವಿವರಗಳು ನನಗಂತೂ ಜೀವಮಾನದಲ್ಲೊಮ್ಮೆ ಅಮೆಜಾನ್ ನೋಡಲೇಬೇಕೆಂಬ ಹುಚ್ಚು ಹತ್ತಿಸಿದೆ!
ಒಟ್ಟಿನಲ್ಲಿ ಪ್ರವಾಸಪ್ರಿಯರು,ಪುರಾತನ ನಾಗರೀಕತೆಗಳ ಬಗ್ಗೆ ಆಸಕ್ತಿಯುಳ್ಳವರು ಒಮ್ಮೆ ಓದಲೇಬೇಕಾದ ಕೃತಿಯಿದು .

ಸುಮಾ ಮೇಡಮ್,
ReplyDeleteಡಿಸೋಜಾ ಅವರ ಕಾದಂಬರಿಯನ್ನು ಓದಿದ್ದೇನೆ. ತುಂಬ ಚೆನ್ನಾಗಿದೆ. ಉಳಿದೆರಡು ಕೃತಿಗಳನ್ನು ಓದಿಲ್ಲ. ನಿಮ್ಮ ವ್ಯಾಖ್ಯಾನವನ್ನು ಓದಿದ ಬಳಿಕ ಈ ಪುಸ್ತಕಗಳನ್ನು ಓದಲೇಬೇಕೆಂಬ ಆಸಕ್ತಿ ಹುಟ್ಟಿದೆ.
ನೀವು ಓದಿರುವ ಕತೆಗಳು ನಿಮಗೆ ಯಾಕಿಷ್ಟವಾಗಿದೆಯೆಂದು ಸರಳವಾಗಿ ಹೇಳಿದ್ದೀರಿ ಸುಮಾ. ಮೇಲಿನ ಯಾವ ಪುಸ್ತಕಗಳನ್ನು ನಾನು ಓದಿಲ್ಲ...ಈಗ ತಂದು ಓದುತ್ತೇನೆ
ReplyDeleteಧನ್ಯವಾದಗಳು
:-)
ಮಾಲತಿ ಎಸ್.
ಸುಮಾ ಅವರೆ,
ReplyDeleteನೇಮಿಚಂದ್ರ ನನ್ನ ಮೆಚ್ಚಿನ ಲೇಖಕಿಯೂ ಹೌದು. ಅವರ ಬರಹದಲ್ಲಿಯ ಧನಾತ್ಮಕ ಅಂಶ ನನ್ನನ್ನು ಸೆಳೆಯುತ್ತವೆ.ಇನ್ನು ರವಿ ಬೆಳಗೆರೆಯವರ ಬರಹವೂ ನನಗೆ ಇಷ್ಟವೇ. ನಾ ಡಿಸೋಜ ಅವರ ಕೃತಿಯನ್ನು ಓದಲು ಪ್ರೇರಣೆ ಕೊಟ್ಟ ನಿಮಗೆ ಧನ್ಯವಾದಗಳು.
ಸಾಗರದ ಶರಧಿ ಡಿಸೋಜ ನನ್ನ ಮೆಚ್ಚಿನ ಲೇಖಕರೂ ಹೌದು ಸುಮಾ ಮೇಡಂ. ಪುಸ್ತಕ ಪ್ರೇಮವನ್ನು ಹೀಗೆ ಸಾಂಕ್ರಾಮಿಸುವ ನಿಮ್ಮ ಗುಣ ನನಗೆ ಮೆಚ್ಚಿಗೆಯಾಯಿತು.
ReplyDeleteಈಗಲೇ ಈ ಪುಸ್ತಕಗಳನ್ನು ಕೊಂಡು ಓದುತ್ತೇನೆ. ನಿಮ್ಮ ಬ್ಲಾಗ್ ಖಾಲಿ ಬಿಡಬೇಡಿ. ಬರೆಯುತ್ತಲೇ ಇರಿ.
ನನ್ನ ಬ್ಲಾಗಿಗೂ ಸ್ವಾಗತ.
ಉದಯವಾಣಿಯಲ್ಲಿ ಪ್ರತೀ ಆದಿತ್ಯವಾರ ನೇಮಿಚಂದ್ರ ಬದುಕು ಬದಲಿಸಬಹುದು ಎಂಬ ಅಂಕಣ ಬರಹ ಬರೆಯುತ್ತಾರೆ. ತಪ್ಪದೆ ಓದಿ. ಅವರ ಬರಹ ನನಗಿಷ್ಟ.
ReplyDeleteಮಾಲಾ
ಚೆನ್ನಾಗಿದೆ ಮೇಡಂ.
ReplyDeleteಯಾವ ಪುಸ್ತಕ ಓದಿಲ್ಲ :(
ಈಗ ಓದ್ತೇನೆ
ಬರೆಯುತ್ತಿರಿ
ಸ್ವರ್ಣಾ
naadi yavara kunjaalu kanivew huvu emba kaadamabri odidde. avara saakashttu kathegalannu odiddene. malenaadina badukannu avaru vishishatavaagi terediduttare. nemiyavara saahitya odilla allondu illondu patrikeyalli banda kathe bittu.
ReplyDeleteaarbhi yavaru aateeya baraha shaili ishta.
ಪುಸ್ತಕ ಪರಿಚಯ ಚೆನ್ನಾಗಿದೆ... ಓದಬೇಕು ಎನಿಸಿದೆ... ನೇಮಿಚಂದ್ರ ಅವರ ಹಲವಾರು ಪುಸ್ತಕಗಳನ್ನು ಓದಿದ್ದೇನೆ ..
ReplyDeleteಹಹಹ.....ಫೇಸ್ ಬುಕ್ ನ ಕಾಪಿ ಮಾಡಿ ತಂದಿದ್ದು. ೩ ಸಲ ಬೆಲ್ ಮಾಡಿದ್ರೆ ಏನು ತರೋದ್ ಬೇಡ ಅಂತ ಅನ್ನೋದು....ಓದಿ ನಗು ತಡೆಯಲಾಗಲಿಲ್ಲ.....ಚೆನ್ನಾಗಿದೆ ಸರ್ ನಿಮ್ಮ ಬರಹ...ಲೈಕ್ ಇತ್ತ್...
ReplyDelete'ಅಮ್ಮ ಸಿಕ್ಕಿದ್ದು' ಓದಿದ್ದೆ...ಮತ್ತೆರಡು ಓದಿಲ್ಲ.....ಪರಿಚಯಿಸಿದ್ದಕ್ಕೆ ಧನ್ಯವಾದಗಳು.....
Deleteನನ್ನ ಬ್ಲಾಗ್ ಗೂ ಬನ್ನಿ..
ಪೆರು-ನನಗಿಷ್ಟ.
ReplyDeleteಮೇಡಮ್,
ReplyDeleteಪೆರು ಓದಿದ್ದೇನೆ. ಇನ್ನು ನಾ. ಡಿಸೋಜ ಕಾದಂಬರಿ ಮತ್ತು ಅಮ್ಮ ಸಿಕ್ಕಿದ್ಲು ಓದಿಲ್ಲ ನೀವು ಬರೆದ ಮೇಲೆ ಸಾಧ್ಯವಾದಷ್ಟು ಬೇಗ ಓದಬೇಕೆನಿಸುತದೆ...ಧನ್ಯವಾದಗಳು.
'ಜೀವನದಲ್ಲಿ ಒಮ್ಮೆ ಅಮೆಜಾನ್ ನೋಡಬೇಕು' ಅನ್ನೋ ಹಂಬಲ ತೇಜಸ್ವಿಯವರ ಪುಸ್ತಕಗಳನ್ನು ಓದಿದಾಗಲೇ ಅಮರಿಕೊಂಡಿತ್ತು. ನೀವು ಅದಕ್ಕೆ ತುಪ್ಪ ಸುರಿದುಬಿಟ್ಟಿರಿ !. ಒಳ್ಳೆಯ ರಿವ್ಯೂ ಕೊಟ್ಟಿದ್ದೀರಿ. ಧನ್ಯವಾದ.
ReplyDeleteನಾನಂತೂ ಓದಿಲ್ಲ...ಆದರೆ ತಾಯಿ ಕಥಾವಸ್ತು ಎಂದಮೇಲೆ ಕೇಳಬೇಕಿಲ್ಲ... ರವಿಯವರ ಟಿವಿ ಶೋಗಳಲ್ಲಿ ಅವರು ಬಿಂಬಿಸುವ ತಾಯ ಪಾತ್ರದ ಬಗ್ಗೆ ಕೇಳಿ ಅವರ ಭಾವನೆಗಳನ್ನು ಊಹಿಸಿಕೊಳ್ಳಬಲ್ಲೆ... ಚನ್ನಾಗಿ ಅಥೈಸಿ ಬರೆದಿದ್ದೀರಿ... ಧನ್ಯವಾದ...
ReplyDeleteenu baredilla ennuttale oLLeya maahiti koTTiddeeraa thank you....
ReplyDelete