3 Oct 2012

ನೀರಿನ ಮೇಲೆ ನಡೆಯುವ ಕೀಟ

Gerridae

 ಕೀಟಪ್ರಪಂಚವೊಂದು ಅದ್ಭುತಗಳ ಲೋಕ. ಭೂಗ್ರಹದಲ್ಲಿರುವ ಜೀವಿಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ಕೀಟಗಳೇ. ಬಿಸಿ ನೀರ ಬುಗ್ಗೆಯಿಂದ ಹಿಡಿದು , ಶೀತಪ್ರದೇಶದವರೆಗೆ ನೀರಿನಾಳದಿಂದ ಹಿಡಿದು ವಾಯುಮಂಡಲದವರೆಗೆ ಎಲ್ಲ ವಾತಾವರಣದಲ್ಲಿ ವಾಸಿಸಬಲ್ಲ ಕೀಟಗಳಿವೆ. ತಾನಿರುವ ಸ್ಥಳಗಳಿಗೆ ಅಗತ್ಯವಾದ ಮಾರ್ಪಾಡುಗಳಿರುವುದರಿಂದಲೇ ಕೀಟಗಳು ಭೂಮಿಯ ಯಶಸ್ವೀ ಜೀವಿಗಳೆನ್ನಿಸಿವೆ.
ನೀರಿನ ಒಳಗೆ ಕೀಟಗಳೂ ಸೇರಿದಂತೆ ಅನೇಕ ಪ್ರಾಣಿಗಳು ವಾಸಿಸುತ್ತವೆ. ಆದರೆ ಇದೊಂದು ಜಾತಿಯ ಕೀಟ (Gerridae) ನದಿ , ಕೆರೆ, ಹಳ್ಳ ಕೊಳ್ಳಗಳ ನೀರಿನ ಮೇಲ್ಮೈ ಮೇಲೆ ವಾಸಿಸುತ್ತದೆ .ವಿಸ್ಮಯದ ಸಂಗತಿಯೆಂದರೆ ಈ ಕೀಟ ನೀರಿನ ಮೇಲೆ ನಡೆಯತ್ತದೆ , ಓಡುತ್ತದೆ.  ತನ್ನ ವಿಶಿಷ್ಠವಾದ ದೇಹರಚನೆಯಿಂದ ಇದು  ನೀರಿನಲ್ಲಿ ಮುಳುಗುವುದಿಲ್ಲ.ನಿಂತ ನೀರಿನಲ್ಲಿ , ಹರಿಯುವ ನೀರಿನಲ್ಲಿ ಇದು ವಾಸಿಸಬಲ್ಲದು. ಹರಿಯುವ ನೀರಿನ ಪ್ರವಾಹಕ್ಕೆ ಒಮ್ಮೆ ನೀರೊಳಗೆ ಸೆಳೆಯಲ್ಪಟ್ಟರೂ ಕ್ಷಣಾರ್ಧದಲ್ಲಿ ಮೇಲೆ ಬರಬಲ್ಲವು.

ತೆಳ್ಳನೆಯ ದೇಹ , ಉದ್ದವಾದ ಮೂರು ಜೊತೆ ಕಾಲುಗಳು , ಕಾಲುಗಳಲ್ಲಿ ಬರಿಗಣ್ಣಿಗೆ ಕಾಣಿಸದಷ್ಟು ಚಿಕ್ಕ ಚಿಕ್ಕ ಅಸಂಖ್ಯಾತ ಕೂದಲುಗಳು , ಎರಡು ಜೊತೆ ಮೀಸೆಗಳು ಇದು ಈ ಕೀಟದ ದೇಹರಚನೆ.
ದೇಹದ ಭಾರ ಉದ್ದನೆಯ ಕಾಲುಗಳ ಮೂಲಕ ಹೆಚ್ಚು ಭಾಗದಲ್ಲಿ ಹರಡಿಕೊಳ್ಳುತ್ತದೆ. ಕಾಲುಗಳಲ್ಲಿರುವ ಕೂದಲುಗಳು ನೀರನ್ನು ವಿಕರ್ಷಿಸಿ , ದೇಹಕ್ಕೆ ನೀರು ತಾಗದಂತೆ ನೋಡಿಕೊಳ್ಳುತ್ತವೆ. ಆ ಕೂದಲುಗಳ ಮಧ್ಯೆ ಇರುವ ಜಾಗದಲ್ಲಿ ಗಾಳಿ ಗುಳ್ಳೆಗಳು ತುಂಬಿಕೊಂಡು ಕೀಟ ತೇಲಲು ಸಹಾಯ ಮಾಡುತ್ತದೆ. ಇವೆಲ್ಲ ಮಾರ್ಪಾಡಿನಿಂದಾಗಿ ಇದು ನೀರಿನ ಮೇಲೆ ನಡೆದರೂ ನೀರಿನ ಮೇಲ್ಮೈ (surface tension ) ಒತ್ತಡ ಏರುಪೇರಾಗದೆ  ಹಾಗೇ ಉಳಿಯುತ್ತದೆ. ಆದ್ದರಿಂದಲೇ ಇದು ನೀರಿನಲ್ಲಿ ಮುಳುಗದೆ ನಡೆಯಲು ಸಾಧ್ಯವಾಗುತ್ತದೆ.
ನೀರಿನಲ್ಲಿರುವ , ಅಥವಾ ನೀರಿಗೆ ಬೀಳುವ ಚಿಕ್ಕಪುಟ್ಟ ಕೀಟಗಳು ಇದರ ಆಹಾರ. ಇರುವೆಯಂತಹ ಚಿಕ್ಕ ಕೀಟಗಳು ನೀರಿಗೆ ಬಿದ್ದಾಗ ಉಂಟಾಗುವ ಅಲೆಗಳನ್ನು ಗ್ರಹಿಸಿ ಅದಿರುವ ದಿಕ್ಕು ಗಾತ್ರಗಳನ್ನು ತಿಳಿದಿಕೊಳ್ಳಬಲ್ಲ ಸಾಮರ್ಥ್ಯ ಇದರ  ಮುಂಗಾಲುಗಳಿಗಿದೆ.  ಕ್ಷಣದಲ್ಲಿ ಆಹಾರಕೀಟದ ಬಳಿ ತಲುಪಿ ಅದರ ಸಾರ ಹೀರುತ್ತದೆ . ಇದಲ್ಲದೆ ತನ್ನದೇ ಜಾತಿಯ ಮರಿಕೀಟಗಳನ್ನು ತಿಂದುಬಿಡುವ ಸ್ವಜಾತಿಭಕ್ಷಕ ಕೂಡ.
ಗಂಡು ಕೀಟ ನೀರಿನಲ್ಲಿ ಅಲೆಗಳ ಮೂಲಕ   ಲೈಂಗಿಕ ಸಂಜ್ಞೆಗಳನ್ನು ಕೊಟ್ಟು ಹೆಣ್ಣು ಕೀಟವನ್ನು ಕೂಡುತ್ತದೆ. ನೀರಿನಲ್ಲಿರುವ ಗಿಡ , ಕಲ್ಲುಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ

ಈ ಕೀಟಗಳು ತನ್ನ ದೇಹವನ್ನು ನೀರಿನಿಂದ ಮೇಲೆತ್ತಿ ಹಿಡಿದು ಕಾಲುಗಳ ಸಹಾಯದಿಂದ ನೀರಿನ ಮೇಲೆ ತೇಲುವುದನ್ನು ನೋಡಿದಾಗ ಪ್ರಕೃತಿಯ ವೈಚಿತ್ರ್ಯಗಳಿಗೆ ತಲೆಬಾಗದಿರಲಾಗುವುದಿಲ್ಲ .

9 comments:

  1. ಸುಂದರ ವಿವರಣೆ..ಕಾಲೇಜ್ ದಿನಗಳಲ್ಲಿ ಹುಳು, ಕೀಟ, ಮುಂತಾದವಗಳ ಬಗ್ಗೆ ಓದಿದಾಗಲು ಈ ಮಟ್ಟದ ತಿಳುವಳಿಕೆ ಪುಸ್ತಕಗಳು ನೀಡಿರಲಿಲ್ಲ..(ಅಥವಾ ಅರಿವಿನ ಮತ್ತ ಕೆಲ ಮಟ್ಟದಲ್ಲಿದ್ದುದು ಕಾರಣವಿರಬಹುದು)..ಸೊಗಸಾಗಿದೆ ನಿಮ್ಮ ಲೇಖನ...ಅಭಿನಂದನೆಗಳು

    ReplyDelete
  2. ಓಹ್.. ಸೊಗಸಾದ ವಿವರಣೆ

    ReplyDelete
  3. ಸುಮಾ....

    ತುಂಬಾ ಕುತೂಹಲಕರ ಮಾಹಿತಿ....

    ಆಶ್ಚರ್ಯವಾಯಿತು .........

    ReplyDelete
  4. ಸುಮ ಮೇಡಮ್,
    ನಾನು ಹಳ್ಳಿಗಳಲ್ಲಿ ಆಗಾಗ ನೋಡಿ ಕುತೂಹಲಗೊಂಡಿದ್ದೆ. ಅದರ ಬಗೆಗಿನ ನಿಮ್ಮ ಮಾಹಿತಿಯನ್ನು ಓದಿ ಮತ್ತಷ್ಟು ಖುಷಿಯಾಯ್ತು..

    ReplyDelete
  5. ತುಂಬಾ ಒಳ್ಳೆಯ ಮಾಹಿತಿ ಮತ್ತು ವಿವರಣೆ.. ಎಷ್ಟೊಂದು ಸಲ ನಮ್ಮಂಥ ಪಾಮರರು ಈ ಥರದ ದೃಶ್ಯಗಳನ್ನು ಕಂಡೂ.. ಅದು ಯಾವ ಕೀಟ/ಪ್ರಾಣಿ/ಪಕ್ಷಿ ಅಂತ ಗುರುತಿಸಲಾಗದೇ ಚಡಪಡಿಸುವುದುಂಟು.. ನಿಮ್ಮ ಲೇಖನ ಓದಿದರೆ ನಮ್ಮ ಜ್ಞಾನ ವೃಧ್ದಿ :)

    ReplyDelete
  6. Good article. A small correction to the information on surface tension of water. Surface tension of water does not change unless it is added with contamination or oil. The surface of water behaving as a membrane is the result of surface tension. This Gerridae takes advantage of its very light weight and hairy structure on its legs to not to disturb the delicate membrane on the top surface of water. While moving on the surface of water, it prefers to lift its leg and put its foot on a new surface instead of dragging on the water surface; this is how it prevents the rupturing of membrane on the surface of water.
    We can even place a small needle on the surface of water with lot of care. This needle is supported on the surface of water due to surface tension. Needle need not have hairy structure.

    ReplyDelete