25 Jan 2013

ಹೀಗೊಂದು ಬಾಳ ಪಯಣ



 ಆತ - ಒಂದು ಸೆಕೆಂಡಿನ ಮೌನವನ್ನೂ ಸಹಿಸದೆ ಪಕ್ಕದಲ್ಲಿನ ಕಲ್ಲನ್ನಾದರೂ ಮಾತನಾಡಿಸಿ ಬಿಡುವ ಚತುರ ಮಾತಿನಮಲ್ಲ.
ಆಕೆ -  ಏನು  ಮಾತನಾಡಲಿ ಎಂದು ಗೊಂದಲಕ್ಕೊಳಗಾಗಿ ಮೌನಕ್ಕೇ ಶರಣಾಗುವ  ಮೌನಗೌರಿ.

ಆತ -  ಮೈಯಲ್ಲಿ ಪಾದರಸವೇ ಹರಿಯುತ್ತಿದೆಯೇನೋ ಎಂಬಂತೆ ಚುರುಕು
ಆಕೆ - ಮೈಯಲ್ಲಿನ ರಕ್ತವೂ ನಿಧಾವಾಗಿ ಹರಿಯುತ್ತಿದೆಯೇನೋ ಎಂಬಂತೆ ನಿಧಾನಿ

ಆತ -  ಕಾವ್ಯವನ್ನೇ ಉಸಿರಾಡುವ , ಪ್ರಾಸಬದ್ಧ ಕಾವ್ಯದಲ್ಲೇ ಮಾತನಾಡಬಲ್ಲ ಶಬ್ದಭಂಡಾರ
ಆಕೆ - ಕಾವ್ಯವೆಂದರೆ ಕೆ ಜಿ ಗೆಷ್ಟು ಎನ್ನುವ , ಪ್ರಾಸವೆಂದರೆ ತ್ರಾಸವೆನ್ನುವ ಶಬ್ದಜಿಪುಣಿ

ಆತ - ಸದಾ ಜನರ ನಡುವೆ ಇರಬಯಸುವ ಜನಾನುರಾಗಿ
ಆಕೆ - ಸಂತೆಯಲ್ಲೂ ಚಿಪ್ಪಿನೊಳಗೆ ಹುದುಗಬಯಸುವ ದಿವ್ಯಏಕಾಂತಪ್ರಿಯೆ

ಆತ - ಬಣ್ಣವೆಂದರೆ ಕೆಂಪು
ಆಕೆ - ಬಣ್ಣವೆಂದರೆ ಅಚ್ಚ ಹಸಿರು
ಹೀಗೆ ಪಟ್ಟಿ ಮಾಡಿದರೆ ಒಂದಕ್ಕೊಂದು ತಾಳೆಯಾಗದ , ವಿಭಿನ್ನ ವ್ಯಕ್ತಿತ್ವದ ಈ ಎರಡು ಜೀವಗಳು ಹದಿನೈದು ವರ್ಷಗಳ ಹಿಂದೆ ಮದುವೆಯೆಂಬ  ಬಂಧನದಲ್ಲಿ ಸಿಲುಕಿದರು . ಮದುವೆಯಾದ ಕಾರಣಕ್ಕೆ ಪ್ರೀತಿಸಿದರು . ಒಬ್ಬರ ಸ್ವಭಾವವನ್ನು ಇನ್ನೊಬ್ಬರು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಬಿಡುತ್ತೇವೆಂಬ ಹುಂಬ ಪ್ರಯತ್ನವನ್ನೂ ಮಾಡಿದರು . ಆ ಪ್ರಯತ್ನದಲ್ಲಿ ಪರಸ್ಪರ ನೋವನ್ನೂ ಉಂಡರು . ಕ್ರಮೇಣ ಇಬ್ಬರಲ್ಲೂ ಇದ್ದ ಸಮಾನ ಆಸಕ್ತಿಗಳ ಅನಾವರಣವಾಯ್ತು . ಅದರ ಕಾರಣದಿಂದ ಹತ್ತಿರವಾದರು . ಆಗ ಪರಸ್ಪರರ ಭಿನ್ನಾಭಿಪ್ರಾಯಗಳನ್ನೂ ವಿಶಾಲ ಮನೋಭಾವದಿಂದ ಸ್ವೀಕರಿಸುವುದನ್ನು ಕಲಿತರು. ಇದು ಪರಸ್ಪರರೆಡೆಗಿನ ಗೌರವ ಹೆಚ್ಚಿಸಿತು . ಭಿನ್ನತೆಯಿದ್ದೂ ಮಧ್ಯದ ಒಂದು ದಾರಿ ಆಯ್ದುಕೊಳ್ಳುವುದನ್ನು ಕಲಿತ ದಿನ ಇಬ್ಬರಲ್ಲೂ ಗೆಳೆತನ ಮೊಳೆಯಿತು. ಬೌದ್ಧಿಕ ಸಾಂಗತ್ಯ ಬೆಳೆಯಿತು . ಆಗ ಹುಟ್ಟಿದ್ದು ನಿಜವಾದ ಪ್ರೀತಿ . ಈ ಪ್ರೀತಿಯಿಂದಾಗಿ  ಒಬ್ಬರು ಇನ್ನೊಬ್ಬರಿಗೆ ಪೂರಕವಾಗಿ  , ಪರಸ್ಪರರ ವ್ಯಕ್ತಿತ್ವ ಬೆಳೆವಣಿಗೆಗೆ ಸಹಕರಿಸುತ್ತಾ ಸಂತಸದಿಂದ ಬಾಳಪಯಣವನ್ನು ಮಾಡುತ್ತಿದ್ದಾರೆ . ಈ ಪಯಣ ಪ್ರಾರಂಭವಾಗಿ ಇಂದಿಗೆ ಹದಿನೈದು ವರ್ಷಗಳು. ಇಂತಹ ಪಯಣಕ್ಕೆ ನಾಂದಿ ಹಾಡಿದ ಹಿರಿಯರಿಗೊಂದು ಆದರಪೂರ್ವಕ ನಮಸ್ಕಾರ :)
 

16 comments:

  1. ಸೂಪರ್ ಸೂಪರ್..ಪ್ರತಿಬಾರಿಯೂ ನಿಮ್ಮ ಲೇಖನಗಳಲ್ಲಿ ಹುಳು, ಕೀಟ, ಸಸ್ಯಗಳು ರಾರಾಜಿಸುತ್ತಿದ್ದವು..ಈ ಲೇಖನ ಮಾನವ ಜೀವಿಯ ಬಗ್ಗೆ..ಮಾನವ ಭಾವಗಳ ಬಗ್ಗೆ ಆಹಾ ಸೊಗಸಾಗಿದೆ..ಅಯಸ್ಕಾಂತದ ಹಾಗೆ ವಿರುದ್ಧ ಗುಣಗಳು ಸೆಳೆತಕ್ಕೆ ಒಳಗಾಗುತ್ತವೆ..ಸಮಾನಗುಣಗಳು ಸೆಳೆತಕ್ಕೆ ಒಳಗಾಗುತ್ತವೆ...ವಿವಾಹಜೀವನದ ಆ ಸಂತಸದ ಹದಿನೈದು ವಸಂತಗಳನ್ನು ದಾಟಿದ ಜೋಡಿಗೆ ಹಾರ್ಧಿಕ ಶುಭಾಶಯಗಳು

    ReplyDelete
  2. ನಿಮಗೊಂದು ಗಟ್ಟಿ ಅಪ್ಪುಗೆ ಸುಮಾ! ಎಷ್ಟು ಚಂದ, ಅರಿತ ಮೇಲೆ ಜೊತೆಯಲಿ ಹೆಜ್ಜೆ ಹಾಕುವುದು!! ಶುಭಾಶಯ ನಿಮ್ಮಿಬ್ಬರಿಗೂ. :)

    ReplyDelete
  3. ನಿಮ್ಮಿಬ್ಬರಿಗಾಗಿ ನನ್ನ ಮೆಚ್ಚಿನ ಈ ಗೀತೆ.

    http://www.youtube.com/watch?v=qyVAHDI0nRg

    ReplyDelete
  4. (ನಿಮ್ಮಬಗ್ಗೆ ನೀವುಗಳೇ ಹೇಳಿಕೊಂಡಿದ್ದು) ಮಜವಾಗಿದೆ. ನಿಮ್ಮ ಬಾಳಪಯಣ ಸಂತೋಷದಲ್ಲೇ ಮುಂದುವರೆಯಲಿ.

    ReplyDelete
  5. ಬಹಳ ಚೆನ್ನಾಗಿದೆ...ಶುಭಾಶಯಗಳು....

    ReplyDelete
  6. ತುಂಬಾ ಇಷ್ಟವಾದ ಚಿಕ್ಕ ಬ್ಲಾಗ್ ಪೋಸ್ಟ್. ಜೀವನದ ಹೊಂದಿಕೆಯ ಬಗೆಗಾಗಲೀ, ಸಂಸಾರದ ಜಂಜಾಟಗಳ ಬಗೆಗಾಗಲೀ ನಾನು ಆಜ್ಞ.
    ಆದರೂ ಕೂಡ ಯಾಕೋ "ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು " ಎಂಬ ಕವಿವಾಣಿ ನೆನಪಾಯ್ತು :) ಬರೆಯುತ್ತಿರಿ.
    ನಿಮಗಿಂತ ಬಹಳ ಚಿಕ್ಕವನು ನಾನು. ಆದರೆ ಶುಭ ಹಾರಿಸಲು ಹಿರಿಯರೇ ಆಗ ಬೇಕೆಂದೇನಿಲ್ಲವಲ್ಲ . ಒಳ್ಳೆಯದಾಗಲಿ.

    ReplyDelete
  7. sundara besugeya bagge sundara baraha :) shubhaashayagalu

    ReplyDelete
  8. Happy Anniversary :-) ಶುಭವಾಗಲಿ....

    ReplyDelete
  9. ತುಂಬಾ ಚೆನ್ನಾಗಿದೆ ಬರೆದಿದ್ದು...ಶುಭಾಶಯಗಳು - ಶ್ವೇತಾ ಹೊಸಬಾಳೆ

    ReplyDelete
  10. ಬಾಳ ಪಯಣವೇ ಹಾಗೆ.ಮೊದಮೊದಲು ಹೊಂದಾಣಿಕೆ ತುಂಬಾ ಕಷ್ಟವೆಂದೆನ್ನಿಸುತ್ತದೆ.ವರುಷಗಳು ಉರುಳಿದಂತೆ ಒಬ್ಬರಿಗೊಬ್ಬರು ಹತ್ತಿರವಾಗುತ್ತಾ ಹೋಗುತ್ತಾರೆ.ನಿಮ್ಮ ಈ ಅನುಭವ ಹಂಚಿಕೊಂಡದ್ದು ಸದ್ಯದ ಸಾಮಾಜಿಕ ವಾತಾವರಣಕ್ಕೆ ಅನುಭವಾಮ್ರತವಾಗಬಲ್ಲುದು!

    ReplyDelete
  11. ಶುಭಾಶಯಗಳು :)

    ReplyDelete
  12. nimma uttama lekhanakkaagi
    dhanyavaadagalu mattu shubhaashayagalu.

    ReplyDelete
  13. ಮೊದಲು wish u happy anniversary ಸುಮಕ್ಕ ..., ತುಂಬಾ ಚೆನ್ನಾಗಿದ್ದು ಬರಹ .., ಆತ ಆಕೆಯಲ್ಲಿನ ಸ್ವಭಾವ ವೈಪರೀತ್ಯನ ಚೂರೂ ಎಡಿಟು , ಡಿಲೀಟ್ ಮಾಡದೆ ನಂಗೂ ಅಪ್ಲೈ ಆಗ್ತು :) ..., ಬಹುಶ ಎಲ್ಲರಿಗೂ ...! ಬಿನ್ನ ಸ್ವಭಾವ ,
    ಬಿನ್ನ ಅಭಿಪ್ರಾಯ .. ಸಹಜ .., ಎಷ್ಟು ಬೇಗ 'ಗಂಡ ಹೆಂಡತಿ ಒಬ್ಬರನ್ನು ಒಬ್ಬರು chenge ಮಾಡ ಪ್ರಯತ್ನ ಬಿಟ್ಟು .. ಅವರವರು ಇದ್ದ ಹಾಗೆ ಒಪ್ಪಿಕೊಂಡು' .. .., ವಿಶಾಲ ದೃಷ್ಟಿಕೋನ ಬೆಳಿಸಿಕೊಳ್ಳುತ್ತಾರೋ ಅಲ್ಲಿಂದ ಅವರು ಅಂತರಂಗವಾಗಿ ಬೆಳೆಯಕೆ ಶುರುವಾಗ್ತ ....

    ReplyDelete
  14. ಓಹ್...ಸ್ವಲ್ಪ ತಡವಾಗಿ..ಆದ್ರೆ ಹೃದಯಪೂರ್ವಕ ಹಾರೈಕೆ ನಿಮಗೆ...
    ಈ ಬರಹವನ್ನು ಓದಿದ ಮೇಲೆ ವಿಶೇಷ ಲೇಖನವೊಂದಕ್ಕೆ ಕೋಟ್ ತಗೊಳ್ಳಬೇಕು ನಿಮ್ಮದು ಅನ್ನಿಸ್ತು...ಮೇಲ್ ಮಾಡ್ತೇನೆ ನೋಡಿ ಸುಮಾ ಮೇಡಮ್. ಹಾಗೇನೇ ನನಗೊಮ್ಮೆ ಬಿಡುವಾಗಿದ್ದಾಗ ಕರೆ ಮಾಡಿ ದಯವಿಟ್ಟು...

    -ಸಹ್ಯಾದ್ರಿ ನಾಗರಾಜ್(8722631300)

    ReplyDelete
  15. thumba chenagide, heege madve adorella obbarannobbaru thilkondu jotheyadre yava jagala, divorce yavdu baralla, nanu nimaginna chikkavalu ashirvada madakkagalla, adre a devru nimna kone varegu heege chenagi jodiyagiri antha a devrige prarthiskotini.

    ReplyDelete
  16. ನಿಮ್ಮ ಒಡನಾಡಿ ಬಾಂಧವ್ಯ ಪ್ರೇರಕ ವೆನಿಸುವ ಮನದ ನಿಜದ ಮಾತು.. ಹೊಸ ಅರ್ಥೈಸುವಿಕೆಯೊಳಗೆ ನನ್ನ ಜೀವನವನ್ನೂ ಹೀಗೆ ಕಂಡುಕೊಂಡೆ..:) ಸುಮಾ ತುಂಬಾ ಚೆನ್ನಾಗಿದೆ..

    ReplyDelete