6 Mar 2018

Megachile rotundata - ಎಲೆ ಕೊರಕ ಜೇನುನೊಣ.


ಎಲೆಗಳನ್ನು ವೃತ್ತಾಕಾರವಾಗಿ ಕೊರೆಯುತ್ತವೆಯಾದ್ದರಿಂದ ಈ ಹೆಸರು. ಹೀಗೆ ಕೊರೆದ ಎಲೆಗಳನ್ನು ಇವು ಗೂಡು ಕಟ್ಟಲು ಬಳಸುತ್ತವೆ. ಯಾವುದೇ ಚಿಕ್ಕ ಕೊಳವೆಯಂತಹ ಬಿರುಕಿನಲ್ಲಿ ಈ ಎಲೆಗಳನನ್ನು ಓರಣವಾಗಿ ಮಡಚಿ ಆವರಣವನ್ನಾಗಿಸಿ ಗೂಡು ಕಟ್ಟಿ ಅದರೊಳಗೆ ಮೊಟ್ಟೆಗಳನ್ನಿಡುತ್ತವೆ.
ಅಂಟಾರ್ಟಿಕಾವನ್ನು ಬಿಟ್ಟು ಪ್ರಪಂಚದ ಎಲ್ಲ ಕಡೆ ಈಗ ಇವು ಕಂಡುಬರುತ್ತವೆ ಎನ್ನುತ್ತಾರೆ.


ಸಾಮಾನ್ಯವಾಗಿ ಜೇನುನೊಣವೆಂದರೆ ಒಂದು ಗುಂಪಿನಲ್ಲಿ ವಾಸಿಸುವ ಜೀವಿಗಳೆಂದು ಅಂದುಕೊಂಡುಬಿಡುತ್ತೇವೆ. ಆದರೆ ಒಂಟೊಂಟಿಯಾಗಿ ವಾಸಿಸುವ ಜೇನುನೊಣಗಳೂ ಇವೆ. ಇಂತಹ ಜೇನುನೊಣಗಳು ಜೇನುತುಪ್ಪವನ್ನು ಉತ್ಪಾದಿಸುವುದು ಕಡಿಮೆ, ಆದರೆ ಅನೇಕ ಸಸ್ಯಗಳ ಪರಾಗಸ್ಪರ್ಶಕ್ರಿಯೆ ನಡೆಸುತ್ತವೆಯಾದ್ದರಿಂದ ಪ್ರಾಕೃತಿಕವಾಗಿ ತುಂಬಾ ಮುಖ್ಯ ಜೀವಿಗಳಾಗಿವೆ. ಎಲೆ ಕೊರಕ ಜೇನು ನೊಣ ಕೂಡ ಒಂಟಿಯಾಗಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಗಳನ್ನು ಬೆಳೆಸುತ್ತದೆ. 



ಮಕರಂದ ಮುಖ್ಯ ಆಹಾರವಾದರೂ, ಚಿಕ್ಕ ಪುಟ್ಟ ಕೀಟಗಳನ್ನೂ ತಿನ್ನುತ್ತವೆ.
ಪ್ರತಿಯೊಂದು ಜೇನೂ ಅದಕ್ಕೇ ವಿಶಿಷ್ಟವಾದ ರಾಸಾಯನಿಕವೊಂದನ್ನು ಗೂಡಿನಲ್ಲಿ ಲೇಪಿಸಿರುತ್ತವೆ. ಈ ರಾಸಾಯನಿಕದ ಪರಿಮಳದ ಸಹಾಯದಿಂದ ಅವು ತಮ್ಮ ಗೂಡನ್ನು ಗುರುತಿಸುತ್ತವೆ.
ಬೇರೆ ದೇಶಗಳಲ್ಲಿ ರೈತರು ತಮ್ಮ ಬೆಳೆಗಳ ಪರಾಗಸ್ಪರ್ಶ ಕ್ರಿಯೆ ಚೆನ್ನಾಗಿರುತ್ತದೆಂದು ಈ ಹುಳುಗಳನ್ನು ಸಾಕುತ್ತಾರೆ.
 https://www.youtube.com/watch?v=CPzgR-MVnxQಈ ವೀಡಿಯೋದಲ್ಲಿ ಇವುಗಳ ಗೂಡಿನ ಬಗ್ಗೆ ಮಹಿತಿ ಇದೆ.

 ಚಿತ್ರ ಕೃಪೆ - ಸುರೇಖಾ ಭೀಮಕುಳಿ.

4 comments:

  1. ಸುಂದರ ಲೇಖನ.

    ReplyDelete
  2. I'd like to find out more? I'd care to find out more details.

    ReplyDelete