26 Jul 2010

ಮನಮುಟ್ಟದ ಕವಲು

ಭೈರಪ್ಪನವರ ಕಾದಂಬರಿಯೆಂದರೆ ಏನೋ ಒಂದು ಹೊಸ ವಿಷಯದ ನಿರೀಕ್ಷೆ ಸಹಜ. ಆದರೆ "ಕವಲು " ಅವರ ಉಳಿದ ಕಾದಂಬರಿಗಳ ಮಟ್ಟ ಮುಟ್ಟುವುದಿಲ್ಲ.
ವರದಕ್ಷಿಣೆ ಕಾನೂನುನನ್ನು ದುರುಪಯೋಗ ಪಡಿಸಿಕೊಂಡು ಅತ್ತೆಯನ್ನು ಜೈಲಿಗೆ ಕಳಿಸುವ ಸೊಸೆ ..... ಮದುವೆಯಿಂದ ಪ್ರಾರಂಭಿಸಿ ಡೈವೊರ್ಸ ನೀಡುವವರೆಗೂ ಪ್ರತಿ ಹಂತದಲ್ಲೂ ಕಾನೂನನ್ನು ಮುಂದಿಟ್ಟುಕೊಂಡು ಗಂಡನನ್ನು ಬೆದರಿಸುವ ಹೆಂಡತಿ ..... ತಾಯಿಯ ಅನೈತಿಕ ಸಂಭಂದದಿಂದ ಗೊಂದಲಕ್ಕೊಳಗಾಗುವ ಮಕ್ಕಳು ...ತಮ್ಮ ತೆವಲಿನಿಂದ ಅನೈತಿಕ ಕೆಲಸ ಮಾಡಿ ನಂತರ ಶೋಷಿತರಾಗುವ ಗಂಡು ಹಾಗು ಹೆಣ್ಣು ಪಾತ್ರಗಳು......ಕುಟುಂಬ ಪ್ರೀತಿಗಾಗಿ ಹಾತೊರೆಯುವ ಮಕ್ಕಳು..... ಇವೆಲ್ಲವೂ ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ನೋಟ.

ಅವರು ಈ ಕಾದಂಬರಿಯ ಮೂಲಕ ಹೇಳಹೊರಟಿರುವ ವಿಚಾರವೇನೋ ತುಂಬ ಗಹನವಾದದ್ದೆ.
  • ಸ್ತ್ರೀ ಶೋಷಣೆ ತಡೆಗಟ್ಟಲೆಂದು ಜಾರಿಯಲ್ಲಿರುವ ಅನೇಕ ಕಾನೂನುಗಳ ದುರುಪಯೋಗ
  • ಮುಕ್ತ ಲೈಂಗಿಕತೆಯತ್ತ ಆಕರ್ಷಿತವಾಗುತ್ತಿರುವ ಸಮಾಜ ಮತ್ತು ಅದರಿಂದ ಕುಟುಂಬ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮ
  • ವಿದ್ಯಾವಂತರೆನಿಸಿಕೊಂಡವರ ಪಾಶ್ಚಿಮಾತ್ಯ ಅಂಧಾನುಕರಣೆ
  • ಮಹಿಳಾ ಸಮಾನತೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಅವನತಿಯತ್ತ ಸಾಗುತ್ತಿರುವ ವಿದ್ಯಾವಂತ ಹೆಣ್ಣುಮಕ್ಕಳು
ಇಂತಹ ಗಹನವಾದ ವಿಚಾರಗಳನ್ನಿಟ್ಟುಕೊಂಡು ಸಾಗುವ ಕತೆ ಈ ವಿಷಯದ ಆಳಕ್ಕಿಳಿಯುವಲ್ಲಿ ಸೋಲುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಇಂತಹ ಪಿಡುಗನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಭೈರಪ್ಪನವರು ಸೋತಿದ್ದಾರೆಂದೇ ನನಗನ್ನಿಸುತ್ತದೆ.

ನಾನು ಗಮನಿಸಿದಂತೆ ಈ ಕಾದಂಬರಿಯಲ್ಲಿ ಕೆಲವೊಂದು ಅಸಮರ್ಪಕ ವಿಚಾರಗಳಿವೆ.
  • ಮಹಿಳವಾದಿಗಳೆಲ್ಲರೂ ಮನೆಮುರುಕರು , ಅವಕಾಶವಾದಿಗಳು , ಮುಕ್ತ ಲೈಂಗಿಕತೆಯ ಪ್ರತಿಪಾದಕರು ಎಂಬಂತೆ ಚಿತ್ರಿಸಿರುವುದು.
  • ಕುಂಕುಮ , ಬಳೆ ,ಹೂ , ಸೀರೆಗಳೇ ಹೆಣ್ತನದ ಪ್ರತೀಕವೆಂದು ಬಿಂಬಿಸಿರುವುದು . ಸಂದರ್ಭಕ್ಕನುಸಾರವಾಗಿ ಉಡುಪು ಧರಿಸುವ ಇಂದಿನ ಮಹಿಳೆಯ ಮನೋಭಾವದ ಅರಿವಿಲ್ಲ. ಸೀರೆ ಧರಿಸಿದವರೆಲ್ಲ ಒಳ್ಳೆಯವರಾಗಲು... ಆಧುನಿಕ ಉಡುಪು ಧರಿಸುವವರೆಲ್ಲ ಕೆಟ್ಟವರಾಗಲು ಸಾದ್ಯವಿಲ್ಲ ಅಲ್ಲವೆ?
  • ಒಂದೇ ವಿಧದ ಪಾತ್ರಗಳು... ಕಥೆಯ ಪುನರಾವರ್ತನೆ ... ಅತಿ ಎನ್ನಿಸುವಷ್ಟು ಅನೈತಿಕ ಸಂಭಂದಗಳ ವಿವರಣೆ ಬೇಸರ ಹುಟ್ಟಿಸುತ್ತದೆ.
  • ಹೆಚ್ಚಿನ ವಿದ್ಯಾವಂತ ಹೆಣ್ಣುಮಕ್ಕಳು ಅಹಂಕಾರಿಗಳೆಂಬಂತೆ ಚಿತ್ರಿಸಿರುವುದು .
ಒಟ್ಟಿನಲ್ಲಿ ಕವಲು ನನಗಂತೂ ಒಳ್ಳೆಯ ಕಾದಂಬರಿ ಓದುವಾಗಿನ ಸಂತೋಷ ನೀಡಲಿಲ್ಲ.

22 comments:

  1. ಬೈರಪ್ಪನವರ ಕೆಲವು ಕಾದಂಬರಿ ಓದಿದ್ದೇನೆ..... ಇದರ ಬಗ್ಗೆ ಕೇಳಿದ್ದೆ..... ನೀವು ಹೇಳಿದ ಅಸಮರ್ಪಕ ವಿಚಾರಗಳನ್ನು( ಕಾದಂಬರಿಯ ಸಂಗತಿ ಬಿಟ್ಟು""# ಮಹಿಳವಾದಿಗಳೆಲ್ಲರೂ ಮನೆಮುರುಕರು , ಅವಕಾಶವಾದಿಗಳು , ಮುಕ್ತ ಲೈಂಗಿಕತೆಯ ಪ್ರತಿಪಾದಕರು ಎಂಬಂತೆ ಚಿತ್ರಿಸಿರುವುದು.
    # ಕುಂಕುಮ , ಬಳೆ ,ಹೂ , ಸೀರೆಗಳೇ ಹೆಣ್ತನದ ಪ್ರತೀಕವೆಂದು ಬಿಂಬಿಸಿರುವುದು . ಸಂದರ್ಭಕ್ಕನುಸಾರವಾಗಿ ಉಡುಪು ಧರಿಸುವ ಇಂದಿನ ಮಹಿಳೆಯ ಮನೋಭಾವದ ಅರಿವಿಲ್ಲ. ಸೀರೆ ಧರಿಸಿದವರೆಲ್ಲ ಒಳ್ಳೆಯವರಾಗಲು... ಆಧುನಿಕ ಉಡುಪು ಧರಿಸುವವರೆಲ್ಲ ಕೆಟ್ಟವರಾಗಲು ಸಾದ್ಯವಿಲ್ಲ ಅಲ್ಲವೆ? ) ನಾನು ನೂರು ಪ್ರತಿಶತ ಒಪ್ಪುತ್ತೇನೆ..... ಒಳ್ಳೆಯ ವಿಮರ್ಶೆ ಮಾಡಿದ್ದೀರಾ ಮೇಡಂ.....ಧನ್ಯವಾದ....

    ReplyDelete
  2. ಸುಮಾ ಮೇಡಂ,
    ಭೈರಪ್ಪನವರ ಕಾದಂಬರಿಯೆಂದರೆ ಅಲ್ಲಿ ನಿರೀಕ್ಷೆ ಇರುವುದು ಸಹಜ, ನಾನಿನ್ನೂ ಆ ಕಾದಂಬರಿ ಓದಿಲ್ಲ, ಆದರಿಂದ ಅದರ ಬಗ್ಗೆ ಏನೂ ಹೇಳೋದಿಲ್ಲ!
    ಆದರೂ ನಂಬಿಕೆಯಿದೆ.

    ReplyDelete
  3. ಕಾದ೦ಬರಿ ಓದುವ ಮುನ್ನ ವಿಮರ್ಶೆಯನ್ನು ಓದುವುದು ನನ್ನ ಹವ್ಯಾಸ. ಮತ್ತಷ್ಟು ಕುತೂಹಲ ಮೂಡಿಸುವತ್ತ ನಿಮ್ಮ ಅನಿಸಿಕೆ(ವಿಮರ್ಶೆ)ನನ್ನನ್ನು ಪ್ರೇರಿಪಿಸಿದೆ.
    ವ೦ದನೆಗಳು.

    ಅನ೦ತ್

    ReplyDelete
  4. ಸುಮಾ,
    ‘ಕವಲು’ ಕಾದಂಬರಿಯ ಬಗೆಗೆ ಒಳ್ಳೆಯ ಎಚ್ಚರಿಕೆ ಕೊಟ್ಟಿದ್ದೀರಿ. ಈ ಕಾದಂಬರಿಯನ್ನು ಓದುವ ಅವಶ್ಯಕತೆ ಇಲ್ಲ ಎಂದು ಭಾಸವಾಗುತ್ತದೆ.

    ReplyDelete
  5. ಕಾದಂಬರಿ ಇನ್ನು ಪೂರ್ತಿ ಓದಿಲ್ಲ ಆದರು ಭೈರಪ್ಪನವರ ಕಾದಂಬರಿ ನೀರಿಕ್ಷೆಗಿಂತ ಕವಲು ಸ್ವಲ್ಪ ಕಡಿಮೆ ಮಟ್ಟಕ್ಕೆ ಇದೆ ಅಂತ ನನಗೂ ಅನ್ನಿಸ್ತ ಇದೆ.
    ಆದರೂ ಕವಲು ಹಲವು ಮುದ್ರಣಗಳನ್ನು ಈಗಾಗಲೇ ಕಂಡಿದೆ, ಅದಕ್ಕೆ ಕಾರಣ ಅವರ ಹಳೆಯ ಬರಹಗಳು ಇರಬಹುದು ಅಷ್ಟೆ.

    ನಿಮ್ಮ ವಿಮರ್ಷೆ ಚೆನ್ನಾಗಿದೆ.

    ReplyDelete
  6. ಸುಮಕ್ಕ,
    ನಿನ್ ಹಂಗೆ ನಾನು ಸಕತ್ ನೀರೀಕ್ಷೆ ಇಟ್ಕೊಂಡು ಕವಲು ಕೊಂಡುಕೊಂಡೆ. ಆದ್ರೆ ಸುಮಾರು 30 ಪುಟಗಳನ್ನು ಓದೋತನಕ ನನಗೆ ಸಾಕ್-ಸಾಕ್ ಆಗೋಯ್ತು. ಕಾರಣ ಬಹಳ ಇದೆ.

    ಯಾರಿಗಾದರು ಕವಲು ( ಬೈರಪ್ಪನವರ so called ಅಭಿಮಾನಿಗಳ ) ಎದುರು ಹೇಳಿದರೆ , ಬೈನರಪ್ಪನವರ ಬಗ್ಗೆ ಮಾತಾಡಬೇಡ. ಅವರು ಏನು ಮಾಡಿದರು ಚಿಂತನೆ ಮಾಡಿಯೇ ಮಾಡುತ್ತಾರೆ ಅಂತೆ!..ಅರೆ ! ಮೇ ಬಿ. ನಾನು ಹೇಳುತ್ತಿರುವುದು ಕಾದಂಬರಿ ಬಗ್ಗೆ. ಅವರ ಹಳೆ ಕಾದಂಬರಿಗಳನ್ನು ಇಷ್ಟ ಪಟ್ಟ ನನಗೆ ಕವಲು ಇಷ್ಟ ಆಗಿಲ್ಲ ಅಂದ್ರೆ ಅದಕೂ ಇವರ ಕೊಂಕು.ಅಭಿಮಾನ ಇದ್ದ ಮಾತ್ರಕ್ಕೆ,ಅವರು ಏನು ಬರೆದರೂ ಸಹಿಸಿಕೊಳ್ಳೋದು ಕಷ್ಟ.
    ಇಷ್ಟೆಲ್ಲಾ ಚಿಂತನೆ ಮಾಡುವವರಿಗೆ " protestent "ಅನ್ನೋ ಒಂದು ಜಾತಿ ಇದೆ. ಆ ಜಾತಿಯಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಯಾರೂ, ಕೈಗೆ ಬಳೆಯಾಗಲಿ, ಕುಂಕುಮವಾಗಲಿ ಹಚ್ಚುವುದಿಲ್ಲ. ಅಷ್ಟೇ ಏಕೆ ಅವರು ಮದುವೆಗಳಲ್ಲಿಯೂ ಒಡವೆ ಅಂತ ಏನು ಹಾಕಿಕೊಳ್ಳಲ್ಲ. ಹೀಗಿದ್ದಾಗ- " ಇದೊಂದು ಸಮಕಾಲಿನ ಕಾದಂಬರಿ" ಎಂದು ಹೇಳಿಕೊಳ್ಳುವವರಿಗೆ ಅರ್ಥವಾಗಿಲ್ಲವೇ ಅಥವ ಗೊತ್ತಿಲ್ವೆ ಎಂಬ ವಿಚಾರ ಬರುತ್ತದೆ. ಅಥವ ಇದು ಕೇವಲ ಹಿಂದೂ ಧರ್ಮದ ಹುಡುಗಿಯರಿಗೆ ಅನ್ವಯಿಸಿದ್ದ?
    ಇಷ್ಟೊಂದು ಖ್ಯಾತಿ ಪಡೆದ ಲೇಖಕರು ,ಅಂತಾದ ಮೇಲೆ ಜನರಿಗೆ ತಾವು ಹೇಳುವ ವಿಚಾರಗಳನ್ನು ಹೇಳುವ ರೀತಿಯಲ್ಲಿ ಸ್ವಚ್ಛವಾಗಿ ಹೇಳಬೇಕು. ಕಾದಂಬರಿ ಪೂರ್ತಿ ಬಹಳ ಅಸಹ್ಯ ಅನಿಸುತ್ತೆ. ಗಂಡು ಹೆಣ್ಣಿನ ಸಂಭಂದ ಎಷ್ಟೇ common ಆಗಿದ್ದರೂ ಕೂಡ, ಮದುವೆ ಅನ್ನುವ ಒಂದು ಚೌಕಟ್ಟಿನಲ್ಲಿ ನೀಯತ್ತಾಗಿ ಒಬ್ಬರೊಂದಿಗೆ (ಗಂಡ) ಲೈಂಗಿಕ ಸಂಪರ್ಕ ಇಟ್ಟುಕೊಂಡು ಜೀವನ ಮಾಡುವ ಸ್ತ್ರಿವಾದಿಗಳೇ ಇಲ್ಲವೆ? ಗಂಡು ಹೆಣ್ಣು ಸೇರಿದಲ್ಲಿ sex ಬಿಟ್ಟು ಇನ್ನೇನು ಸಾದ್ಯನೇ ಇಲ್ಲವಾ ಅನ್ನ್ನಿಸಿ ಬಿಡುತ್ತದೆ.ಅಥವ ನಾನೇ ತಪ್ಪಾಗಿ ತಿಳಿದುಕೊಂಡೆನೋ !!! ?
    (ಇದು ನನ್ನ ಸ್ವಂತ ಅಭಿಪ್ರಾಯ. ನನ್ನ comment ಗೆ ಯಾವುದೇ ಚರ್ಚೆಯನ್ನು ನಾನು ಸಹಿಸೋಲ್ಲ. )

    ReplyDelete
  7. ಅರ್ಥಪೂರ್ಣ ವಿಮರ್ಶೆ.
    ನಿಮ್ಮ ಅಭಿಮತ ನೂರಕ್ಕೆ ನೂರು ಸರಿಯಾಗಿದೆ.
    ಅಭಿನಂದನೆಗಳು.

    ReplyDelete
  8. ಓದಿಯೇ ತಿಳಿಯಬೇಕು

    ReplyDelete
  9. I have not read any of Bairappa's Novels, but what ever inapropriate points you have mentioned, I completely agree.

    I think i dont need to read this Novel "KAvalu" after reading you review.

    ReplyDelete
  10. ನಾನೂ ಓದೋದಿಲ್ಲ .. !!

    ReplyDelete
  11. yes!! kavalu was a damp squib
    malathi S

    ReplyDelete
  12. ಕವಲು ನಾನು ಓದಿದೆ! ಹತ್ತು ಹಲವಾರು ವಿಷಯಗಳನ್ನೂ ಒಟ್ಟಿಗೆ ಹಾಕಿಕೊಂಡು, ಗೋಜಲು ಮಾಡಿಕೊಂಡು, ಯಾವದನ್ನು ಸಮರ್ಪಕವಾಗಿ ಹೇಳದೆ, ಕೆಲವೊಂದು ಪಾತ್ರಗಳನ್ನೂ ಅತೀ ಕೀಳಾಗಿ ನಿರೂಪಿಸಿ(ಇಂತಾ ಪಾತ್ರಗಳು ಅಧುನಿಕ ಓದಿದ ಮಹಿಳೆಗೆ ಸಾಮಾನ್ಯವಾಗಿ ಅನ್ವಯಿಸುವ ಅಪಾಯದ ಮಟ್ಟಿತ್ತಿನಲ್ಲಿ) ಕವಲಿನಲ್ಲಿ ಭೈರಪ್ಪನವರು ನಿಂತಿದ್ದಾರೆನಿಸಿತು.
    ತಮ್ಮ ವಿಮರ್ಶೆಯು ನನ್ನದೂ ಸಹಾ!!
    ಅವರ ಧರ್ಮಶ್ರೀ, ವಂಶವೃಕ್ಷ, ದಾಟು, ತಬ್ಬಲಿಯು ನೀನಾದೆ ಮಗನೆ, ಗ್ರಹಣ, ನಿರಾಕರಣ, ಗ್ರಹಭಂಗ ಓದಿದವರಿಗೆ ಆವರಣ ಮತ್ತು ಕವಲು ಓದಿದ ಮೇಲೆ ಭೈರಪ್ಪನವರದ ಈ ಕೃತಿ ಎನಿಸುವಷ್ಟ್ತರ ಮಟ್ಟಿಗೆ ಇವು ವಿಪರ್ಯಾಸ ಹೊಂದಿವೆ.

    ReplyDelete
  13. ಸುಮ,

    ಕವಲು ಓದಿ ಮುಗಿಸಿದ ಮೇಲೆ ನನಗೂ ನಿಮ್ಮ ಹಾಗೇ ಅನಿಸಿತು...ಇದೊಂದು ಮನಮುಟ್ಟದ ಕಾದಂಬರಿ ಎಂದು. ಬಹುಶಃ ಬಹು ನಿರೀಕ್ಷೆ ಇಟ್ಟುಕೊಂಡು ಓದಿದ್ದಕ್ಕೇ ಆಗಿರಬೇಕು. ಆದರೆ ಒಂದು ಸತ್ಯ... ಇಳಾ, ಮಂಗಳ, ಮಾಲಾ, ಚಿತ್ರ ಅಂತಹ ಮಹಿಳೆಯರು ಇಂದು ಹೆಚ್ಚಾಗಿರುವುದು ಸತ್ಯ. ಆದರೆ ಇದೇ ಸಮಕಾಲೀನತೆಯ ಮುಖವಲ್ಲ. ಇದೊಂದು ಭಾಗವಷ್ಟೇ. ಕೇವಲ ಒಂದು ಭಾಗ ತೆಗೆದುಕೊಂಡು ಇಡೀ ಚಿತ್ರಣ ನೀಡ ಹೊರಟಿದ್ದೇ ಇದರ ಸೋಲಿಗೆ ಕಾರಣವಾಗಿರಬಹುದು. ಉತ್ತಮ ವಿಮರ್ಶೆ.

    ReplyDelete
  14. ಮನಮುಟ್ಟದ ಕವಲು- title ishta aaythu:-)

    ReplyDelete
  15. ಹೌದು...ಕವಲು ಎಷ್ಟು ಜನ ಓದಿದ್ದೀರಿ..? ಓದಿಲ್ಲದೇ ವಿಮರ್ಶೆ (ಕಾದಂಬರಿ ಬಗ್ಗೆ) ಮಾಡೊದು ತಪ್ಪು...ಹಾಗಂದ ಮಾತ್ರಕ್ಕೆ sample ಆಧಾರದ ಮೇಲೆ generalization ಸಹಾ ತಪ್ಪು...ಇದು ಭೈರಪ್ಪನವರ ಕಾದಂಬರಿಗೇ ಅಲ್ಲ ಎಲ್ಲ ವಿಮರ್ಶೆಗಳಿಗೂ ಅನ್ವಯಿಸುತ್ತೆ...ಸುಮಾವ್ರು ಹೇಳಿದ ಮಾತು ಅವರ ಅನಿಸಿಕೆ, ಓದಿ ನಿಮ್ಮ ಅಭಿಮತ ಕೊಡುವುದು ನಿಮ್ಮ ಅನಿಸಿಕೆ...
    ಎಲ್ಲದಕ್ಕೂ ಇದು ನನ್ನ ಅನಿಸಿಕೆ...ಏನಂತೀರಿ...

    ReplyDelete
  16. ಸುಮಾ ಮೇಡಮ್,

    ಕವಲು ಓದಬೇಕೆಂದುಕೊಂಡಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿದ ಮೇಲು ಓದಿದ ಮೇಲೆ ಏನನ್ನಿಸುತ್ತದೋ ನೋಡಬೇಕು...ಓದಿ ಉತ್ತರಿಸುತ್ತೇನೆ.

    ReplyDelete
  17. ma'am, I can understand why you people dislike his work.. but whatever he tried to say is truth, this is contemporary issue which needs to be discussed.

    ReplyDelete
  18. ಕವಲು ನನಗೂ ನಿರಾಸೆ ಹುಟ್ಟಿಸಿತು. ನೆನಪಲ್ಲಿ ಉಳಿಯುವಂತ ಕಾದಂಬರಿಯಲ್ಲ.

    ReplyDelete
  19. suma avare,

    nimma blog inde nodide... nimma baraha tumba hidisitu :)

    mattinnu 'kavalu'....odida nantara tilidu bandaddenendare yavudo ondu hidutva athava RSS dhoraneya kurudatvadalli bhairappa mulugihogiddare mattu adara ondu vaipareetya ee kadambariyaagi hutti bandide endu!

    ReplyDelete
  20. ನನಗೆ ಭೈರಪ್ಪನವರ ಕಾದಂಬರಿಗಳೆಂದರೆ ಇಷ್ಟ. ಆದರೆ ನೀವೆಂದಂತೆ, "ಕವಲು" ನನ್ನ ಮನವನ್ನೂ ಮುಟ್ಟಲಿಲ್ಲ.

    ReplyDelete