3 Aug 2010

ಭೂಮಿಯ ಮೇಲಿನ ಯಶಸ್ವಿ ಜೀವಿಗಳೆಂದರೆ ಕೀಟಗಳು. ಅದು ಮರಳುಗಾಡಿರಲಿ , ಹಿಮಪ್ರದೇಶವಿರಲಿ , ಗೋರಾರಣ್ಯವಿರಲಿ ಅಥವಾ ನಮ್ಮ ನಿಮ್ಮ ಮನೆಯ ಅಡುಗೆ ಮನೆಯ ಮೂಲೆಯೇ ಆಗಿರಲಿ , ತಾವಿರುವ ಪರಿಸರದಲ್ಲೊಂದಾಗಿ ಜೀವಿಸುವ ಕಲೆ ಅವಕ್ಕೆ ಸಿದ್ದಿಸಿದೆ.
ಅನೇಕ ಕೀಟಗಳು ತಮ್ಮ ವಾಸಿಸುವ ಪ್ರದೇಶದಲ್ಲಿನ ವಸ್ತುಗಳಂತೆಯೇ ಕಾಣಿಸುವುದರಿಂದ ಅವಿರುವುದೂ ತಿಳಿಯುವುದಿಲ್ಲ .
ಕಸ ಕಡ್ದಿಗಳ ನಡುವೆ ಇರುವ ಕಡ್ಡಿ ಕೀಟ ಒಣಗಿದ ಕಡ್ಡಿಯಂತಿರುತ್ತದೆ.



ಎಲೆಗಳ ನಡುವೆ ಇರುವ ಎಲೆಕೀಟದ ದೇಹರಚನೆ ಎಲೆಯನ್ನೇ ಹೋಲುತ್ತದೆ . ಅವುಗಳ ಚಲನೆ ಕೂಡ ಎಲೆ ಗಾಳಿಗೆ ಚಲಿಸಿದಂತೆ ಕಾಣಿಸುತ್ತದೆ .

ಇಲ್ಲಿರುವ ಎಲೆ ಕೀಟ ಕರಿಬೇವಿನ ಮರದಲ್ಲಿತ್ತು . ಸಾರಿಗೆಂದು ಅದರ ಎಲೆಗಳನ್ನು ಕಿತ್ತಾಗ ಜೊತೆಗೇ ಇದೂ ನನ್ನ ಅಡುಗೇ ಮನೆ ಸೇರಿತು . ಇನ್ನು ಇವಳು ತನ್ನನ್ನೂ ಸೇರಿಸಿ ಸಾರು ಮಾಡಿದರೆ ಎಂಬ ಗಾಭರಿಯಲ್ಲಿ ಅದು ಓಡುವಾಗ ನನ್ನ ಕ್ಯಾಮರಾಕ್ಕೆ ಸೆರೆ ಸಿಕ್ಕಿತು .


10 comments:

  1. ಸುಮಾ ಮೇಡಂ,
    ಉತ್ತಮ ಮಾಹಿತಿ, ಚಂದದ ಚಿತ್ರಗಳು,
    ಮಲೆನಾಡಿನಲ್ಲಿ ಇಂತಹ ಅದೆಷ್ಟೋ ಕೀಟಗಳು ಕಂಡರೂ ಕಾಣದಂತೆ ಇರುತ್ತವೆ ಆಲ್ವಾ?

    ReplyDelete
  2. ಸುಮಾ...

    ಇದು ನಮ್ಮಲ್ಲಿ ಎಲೆ ಶೆಟ್ಟಿ ಅನ್ನುತ್ತೇವೆ...

    ಮುಖನೋಡಿದರೆ "ಹಾರ್ಟ್" ಶೇಪ್ ಇರುತ್ತದೆ.. ಇದು ಚಿಟ್ಟೆ ಹಿಡಿಯುವದ್ದನ್ನು ನನ್ನ ಕ್ಯಾಮರ ಕಣ್ಣಲ್ಲಿ ಹಿಡಿದ ಸಂದರ್ಭ ಜೀವನದಲ್ಲಿ ಮರೆಯಲಾರೆ...

    ಇದರ ಫೋಟೊ ತೆಗೆಯುವದು ಬಹಳ ಕಷ್ಟ..
    ಟಣ್ಣನೆ ಜಿಗಿದು ಬಿಡುತ್ತದೆ !!

    ಚಂದದ ಫೋಟೊಗಳಿಗೆ ಅಭಿನಂದನೆಗಳು...

    ReplyDelete
  3. ಸುಮಾ ಮೇಡಮ್,
    ನಾನೂ ಸಹ ಸಸ್ಯದಂತೆಯೇ ಕಾಣುವ ಕೀಟವೊಂದನ್ನು ಗುರುತಿಸಲಾರದೇ ಹೋಗಿದ್ದೆ. ಒಳ್ಳೆಯ ಚಿತ್ರಗಳನ್ನು ಹಾಗು ಮಾಹಿತಿಯನ್ನು ನೀಡಿದ್ದೀರಿ.

    ReplyDelete
  4. ಚೆಂದದ ಚಿತ್ರಗಳು! ಸಧ್ಯ ಸಾರನ್ನು ಸೇರಿಲ್ಲವಲ್ಲ ಎಲೆಕೀಟ!!!

    ReplyDelete
  5. ಚಿತ್ರ ಮತ್ತು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  6. ಚಿತ್ರ ಮತ್ತು ಮಾಹಿತಿಯ ನಿರೂಪಣೆಗೆ ಧನ್ಯವಾದಗಳು

    ಅನ೦ತ್

    ReplyDelete
  7. ಪ್ರಕೃತಿ ವೈಚಿತ್ರ್ಯದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ

    ReplyDelete
  8. naanu tumbaa sala noDiddene.. aadre photo tegeyalu aagiralilla.....

    ReplyDelete
  9. chitragalu mattu lekhana eradu chennagide madam :)

    ReplyDelete
  10. ಸ್ವಾಭಾವಿಕ ಆಯ್ಕೆ :)
    ಮನೆ ಹತ್ರಾನೇ ಎಷ್ಟೊಂದೆಲ್ಲಾ ಕೌತುಕ ನೋಡ್ತೀರ!!

    ReplyDelete