ಇಂಬಳಗಳ ವಿಶಿಷ್ಟ ಚಲನೆ
ನೀರಿನ ಪಸೆ ಹೆಚ್ಚಿರುವ , ಹಸಿರು ಹುಲ್ಲುಗಳು ಬೆಳೆವ ಪ್ರದೇಶ , ತೋಟ , ಗದ್ದೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಪುಟ್ಟ ಜೀವಿ ರಕ್ತಾಹಾರಿ ! ಜಾನುವಾರು, ಮಾನವರ ರಕ್ತ ಹೀರಿ ಬದುಕುತ್ತವೆ.
ಕಡ್ಡಿಯಂತಿರುವ ಇಂಬಳ ರಕ್ತ ಹೀರುವ ಮೊದಲು
ಇಂಬಳಗಳ ದೇಹ ಕಡ್ಡಿಯಂತಿದ್ದು ದೇಹದ ಎರಡೂ ಕಡೆಗಳಲ್ಲಿ ವೃತ್ತಾಕಾರದ ಸಕ್ಕರ್ ಎಂಬ ಅ೦ಗಗಳಿವೆ . ಈ ಸಕ್ಕರ್ ಗಳು ಅವು ಚಲಿಸಲು ಮತ್ತು ಹೋಸ್ಟ್ ದೇಹದಿಂದ ರಕ್ತ ಹೀರಲು ಸಹಾಯಕವಾಗಿವೆ
ಒಂದೇ ದೇಹದಲ್ಲಿ ಗಂಡು ಮತ್ತು ಹೆಣ್ಣು ಜನನಾಂಗಗಳನ್ನು ಹೊಂದಿರುವುದು ಇದರ ಮೊಟ್ಟೆಯಿಡುವ ಸಾಮರ್ಥ್ಯ ಹೆಚ್ಚಿಸುತ್ತದೆ. ಇಟ್ಟ ಮೊಟ್ಟೆಗಳು ಮರಿಯಾಗಿ , ಆಹಾರ ದೊರೆತು ಬೆಳೆದು ದೊಡ್ಡವಾಗುವ ಸಂಖ್ಯೆ ಕಡಿಮೆ.
ಮುಂಭಾಗದಲ್ಲಿರುವ ಸಕ್ಕರ್ ನಲ್ಲಿ ಬಾಯಿ ಇದೆ . ಬಾಯೊಳಗೆ ಚಿಕ್ಕ ಚಿಕ್ಕ ಹಲ್ಲುಗಳು ಮತ್ತು ಜೊಲ್ಲುರಸ ಗ್ರಂಥಿಗಳಿವೆ . ಹೋಸ್ಟ್ ದೇಹದಲ್ಲಿಯ ಮೃದುವಾದ ಚರ್ಮವನ್ನು ಹುಡುಕಿ ಆ ಭಾಗದಲ್ಲಿ ತಮ್ಮ ಸಕ್ಕರ್ ಮೂಲಕ ಅಂಟಿಕೊಳ್ಳುತ್ತವೆ . ತಕ್ಷಣ ಅದು ಸ್ರವಿಸುವ ಜೊಲ್ಲುರಸದಲ್ಲಿ ಅರವಳಿಕೆ ಮತ್ತು ರಕ್ತ ಹೆಪ್ಪುಗಟ್ಟದಿರುವಂತೆ ತಡೆಯುವ ಕಿಣ್ವಗಳಿರುತ್ತವೆ . ಆದ್ದರಿಂದ ನಮಗೆ ಅದು ಕಚ್ಚಿದ್ದು ತಿಳಿಯುವುದಿಲ್ಲ ಮತ್ತು ರಕ್ತ ಹೆಪ್ಪುಗಟ್ಟದೆ ಸರಾಗವಾಗಿ ಅದು ಹೀರಲು ಅನುಕೂಲವಾಗುತ್ತದೆ.
ಆದ್ದರಂದಲೇ ಇಂಬಳ ಕಚ್ಚಿದ ಗಾಯದಿಂದ ಗಂಟೆಗಟ್ಟಲೆ ರಕ್ತ ಸುರಿಯುತ್ತಲೇ ಇರುತ್ತದೆ. ಅದರ ಅನಸ್ತೆಟಿಕ್ ಪವರ್ ಎಷ್ಟು ಸ್ಟ್ರಾಂಗ್ ಎಂದರೆ ಐದಾರು ಗಂಟೆಗಳ ಕಾಲ ಉರಿ ನೋವು ತಿಳಿಯುವುದಿಲ್ಲ.
ಚರ್ಮವನ್ನು ಕಚ್ಚಿಕೊಂಡಿರುವ ಇಂಬಳವನ್ನು ಬಿಡಿಸುವುದು ಸುಲಭಸಾದ್ಯವಲ್ಲ . ಕೈಯಲ್ಲಿ ಕೀಳುವುದು ಕಷ್ಟವೇ . ಉಪ್ಪು ಅಥವಾ ಸುಣ್ಣವನ್ನು ಹಚ್ಚಿದರೆ ಬಿಡಿಸುವುದು ಸುಲಭ.
ಅದನ್ನು ಕೊಲ್ಲುವುದೂ ಕಷ್ಟ. ಹೊಸಕಿದರೆ ಜಾರುತ್ತದೆ , ಕತ್ತರಿಸಿದರೆ ಕೆಲ ಭಾಗಗಳು ಮತ್ತೆ ಬೆಳೆಯುವುದರಿಂದ ಸಾಯುವುದಿಲ್ಲ . ಆದ್ದರಿಂದ ಇದನ್ನು ಬೆಂಕಿಗೇ ಹಾಕಿ ಬಿಡುತ್ತಾರೆ ಮಲೆನಾಡಿಗರು.

ಮೃದುವಾದ ಚರ್ಮ ಹುಡುಕುತ್ತಿರುವುದು
ಒಮ್ಮೆ ಹೊಟ್ಟೆ ತುಂಬಿದ ನಂತರ ಹೋಸ್ಟ್ ದೇಹವನ್ನು ತಾನಾಗೇ ಬಿಟ್ಟು ಬಿಡುವ ಇದರ ಜೀರ್ಣಾಂಗ ವ್ಯವಸ್ತೆ ವಿಚಿತ್ರವಾಗಿದೆ . ಜೀರ್ಣಾಂಗವ್ಯೂಹದ ಹೆಚ್ಚಿನಭಾಗ ರಕ್ತ ಸಂಗ್ರಹಿಸಿಡಲು ಅನುಕೂಲವಾಗುವಂತೆ ರಚಿತವಾಗಿದೆ. ಒಮ್ಮೆ ಈ ಚೀಲದಂತಹ ಹೊಟ್ಟೆ ತುಂಬಿತೆಂದರೆ ಅದು ಜೀರ್ಣವಾಗಲು ಅನೇಕ ತಿಂಗಳು ಹಿಡಿಯುತ್ತದೆ.ಆದ್ದರಿಂದ ಅದು ಒಮ್ಮೆ ರಕ್ತ ಹೀರಿದರೆ ವರ್ಷವಾದರೂ ಆಹಾರವಿಲ್ಲದೆ ಇರಬಲ್ಲದು.
ಒಂದೇ ದೇಹದಲ್ಲಿ ಗಂಡು ಮತ್ತು ಹೆಣ್ಣು ಜನನಾಂಗಗಳನ್ನು ಹೊಂದಿರುವುದು ಇದರ ಮೊಟ್ಟೆಯಿಡುವ ಸಾಮರ್ಥ್ಯ ಹೆಚ್ಚಿಸುತ್ತದೆ. ಇಟ್ಟ ಮೊಟ್ಟೆಗಳು ಮರಿಯಾಗಿ , ಆಹಾರ ದೊರೆತು ಬೆಳೆದು ದೊಡ್ಡವಾಗುವ ಸಂಖ್ಯೆ ಕಡಿಮೆ.
ರಕ್ತ ಹೀರುತ್ತಿರುವ ಇಂಬಳ
ಮಳೆಗಾಲ ಮುಗಿಯುತ್ತಿದ್ದಂತೆ ತನ್ನ ದೇಹದ ಎಲ್ಲ ಚಟುವಟಿಕೆಗಳನ್ನು ಕುಗ್ಗಿಸಿ ಮಣ್ಣು ಕಲ್ಲುಗಳಡಿಯಲ್ಲಿ ಅಡಗುವ ಇಂಬುಳಗಳು ಮತ್ತೆ ತಮ್ಮ ಚಟುವಟಿಕೆ ಪ್ರಾರಂಭಿಸುವುದು ಮುಂದಿನ ಮಳೆಗಾಲಕ್ಕೇ.
ಇಂಬಳಗಳು ಕಚ್ಚುವುದರಿಂದ ಹೆಚ್ಚಿನ ಅಪಾಯವೆನೂ ಇಲ್ಲ . ಅದರೂ ಕೆಲವೊಮ್ಮೆ ಸೆಕೆಂಡರಿ ಇನ್ಫೆಕ್ಷನ್ ಇಂದ ಗಾಯ ದೊಡ್ಡದಾಗುವ ಸಾದ್ಯತೆ ಇದೆ. ಅದಕ್ಕೆ ಮಲೆನಾಡಿಗರು ಕಂಡುಕೊಂಡಿರುವ ಸುಲಭೋಪಾಯ ಆಂಟಿಬ್ಯಾಕ್ಟೀರಿಯಲ್ ಅಗಿರುವ ಅರಿಸಿನ ಹಚ್ಚುವುದು .

ಕಚ್ಚಿ ಬಿಟ್ಟ ನಂತರ ಹರಿಯುವ ರಕ್ತ
ಕಚ್ಚಿದ ನಂತರದ ಚಿಕ್ಕ ಗಾಯ
{ನಮ್ಮ ಊರಿನಲ್ಲಿ ಇಂಬಳಗಳಿವೆಯಾದರೂ ಮನೆಯ ಬಳಿ ಹೆಚ್ಚಿಲ್ಲ . ತೋಟ ಗದ್ದೆಗಳಲ್ಲಿವೆ. ಅವುಗಳ ಫೋಟೊ ತೆಗೆಯಬೇಕೆಂದಿದ್ದ ನಾನು ಮೊರೆಹೋಗಿದ್ದು ನನ್ನ ಭಾವ ರಮೇಶ್ ಅವರನ್ನು . ದಿನಕ್ಕೆ ಐದಾರು ಬಾರಿಯದರೂ ಇಂಬಳಗಳಿಂದ ಕಚ್ಚಿಸಿಕೊಂಡು ಸುಣ್ಣ , ಅರಿಸಿನಗಳಿಂದ ಕಾಲನ್ನು ಅಲಂಕರಿಸಿಕೊಳ್ಳುವ ಅವರಲ್ಲಿ ನಾನು ತೋಟದಿಂದ ಇಂಬಳ ತಂದುಕೊಡುವಂತೆ ಕೇಳಿದೆ. ನನ್ನ ಹುಚ್ಚುತನಗಳ ಅರಿವಿರುವ ಅವರು ನಗುತ್ತ ಹೋದರು . ಬರುವಾಗ ಕೈಯಲ್ಲೊಂದು ಅಡಿಕೆಹಾಳೆ ಮತ್ತು ಅದರಲ್ಲೊಂದು ಇಂಬಳ.ತನ್ನ ಎರಡೂ ಸಕ್ಕರ್ ನೆಲಕ್ಕೆ ಊರುತ್ತ ಚೂಟಿಯಾಗಿ ಹರಿಯುತ್ತಿದ್ದ ಅದನ್ನು ನನ್ನ ಕೈಯಲ್ಲಿ ತೆಗೆದುಕೊಂಡು ನೋಡಿದೆ. ಅಂಗೈ , ಮೆಗೈ ಎಲ್ಲಾಕಡೆ ಓಡಾಡಿತೇ ವಿನಃ ಕಚ್ಚಲಿಲ್ಲ . ನಂತರ ಎರಡು ಬೆರಳಿನ ನಡುವೆ ಬಿಟ್ಟಾಗ ಅಲ್ಲಿ ಕಚ್ಚಿಕೊಂಡಿತು. ಮೊದಲು ತೆಳ್ಳಗೆ ಕಡ್ಡಿಯಂತಿದ್ದದ್ದು ರಕ್ತ ಹೀರಿ ಗುಂಡಗಾಯಿತು . ನಂತರ ಕಿತ್ತು ಎಸೆದೆ . ಸುಮಾರು ಐದಾರು ಗಂಟೆಗಳ ವರೆಗೂ ಸ್ವಲ್ಪವೂ ನೋವು ಉರಿ ಅಗಲಿಲ್ಲ . ಪ್ರಕೃತಿ ನಿಜಕ್ಕೂ ವಿಸ್ಮಯಗಳ ಸಂತೆ ಅಲ್ಲವೇ ! ಹಾಂ ಇದನ್ನೆಲ್ಲ ನೋಡುತ್ತಿದ್ದ ಸುಧಾಕಿರಣ್ " ನೀನು ಹೀಗೆ ಹಾವಿನ ಜೊತೆ ಎಲ್ಲದರೂ ಪ್ರಯೋಗಕ್ಕಿಳಿಯಬೇಡ " ಎಂದು ಎಚ್ಚರಿಸಿದ್ದಾರೆ. ಮಗಳು ಇಂಚರ " ಅಮ್ಮ ಬ್ಲಡ್ ಹೆಚ್ಚಾಗಿದ್ದರೆ ಮನುಷ್ಯರಿಗೆ ಡೊನೇಟ್ ಮಾಡು " ಎಂದು ಸಲಹೆಯಿತ್ತಿದ್ದಾಳೆ!!}

ಅಲ್ಲಾ ಮೇಡಂ, ಬರಹಕ್ಕೆ ಫೋಟೋ ಇರಲಿ ಎಂದು ಈ ರೀತಿ ಮಾಡೋದಾ..... ನಾನು ತುಂಬಾ ಸಾರಿ ನೋಡಿದೀನಿ ಇದನ್ನ.... ಬಂದಿದ್ದು ಗೊತಾಗೋಲ್ಲ... ಕಚ್ಚಿದ್ದು ಗೊತ್ತಾಗೊಲ್ಲ.... ಕೆಳಗಿಳಿದು ಹೋದ ನಂತರ ಸ್ವಲ್ಪ ತುರಿಸಿದ ಹಾಗಾಗತ್ತೆ... ರಕ್ತ ಹರಿಯುತ್ತಾ ಇರತ್ತೆ ಆಲ್ವಾ..... ಸುಧಾಕಿರಣ್ ಸರ್ ಹೇಳಿದ್ದನ್ನ ಗಂಭೀರವಾಗಿ ಯೋಚಿಸಿ..... ಹ್ಹ್ಹಾ...
ReplyDeletenimma mahiti channagidae ...nanu pravasakke malenadigae hodaga idara anubhavavagide.
ReplyDeleteಮೇಡಮ್,
ReplyDeleteಇಂಥಹ ಪ್ರಯೋಗಾತ್ಮಕ ಬರಹಗಳು ನನಗೆ ತುಂಬಾ ಇಷ್ಟ. ನಾನು ಮುನ್ನಾರಿನಲ್ಲಿ ಕೊಡಚಾದ್ರಿಯಲ್ಲಿ ಇದಕ್ಕಾಗಿ ನನ್ನ ರಕ್ತವನ್ನು ದಾನ ಮಾಡಿದ್ದೇನೆ. ನೀವು ಇಷ್ಟು ವಿವರವಾಗಿ ಬರೆದಿರುವುದು ನಿಜಕ್ಕೂ ಉಪಯುಕ್ತವಾದುದು. ಅದಕ್ಕಾಗಿ ಧನ್ಯವಾದಗಳು. ಸಾಧ್ಯವಾದರೆ ಇದನ್ನು ಈ ಬಾರಿ ಮ್ಯಾಕ್ರೋ ಫೋಟೋಗ್ರಫಿ ಮಾಡುವ ಉದ್ದೇಶ ನನ್ನದು.
really nice one madam..... ಪ್ರಯೋಗವನ್ನು ತುಂಬಾ ಚೆನ್ನಾಗಿಯೇ ಮಾಡಿದ್ದೀರ. ಮೊನ್ನೆ ಜೋಗಕ್ಕೆ ಹೋದಾಗ ಅಮ್ಮನಿಗೆ ಕಚ್ಚಿತ್ತು. ಅವರಿಗೂ ನಿಮ್ಮ ಬರಹವನ್ನು ತೋರಿಸಿದೆ ಮೆಚ್ಚಿಕೊಂಡರು .
ReplyDeleteಒಳ್ಳೆಯ ಲೇಖನ..ನಾನು ಇದುವರೆಗೂ ಇಂಬಳವನ್ನು live ನೋಡಿಲ್ಲ.
ReplyDeleteಸುಧಾಕಿರಣ್ ಮತ್ತು ಇಂಚರ ಅವರದು ಒಳ್ಳೆಯ ಸಲಹೆ ಹ್ಹ ಹ್ಹಾ.:))
ಬರಹಕ್ಕಾಗಿ,,, ಫೋಟೋ,, ಮತ್ತೆ, ಅದರ ಕೈನಲ್ಲಿ ಕಚ್ಚಿಸಿಕೊಳ್ಳ ಬೇಕಾ,,, ಅಬ್ಬ,,,, ನಿಮ್ಮ ಧೈರ್ಯ ಮೆಚ್ಚಬೇಕಾದದ್ದೇ....
ReplyDeleteಹೌದು ನನಗೂ ಇದರ ಅನುಭವ ಆಗಿದೆ,, ಆದರೆ ಜಾಸ್ತಿ ಇಲ್ಲ... ಕೊಡಚಾದ್ರಿ ಟ್ರೆಕ್ಕಿಂಗ್ ಹೋಗಿದ್ದಾಗ,,,ಇದರ ಕತೆ ಗೊತ್ತಾಯ್ತು,,,, ನಾನು ಹೇಗೆ ಇದರ ಜೊತೆ ಫೋಟೋ ತೆಗೆಸಿಕೊಳ್ಳ ಬೇಕು ಅಂತ ಕೈ ಮೇಲೆ ಬಿಟ್ಟು ಕೊಂಡಿದ್ದೆ.. ಆದರೆ ಹಾಂಗೆ ಸುಮ್ನೆ ಬಿಟ್ಟು ಬಿಟ್ಟೆ... ಯಾಕೆ ಬೇಕು ಸಹವಾಸ ಅಂತ....
ಒಳ್ಳೆಯ ಪ್ರಯೋಗದ ಲೇಖನ..... ಇಷ್ಟ ಆಯಿತು... :-)
ನಾನು ಚಿಕ್ಕವನಿದ್ದಾಗ ಇಂಬಳ ಕಚ್ಚಿಸಿಕೊಂಡು ಬಿಡಿಸಿಕೊಳ್ಳಬೇಕಾದರೆ...ತುಂಬಾನೇ ಕಷ್ಟಪಟ್ಟಿದ್ದೆ.
ReplyDeleteಒಳ್ಳೆಯ ಲೇಖನ.
ನಿಮ್ಮವ,
ರಾಘು.
super!
ReplyDeleteಸುಮಾ...
ReplyDeleteತುಂಬಾ ವಿವರಗಳನ್ನೊಳಗೊಂಡ ಲೇಖನ..
ಕಾಲಿಗೆ "ಹರಳೆಣ್ಣೆ" ಹಚ್ಚಿಕೊಂಡು ಹೋದರೆ ಕಾಲಿಗೆ ಹತ್ತುವದಿಲ್ಲವೆನ್ನುತ್ತಾರೆ..
ಸುಧಾಕಿರಣ್ ಮಾತನ್ನು ಅಲಕ್ಷಿಸ ಬೇಡಿ...
ಅಭಿನಂದನೆಗಳು..
ಅಯ್ಯೋ ನನ್ ಫ್ರೆಂಡ್ ಒಬ್ಬಂವ ಇದಾನಪ್ಪಾ.. ನಾವು ಟ್ರೆಕ್ ಹೋದಾಗೆಲ್ಲ ಅಂವ ಇಂಬಳಗಳನ್ನ ಹಿಡ್ದು ಹಿಡ್ದು ಮೈಮೇಲೆ ಬಿಟ್ಕಳದು! ಕೆಟ್ಟ ರಕ್ತ ಹೀರುತ್ತೆ ಅದು ಅಂತ! ಅದ್ನ ನೋಡಿರೇ ನಮ್ಗೆಲ್ಲ ಮೈ ಪರ್ಚ್‌ಕ್ಯಳೋ ಹಂಗೆ ಆಗ್ತು! :x
ReplyDeleteಮೇಡಂ,
ReplyDeleteನಾವು ಕಳೆದ ಡಿಸೆಂಬರಿನಲ್ಲಿ ಕೊಡಚಾದ್ರಿ ಚಾರಣಕ್ಕೆ ಹೋದಾಗ ಮುನ್ನೆಚ್ಚರಿಕೆಯಾಗಿ ಸುಣ್ಣ, ಬೆಂಕಿಪೊಟ್ಟಣ ಇತ್ಯಾದಿ ಕೊಂಡೊಯ್ದಿದ್ದೆವು. ಆದರೆ, ನಮಗೆ ಒಂದೇ ಒಂದು ಕಡೆಯೂ ಈ ಇಂಬಳ (ಯಾರಿಗೂ ಕಚ್ಚಲಿಲ್ಲ) ಸಿಗಲಿಲ್ಲ. ಏಕೆಂದರೆ, ನಾವು ನಡೆದಿದ್ದ ಹಾದಿಯಲ್ಲಿ ಅಷ್ಟಾಗಿ ತಂಪುವಾತಾವರಣ, ನೀರಿನ ಸೆಲೆ ಇರಲಿಲ್ಲ.
ಅದೇ ಬಾಬಾಬುಡನ್‌ಗಿರಿ ಚಾರಣಕ್ಕೆ ಹೋಗಿದ್ದಾಗ ಒಂದಿಬ್ಬರಿಗೆ ಇಂಬಳ ಚುರುಕು ಮುಟ್ಟಿಸಿತ್ತು.
ಉತ್ತಮ ಚಿತ್ರ-ಮಾಹಿತಿ ಲೇಖನ ಕೊಟ್ಟಿದ್ದೀರಿ.
ಧನ್ಯವಾದಗಳು.
ಕಾಡಿನಲ್ಲಿ ಖನಿಜಕ್ಕಾಗಿ ತಿರುಗುವ ನನಗೆ ಇಂಬಳದ ಸಹವಾಸ ಹೆಚ್ಚು. ಪ್ಯಾಂಟಿನ ತುದಿಯನ್ನು ಸಾಕ್ಸನಲ್ಲಿ ಸೇರಿಸಿ ಇಂಬಳಗಳು ಒಳಸೇರದಂತೆ ಮಾಡಿ ತಿರೋಗೋ ಅಬ್ಯಾಸ. ಒಮ್ಮೆ ನನ್ನ ಹೊಟ್ಟೆ ಹಿಡಿದಿತ್ತು.
ReplyDeleteತಮ್ಮ ಮಾಹಿತಿ ಮತ್ತು ಚಿತ್ರಕ್ಕಾಗಿ ತಮ್ಮ ಮೇಲೆ ಪ್ರಯೋಗ ಮಾಡಿಕೊಂಡಿದ್ದು ನೋಡಿ ತಮ್ಮ ಬಗ್ಗೆ ಹೆಮ್ಮೆ ಎನಿಸಿತು. ಇಂಬಳಗಳಿಂದ ಕಚ್ಚಿಸಿಕೊಲ್ಲುವದು ಹಲವು ರೋಗಗಳಿಗೆ ಚಿಕಿತ್ಸಾಕ್ರಮ ಎಂದು ಕೇಳಿದ್ದೇನೆ.
ಧನ್ಯವಾದಗಳು.
ಒಳ್ಳೆಯ ಫೋಟೋ-ಲೇಖನ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ನಾಯಿಗುತ್ತಿಗೆ ಇಂಬಳ ಕಚ್ಚಿ ಆತ ಪಡುವ ಪಾಡು ಈಗಲೂ ಕಣ್ಣ ಮುಂದೆ ಸುಳಿದಂತಿದೆ....
ReplyDeleteಉತ್ತಮ ಮಾಹಿತಿ. ನಮಗೆ ಬಿ.ಎಸ್ಸಿ.ಯಲ್ಲಿ ಇದರ ಡಿಸೆಕ್ಷನ್ ಇತ್ತು. ಹೆಬ್ಬರಳಿನ ಗಾತ್ರದ ಉಂಬಳದ ಡಿಸೆಕ್ಷನ್ ಮೊದಲ ಬಾರಿ ಮಾಡುವಾಗ ಉಂಟಾದ ವಾಕರಿಕೆಯ ನೆನಪು ಇನ್ನೂ ಹರಿರಾಗಿದೆ. ಮೊದಲು ನಮ್ಮ ಹೆಬ್ಬರಳಿನಿಂದ ಅದನ್ನು ಒತ್ತಿ ಒತ್ತಿ ಅದರೊಳಗಿನ ರಕ್ತವನ್ನೆಲ್ಲಾ ಹೊರ ಹಾಕಿ...ನೀಡಲ್‌ನಿಂದ ಸೀಳಿ, ಇಬ್ಭಾಗಿಸಿ, ಆಮೇಲೆ ಗುಂಡು ಸೂಜಿಯಿಂದ ಎರಡೂ ಕಡೇ ಪ್ರತ್ಯೇಕಿಸಿ ಅದರ ಭಾಗಗಳನ್ನು ಅಭ್ಯಸಿಸುವಾಗ ಬೇಸರವೂ ಆಗುತಿತ್ತು. ಜೀವಿಯೊಂದನ್ನು ಹಿಂಸಿಸಿದ್ದಕ್ಕೆ! ಆದರೆ ಅದು ಕೇವಲ ಅಭ್ಯಾಸಕ್ಕಾಗಿ ಮಾತ್ರವೆಂದೂ ಸಮಾಧಾನಿಸಿಕೊಂಡಿದ್ದೆ. ಕ್ರಮೇಣ ಡೆಸೆಕ್ಷನ್ ಪಾರ್ಟ್ ಅಭ್ಯಾಸವಾಗಿ ಹೋಯಿತು. ಯಾಂತ್ರಿಕವಾಗಿ ಹೋಯಿತು!
ReplyDeleteನಿಮ್ಮ ಮಗಳ ಸಲಹೆ ಉಚಿತವಾದದ್ದೇ :) ಆದರೂ ನಿಮ್ಮ ಪ್ರಯತ್ನ ಮೆಚ್ಚಬೇಕಾದ್ದು.. ೫ ನೇ ಚಿತ್ರದಲ್ಲಿ ಬೆರಳ ಮೇಲೆ, ಇಂಬಳದ ಸುತ್ತಾ ನೀರಿನಂತೆ ಕಾಣುತ್ತಿರುವುದು ನೀರೋ ಅಥವಾ ನೀವು ತಿಳಿಸಿದ ಅರವಳಿಕೆ ದ್ರವವೋ?
ReplyDeleteತುಂಬಾ ಒಳ್ಳೆಯ ಲೇಖನ.
ReplyDeleteಹಬ್ಬಾ....! ಮೈ ನವಿರೇಳಿಸು ಲೇಖನ , ನಾನು ಈ ಹುಳುಗಳನ್ನು ನೋಡಿದ್ದೇನೆ ,ರಕ್ತ ಕುಡಿದು ಹೋಗುವಾಗ ಒಂದಿಷ್ಟು ಕೆರತ ವಾಗುತ್ತದೆ . ಅಷ್ಟೂ ಮಾತ್ರ ಗೋತ್ತು ಉತ್ತಮ ಬರವಣಿಗೆ , ಉತ್ತಮ ವಿನರ್ಷೆ .... . ಬಿಡುವು ಮಾಡಿಕೊಂಡು ಇಮ್ಮೆ ನನ್ನವಳಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ
ReplyDeleteSATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com
ನನ್ನವಳ ಪ್ರೇಮ ಲೋಕ (blag)
http://nannavalaloka.blogspot.com
ನಿಮ್ಮೆಲ್ಲರ ಪ್ರತಿಕ್ರಿಯೆಗಾಗಿ ಧನ್ಯವಾದಗಳು .
ReplyDelete- ದಿನಕರ್ ..ಕೇವಲ ಬರಹಕ್ಕೆ ಫೋಟೊ ಇರಲಿ ಎಂಬ ಕಾರಣಕ್ಕೆ ನಾನು ಕಚ್ಚಿಸಿಕೊಂಡದ್ದಲ್ಲ. ಹೆಚ್ಚಿನ ಅಪಾಯವೆನೂ ಇಲ್ಲವೆಂಬುದು ತಿಳಿದಿತ್ತು ... ಕುತೂಹಲವೂ ಇತ್ತು.
- ಸುಶ್ರುತ ..ಅದು ಕೆಟ್ಟದ್ದೋ ಒಳ್ಳೇಯದೋ ಅದಕ್ಕೆ ತಿಳಿಯುವುದಿಲ್ಲ ..ರಕ್ತ ಅದರ ಆಹಾರವಾದ್ದರಿಂದ ಸಿಕ್ಕ ರಕ್ತ ಹೀರುತ್ತದೆ.
- ಸೀತಾರಾಂ ಸರ್... ಕೆಲ ವಿಧಧ ಬೊಜ್ಜಿನ ಚಿಕಿತ್ಸೆಯಲ್ಲಿ ಜಿಗಳೆಗಳನ್ನು ಬಳಸುತ್ತಾರಂತೆ ... ಆದರೆ ಅದು ಬೇರೆ ಜಾತಿಯ ಜಿಗಳೆಗಳೆಂದು ಕೇಳಿದ್ದೇನೆ.
- ತೇಜಸ್ವಿನಿ... ನಿಜ ನಮಗೂ ಬಿ ಎಸ್ಸಿನಲ್ಲಿ ಜಿಗಳೆಗಳ ದಿಸೆಕ್ಷನ್ ಇತ್ತು. ಅದರ ರಕ್ತ ತೆಗೆಯುವಾಗ ವಾಕರಿಕೆ ಬರುತ್ತಿತ್ತು.
- ಪಾಲ ಅವರೆ ...ನಿಮ್ಮ ಸೂಕ್ಷ್ಮ ದೃಷ್ಟಿ ಮೆಚ್ಚಬೇಕಾದದ್ದು. ಅಲ್ಲಿ ಕಾಣುತ್ತಿರುವುದು ಇಂಬಳ ಸ್ರವಿಸಿದ ಸಲೈವ .. ಅದರಲ್ಲಿ ಅರವಳಿಕೆ ಮತ್ತು ಆಂಟಿಕೊಅಗ್ಯುಲೆಂಟ್ ಸೇರಿರುತ್ತವೆ.
-
ಚೆನ್ನಾಗಿದೆ ನಿಮ್ಮ ಫೋಟೋ ಕಮ್ ಲೇಖನ ಹುಬ್ಬಳ್ಳಿಯೋಳಗ ಅವನ್ನ ನೋಡಿದ್ದಿಲ್ಲ ಒಂದ್ಸಲ ಯಾಣಕ್ಕೆ ಹೋದಾಗ
ReplyDeleteನನ್ನ ರಕ್ತಾ ಕುಡದು ತೇಗಿದ್ದವು....
ಮಾಹಿತಿ ನೀಡಿದ್ದಕ್ಕೆ ಧನ್ಯವಾದ..
ReplyDelete--ನಿಮ್ಮ ಮಗಳ ಸಲಹೆ ಚೆನ್ನಾಗಿದೆ @_@
ಇಂಬಳದ ಬಗ್ಗೆ ಮಾಹಿತಿ ಚೆನ್ನಾಗಿದೆ ...
ReplyDeleteಇಂಬಳಕ್ಕೆ ನಮ್ಮ ಕಡೆ ಉಂಬಳ ಎಂದೂ ಕರೆಯುತ್ತಾರೆ, ಇವು ಮನುಷ್ಯರನ್ನು ವಾಸನೆಯ ಮೂಲಕ ಗುರುತಿಸುತ್ತವೆ,
ReplyDeleteನನ್ನ ಮಾವನ ಮನೆಯ ಕಡೆ ( ಸಿದ್ದಾಪುರದ ಹತ್ತಿರ) ಹೆಚ್ಚು ಉಂಬಳವಿದೆ, ಅಲ್ಲಿಯ ಜನರು ಕಾಡಿನ ದಾರಿಯಲ್ಲಿ ಓಡಾಡುವಾಗ ಒಂದು ಮರದ ಕೋಲಿಗೆ ಸುಣ್ಣ ಮತ್ತು ಹೊಗೆ ಸೊಪ್ಪು(ತಂಬಾಕು) ಸೇರಿಸಿ ಬಟ್ಟೆಯ ಗಂಟು ಕಟ್ಟಿಕೊಂಡು ಹೋಗುತ್ತಾರಂತೆ ಉಂಬಳ ಹತ್ತಿದರೆ ಅದಕ್ಕೆ ತಾಗಿಸಿದರೆ ಉಂಬಳ ಉದುರಿ ಹೋಗುತ್ತದೆಯಂತೆ.
ಅಂದಹಾಗೆ ನಿಮ್ಮ ಯಜಮಾನರು ಮಗಳು ಅತ್ಯುತ್ತಮ ಸಲಹೆಯನ್ನೇ ನೀಡಿದ್ದಾರೆ.
ಉಂಬಳ ಕಚ್ಚಿಸಿಕೊಂಡ ಕೈ ಬೆರಳನ್ನು ನೋಡುತ್ತಾ ಉಂಬಳವನ್ನು ನೆನಸಿಕೊಳ್ಳಿ ಮತ್ತೊಮ್ಮೆ ತುರಿಕೆಯಾಗಬಹುದು! ಆದರೂ ಪಾಪ ಉಂಬಳಕ್ಕೆ ಹೆಚ್ಚು ರಕ್ತ ಸಿಕ್ಕಿದಂತಿಲ್ಲ, ಉಪವಾಸ ಹಾಕಿದ್ದೀರಿ :)..
ಏನೇ ಆಗಲಿ, ಅತ್ಯಂತ ಉತ್ತಮ ಸಚಿತ್ರ ಬರಹ. ಹೀಗೆ ಒಳ್ಳೊಳ್ಳೆ ಲೇಖನಗಳನ್ನು ಕೊಡುತ್ತಿರಿ
ಆಯುರ್ವೇದದಲ್ಲಿ ರಕ್ತ ಮೊಕ್ಷಣ ಅಂತ ಚಿಕಿತ್ಸೆ ಇದೆ. http://www.whereincity.com/medical/topic/general/articles/414.htm
ReplyDeleteleech ನಿಂದ ಅಶುದ್ದ ರಕ್ತ ತೆಗೆಯುತ್ತಾರೆ (ಇಂಬಳ ದಿಂದ ಅಲ್ಲ) .
ಕಮೆಂಟಿಸಿದವರೆಲ್ಲರಿಗೂ ಧನ್ಯವಾದಗಳು.
ReplyDelete- ಮನಸ್ವಿ .. ನಿಜ ಸುಣ್ಣ , ಉಪ್ಪು ಹೊಗೆಸೊಪ್ಪು ಮೊದಲಾದವುಗಳನ್ನು ಹಚ್ಚಿದರೆ ಇಂಬಳ ಬೇಗ ಬಿಡುತ್ತದೆ . ನೀವೆಂದಂತೆ ಅದಕ್ಕೆ ಅರೆಹೊಟ್ಟೆ ಮಾಡಿದ್ದು ನಿಜ . ಹತ್ತು ನಿಮಿಷ ಸುಮ್ಮನೇ ಕುಳಿತು ಕಚ್ಚಿಸಿಕೊಂಡೆ . ನಂತರ ನನಗೆ ಬೇರೆ ಕೆಲಸವಿದ್ದುದರಿಂದ ಅನಿವಾರ್ಯವಾಗಿ ಬಿಡಿಸಿಕೊಳ್ಳಬೇಕಾಯಿತು .
- ಸುಧೀಂದ್ರ leechಗಳಲ್ಲಿ ಅನೇಕ ಜಾತಿಗಳಿವೆ . ಕಾಲೇಜುಗಳಲ್ಲಿ ಡಿಸೆಕ್ಷನ್ ಮಾಡೋದು cattle leech . ಹಾಗೇ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸೋದು ಮೆಡಿಕಲ್ ಲೀಚ್ . ಇಂಬಳ ಕೂಡ ಲೀಚ್ ಜಾತಿಗೇ ಸೇರಿದೆ . ಆದರೆ specis ಬೇರೆ ಅಷ್ಟೆ.
ನಮಸ್ಕಾರ ರೀ
ReplyDeleteನಿಮ್ಮ ಸಾಹಸ ಮತ್ತು ಉತ್ಸಾಹಕ್ಕೆ ಮತ್ತೊಂದು ನಮಸ್ಕಾರ :) ;)
ಈ ಇಂಬಳ ಗಳ ಬಗ್ಗೆ ನನಗೆ ಏನು ಗೊತ್ತಿರ್ಲಿಲ್ಲ ನಿಮ್ಮ ಲೇಖನ ಓದುವ ಮುಂಚೆ ಕುವೆಂಪು ಅವರ "ಮಲೆಗಳಲ್ಲಿ ಮಧು ಮಗಳು" ಪುಸ್ತಕದಲ್ಲಿ ಓದಿದ ನೆನಪು ನೀವು ಅದನ್ನ ನಿಜವಾಗಲು ತೋರಿಸಿ ವಿವರಿಸಿದಿರ ನನಗೆ ಸೊಳ್ಳೆ ಕಚ್ಚಿದ್ರೆನೆ ತಡ್ಕೊಳ್ಳೋಕೆ ಆಗೋಲ್ಲ ಅಂತರಲ್ಲಿ ಆ ಇಂಬಳ ನಿಮ್ಮ ಕೈ ಮೇಲೆ ಅಬ್ಬಾ ಮೈ ಜುಮ್ ಅನ್ನುತ್ತೆ.
ನಮಸ್ಕಾರ
ReplyDeleteಡೆಟ್ಟಾಲ್ ಹಚ್ಚಿಕೊಂಡರೆ ಇಂಬಳ ಕಾಲಿಗೆ ಹತ್ತುವುದಿಲ್ಲ.
ಹೇನು ಸಾಯುವ ಮಾತ್ರೆ (Ivermectin) ಅಪರೂಪಕ್ಕೆ ಇಂಬಳ ಇರುವ ಜಾಗಕ್ಕೆ ಹೋಗುವವರಿಗೆ ಆಗಬಹುದು. ನನ್ನ ಈ ಬ್ಲಾಗ್ ಲೇಖನ ಓದಿ-http://machikoppa.blogspot.com/2010/03/blog-post_09.html
ತುಂಬಾ ಉಪಯುಕ್ತ ಲೇಖನ
ReplyDeleteಫೋಟೋಗಳು ಅದ್ಭುತ
ಸುಮಕ್ಕ, really great ... ಒಳ್ಳೆ ಮಾಹಿತಿ ಕೊಟ್ಟಿದ್ದೆ. ಆದ್ರೆ ಅದು ಹೆಂಗೆ ನೀ ಕಚ್ಚಿಸ್ಕಂಡೆ?? ಹೇ ಹೇ... ಒನ್ ತಾರಾ ಆಗಲ್ಯಾ .... ??ಉರಿತು ಅಲ್ದಾ??
ReplyDeleteಭಾವ ,ಮತ್ತೆ ಇಂಚರ ಹೇಳಿದ್ ಮಾತು ಸ್ವಲ್ಪ serious ಆಗೇ ಯೋಚನೆ ಮಾಡೇ... :-)
ಸುಮ ಅವರೇ,
ReplyDeleteಚಾರಣಕ್ಕೆ ಹೋದಾಗಲೆಲ್ಲಾ ಇಂಬಳಗಳಿಗೆ ರಕ್ತ ಕೊಟ್ಟುಬಂದದ್ದರ ನೆನಪಾಯ್ತು !
ನಿಮ್ಮ ಮಗಳ ಮಾತಿನಲ್ಲಿ ನಿಜವಿದೆ ಅನಿಸ್ತು :)
ನಾನು ಹುಟ್ಟಿ, ಬೆಳೆದಿದ್ದು ಎಲ್ಲಾ ಮಲೆನಾಡಿನಲ್ಲಿ. ಹಾಗಾಗಿ ಉಂಬಳ ಕಚ್ಚಿಸಿಕೊಂಡು ಅಭ್ಯಾಸವಿದೆ :) ಆದರೆ ಅದರ ಬಗ್ಗೆ ಇಷ್ಟೆಲ್ಲಾ ಮಾಹಿತಿ ಗೊತ್ತಿರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದಗಳು.
ReplyDelete