9 Sept 2010

ಗಣೇಶ ಹಬ್ಬದ ಶುಭಾಶಯಗಳು

ನಮ್ಮ ಮೂವತ್ತಮೂರು ಕೋಟಿ ದೇವರುಗಳಲ್ಲಿ ನನಗೆ ತುಂಬಾ ಇಷ್ಟವಾಗುವ ದೇವರೆಂದರೆ ಗಣಪತಿ. ಚೌತಿ ಹಬ್ಬಕ್ಕೆ ಒಂದು ತಿಂಗಳಿರುವಾಗಲೇ ಅಪ್ಪ ಅದೆಲ್ಲಿಂದಲೋ ಎರಡು ದೊಡ್ಡ ಹೆಡಿಗೆ(ಬುಟ್ಟಿ) ಕುಂಬಾರ ಮಣ್ಣು ತಂದು , ಅದನ್ನು ಸ್ವಲ್ಪ ಸ್ವಲ್ಪವೇ ಹತ್ತಿಯೊಂದಿಗೆ ಸೇರಿಸಿ ಕುಟ್ಟಿ ಹದಗೊಳಿಸಿ , ರುಷಿ ಸದೃಶ ತಾಳ್ಮೆಯಿಂದ ಕುಳಿತು ಸುಂದರ ಗಣಪತಿಯ ಮೂರ್ತಿ ಸಿದ್ದಪಡಿಸುತ್ತಿದ್ದರು . ಗಣಪತಿ ಕೂರಿಸಲು ಮಣ್ಣಿನಲ್ಲೇ ವಿಶೇಷವಾದ ಪೀಠ ಮೊದಲು ಸಿಧ್ಧಪಡಿಸಿಕೊಳ್ಳುತ್ತಿದ್ದರು. ನಂತರ ಗಣಪತಿಯ ಕಾಲುಗಳು ,ದೇಹ, ಡೊಳ್ಳು ಹೊಟ್ಟೆ , ಭುಜ , ಕೈಗಳು ಮೂಡುತ್ತಿದ್ದವು . ನಂತರ ಮುಖ ಸೊಂಡಿಲುಗಳನ್ನು ರಚಿಸುತ್ತಿದ್ದರು . ಕೊನೆಯಲ್ಲಿ ಅದಕ್ಕೆ ಫಿನಿಶಿಂಗ್ ,ಅಂದರೆ ದೇಹದ ಅಂಕು ಡೊಂಕು , ಬಟ್ಟೆ , ಕೈಕಾಲು ಬೆರಳುಗಳು ,ಆಭರಣಗಳು ಇತ್ಯಾದಿಗಳನ್ನು ತಾವೇ ತಯಾರಿಸಿಕೊಂಡ ಮರದ ಟೂಲ್ ಉಪಯೋಗಿಸಿ ಮಾಡುತ್ತಿದ್ದರು. ಊರಿನ ಮುವತ್ತು ಮನೆಗಳಿಗೆ ಬೇಕಾಗುವ ಎಲ್ಲ ಗಣಪತಿ ಮಾಡಿ ಮುಗಿಸಿ ಒಣಗಲು ಬಿಡುತ್ತಿದ್ದರು . ಒಣಗಿದ ಮೇಲೆ ಬಣ್ಣ ಹಚ್ಚಿ ಅಲಂಕರಿಸುತ್ತಿದ್ದರು. ಅಂತೂ ಎಲ್ಲ ಮುಗಿಯುವ ವೇಳೆಗೆ ಚೌತಿ ಹಬ್ಬಕ್ಕೆ ಎರಡು ದಿನವಿರುತ್ತಿತ್ತು. ನಮಗಿಷ್ಟವಾದ ಗಣಪನ್ನನ್ನು ಇಟ್ಟುಕೊಂಡು ಉಳಿದವನ್ನು ಎಲ್ಲರ ಮನೆಗೆ ಕೊಡುವಾಗ ಕೊಟ್ಟುಬಿಡುತ್ತಾರಲ್ಲ ಎಂದು ನನಗೆ ಸ್ವಲ್ಪ ಬೇಸರವಾಗುತ್ತಿತ್ತು.
ಹೀಗೆ ಮೂರ್ತಿ ತಯಾರಾಗುವ ಪ್ರತಿ ಹಂತವನ್ನೂ ನೋಡುತ್ತಿದುದರಿಂದ ಗಣಪತಿ ನಮ್ಮನೆ ಮಗುವೇನೋ ಎನ್ನಿಸಿಬಿಡುತ್ತಿತ್ತು . ಜೊತೆ ಅನೆ ಸೊಂಡಿಲು, ಇಲಿ , ಹಾವುಗಳ ಆಕರ್ಷಣೆ ಬೇರೆ....

ಹನ್ನೆರಡು ವರ್ಷಗಳ ನಂತರ ಗಣೇಶನ ಹಬ್ಬಕ್ಕೆ ತವರುಮನೆಗೆ ಹೋಗುತ್ತಿದ್ದೇನೆ ಅದ್ದರಿಂದ ಮುಖ ಮೊರದಗಲ ಆಗಿದೆ.
ಎಲ್ಲರಿಗು ಗಣೇಶ ಹಬ್ಬದ ಶುಭಾಶಯಗಳು.

11 comments:

  1. ತವರಿಗೆ ತೆರಳುತ್ತಿರುವ ನಿಮಗೆ ಶುಭಾಶಯಗಳು. ಗಣೇಶನ ಹಬ್ಬದ ಶುಭಾಶಯಗಳು.

    ReplyDelete
  2. nimagu habbada subhaashaya madam,
    tavaru manege hoguttiddene anni saaku ... mukha uragala aagide endu naave uhisikoLLutteve... hhhaa..
    tavaru maneya sihi suddiyannu namma jote hanchikoLLi....
    have a nice trip....

    ReplyDelete
  3. ಹೌದು..
    ಎಲ್ಲ ದೇವರುಗಳ ಪೂಜೆಗೆ ಮುನ್ನ ಮೊದಲ ಪೂಜೆ ನಮ್ಮ ಗಣೇಶನದೆ.
    ಗಣೇಶ ಹಬ್ಬಕ್ಕೆ ನನ್ನದೊಂದು ಪುಟ್ಟ ಶುಭಾಷಯ....

    ReplyDelete
  4. ಅಂತು ಇಂತೂ ಹಬ್ಬ ಬಂತು
    ತವರ ಮನೆಗೆ ಹೋಗೋಕೆ ಒಂದು ದಾರಿ ಆಯ್ತು

    ಅದಕ್ಕೆ ನಿಮ್ಮ ಮೊಗ ಸೀರಿ ಅರಳಿ ನಿಂತಿದೆ. ಹೋಗಿ ಬಿಟ್ಟು ಬನ್ನಿ ಶುಭವಾಗಲಿ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ
    ಮಂಜು ಕಡೆ ಇಂದ
    ಮಂಜು ಕುಟುಂಬದಿಂದ
    ರಂಜಾನ್ ಹಾಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ;)

    ReplyDelete
  5. ನಿಮಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
    ನನ್ನ ಬ್ಲಾಗಿಗೆ ಒಮ್ಮೆ ಬನ್ನಿ

    ReplyDelete
  6. ಹಬ್ಬದ ನೆನಪನ್ನು ಸುಂದರವಾಗಿ ನಿರೂಪಣೆ ಮಾಡಿದ್ದೀರಿ. ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಗೌರಿ ಹಾಗು ಗಣೇಶ ಹಬ್ಬದ ಶುಭಾಶಯಗಳು

    ReplyDelete
  7. ಮತ್ತೆ ತವರಿನಲ್ಲಿ ಚೆನ್ನಾಗಿ ಹಬ್ಬ ಆಚರಿಸಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಹಬ್ಬದ ಶುಭಾಶಯಗಳು.

    ReplyDelete
  8. ಸುಮ ಅವರೇ,

    ಹಬ್ಬ ಹೇಗಿತ್ತು :)
    ಸಾಕಷ್ಟು ಮೋದಕ-ಹೋಳಿಗೆ ಸ್ವಾಹ ಆಗಿರಬೇಕು ಅಲ್ವಾ

    ReplyDelete
  9. ಣೇಶ ಹಬ್ಬಕ್ಕೆ ನನ್ನದೊಂದು ಪುಟ್ಟ ಶುಭಾಷಯ.

    ReplyDelete
  10. ಗಣೇಶನ್ನ ತಯಾರಿ ನೆನಪು ಸವಿಯಾಗಿದೆ.
    ತವರಿಗೆ ಬಹಳ ದಿನ ಮೇಲೆ ಹೋಗುತ್ತಿರುವಿರಿ..ಸಂತಸ ಇಣುಕುತ್ತಿದೆ.
    ಗಣೇಶ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.

    ReplyDelete