17 Mar 2011

ಟರ್ಕಿ ಕೋಳಿ!!

ಹೀಗೆ ಒಂದು ದಿನ ನಮ್ಮ ಬಡಾವಣೆಯ ಯಾವುದೋ ಒಂದು ಬೀದಿಯಲ್ಲಿ ಮಗಳೊಂದಿಗೆ ಅಲೆಯುತ್ತಿದ್ದೆ. ಅಲ್ಲೊಂದು ಕಡೆ ರಸ್ತೆಯ ಪಕ್ಕದಲ್ಲಿ ಕಟ್ಟಿಹಾಕಿದ ಎರಡು ದೊಡ್ಡ ಕೋಳಿಯಂತಹ ಪಕ್ಷಿಗಳು ಕಂಡವು . ಅದೇನೆಂಬ ಕುತೂಹಲದಲ್ಲಿ ಹತ್ತಿರ ಹೋಗಿ ನೋಡಿದೆವು . ಹೆಚ್ಚುಕಡಿಮೆ ಕೋಳಿಯಂತೆಯೆ ಇದ್ದರೂ ಗಾತ್ರದಲ್ಲಿ ದೊಡ್ಡದಾಗಿತ್ತು . ಮೈ ತುಂಬ ಕಪ್ಪು ಬಣ್ಣದ ಗರಿಗಳು , ಕುತ್ತಿಗೆಯಿಂದ ಮೇಲ್ಭಾಗದಲ್ಲಿ ವಿವಿಧ ಬಣ್ಣಗಳ ಸಂಗಮ . ಹತ್ತಿರ ಹೋಗುತ್ತಿದ್ದಂತೆ ತನ್ನ ಅಷ್ಟೂ ಗರಿಗಳನ್ನು ಬಿಚ್ಚಿ ನವಿಲಿನಂತೆಯೆ ನಿಂತಿತ್ತು


ಆದ್ಯಾವ ಪಕ್ಷಿಯೆಂದು ತಿಳಿಯದೇ ಸುತ್ತಮುತ್ತ ನೋಡಿದೆವು . ಆಲ್ಲೇ ಪಕ್ಕದಲ್ಲಿದ್ದ ಲಾಂಡ್ರಿಯಲ್ಲಿ ಕೇಳಿದಾಗ ಅವ ಅದು "ಟರ್ಕಿ ಕೋಳಿ " ಎಂದೂ, ತಾನೇ ಸಾಕಿದ್ದು ಎಂದು ಹೇಳಿದ. "ಅಬ್ಬ ಟರ್ಕಿ ದೇಶದಲ್ಲಿ ಇಷ್ಟು ದೊಡ್ಡ ಕೋಳಿಯಿರುತ್ತಲ್ಲ " ಎಂದುಕೊಂಡು ಹೊರಟೆವು . ನಂತರ ಮನೆಗೆ ಬಂದು ಗೂಗಲ್ ಮಹಾಶಯರಲ್ಲಿ ಕೇಳಿದಾಗ ಈ ಹಕ್ಕಿಯ ಬಗ್ಗೆ ಅನೇಕ ವಿಚಾರಗಳು ತಿಳಿದವು.ನೋಡಲು ಕೋಳಿಯ ತರಹ ಕಂಡರೂ ಇದು ಕೋಳಿಯಲ್ಲ. "ಟರ್ಕಿ"
ಎಂಬ ಹೆಸರಿನ ಈ ಹಕ್ಕಿಯನ್ನು ಮಾಂಸಕ್ಕಾಗಿ ಪಾಶ್ಚಿಮಾತ್ಯರಾಷ್ಟ್ರಗಳಲ್ಲಿ ಹೆಚ್ಚಾಗಿ ಸಾಕುತ್ತಾರೆ. ಮೂಲತಃ ಉತ್ತರ ಅಮೇರಿಕಾದ ಕಾಡುವಾಸಿಯಾದ ಇದನ್ನು ಯುರೋಪಿಯನ್ ರಾಷ್ಟ್ರಗಳು ಮೊದಲು ಸಾಕಲು ಪ್ರಾರಂಭಿಸಿದ್ದಾಗಿ ಹೇಳುತ್ತಾರೆ. ಅಲ್ಲಿ ಇದರ ಮಾಂಸದ ಖಾದ್ಯಗಳಿಗೆ ತುಂಬ ಬೇಡಿಕೆ .ಇದಕ್ಕೆ ಟರ್ಕಿ ಎಂಬ ಹೆಸರು ಬರಲು ಕಾರಣ ಯುರೋಪಿಯನ್ ರಾಷ್ಟ್ರಗಳಿಗೆ ಇದನ್ನು ಮಾರಾಟ ಮಾಡುತ್ತಿದ್ದ ಟರ್ಕಿ ವ್ಯಾಪಾರಿಗಳೇ ಇರಬಹುದೆಂಬ ಅಭಿಪ್ರಾಯವಿದೆ.
ಇದರಲ್ಲಿ ಅನೇಕ ತಳಿಗಳಿವೆ.
ಇವುಗಳ ಕೆಲ ವಿಶಿಷ್ಠ ದೇಹರಚನೆ ಗಮನಸೆಳೆಯುತ್ತದೆ. ಕೊಕ್ಕಿನ ಮೇಲಿಂದ ಕೆಂಪು ಬಣ್ಣದ ಚರ್ಮದ ಹೊದಿಕೆಯೊಂದು ಉದ್ದವಾಗಿದ್ದು ,ಕೆಳಚಾಚಿದೆ. ಏನನ್ನಾದರು ತಿನ್ನಲು ಹಕ್ಕಿ ಬಗ್ಗಿದಾಗ ಆ ಚರ್ಮದ ಹೊದಿಕೆಯು ಸಂಕುಚಿತವಾಗಿ ಕೊಕ್ಕು ಹೊರಚಾಚುತ್ತದೆ. ಪ್ರಕೃತಿ ಅದ್ಯಾವ ಕಾರಣಕ್ಕಾಗಿ ಈ ವಿಶಿಷ್ಠ ರಚನೆಯನ್ನು ಈ ಹಕ್ಕಿಗೆ ನೀಡಿದೆಯೋ ಗೊತ್ತಿಲ್ಲ.
ಇದಲ್ಲದೆ ಕುತ್ತಿಗೆಗೆ ಜೋತುಬಿದ್ದಿರುವ ಬಣ್ಣಬಣ್ಣದ ಚರ್ಮಪದರ , ತಲೆಯ ಮೇಲಿರುವ ಜುಟ್ಟು , ಮೈತುಂಬ ಗರಿಗಳು ಇದರ ವೈಶಿಷ್ಟ್ಯ.


ಇದರ ಭಾವನೆಗಳಿಗೆ ತಕ್ಕಂತೆ ಇದರ ಕತ್ತು ಮತ್ತು ತಲೆಯ ಬಣ್ಣ ಬದಲಾಗುತ್ತದೆ . ಅದರ ಸಿಟ್ಟು , ಹಸಿವು , ಭಯ ಮೊದಲಾದ ಭಾವಗಳನ್ನು ಕತ್ತಿನ ನೀಲಿ ಹಸಿರು ಕೆಂಪು ಹೀಗೆ ಬಣ್ಣ ಬದಲಿಸುವುದರ ಮುಖಾಂತರ ವ್ಯಕ್ತಪಡಿಸುತ್ತದೆ!!
ಗಂಡು ಥೇಟ್ ನವಿಲಿನಂತೆ ತನ್ನ ಗರಿಗಳನ್ನು ಬಿಚ್ಚಿ ನಿಂತು ಹೆಣ್ಣನ್ನು ಆಕರ್ಷಿಸುತ್ತದೆ.
ಹೆಣ್ಣು ಹುಟ್ಟಿದ ಮುವತ್ತನೇ ವಾರದಿಂದ ಮೊಟ್ಟೆಯಿಡಲು ಸಿದ್ಧವಾಗುತ್ತದೆ. ವರ್ಷಕ್ಕೆ ಸುಮಾರು ೭೦ -೧೦೦ ಮೊಟ್ಟೆಗಳನ್ನಿಡಬಲ್ಲದು.ಮರಿಗಳು ಹುಟ್ಟಿ ಸ್ವಲ್ಪ ಹೊತ್ತಿನಲ್ಲೇ ಆಹಾರ ಹುಡುಕಿ ಗೂಡಿನಿಂದ ಹೊರಹೊರಡಬಲ್ಲವು.
ಪೂರ್ಣಪ್ರಮಾಣದಲ್ಲಿ ಬೆಳೆದ ಹಕ್ಕಿಯ ಗರಿಷ್ಟ ತೂಕ ಸುಮಾರು ೧೫ ಕೆಜಿ.
ಕೋಳಿಯಂತೆಯೆ ಇದು ಕಾಳು , ಬೀಜ ಕೀಟ ಮೊದಲಾದವುಗಳನ್ನು ತಿನ್ನುತ್ತದೆ.
ಇದರ ಮೊಟ್ಟೆ ಮತ್ತು ಮಾಂಸದಲ್ಲಿರುವ ಅಂಶಗಳು.

ಮೊಟ್ಟೆ - ಪ್ರೋಟೀನ್ ೧೩%
ಲಿಪಿಡ್ ೧೧.೮%
ಕಾರ್ಬೋಹೈಡ್ರೇಟ್ ೧.೭%
ಕೊಲೆಸ್ಟಿರಾಲ್ ೧೫-೨೦%

ಮಾಂಸ - ಪ್ರೋಟೀನ್ ೨೪%
ಕೊಬ್ಬು ೬.೬%
ಶಕ್ತಿ - ೧೬೨ಕ್ಯಲೊರಿಗಳು
ಇದಲ್ಲದೆ ವಿಟಾಮಿನ್ಗಳು, ಪೊಟಾಸಿಯಂ , ಕ್ಯಾಲ್ಸಿಯಂ ,ಕಬ್ಬಿಣಾಂಶ , ಜಿಂಕ್ , ಸೋಡಿಯಂ , ಅಮೈನೋ ಆಸಿಡ್ಸ್ ಇತ್ಯಾದಿಗಳಿಂದ ಕೂಡಿದೆ.

ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ಇದರ ಸಾಕಾಣಿಕೆ ನಡೆಯುತ್ತಿದೆ. ಹೆಸರಘಟ್ಟದಲ್ಲಿರುವ " ಸೆಂಟ್ರಲ್ ಪೌಲ್ಟ್ರಿ ಡೆವಲಪ್ಮೆಂಟ್ ಆರ್ಗನೈಜೇಶನ್ " ಇದರ ಸಾಕಾಣಿಕೆಯ ಬಗ್ಗೆ ಬೇಕಾದ ಮಾಹಿತಿ ಒದಗಿಸುತ್ತದೆ .

8 comments:

 1. abha.. estu doDDadaagide.... chennagide vivaraNe... hego mamsaharigaLige oLLe vivara kottiddeeri.

  ReplyDelete
 2. ಟರ್ಕಿ ಎನ್ನುವ ಪದವನ್ನು ಆಂಗ್ಲ ಕಾದಂಬರಿಗಳಲ್ಲಿ ಓದಿದಾಗ, ಅದು ಒಂದು ಬಗೆಯ ಕೋಳಿ ಎಂದಷ್ಟೇ ತಿಳಿದಿದ್ದೆ. ಸುಂದರ ಚಿತ್ರಗಳೊಡನೆ ವಿವರಗಳನ್ನು ತಿಳಿಸಿದ್ದೀರಿ.
  ಧನ್ಯವಾದಗಳು.

  ReplyDelete
 3. ಬಹಳ ಉಪಯುಕ್ತ ಲೇಖನ ಸುಮಕ್ಕ :) ಎರಡು ದಿನಗಳ ಹಿಂದೆ ಟರ್ಕಿ ಕೋಳಿಯನ್ನು ನೋಡಿದ್ದೆ. ಈಗ ಓದಿದಾಗ ಬಹಳ ಖುಷಿ ಆಯ್ತು :))

  ReplyDelete
 4. ಮಾಹಿತಿಪೂರ್ಣ ಲೇಖನ..

  ReplyDelete
 5. ಸುಮ ಅವರೇ,
  ಟರ್ಕಿ ಕೋಳಿ ಅಮೇರಿಕದಲ್ಲಿ ಭಯಂಕರ ವಿಖ್ಯಾತ..ಥ್ಯಾಂಕ್ಸ್ ಗೀವಿಂಗ್ ಎಂಬ ಅಮೇರಿಕದ ರಜದಿನದ ಮುಖ್ಯ ಖಾದ್ಯವೆ ಈ ಟರ್ಕಿ

  ReplyDelete
 6. In india turkey is in demand during Christmas/thanksgiving especially in the star hotels. My elder daughter is doing Hotel Management course and i get such info from her!
  ಸುಮಾರು ದಿನಗಳಾದ ನಂತರ ನಿಮ್ಮ ಬ್ಲಾಗ್ ಗೆ ಬಂದೆ. ಮಾಸ್ಟ್ ಹೆಡ್ ನ ಚಿತ್ರ ತುಂಬ ಇಷ್ಟ ಆಯ್ತು.
  :-)
  ಮಾಲತಿ ಎಸ್.

  ReplyDelete
 7. nimmakkintaa munchaye (baalyadindale) tarkee koli gottiddaru ishttondu maahiti gottiralilla. tamma anveshane mattyu hudukaatada manodharma adbhuta. tammallina scientific temperment-ge hats off!!!!

  ReplyDelete