26 Jun 2012

ಭೂರಮೆಗೀಗ ಮೂರು ವರ್ಷ

ಭೂರಮೆಗೀಗ ಮೂರು ವರ್ಷ . ಮೊದಮೊದಲು ವಾರಕ್ಕೊಂದು ಲೇಖನ ಬರೆಯುತ್ತಿದ್ದವಳು ನಂತರ ಹದಿನೈದು ದಿನಕ್ಕೊಂದು , ಇತ್ತೀಚಿಗೆ ತಿಂಗಳಿಗೊಂದರಂತೆ ಬರೆದಿದ್ದೇನೆ . ಇಷ್ಟಾದರೂ ಬರೆಯಬಲ್ಲೆ ಎಂಬ ವಿಶ್ವಾಸ  ನನಗೇ ಇರಲಿಲ್ಲ. ಯಾಕೆಂದರೆ ಮನದ ಭಾವನೆಗಳನ್ನು ವ್ಯಕ್ತ ಪಡಿಸುವುದರಲ್ಲಿ ನಾನು ಸ್ವಲ್ಪ ಹಿಂದೆಯೇ .
ಚಿಕ್ಕಂದಿನಿಂದಲೂ ಮೌನಗೌರಿಯೇ .  ಕೈಯಲ್ಲೊಂದು ಪುಸ್ತಕ ಹಿಡಿದು ದಿನವಿಡೀ ಮೌನವಾಗಿ ಕಳೆದುಬಿಡುತ್ತಿದ್ದೆ . ಹಾರುತ್ತ , ಕುಣಿಯುತ್ತ  , ನನ್ನ ಪಾಲಿನ ಮಾತನ್ನು ತಾನೇ ತೆಗೆದುಕೊಂಡಂತೆ  ಮಾತನಾಡುತ್ತಿದ್ದ ತಂಗಿಯನ್ನು ನೋಡಿ ಎಲ್ಲರು  " ದೊಡ್ಡವಳು ತುಂಬ ನಿಧಾನ ಚಿಕ್ಕವಳು ತುಂಬ ಚುರುಕು "   ಎನ್ನುತ್ತಿದ್ದರು ! ನಾನು ಓದಿದ ಹೈಸ್ಕೂಲಿಗೆ ಮೂರು ವರ್ಷದ ನಂತರ ಸೇರಿದ ಅವಳು ಪ್ರತಿದಿನ ಮನೆಗೆ ಬಂದು " ಅಕ್ಕ ನೀನ್ಯಾಕೆ  ಸ್ಕೂಲಲ್ಲಿ ಅಷ್ಟು ಸೈಲೆಂಟ್  ಆಗಿದ್ದೆ ... ನಿನ್ನ ಕಾರಣದಿಂದ ನಾನು ಎಲ್ಲ  ಟಿಚರ್ಸ್ ಹತ್ರ ಬೈಸ್ಕೊತೀನಿ ಗೊತ್ತ ! ಎಲ್ಲ ಹೇಳ್ತಾರೆ ನಿಮ್ಮಕ್ಕ ಎಷ್ಟು ಸುಮ್ಮನಿರ್ತಿದ್ದಳು ,ನಿಂದು ತುಂಬ ಗಲಾಟೆ  ಅಂತ  " ಎಂದು ಜಗಳವಾಡುತ್ತಿದ್ದಳು  .
ಬೆಳೆಯುತ್ತಿದ್ದಂತೆ ಸ್ವಲ್ಪ ಮಾತು ಕಲಿತೆನಾದರು ಅದು ಪರಿಚಿತರಲ್ಲಿ ಮಾತ್ರ . ಅಪ್ತರಾದವರಲ್ಲಿ ಚೆನ್ನಾಗಿ ಹರಟುತ್ತಿದ್ದೆನಾದರು , ಹೊಸಬರನ್ನು ಕಂಡರೆ ನನ್ನ ಬಾಯಿಗೆ ಬೀಗವೇ . ಇದರಿಂದಾಗಿ   ಅವಳಿಗೆ ಸ್ವಲ್ಪ ಜಂಭ , ಸರಿಯಾಗಿ ಮಾತನಾಡಿಸೋಲ್ಲ   ಎನ್ನುವವರಿದ್ದರು.
ಮದುವೆಯಾದದ್ದು ಕಲ್ಲನ್ನೂ  ಮಾತನಾಡಿಸಬಲ್ಲ ಮಾತಿನಮಲ್ಲನನ್ನು !  ಮೊದಮೊದಲು ಅವರು ಹತ್ತು ಮಾತನಾಡಿದರೆ ನಾನು ಒಂದು ಮಾತನಾಡುತ್ತಿದ್ದೆ . ವರ್ಷಗಳುರುಳಿದಂತೆಲ್ಲ ಅವರ ತಲೆ ತಿನ್ನುವಷ್ಟು ಮಾತನಾಡುವುದೇನೋ  ರೂಢಿಯಾಯ್ತು .  ಆದರೆ  ಹೊಸ ಪರಿಚಯ  ಮಾಡಿಕೊಳ್ಳುವುದು , ಗೆಳೆತನ ಬೆಳೆಸಿಕೊಳ್ಳುವುದು ಇವತ್ತಿಗೂ ನನಗೆ ಸ್ವಲ್ಪ ಕಷ್ಟವೇ .
  ಇಂತಹ ನನಗೂ  ಈ ಬ್ಲಾಗ್ ಲೋಕ ಅನೇಕ ಸಮಾನಮನಸ್ಕ ಗೆಳೆಯರನ್ನು ನೀಡಿದೆ. ಇಲ್ಲಿನ ಗೆಳೆತನಕ್ಕೆ ನೀನು ನನ್ನ ಕಂಡಾಗ ಮಾತನಾಡಿಸಲಿಲ್ಲ , ಪೋನ್ ಮಾಡಲಿಲ್ಲ , ಎನ್ನುವ  ನಿರೀಕ್ಷೆ ಇಲ್ಲ  , ಹಾಗೆಂದೇ , ಹಿಗನ್ನಬಾರದಿತ್ತು ಎನ್ನುವಂತಹ ಯಾವುದೇ  ಬಂಧವಿಲ್ಲ . ನನ್ನ ಚಿಪ್ಪಿನೊಳಗೆ ನಾನಿದ್ದು , ಬೇಕೆಂದಾಗ ಯಾರನ್ನೋ ಮಾತನಾಡಿಸುವ , ಅಭಿಪ್ರಾಯ ಹಂಚಿಕೊಳ್ಳುವ  ಸ್ವಾತಂತ್ರವಿರುವ  ಇಂತಹ  ಗೆಳೆತನ ನನ್ನಂತವರಿಗೆ ವರದಾನ :) ಇದನ್ನು ದೊರಕಿಸಿದ ಈ ಬ್ಲಾಗ್ ಲೋಕಕ್ಕೊಂದು ಧನ್ಯವಾದ :)
ಹಾಗೆಯೇ  ಇಲ್ಲಿ ನನ್ನ ಬರಹಗಳನ್ನೋದಿ ಪತ್ರಿಕೆಗೆ ಬರೆಯುವುವಂತೆ ಪ್ರೇರೇಪಿಸಿ ಕೆಲ ಬರಹಗಳನ್ನು ಪ್ರಕಟಿಸಿದ ಮಾಧ್ಯಮದ ಗೆಳತಿಯರಿಗೊಂದು ದೊಡ್ಡ ಥ್ಯಾಂಕ್ಸ್ :)
ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವವರೆಲ್ಲರಿಗೂ ಧನ್ಯವಾದಗಳು :) 

16 comments:

  1. ಒಳ್ಳೆಯ ಸ್ವಗತ ಬರಹ...ತಬಲಾ ಒಂದು ನಿಶಬ್ಧ ವಾದ್ಯವೆ...ಯಾರಾದರೊಬ್ಬರು ಅದರ ಪಟಲವನ್ನು ತಾಕುವ ತನಕ..!!!

    ReplyDelete
  2. ಚೆನ್ನಾಗಿದೆ ಸುಮಾ ಮೇಡಂ. ಬರೆಯುತ್ತಿರಿ.
    ಮೇಲಿನ ಕಾಮೆಂಟ್ ನ ಮುಂದುವರಿದ ಭಾಗ :
    ವೀಣೆಯೂ ಮೌನ ವೈಣಿಕನ ಕರ ತಾಕುವ ತನಕ
    ಎಂದೆಂದು ಇರಲಿ ನಿಮಗೆ ಬರೆಯುವ ತವಕ

    ReplyDelete
  3. Congrats Suma!! write more and more!!
    malathi akka

    ReplyDelete
  4. ಬರವಣಿಗೆಗಳು ಸದಾ ಹರಿದುಬರುತ್ತಿರಲಿ.

    ReplyDelete
  5. ಭೂರಮೆಗೆ ಮೂರು ವರ್ಷ ತುಂಬಿದ ಈ ಸಂತಸದ ಕ್ಷಣದಲ್ಲಿ, ನಿಮ್ಮೆಲ್ಲ ಬರಹಗಳು ಇನ್ನೂ ಪ್ರಕಾಶಮಾನವಾಗಲಿ ಜನ ಜನಿತವಾಗಲಿ ಪ್ರಚಾರಗೊಳ್ಳಲಿ ಮತ್ತು ಪ್ರಶಸ್ತಿಗಳು ಹುಡುಕಿ ಬರಲಿ ಎಂದು ಹಾರೈಸುತ್ತೇನೆ. ನಿಮ್ಮ ಪುಸ್ತಕಗಳು ಬೇಗ ಪ್ರಕಟಗೊಂಡು ನಮ್ಮ ಓದಿಗೆ ಸಗಲಿ ಎಂದು ಬಯಸುತ್ತೇನೆ.

    ಒಳ್ಳೆಯವರು ಒಳ್ಳೆಯದನ್ನೇ ಮಾಡುತ್ತಾರೆ, ಬರೆಯುತ್ತಾರೆ, ಆಚರಿಸುತ್ತಾರೆ. ನಿಮ್ಮಂತ ಒಳ್ಳೆಯವರ ಬ್ಲಾಗ್ ಓದುವುದೇ ನಮಗೆ ಆನಂದ.

    ದಯಮಾಡಿ ನನ್ನ ಬ್ಲಾಗಿಗೂ ಒಮ್ಮೆ ಬನ್ನಿರಿ.

    ReplyDelete
  6. ಸುಮ, ಮೊದಲಿಂದ ಹುರುಪು ದಿನೇ ದಿನೇ ಕಡಿಮೆಯಾಗುತ್ತೆ ಆದರೂ ನೀವು ಆಗಾಗ ಒಳ್ಳೊಳ್ಳೆ ಲೇಖನಗಳನ್ನ ನೀಡಿದ್ದೀರಿ. ನಿಮಗೆ ಮತ್ತು ನಿಮ್ಮ ಬ್ಲಾಗಿಗೆ ಶುಭಾಶಯಗಳು.

    ReplyDelete
  7. ShubhashayagaLu.. Suma, chendada barahagaLu baruttirali.

    ReplyDelete
  8. ಮೂರನೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. ‘ಚಿಪ್ಪಿನಲ್ಲಿ ಸೇರಿಕೊಳ್ಳುವ ವ್ಯಕ್ತಿ ತಾನು’ ಎಂದು ಬರೆದಿದ್ದೀರಿ. ಆದರೆ ಮುತ್ತು ಇರುವುದು ಚಿಪ್ಪಿನಲ್ಲಿಯೇ ತಾನೆ!

    ReplyDelete
  9. ಚೆನ್ನಾಗಿದ್ದು ಸುಧಾಕ್ಕ :-)
    ಮೂರನೇ ವರ್ಷದ ಶುಭಾಶಯ :-)
    ಕೊನೆ ಪ್ಯಾರಾ ಬರ್ತಿ ಇಷ್ಟ ಆತು :-)

    ReplyDelete
  10. adbhutavaagi swagata neeidddiraa....
    bhuramege abhinandaegalu...

    ReplyDelete
  11. Congrats Sumaa.... !!

    jai Ho !!

    ReplyDelete
  12. ಅಭಿನಂದನೆಗಳು ಸುಮ.... ಹೀಗೇ ಹತ್ತು ಹಲವು ವಸಂತಗಳು ಲೇಖನದ ಸುಮ ಘಮಘಮಿಸುತ್ತಿರಲಿ...ಭೂರಮೆಯಲಿ.

    ReplyDelete
  13. sumakka,BHOORAMEya 3ne varshakke shubhaashaya.nagarada kote bagegina lekhana thumbaa ishta aatu.

    ReplyDelete