15 Jun 2009

ಪುನರೋತ್ಪತ್ತಿ (regeneration)-ನನಗೆ ಪ್ರಾಣಿ ಪ್ರಪಂಚದ ವಿಸ್ಮಯಗಳ ಬಗ್ಗೆ ತು೦ಬಾ ಕುತೂಹಲವಿದೆ. ನನಗೆ ತಿಳಿದ ವಿಚಾರಗಳನ್ನು ಹಂಚಿಕೊಳ್ಳುವುದು ಕೂಡ ಇಷ್ಟ . "ಪುನರೋತ್ಥಾನ "ಅಥವಾ 'ಪುನರೋತ್ಪತ್ತಿ ' ಎಂಬುದು ಜೀವಜಗತ್ತಿನಲ್ಲಿ ಅನುದಿನ ನಡೆಯುವ ಪ್ರಕ್ರಿಯೆ.ಯಾವುದೋ ಕಾರಣದಿಂದ ನಷ್ಟವಾದ ಜೀವಕೋಶಗಳು ಅಥವಾ ಅಂಗಗಳು ಪುನಃ ಉತ್ಪತ್ತಿಯಾಗುವುದನ್ನೇ ಜೀವವಿಜ್ಞಾನಿಗಳು 'Regenaration' ಎನ್ನುತ್ತಾರೆ.

ವಿವಿಧ ಜೀವಿಗಳಲ್ಲಿರುವ ಈ ಸಾಮರ್ಥ್ಯವನ್ನು ನಮ್ಮ ಪುರಾಣದ ಕೆಲವು ಸನ್ನಿವೇಶಗಳಿಗೆ ಎಷ್ಟು ಚೆನ್ನಾಗಿ ಹೊಂದಿಸಬಹುದು ಗೊತ್ತೇ?


  • 'ಹೈಡ್ರಾ' ಎಂಬ ಸಮುದ್ರಜೀವಿಯನ್ನು ಇನ್ನೂರು ತುಂಡುಗಳಾಗಿ ವಿಭಜಿಸಿದರೆ ಪ್ರತಿಯೊಂದು ಭಾಗವು ಪ್ರತ್ಯೇಕ ಜೀವಿಯಾಗಿ ಬೆಳೆಯುತ್ತವೆ -ಕೌರವರು,ರಕ್ತಬೀಜಾಸುರ , ಇವರೆಲ್ಲ ಇದೇ ಜಾತಿಗೆ ಸೇರಿದವರಿರಬೇಕು ಅಲ್ಲವೇ?

  • ಎರೆಹುಳು ಮೊದಲಾದ 'annelida'ಜಾತಿಗೆ ಸೇರಿದ ಜೀವಿಗಳನ್ನು ಎರಡು ತುಂಡಾಗಿ ಕತ್ತರಿಸಿದರೆ ಎರಡೂ ಪ್ರತ್ಯೇಕ ಹುಳುವಾಗಿ ಬೆಳೆಯುತ್ತವೆ.-ಜರಾಸಂಧನ ನೆನಪಾಗುತ್ತದೆಯಲ್ಲವೇ?

  • ಹಲ್ಲಿಗಳು ಅಪಾಯ ಎದುರಾದಾಗ ತಮ್ಮ ಬಾಲವನ್ನು ಕಳಚಿ ಅಲ್ಲೇ ಬಿಟ್ಟು ಹೋಗುತ್ತವೆಯಷ್ಟೇ, ಅವು ತಮ್ಮ ಬಾಲವನ್ನು ಪುನಃ ಬೆಳೆಸಿಕೊಲ್ಲಬಲ್ಲವು. -ಹನುಮಂತನ ನೆನಪಾಯಿತೇ?

  • spider ,ಏಡಿ ಕಳೆದುಕೊಂಡ ಕಾಲುಗಳನ್ನು ಪುನಃ ಬೆಳೆಸಿಕೊಲ್ಲಬಲ್ಲವು.

  • vikaasahondida jeevigalaada sastanigalu kevala charma moole muntaada kela jeevakoshagalannu maatra punah belesikollaballavu.
  • ಒಂದುವೇಳೆ ಮನುಷ್ಯನಿಗೆ ಈ regeneration ಪವರ್ ಚೆನಾಗಿದ್ದಿದ್ದರೆ ಏನಾಗುತ್ತಿತ್ತು? - ಕನ್ನಡ ಸಿನಿಮಾ ಹಿರೋಗಳ ಮಚ್ಚು ಲಾಂಗುಗಳಿಗೆ ಕೆಲಸವಿರುತ್ತಿರಲಿಲ್ಲ.


3 comments: