ನಾಗರಿಕತೆ
ಪರಿಚಯದ ನಗು ಅರಳಿಸಿದ ಪಕ್ಕದಮನೆಯಾಕೆಯನ್ನು
ನೋಡಿಯು ನೋಡದಂತೆ ನಟಿಸಿ ಮನೆಯೊಳಸೇರಿ
ಅಂತರ್ಜಾಲದಲ್ಲಿ ಕಂಡರಿಯದವರಾರಿಗೋ
friend request ಕಳಿಸಿದೆ .
ನಿಯಮಗಳು
ನಮ್ಮ ಸ್ಕೂಲು ತುಂಬ ಸ್ಟ್ರಿಕ್ಟ್ !
ಕೈಬಳೆ, ಕಾಲ್ಚೈನು ಲೋಲಾಕ್
ಧರಿಸಿ ಬರುವಂತಿಲ್ಲ ಗೊತ್ತಿಲ್ಲವೇ ನಿನಗೆ??
ಮುಂಗೈನ ಬಳೆ ಸರಿಸುತ್ತ , ಲೋಲಾಕ್ಕು ಝಳಪಿಸುತ್ತ
ಗಾಢ ಕೆಂಪು ತುಟಿಗಳಿಂದ ಮಣಮಣಿಸಿ
ಹೈ-ಹೀಲ್ಡ್ ಅನ್ನು ಟಕಟಕಿಸುತ್ತ
ಮರೆಯಾದಳು ಮಿಸ್ ಮಾಯಾ !!
ನೈತಿಕತೆ
ಕಷ್ಟ ಪಟ್ಟು ತೆರಿಗೆ ಕದ್ದು ಉಳಿಸಿ
ಹಾಸಿಗೆಯೊಳಗೆ ಬಚ್ಚಿಟ್ಟಿದ್ದ ಹಣದಲ್ಲಿ
ಸಾವಿರ ಕಾಣದಾದಾಗ
ಕೆಲಸದಾಳನ್ನು ಮನಬಂದಂತೆ ಥಳಿಸಿ
ನೈತಿಕತೆಯ ಪಾಠ ಹೇಳಿದ
ಕೋಟ್ಯಾಧಿಪತಿ !
ಚಟ
'ಗೆಳೆಯರ ಜೊತೆ ಸೇರಿ ಕದ್ದು ಮುಚ್ಚಿ
ಸಿಗರೇಟು ಸೇದುತ್ತಿಯೇನೋ '
ಹದಿಹರೆಯದ ಮಗನನ್ನು
ತರಾಟೆಗೆ ತೆಗೆದುಕೊಳ್ಳುತ್ತಾ
ತನ್ನ ಸಿಗಾರಿಗೆ ಬೆಂಕಿ ಹಚ್ಚಿದ ತಂದೆ.
Good one!
ReplyDeleteThird one is too good.
ಕಚಗುಳಿ ಇಡುವ೦ಥಾ ಚುಟುಕುಗಳು. ಚೆನ್ನಾಗಿವೆ.
ReplyDeleteಸುಮಾ ಮೇಡಮ್,
ReplyDeleteನೀವು ನನ್ನ ಬ್ಲಾಗಿಗೆ ಬಂದಾಗ ಇದ್ಯಾರು ಅಂತ ಬಂದು ನಿಮ್ಮ ಚುಟುಕಗಳನ್ನು ಓದಿದೆ. ವೈರುಧ್ಯವೆನ್ನುವ ಹೆಸರಿಗೆ ತಕ್ಕಂತೆ ಇವೆ....ಚೆನ್ನಾಗಿವೆ...
ಧನ್ಯವಾದಗಳು.
ಸುಮಾ ಅವರೇ,
ReplyDeleteಛಾಯಾ ಕನ್ನಡಿಯಲ್ಲಿ ನಿಮ್ಮ ಕಮೆಂಟು ನೋಡಿ ಬಂದೆ... ಚುಟುಕುಗಳು ಸಖತ್ತಾಗಿವೆ.. ದಿನನಿತ್ಯದ ವಿಪರ್ಯಾಸಗಳ ಪರಮಾವಧಿಯನ್ನು ತುಂಬಾ ಚೆನ್ನಾಗಿ ಚುಟುಕುಗಳಲ್ಲಿ ಹೆಣೆದಿದ್ದೀರ. 'ನಾಗರೀಕತೆ' ತುಂಬಾ ಇಷ್ಟವಾಯಿತು. ಹೀಗೇ ಬರೆಯುತ್ತಾ ಇರಿ.
ಅಭಿನಂದನೆಗಳೊಂದಿಗೆ,
- ಉಮೇಶ್