14 Jun 2010

ಭೂರಮೆಯ ಬರ್ತ್ ಡೇ....

ಒಂದು ರೀತಿಯಲ್ಲಿ ಚಿಪ್ಪಿನಲ್ಲಿ ಹುದುಗಿಕೊಂಡ ಮೃದ್ವಂಗಿಯಂತಿದ್ದ ನನ್ನ ಭಾವನೆಗಳನ್ನ ನಿಮ್ಮೊಡನೆ ಹಂಚಿಕೊಳ್ಳಲು ಪ್ರಾರಂಭಿಸಿ ಒಂದು ವರ್ಷ ಕಳೆಯಿತು .
ಬ್ಲಾಗ್ ಪ್ರಪಂಚದೊಳಗೆ ನಾನು ಕಾಲಿಟ್ಟಿದ್ದು ಆಕಸ್ಮಿಕವಾಗಿ . ಕೆಂಡಸಂಪಿಗೆಯಲ್ಲಿನ ದಿನದ ಬ್ಲಾಗ್ ಅಂಕಣದಲ್ಲಿದ್ದ "ಓ ನನ್ನ ಚೇತನಾ "ನಾನು ಮೊದಲು ಓದಿದ ಬ್ಲಾಗ್ ಇರಬೇಕು . ನಂತರ ಮೌನಗಾಳ , ಟೀನಾಜೋನ್ , ಮೌನಕಣಿವೆ , ವಿಕಾಸವಾದ , ಮಾನಸ , ಇಟ್ಟಿಗೆ ಸಿಮೆಂಟು , ಸಲ್ಲಾಪ, ಜಲನಯನ ,ಛಾಯಾಕನ್ನಡಿ ...............ಒಹ್!!! ಹೊಸ ಲೋಕವೊಂದು ನನ್ನೆದುರು ತೆರೆದುಕೊಂಡಿತು. ಎಷ್ಟೊಂದು ವೈವಿಧ್ಯಮಯ ಬರಹಗಳು , ವಿಚಾರಗಳು , ವಾದವಿವಾದಗಳು ......... ದಿನಕ್ಕೊಮ್ಮೆ ಒಂದಿಷ್ಟು ಬ್ಲಾಗ್ ಬರಹಗಳನ್ನೋದುವುದು ಅಭ್ಯಾಸವಾಗಿಹೋಯಿತು.

ಹೀಗೆ ಕುತೂಹಲಕ್ಕೊಮ್ಮೆ "ಕ್ರಿಯೇಟ್ ಬ್ಲಾಗ್ " ಕ್ಲಿಕ್ ಮಾಡಿ ನಾನೂ ಬ್ಲಾಗ್ ಪ್ರಾರಂಭಿಸಿಬಿಟ್ಟೆ. ಏನೊ ಮನಸ್ಸಿಗೆ ತೋಚಿದ ಕಥೆಗಳನ್ನು , ಪ್ರೀತಿಯ ಜೀವಿಗಳ ಬಗ್ಗೆ ತಿಳಿದ ಮಾಹಿತಿಯನ್ನು ... ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ . ನೀವೂ ಓದಿ ಪ್ರೋತ್ಸಾಹಿಸುತ್ತಿದ್ದೀರಿ . ಅದಕ್ಕಾಗಿ ಎಲ್ಲ ಓದುಗರಿಗೂ ಧನ್ಯವಾದಗಳು.


ಸಾಗರದ ಬಳಿ ಚಿಕ್ಕ ಊರೊಂದರ ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದ ನನ್ನಜ್ಜ ರಾಮಚಂದ್ರ ಭಟ್ ನನ್ನ ಓದಿನ ಆಸಕ್ತಿಗೆ ನೀರೆರೆದವರು. ಪ್ರತಿ ತಿಂಗಳು ಅವರು (ಸಂಬಳದ ದಿನವಿರಬಹುದು) ಪೇಟೆಗೆ ಹೋಗಿ ವಾಪಾಸ್ ಬರುವುದನ್ನು ಕಾಯುತ್ತಾ ನಿಲ್ಲುತ್ತಿದ್ದ ನನ್ನ ಕೈಗೆ ಮಕ್ಕಳ ಕತೆಪುಸ್ತಕಗಳನ್ನು , ರಾಮಾಯಣ , ಮಹಾಭಾರತ ಮೊದಲಾದ ಪುಸ್ತಕಗಳನ್ನು ತಂದುಕೊಟ್ಟು ನನ್ನಲ್ಲಿ ಓದಿನ ರುಚಿ ಹತ್ತಿಸಿದರು . ಇದಕ್ಕಾಗಿ ಅವರಿಗೆ ನಾನು ಚಿರರುಣಿ.

ತಾನು ಓದಿದ ಒಳ್ಳೆ ಪುಸ್ತಕಗಳ ಬಗ್ಗೆ ನನ್ನಲ್ಲಿ ಚರ್ಚಿಸುತ್ತ ನಾನೂ ಅವುಗಳನ್ನು ಓದಲು ಪ್ರೇರೆಪಿಸಿದ ಅಮ್ಮ ನಿಗೊಂದು ದೊಡ್ಡ ಥ್ಯಾಂಕ್ಸ್ .

ಸ್ಕೂಲಿನ ಯಾವುದೋ ಪ್ರಭಂದ ಸ್ಪರ್ಧೆಗೆ ಪ್ರಥಮ ಬಾರಿ ಪರಿಸರದ ಬಗ್ಗೆ ಪ್ರಭಂದ ಬರೆಯುವಾಗ ಹೇಗೆ ಬರೆಯಬೇಕೆಂದು ತಿಳಿಸಿದ ಅಪ್ಪ ಬಹುಶ: ನನ್ನ ಬರಹದ ಶೈಲಿಗೆ ಕಾರಣ . ಸ್ವತಃ ನಾಟಕಗಳನ್ನು ಬರೆದು ಊರಿನ ಮಕ್ಕಳಿಗೆ ಹೇಳಿಕೊಡುತ್ತಿದ್ದ ತುಂಬ ಕಡಿಮೆ ಮಾತಿನ ಅಪ್ಪ ನನ್ನ ಬ್ಲಾಗ್ ಓದಿ "ಚೆನ್ನಾಗಿದ್ದು" ಹೇಳಿದ್ದು ನನಗೆ ಸಿಕ್ಕ ದೊಡ್ದ ಕಾಂಪ್ಲಿಮೆಂಟ್ ಎಂದು ನನ್ನ ಅನಿಸಿಕೆ.

ಪ್ರಾಣಿ ಪಕ್ಷಿಗಳ ಬಗ್ಗೆ ನಾನು ಓದಿದ ಸಂಗತಿಗಳು , ಯಾವುದೋ ಮೆಚ್ಚಿನ ಬರಹ , ಇಷ್ಟದ ಕಾದಂಬರಿ ಎಲ್ಲವುಗಳ ಬಗ್ಗೆ ಗಂಟೆಗಟ್ಟಲೇ ನಾನು ಕೊರೆಯುವುದನ್ನು ಕೇಳಿಸಿಕೊಳ್ಳುತ್ತಾ , ಕಾಡು ಮೇಡು ತಿರುಗುವ ನನ್ನ ಉತ್ಸಾಹಕ್ಕೆ ಇಂಬು ಕೊಡುತ್ತಾ, ನನ್ನ ಬರಹಗಳಿಗೆ ಬೇಕಾದ ಸ್ಪೂರ್ತಿ ನೀಡುತ್ತಾ, ಸದಾ ನನ್ನನ್ನು ಪ್ರೋತ್ಸಾಹಿಸುವ ನನ್ನ ಗಂಡನಿಗೆ ಮತ್ತು ಮಗಳು ಇಂಚರಾಗೆ ಥ್ಯಾಂಕ್ಸ್ ಹೇಳೋದು ತೀರಾ ಫಾರ್ಮಲ್ ಅನ್ನಿಸುತ್ತಾ?

ದುಖಃದ ಸಂಗತಿಯೆಂದರೆ ನಾನು ಬರೆದ ಪ್ರಥಮ ಕಥೆಯನ್ನೂ , ಭೈರಪ್ಪನವರ "ಜಲಪಾತ" ಕಾದಂಬರಿಯ ವಿಮರ್ಶೆಯನ್ನೂ ಓದಿ ಮೆಚ್ಚಿಕೊಂಡು " ನಿನ್ನಲ್ಲಿ ಬರೆಯುವ ಸಾಮರ್ಥ್ಯವಿದೆ , ಹೀಗೆ ಬರೆಯುತ್ತಿರು " ಎಂದು ಹಾರೈಸಿದ ಮಾವನವರು ಈಗಿಲ್ಲ . ಇವತ್ತ್ಯಾಕೊ ಅವರ ನೆನಪು ತುಂಬ ಕಾಡುತ್ತಿದೆ.

ಇನ್ನೊಮ್ಮೆ ನನ್ನ ಒಂದು ವರ್ಷದ ಕೂಸು ಭೂರಮೆಯ ಎಲ್ಲ ಪ್ರೋತ್ಸಾಹಕರಿಗೂ ಧನ್ಯವಾದಗಳು.

31 comments:

  1. Happy birthday akkan blogige... Bariyodu khushi kodtha irovaregoo bareetha iru..

    ReplyDelete
  2. Happy Birthday to ಭೂರಮೆ! ನಿಮ್ಮ ಬ್ಲಾ^ಗಿನ ಮೂಲಕ ತುಂಬ ಉತ್ತಮ ಮಾಹಿತಿ ನನಗೆ ದೊರೆಯುತ್ತಿದೆ. ಧನ್ಯವಾದಗಳು.

    ReplyDelete
  3. MAY GOD BLESS YOU MAY GOD BLESS YOU HAPPY BIRTH DAY TO YOU BHOORAME HAPPY BIRTHDAY TO YOU!

    ReplyDelete
  4. ನಂಗೆ informative ಬರಹಗಳೆಂದರೆ ಇಷ್ಟ.ಅದಕ್ಕೇ ನಿಮ್ಮ ಬ್ಲಾಗು ನಾನು ತಪ್ಪದೇ ಓದುವ ಬ್ಲಾಗುಗಳಲ್ಲೊಂದು.

    thank you.. keep blogging.... :)

    ಭೂರಮೆಯ ಬರ್ತ್ ಡೇ ಗೆ ನನ್ನ್ ಕಡೆಯಿಂದೊಂದು ಶುಭಾಶಯ. :)

    ReplyDelete
  5. ಶುಭಾಶಯಗಳು ಸುಮಾ..ಭೂರಮೆಯ ಮೊದಲ ಹುಟ್ಟುಹಬ್ಬದಂದು! ಹೀಗೆ ನಿನ್ನ ಬರಹ ಅವಿರತವಾಗಿ ಸಾಗಲೆಂಬ ಹಾರೈಕೆ ಈ ಸುಮನಕ್ಕನದು

    ReplyDelete
  6. ಅಭಿನಂದನೆಗಳು...

    ReplyDelete
  7. 'ಭೂರಮೆ' ಹೀಗೇ ನೂರು ವರುಷ ನಳನಳಿಸುತ್ತಿರಲಿ!ಹುಟ್ಟು ಹಬ್ಬದ ಶುಭಾಶಯಗಳು.

    ReplyDelete
  8. ಶುಭಾಶಯಗಳು. ನಿಮ್ಮ ಬರಹಗಳಿಂದ ನನಗೆ ಉತ್ತಮ ಮಾಹಿತಿಗಳು ಲಭ್ಯವಾಗಿವೆ. ಮುಂದೆಯೂ ನಿಮ್ಮ ಬರಹಗಳಿಗಾಗಿ ಕಾಯುತ್ತೇನೆ.

    ReplyDelete
  9. ಹಾರ್ದಿಕ ಅಭಿನಂದನೆಗಳು. ಭೂರಮೆ ಬರಹಗಳ ಪೈರುಗಳಿಂದ ಸದಾ ಕಂಗೊಳಿಸುತ್ತಿರಲಿ.

    ReplyDelete
  10. ಭೂರಮೆಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಬರಹಗಳು ಅ೦ಕಣದಲ್ಲಿ ನಿರ೦ತರವಾಗಿ ಹೆಚ್ಚೆಚ್ಚು ಹರಿಯಲಿ ಎ೦ದು ಕೇಳಿಕೊಳ್ಳುತ್ತೆನೆ. ಹುಟ್ಟುಹಬ್ಬದ೦ದು ತಮ್ಮ ಅವಲೋಕನ ನಮ್ಮನ್ನು ಮನ ಮಿಡಿಸಿತು.
    ಇ೦ತಿ ಶುಭ ಹಾರೈಕೆಗಳು -ಸೀತಾರಾಮ.

    ReplyDelete
  11. ಭೂರಮೆ ಯಿಂದ ಇನ್ನು ಹೆಚ್ಚು ನೀರಿಕ್ಷಿಸುತ್ತಿದ್ದೇವೆ. ಬರಹ ಹೀಗೆ ಬರುತ್ತಿರಲಿ.

    ReplyDelete
  12. ಭೂರಮೆಯ ಹುಟ್ಟುಹಬ್ಬದ ಶುಭಾಶಯಗಳು.............
    ಭೂರಮೆ ನೂರಾರು ವರುಷ ಹಸಿರಾಗಿರಲಿ.....
    ಸುಮಾ ಅವರೇ,
    ನಿಮ್ಮ ಭೂರಮೆಯಲ್ಲಿ ಇನ್ನೂ ಹೆಚ್ಚಿನ ಬರಹಗಳ ನಿರೀಕ್ಷೆಯಲ್ಲಿದ್ದೇನೆ........

    ReplyDelete
  13. ಸುಮಾ ಮೇಡಂ,
    ಭೂರಮೆಯ ಹುಟ್ಟು ಹಬ್ಬಕ್ಕೆ ಸುಭಾಶಯಗಳು..... ಹೀಗೆ ಬರೆಯುತ್ತಾ ಇರಿ...... ನಿಮ್ಮ ಬ್ಲಾಗ್ ತುಂಬಾ ವಿಷಯಗಳ ಬಗ್ಗೆ ವಿವರವಾಗಿ ಬರೆಯುತ್ತೀರಿ....... ತುಂಬಾ ಇಷ್ಟವಾಗುತ್ತದೆ...... ಮತ್ತೊಮ್ಮೆಅಭಿನಂದನೆಗಳು......

    ReplyDelete
  14. ಭೂಮಿಯ ಜೀವಜಾಲದ ವೈಚಿತ್ರವನ್ನು ಅಕ್ಷರಗಳಲ್ಲಿ ಸೆರೆ ಹಿಡಿಯುತ್ತ ಸೊಗಸಾದ ಕಾರ್ಯವನ್ನು ಮಾಡುತ್ತಿರುವ ನಿಮಗೂ ನಿಮ್ಮ ಬ್ಲಾಗಿಗೂ ನನ್ನ ಹರ್ದಿಕವಾದ ಅಭಿನಂದನೆಗಳು

    ReplyDelete
  15. ಹ್ಯಾಪಿ ಬರ್ತ್ಡೇ .. ಹೀಗೆ ಬರೆಯುತ್ತ ಮುಂದುವರಿಸಿ.....ನಿಮ್ಮ ಬರಹಗಳೆಲ್ಲವೂ ಚೆನ್ನಾಗಿ ಇದೆ ...

    ReplyDelete
  16. ಸುಮಾ ಮೇಡಂ,
    ಭೂರಮೆಯ ಹುಟ್ಟು ಹಬ್ಬಕ್ಕೆ ಸುಭಾಶಯಗಳು. ಇನ್ನೂ ಹೆಚ್ಚಿನ ಬರಹಗಳು ಬರುತ್ತಿರಲಿ.

    ReplyDelete
  17. ಭೂರಮೆ ಸದಾ ಹಸಿರಿನಿಂದ ಕಂಗೊಲಿಸಲಿ..ಬರೆಯುತ್ತಿರಿ..
    --

    ReplyDelete
  18. happy birthday to ಭೂರಮೆ :)
    Shubhashayagalu :)

    ReplyDelete
  19. ಇಂದು ಮುಂದು ಎಂದೆಂದೂ
    ನಳ ನಳಿಸುತ ಭೂರಮೆಯಾಗಲಿ
    ಬ್ಲಾಗಿಗರ ಮನೋರಮೆ.....
    ಹುಟ್ಟುಹಬ್ಬದ ಹಾರ್ದಿಕ ..ಮನತುಂಬಿದ ಹಾರೈಕೆಗಳು....ಶುಭಕಾಮನೆಗಳು

    ReplyDelete
  20. Sumakka,

    Congrats!!!...
    ninna blog hinge mundvaritaa irli..nange kushi kodtirli.... :-)

    ReplyDelete
  21. ಭೂರಮೆಯ ಹುಟ್ಟು ಹಬ್ಬದ ಶುಭಾಶಯಗಳು. ಅದು ಹೀಗೆ ನೂರ್ಕಾಲ ಬಾಳಲಿ.

    ReplyDelete
  22. ಭೂರಮೆಯ ಹುಟ್ಟು ಹಬ್ಬದ ಶುಭಾಶಯಗಳು
    ನಿಮ್ಮ ಅಂಕಣಕ್ಕೆ ತಡವಾಗಿ ಬಂದಿದ್ದೇನೆ ಅನ್ನಿಸುತ್ತದೆ.
    ಈ ಅಂಕಣದಲ್ಲಿ ಇನ್ನಟ್ಟು ಹೊಸ ಹೊಸ ಬರಹಗಳು ಮೂಡಲಿ ಎಂದು ಆಶಿಸುತ್ತೇನೆ.

    ಹೊನ್ನ ಹನಿ
    http://honnahani.blogspot.com

    ReplyDelete
  23. ಸುಮ...

    ಅಭಿನಂದನೆಗಳು..
    ಶುಭಾಶಯಗಳು..

    ಲೇಖನದಿಂದ ಲೇಖನಕ್ಕೆ ವೈವಿದ್ಯತೆಯನ್ನು ಕಾಪಾಡಿಕೊಂಡು ಬಂದಿದ್ದೀರಿ..
    ಹೊಸತನ್ನು ಕೊಡುತ್ತಿದ್ದೀರಿ..
    ಈ ಪ್ರಯತ್ನ ಮುಂದುವರೆಯಲಿ..

    ಮತ್ತೊಮ್ಮೆ ಹೃದಯ ಪೂರ್ವಕ ಅಭಿನಂದನೆಗಳು...

    ReplyDelete
  24. ಅಳುವೋ.. ನಗುವೋ.. ಭೂರಮೆ ಹೀಗೆ ಸಾಗ್ತಾ ಇರಲಿ.
    ನಿಮ್ಮವ,
    ರಾಘು.

    ReplyDelete
  25. ಸುಮ ,

    ಚಿರಕಾಲ ಮಿನುಗುತ್ತಿರಲಿ..
    ಶುಭಾಷಯ..

    ReplyDelete
  26. ತುಂಬಾ ತಡವಾಗಿ ಪ್ರತಿಕ್ರಿಯುಸುತ್ತಿದ್ದೇನೆ ಕ್ಷಮೆಯಿರಲಿ, ಭೂರಮೆ ಹೀಗೆ ಅನೇಕ ಹುಟ್ಟಿದ ಹಬ್ಬಗಳನ್ನು ಆಚರಿಸಿಕೊಳ್ಳುತ್ತಲೇ ಇರಲಿ,ನೀವು ಒಳ್ಳೋಳ್ಳೆ ಲೇಖನಗಳನ್ನು ಕೊಡುತ್ತಿರಿ.once again many more happy returns of the day BHOORAME.....

    ReplyDelete