"ಅಕ್ಕ ಅವರಿಬ್ಬರನ್ನು ನೋಡು ಚಿಲ್ಕ-ಗೋರಿಂಕ ಥರ ಇದ್ದಾರೆ " ಕೆಲಸದಾಕೆ ರಸ್ತೆಯ ಮೇಲೆ ಹೋಗುತ್ತಿದ್ದ ಜೋಡಿಯೊಂದನ್ನು ತೋರಿಸಿ , ಹೇಳಿದಳು.
ಯಾರೆ ಅದು ? ಮತ್ತೆ ಅದೇನದು ಚಿಲ್ಕ - ಗೋರಿಂಕ ಅಂದ್ರೆ ? ನನಗೆ ಅರ್ಥವಾಗ್ಲಿಲ್ಲ . ಅವಳು ಕೋಲಾರದ ಬಳಿ ಆಂಧ್ರಪ್ರದೇಶದ ಗಡಿಯವಳು ..ತೆಲುಗು ಮನೆಮಾತು . ಹೀಗೆ ಕನ್ನಡದ ನಡುವೆ ತೆಲುಗನ್ನು ಸೇರಿಸಿ ಮಾತಾಡ್ತಾಳೆ . ಹಾಗಂತ ಹೆಚ್ಚಿನ ಶಬ್ದಗಳಿಗೆ ಕನ್ನಡಲ್ಲಿ ಅರ್ಥವನ್ನೂ ಹೇಳ್ತಾಳೆ.
ಆದರೆ ಅದೇನೋ ಈ ಚಿಲ್ಕ - ಗೋರಿಂಕ ಕ್ಕೆ ಕನ್ನಡ ಅರ್ಥ ಅವಳಿಗೆ ಹೇಳಲಾಗಲಿಲ್ಲ. ಅಯ್ಯೋ ....ಚಿಲ್ಕ - ಗೋರಿಂಕ ...ಅಕ್ಕ ...ಅವು ಯಾವಾಗ್ಲೂ ಒಟ್ಟೊಟ್ಟಿಗೆ ಇರ್ತವೆ ......ಇನ್ಯಾವಾಗ್ಲಾದ್ರೂ ತೋರಿಸ್ತೀನಿ ಬಿಡು ಎಂದುಬಿಟ್ಟಳು.
ಇತ್ತೀಚೆಗೆ ದೆಹಲಿಗೆ ಹೋಗಿದ್ದೆವು . ತಲುಪುವಾಗ ರಾತ್ರಿಯಾಗಿತ್ತು. ಮಾರನೆಯ ದಿನ ದೆಹಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದೆಂಬ ತೀರ್ಮಾನವಾಗಿತ್ತು. ಬೆಳಿಗ್ಗೆ ಎದ್ದು ತಯಾರಾಗಿ ತಿಂಡಿ ಮುಗಿಸಿ ಹೊರಹೊರಟರೆ ಮೊದಲು ಕಂಡದ್ದು ಹೋಟೆಲ್ ಮೆಟ್ಟಿಲ ಬಳಿಯಿದ್ದ ಎರಡು ಗೊರವಂಕಗಳು. ಎಷ್ಟು ಜನ ಅಲ್ಲೇ ಓಡಾಡುತ್ತಿದ್ದರೂ ಹೆದರದೆ ನಮ್ಮಲ್ಲಿನ ಕಾಗೆಗಳಂತೆ ತಮ್ಮ ಪಾಡಿಗೆ ಏನನ್ನೋ ಆರಿಸಿ ತಿನ್ನುತ್ತಿದ್ದವು. ಕೆಲ ಫೋಟೊ ತೆಗೆದು ಕಾರ್ ಹತ್ತಿ ಹೊರಟೆವು .
ದೆಹಲಿಯ ಬಿರ್ಲಾ ಮಂದಿರ್ , ಲೋಟಸ್ ಮಹಲ್ , ಐತಿಹಾಸಿಕ ಸ್ಥಳಗಳಾದ ಕುತುಬ್ ಮಿನಾರ್ , ಹುಮಾಯೂನ್ ಟಾಂಬ್ , ಕೆಂಪು ಕೋಟೆ , ರಾಜ್ ಘಾಟ್ ಎಲ್ಲಾ ಸುತ್ತಿದ್ದಾಯಿತು.
ಅಲ್ಲೆಲ್ಲಾ ಕಡೆಗಳಲ್ಲೂ ವಿಶಾಲ ಹುಲ್ಲುಹಾಸಿನ ನಡುವೆ ಹುಳುಹಪ್ಪಟೆ ಅರಸುತ್ತಾ ಸುತ್ತುತ್ತಿದ್ದ ಗೊರವಂಕಗಳು(Common Myna ) ಮತ್ತು ಕಾಗೆಗಳು, ಎತ್ತರದ ಕೋಟೆ , ಗುಂಬಸ್ ಗಳ ಪಡಕುಗಳಲ್ಲಿ ಕುಳಿತು ಕಿಚಪಿಚ ಶಬ್ದ ಹೊರಡಿಸುತ್ತಿದ್ದ ಸುಂದರವಾದ ಗಿಳಿಗಳು(Rose-ringed parakeets ) ಕಾಣಿಸಿದ್ದವು. ಎಷ್ಟೆಲ್ಲ ಜನಜಂಗುಳಿ ಗಲಾಟೆಗೂ ಅವು ಬೆದರದೆ ಜನ ತಿಂದು ಬಿಸಾಡಿದ ಆಹಾರವಸ್ತುಗಳಿಗಾಗಿ , ಕ್ರಿಮಿಕೀಟಗಳಿಗಾಗಿ ಅವು ಅರಸುತ್ತಿದ್ದವು.
ಮಾರನೆಯ ದಿನ ಆಗ್ರಾಕ್ಕೆ ನಮ್ಮ ಪಯಣ . ಸುಂದರವಾದ " Yamuna Expressway " ನ ರಸ್ತೆಯಲ್ಲಿ ಸಾಗುವಾಗ ಅಕ್ಕಪಕ್ಕದ ವಿಸ್ತಾರವಾದ ಬಯಲಿನಲ್ಲಿನ ಗೋಧಿ ಹೊಲಗಳು ನಮ್ಮೂರಿನ ಭತ್ತದ ಗದ್ದೆ ಬಯಲನ್ನೇ ನೆನಪಿಸಿದ್ದವು. ದಾರಿಯುದ್ದಕ್ಕೂ ನನಗೆ ಕಾಣಿಸಿದ್ದು ಮತ್ತವೇ ಗೊರವಂಕಗಳು , ಗಿಳಿಗಳು.
ತಾಜ್ ಮಹಲ್ ...ಇಷ್ಟು ದಿನವೂ ಅದರ ಚೆಲುವಿನ ಬಗ್ಗೆ ಎಷ್ಟೆಲ್ಲ ಕೇಳಿದ್ದರೂ ...ಫೋಟೋಗಳನ್ನು ನೋಡಿದ್ದರೂ ಅದರ ನಿಜವಾದ ಅಂದ ಕಲ್ಪನೆಗೆ ನಿಲುಕಿರಲಿಲ್ಲ. ಆದರೆ ಕಣ್ಣಾರೆ ಅದರ ಚೆಲುವನ್ನು ನೋಡಿದ ಮೇಲೆ ಇಷ್ಟೆಲ್ಲ ಖ್ಯಾತಿಗೆ ಅರ್ಹವಾಗಿಯೆ ಇದೆ ಅನ್ನಿಸಿತು. ನಿಜವಾಗಿ ಕಣ್ಮನ ತಣಿಯಿತು ಎಂದರೆ ಖಂಡಿತಾ ಕ್ಲೀಷೆಯಾಗದು.
ಇಷ್ಟೆಲ್ಲ ಚೆಲುವಿನ ನಡುವೆಯೂ ನನ್ನ ಕಣ್ಣು ಅಲ್ಲಿಯೂ ಇದ್ದ ಈ ಗೊರವಂಕ ಮತ್ತು ಗಿಳಿಗಳನ್ನು ಗಮನಿಸದಿರಲಿಲ್ಲ.
ಅವೆಲ್ಲ ಸ್ಥಳಗಳನ್ನು ಸಾಧ್ಯವಾದಷ್ಟೂ ಕ್ಯಾಮರಾದಲ್ಲಿ ತುಂಬಿಸಿಕೊಂಡಂತೆಯೆ ಈ ಚಿಲಿಪಿಲಿಗಳ ಅನೇಕ ಚಿತ್ರಗಳೂ ಸೆರೆಯಾದವು.
ಮನೆಗೆ ವಾಪಾಸ್ಸಾದ ನಂತರ ಕೆಲಸದವಳಿಗೆ ಅಲ್ಲಿಯ ಫೋಟೋಗಳನ್ನು ತೋರಿಸುತ್ತಿರುವಾಗ ಈ ಗಿಳಿ - ಗೊರವಂಕಗಳ ಫೋಟೋ ನೋಡಿದ ಆಕೆ " ಅಕ್ಕ ಇವೇ ನೋಡು ಚಿಲ್ಕ - ಗೋರಿಂಕ ಅಂದರೆ " ಎಂದಳು. "ಅವೆರಡೂ ಹೆಚ್ಚಾಗಿ ಒಟ್ಟಿಗೇ ಇರುತ್ತವೆ . ಅದಕ್ಕೆ ನಮ್ಮ ಕಡೆ ಒಟ್ಟಿಗೇ ಪ್ರೀತಿಯಿಂದ ಇರುವವರಿಗೆ ಹೀಗೆ ಹೇಳುತ್ತೇವೆ " ಆಕೆ ವಿವರಿಸಿದಳು. ನನ್ನ ಟ್ಯೂಬ್ ಲೈಟ್ ಹತ್ತಿಕೊಂಡಿತು.
ಕನ್ನಡ ಸಾಹಿತ್ಯದಲ್ಲೂ ಕೂಡ ಈ ಗಿಳಿ - ಗೊರವಂಕಗಳನ್ನು ಒಟ್ಟಿಗೇ ಹೆಸರಿಸುವುದನ್ನು ಅನೇಕ ಕಡೆ ಕಾಣುತ್ತೇವೆ. ಸಂಸ್ಕೃತದಲ್ಲೂ "ಶುಕಸಾರಿಕಾ " ಎಂಬ ಉಲ್ಲೇಖವಿದೆಯಂತೆ .
ಹಾಗಾದರೆ ನಿಜಕ್ಕೂ ಇವು ಒಟ್ಟೊಟ್ಟಿಗೆ ಇರುತ್ತವೆಯೆ?
ಗೊರವಂಕ ( Common Myna ) ಮೂಲತಃ ಏಷ್ಯಾ ಖಂಡದ ಹಕ್ಕಿಯಾದರೂ ಈಗ ಪ್ರಪಂಚದ ಅನೇಕ ಕಡೆ ಕಂಡುಬರುತ್ತದೆ. ಅತ್ಯಂತ ಅಗ್ರೆಸ್ಸಿವ್ ತಳಿಯಾದ ಇವುಗಳು ನಗರಪ್ರದೇಶಗಳ ಜೀವನಕ್ಕೆ ಅತ್ಯಂತ ಯಶಸ್ವಿಯಾಗಿ ಹೊಂದಿಕೊಂಡಿವೆ . ಒಮ್ಮೆ ನೆಲೆಯೂರಿದರೆ ಅತೀ ಶ್ರೀಘ್ರವಾಗಿ ಸಂತತಿ ಹೆಚ್ಚಿಸಿಕೊಳ್ಳುವ ಈ ಹಕ್ಕಿಗಳನ್ನು ದಾಳಿಕೋರರ ಹಕ್ಕಿಗಳು ಎಂದೇ ಜೀವವಿಜ್ಞಾನಿಗಳು ಗುರುತಿಸುತ್ತಾರೆ. ಏಕೆಂದರೆ ಬೇರೆ ಸ್ಥಳೀಯ ಪಕ್ಷಿಗಳ ಗೂಡುಗಳನ್ನು, ವಾಸಸ್ಥಳಗಳನ್ನು ಆಹಾರವನ್ನು ಕಸಿಯುವ ಪ್ರವೃತ್ತಿ ಇವಕ್ಕೆ ಅತೀ ಹೆಚ್ಚು. ಕ್ರಿಮಿ ಕೀಟಗಳು ಚಿಕ್ಕಪುಟ್ಟ ಉಭಯವಾಸಿ , ಸಸ್ತನಿಗಳು , ಕಾಳು , ಧಾನ್ಯಗಳು , ಮಾನವರು ತ್ಯಜಿಸಿದ ಆಹಾರವಸ್ತುಗಳು ಹೀಗೆ ಏನನ್ನಾದರೂ ತಿಂದು ಜೀರ್ಣಿಸಿಕೊಳ್ಳಬಲ್ಲ ಅಭ್ಯಾಸವೇ ಇವುಗಳ ಯಶಸ್ವಿ ಜೀವನಕ್ಕೆ ಕಾರಣ. ಬೇರೆ ಬೇರೆ ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯವೂ ಇದಕ್ಕಿದೆ.
ಹೆಚ್ಚಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ತಮ್ಮ ಜಾತಿಯಷ್ಟೇ ಅಲ್ಲದೆ , ಕಾಗೆ , ಗಿಳಿ , ಕಾಡು ಗೊರವಂಕ ಮೊದಲಾದ ಹಕ್ಕಿಗಳ ಹಿಂಡಿನೊಂದಿಗೆ ಮರಗಳಲ್ಲಿ ವಾಸಿಸುವುದನ್ನು ಕಾಣಬಹುದು.
ಮಾನವ ವಾಸಸ್ಥಾನಕ್ಕೆ ಚೆನ್ನಾಗಿ ಹೊಂದಿಕೊಂಡಿರುವ ಇನ್ನೊಂದು ಹಕ್ಕಿ ಈ ಗಿಳಿ. ಇದೂ ಸಹ ವೈವಿಧ್ಯಮಯ ಆಹಾರವನ್ನು ತಿಂದು ಬದುಕಬಲ್ಲ ಪಕ್ಷಿ. ಗಲಾಟೆ ಗದ್ದಲ ವಾತಾವರಣದ ಏರುಪೇರು ಎಲ್ಲವಕ್ಕೂ ಹೊಂದಿಕೊಳ್ಳಬಲ್ಲ ಹಕ್ಕಿ . ಆದ್ದರಿಂದಲೇ ಅನೇಕ ನಗರಗಳಲ್ಲಿ ಕಾಗೆ , ಪಾರಿವಾಳ , ಗೊರವಂಕಗಳಂತೆ ಈ ಗಿಳಿಗಳೂ ದೊಡ್ಡ ಸಂಖ್ಯೆಯಲ್ಲಿರುವುದನ್ನು ಕಾಣಬಹುದು.
ಬಹುಶಃ ಎರಡು ಕಾರಣಗಳಿಗಾಗಿ ಈ ಗಿಳಿ - ಗೊರವಂಕಗಳ ಹೆಸರು ಜೋಡಿಯಾಗಿ ಬಳಸಲ್ಪಡುತ್ತಿರಬಹುದು . ಎರಡೂ ಹಕ್ಕಿಗಳು ವಿವಿಧ ಸ್ವರಗಳನ್ನು ಅದರಲ್ಲೂ ಮಾನವರ ಮಾತನ್ನು ಅನುಕರಿಸಬಲ್ಲ ಸಾಮರ್ಥ್ಯ ಹೊಂದಿರುವುದು ಮತ್ತು ಒಟ್ಟೊಟ್ಟಿಗೆ ಮರಗಳಲ್ಲಿ ವಾಸಿಸುವುದು . ಇನ್ನೇನಾದರೂ ಹೆಚ್ಚಿನ ಮಾಹಿತಿ ಯಾರಿಗಾದರೂ ತಿಳಿದದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ .
ಬೆಂಗಳೂರಿನಲ್ಲಿ ಈ ಕಾಮನ್ ಮೈನಾ ಸಂಖ್ಯೆ ಕಡಿಮೆಯಿದೆ. ಆದರೆ ಇವುಗಳಲ್ಲೇ ಬೇರೇ ಪ್ರಭೇದಕ್ಕೆ ಸೇರಿದ ಕಾಡು ಗೊರವಂಕಗಳ ದೊಡ್ಡ ಹಿಂಡು ದಿನಾ ಬೆಳಿಗ್ಗೆ ಪೂರ್ವ ದಿಕ್ಕಿನಿಂದ ಪಶ್ಚಿಮಕ್ಕೆ ಮತ್ತು ಸಾಯಂಕಾಲ ವಾಪಾಸ್ ಪಶ್ಚಿಮದಿಂದ ಪೂರ್ವಕ್ಕೆ ಹಾರುವುದನ್ನು ಡಿಸೆಂಬರ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಚೆನ್ನಾಗಿ ಕಾಣಬಹುದು. ಸೂರ್ಯೋದಯಕ್ಕೆ ಸ್ವಲ್ಪ ಮುಂಚೆ ಇವು ಆಕಾಶದಲ್ಲಿ ಹಾರುವಾಗ ದೊಡ್ಡದೊಂದು ಕಪ್ಪು ಬಣ್ಣದ ಕೊನೆ ಮೊದಲಿಲ್ಲದ ಸಾಲೊಂದು ಚಲಿಸಿದಂತೆ ಕಾಣಿಸುತ್ತದೆ.
ಯಾರೆ ಅದು ? ಮತ್ತೆ ಅದೇನದು ಚಿಲ್ಕ - ಗೋರಿಂಕ ಅಂದ್ರೆ ? ನನಗೆ ಅರ್ಥವಾಗ್ಲಿಲ್ಲ . ಅವಳು ಕೋಲಾರದ ಬಳಿ ಆಂಧ್ರಪ್ರದೇಶದ ಗಡಿಯವಳು ..ತೆಲುಗು ಮನೆಮಾತು . ಹೀಗೆ ಕನ್ನಡದ ನಡುವೆ ತೆಲುಗನ್ನು ಸೇರಿಸಿ ಮಾತಾಡ್ತಾಳೆ . ಹಾಗಂತ ಹೆಚ್ಚಿನ ಶಬ್ದಗಳಿಗೆ ಕನ್ನಡಲ್ಲಿ ಅರ್ಥವನ್ನೂ ಹೇಳ್ತಾಳೆ.
ಆದರೆ ಅದೇನೋ ಈ ಚಿಲ್ಕ - ಗೋರಿಂಕ ಕ್ಕೆ ಕನ್ನಡ ಅರ್ಥ ಅವಳಿಗೆ ಹೇಳಲಾಗಲಿಲ್ಲ. ಅಯ್ಯೋ ....ಚಿಲ್ಕ - ಗೋರಿಂಕ ...ಅಕ್ಕ ...ಅವು ಯಾವಾಗ್ಲೂ ಒಟ್ಟೊಟ್ಟಿಗೆ ಇರ್ತವೆ ......ಇನ್ಯಾವಾಗ್ಲಾದ್ರೂ ತೋರಿಸ್ತೀನಿ ಬಿಡು ಎಂದುಬಿಟ್ಟಳು.
ಲೋಟಸ್ ಮಹಲ್ |
ದೆಹಲಿಯ ಬಿರ್ಲಾ ಮಂದಿರ್ , ಲೋಟಸ್ ಮಹಲ್ , ಐತಿಹಾಸಿಕ ಸ್ಥಳಗಳಾದ ಕುತುಬ್ ಮಿನಾರ್ , ಹುಮಾಯೂನ್ ಟಾಂಬ್ , ಕೆಂಪು ಕೋಟೆ , ರಾಜ್ ಘಾಟ್ ಎಲ್ಲಾ ಸುತ್ತಿದ್ದಾಯಿತು.
ಅಲ್ಲೆಲ್ಲಾ ಕಡೆಗಳಲ್ಲೂ ವಿಶಾಲ ಹುಲ್ಲುಹಾಸಿನ ನಡುವೆ ಹುಳುಹಪ್ಪಟೆ ಅರಸುತ್ತಾ ಸುತ್ತುತ್ತಿದ್ದ ಗೊರವಂಕಗಳು(Common Myna ) ಮತ್ತು ಕಾಗೆಗಳು, ಎತ್ತರದ ಕೋಟೆ , ಗುಂಬಸ್ ಗಳ ಪಡಕುಗಳಲ್ಲಿ ಕುಳಿತು ಕಿಚಪಿಚ ಶಬ್ದ ಹೊರಡಿಸುತ್ತಿದ್ದ ಸುಂದರವಾದ ಗಿಳಿಗಳು(Rose-ringed parakeets ) ಕಾಣಿಸಿದ್ದವು. ಎಷ್ಟೆಲ್ಲ ಜನಜಂಗುಳಿ ಗಲಾಟೆಗೂ ಅವು ಬೆದರದೆ ಜನ ತಿಂದು ಬಿಸಾಡಿದ ಆಹಾರವಸ್ತುಗಳಿಗಾಗಿ , ಕ್ರಿಮಿಕೀಟಗಳಿಗಾಗಿ ಅವು ಅರಸುತ್ತಿದ್ದವು.
ಗೊರವಂಕ (Common Myna ) |
ಮಾರನೆಯ ದಿನ ಆಗ್ರಾಕ್ಕೆ ನಮ್ಮ ಪಯಣ . ಸುಂದರವಾದ " Yamuna Expressway " ನ ರಸ್ತೆಯಲ್ಲಿ ಸಾಗುವಾಗ ಅಕ್ಕಪಕ್ಕದ ವಿಸ್ತಾರವಾದ ಬಯಲಿನಲ್ಲಿನ ಗೋಧಿ ಹೊಲಗಳು ನಮ್ಮೂರಿನ ಭತ್ತದ ಗದ್ದೆ ಬಯಲನ್ನೇ ನೆನಪಿಸಿದ್ದವು. ದಾರಿಯುದ್ದಕ್ಕೂ ನನಗೆ ಕಾಣಿಸಿದ್ದು ಮತ್ತವೇ ಗೊರವಂಕಗಳು , ಗಿಳಿಗಳು.
ಗಿಳಿ (Rose-ringed parakeets ) |
ತಾಜ್ ಮಹಲ್ ...ಇಷ್ಟು ದಿನವೂ ಅದರ ಚೆಲುವಿನ ಬಗ್ಗೆ ಎಷ್ಟೆಲ್ಲ ಕೇಳಿದ್ದರೂ ...ಫೋಟೋಗಳನ್ನು ನೋಡಿದ್ದರೂ ಅದರ ನಿಜವಾದ ಅಂದ ಕಲ್ಪನೆಗೆ ನಿಲುಕಿರಲಿಲ್ಲ. ಆದರೆ ಕಣ್ಣಾರೆ ಅದರ ಚೆಲುವನ್ನು ನೋಡಿದ ಮೇಲೆ ಇಷ್ಟೆಲ್ಲ ಖ್ಯಾತಿಗೆ ಅರ್ಹವಾಗಿಯೆ ಇದೆ ಅನ್ನಿಸಿತು. ನಿಜವಾಗಿ ಕಣ್ಮನ ತಣಿಯಿತು ಎಂದರೆ ಖಂಡಿತಾ ಕ್ಲೀಷೆಯಾಗದು.
ತಾಜ್ ಮಹಲ್ |
ಇಷ್ಟೆಲ್ಲ ಚೆಲುವಿನ ನಡುವೆಯೂ ನನ್ನ ಕಣ್ಣು ಅಲ್ಲಿಯೂ ಇದ್ದ ಈ ಗೊರವಂಕ ಮತ್ತು ಗಿಳಿಗಳನ್ನು ಗಮನಿಸದಿರಲಿಲ್ಲ.
ಅವೆಲ್ಲ ಸ್ಥಳಗಳನ್ನು ಸಾಧ್ಯವಾದಷ್ಟೂ ಕ್ಯಾಮರಾದಲ್ಲಿ ತುಂಬಿಸಿಕೊಂಡಂತೆಯೆ ಈ ಚಿಲಿಪಿಲಿಗಳ ಅನೇಕ ಚಿತ್ರಗಳೂ ಸೆರೆಯಾದವು.
ಮನೆಗೆ ವಾಪಾಸ್ಸಾದ ನಂತರ ಕೆಲಸದವಳಿಗೆ ಅಲ್ಲಿಯ ಫೋಟೋಗಳನ್ನು ತೋರಿಸುತ್ತಿರುವಾಗ ಈ ಗಿಳಿ - ಗೊರವಂಕಗಳ ಫೋಟೋ ನೋಡಿದ ಆಕೆ " ಅಕ್ಕ ಇವೇ ನೋಡು ಚಿಲ್ಕ - ಗೋರಿಂಕ ಅಂದರೆ " ಎಂದಳು. "ಅವೆರಡೂ ಹೆಚ್ಚಾಗಿ ಒಟ್ಟಿಗೇ ಇರುತ್ತವೆ . ಅದಕ್ಕೆ ನಮ್ಮ ಕಡೆ ಒಟ್ಟಿಗೇ ಪ್ರೀತಿಯಿಂದ ಇರುವವರಿಗೆ ಹೀಗೆ ಹೇಳುತ್ತೇವೆ " ಆಕೆ ವಿವರಿಸಿದಳು. ನನ್ನ ಟ್ಯೂಬ್ ಲೈಟ್ ಹತ್ತಿಕೊಂಡಿತು.
ಕನ್ನಡ ಸಾಹಿತ್ಯದಲ್ಲೂ ಕೂಡ ಈ ಗಿಳಿ - ಗೊರವಂಕಗಳನ್ನು ಒಟ್ಟಿಗೇ ಹೆಸರಿಸುವುದನ್ನು ಅನೇಕ ಕಡೆ ಕಾಣುತ್ತೇವೆ. ಸಂಸ್ಕೃತದಲ್ಲೂ "ಶುಕಸಾರಿಕಾ " ಎಂಬ ಉಲ್ಲೇಖವಿದೆಯಂತೆ .
ಹಾಗಾದರೆ ನಿಜಕ್ಕೂ ಇವು ಒಟ್ಟೊಟ್ಟಿಗೆ ಇರುತ್ತವೆಯೆ?
ಗೊರವಂಕ ( Common Myna ) ಮೂಲತಃ ಏಷ್ಯಾ ಖಂಡದ ಹಕ್ಕಿಯಾದರೂ ಈಗ ಪ್ರಪಂಚದ ಅನೇಕ ಕಡೆ ಕಂಡುಬರುತ್ತದೆ. ಅತ್ಯಂತ ಅಗ್ರೆಸ್ಸಿವ್ ತಳಿಯಾದ ಇವುಗಳು ನಗರಪ್ರದೇಶಗಳ ಜೀವನಕ್ಕೆ ಅತ್ಯಂತ ಯಶಸ್ವಿಯಾಗಿ ಹೊಂದಿಕೊಂಡಿವೆ . ಒಮ್ಮೆ ನೆಲೆಯೂರಿದರೆ ಅತೀ ಶ್ರೀಘ್ರವಾಗಿ ಸಂತತಿ ಹೆಚ್ಚಿಸಿಕೊಳ್ಳುವ ಈ ಹಕ್ಕಿಗಳನ್ನು ದಾಳಿಕೋರರ ಹಕ್ಕಿಗಳು ಎಂದೇ ಜೀವವಿಜ್ಞಾನಿಗಳು ಗುರುತಿಸುತ್ತಾರೆ. ಏಕೆಂದರೆ ಬೇರೆ ಸ್ಥಳೀಯ ಪಕ್ಷಿಗಳ ಗೂಡುಗಳನ್ನು, ವಾಸಸ್ಥಳಗಳನ್ನು ಆಹಾರವನ್ನು ಕಸಿಯುವ ಪ್ರವೃತ್ತಿ ಇವಕ್ಕೆ ಅತೀ ಹೆಚ್ಚು. ಕ್ರಿಮಿ ಕೀಟಗಳು ಚಿಕ್ಕಪುಟ್ಟ ಉಭಯವಾಸಿ , ಸಸ್ತನಿಗಳು , ಕಾಳು , ಧಾನ್ಯಗಳು , ಮಾನವರು ತ್ಯಜಿಸಿದ ಆಹಾರವಸ್ತುಗಳು ಹೀಗೆ ಏನನ್ನಾದರೂ ತಿಂದು ಜೀರ್ಣಿಸಿಕೊಳ್ಳಬಲ್ಲ ಅಭ್ಯಾಸವೇ ಇವುಗಳ ಯಶಸ್ವಿ ಜೀವನಕ್ಕೆ ಕಾರಣ. ಬೇರೆ ಬೇರೆ ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯವೂ ಇದಕ್ಕಿದೆ.
ಹೆಚ್ಚಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ತಮ್ಮ ಜಾತಿಯಷ್ಟೇ ಅಲ್ಲದೆ , ಕಾಗೆ , ಗಿಳಿ , ಕಾಡು ಗೊರವಂಕ ಮೊದಲಾದ ಹಕ್ಕಿಗಳ ಹಿಂಡಿನೊಂದಿಗೆ ಮರಗಳಲ್ಲಿ ವಾಸಿಸುವುದನ್ನು ಕಾಣಬಹುದು.
ಮಾನವ ವಾಸಸ್ಥಾನಕ್ಕೆ ಚೆನ್ನಾಗಿ ಹೊಂದಿಕೊಂಡಿರುವ ಇನ್ನೊಂದು ಹಕ್ಕಿ ಈ ಗಿಳಿ. ಇದೂ ಸಹ ವೈವಿಧ್ಯಮಯ ಆಹಾರವನ್ನು ತಿಂದು ಬದುಕಬಲ್ಲ ಪಕ್ಷಿ. ಗಲಾಟೆ ಗದ್ದಲ ವಾತಾವರಣದ ಏರುಪೇರು ಎಲ್ಲವಕ್ಕೂ ಹೊಂದಿಕೊಳ್ಳಬಲ್ಲ ಹಕ್ಕಿ . ಆದ್ದರಿಂದಲೇ ಅನೇಕ ನಗರಗಳಲ್ಲಿ ಕಾಗೆ , ಪಾರಿವಾಳ , ಗೊರವಂಕಗಳಂತೆ ಈ ಗಿಳಿಗಳೂ ದೊಡ್ಡ ಸಂಖ್ಯೆಯಲ್ಲಿರುವುದನ್ನು ಕಾಣಬಹುದು.
ಬಹುಶಃ ಎರಡು ಕಾರಣಗಳಿಗಾಗಿ ಈ ಗಿಳಿ - ಗೊರವಂಕಗಳ ಹೆಸರು ಜೋಡಿಯಾಗಿ ಬಳಸಲ್ಪಡುತ್ತಿರಬಹುದು . ಎರಡೂ ಹಕ್ಕಿಗಳು ವಿವಿಧ ಸ್ವರಗಳನ್ನು ಅದರಲ್ಲೂ ಮಾನವರ ಮಾತನ್ನು ಅನುಕರಿಸಬಲ್ಲ ಸಾಮರ್ಥ್ಯ ಹೊಂದಿರುವುದು ಮತ್ತು ಒಟ್ಟೊಟ್ಟಿಗೆ ಮರಗಳಲ್ಲಿ ವಾಸಿಸುವುದು . ಇನ್ನೇನಾದರೂ ಹೆಚ್ಚಿನ ಮಾಹಿತಿ ಯಾರಿಗಾದರೂ ತಿಳಿದದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ .
ಕಾಡು ಗೊರವಂಕಗಳು ( Jungle Myna ) |
ಬೆಂಗಳೂರಿನಲ್ಲಿ ಈ ಕಾಮನ್ ಮೈನಾ ಸಂಖ್ಯೆ ಕಡಿಮೆಯಿದೆ. ಆದರೆ ಇವುಗಳಲ್ಲೇ ಬೇರೇ ಪ್ರಭೇದಕ್ಕೆ ಸೇರಿದ ಕಾಡು ಗೊರವಂಕಗಳ ದೊಡ್ಡ ಹಿಂಡು ದಿನಾ ಬೆಳಿಗ್ಗೆ ಪೂರ್ವ ದಿಕ್ಕಿನಿಂದ ಪಶ್ಚಿಮಕ್ಕೆ ಮತ್ತು ಸಾಯಂಕಾಲ ವಾಪಾಸ್ ಪಶ್ಚಿಮದಿಂದ ಪೂರ್ವಕ್ಕೆ ಹಾರುವುದನ್ನು ಡಿಸೆಂಬರ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಚೆನ್ನಾಗಿ ಕಾಣಬಹುದು. ಸೂರ್ಯೋದಯಕ್ಕೆ ಸ್ವಲ್ಪ ಮುಂಚೆ ಇವು ಆಕಾಶದಲ್ಲಿ ಹಾರುವಾಗ ದೊಡ್ಡದೊಂದು ಕಪ್ಪು ಬಣ್ಣದ ಕೊನೆ ಮೊದಲಿಲ್ಲದ ಸಾಲೊಂದು ಚಲಿಸಿದಂತೆ ಕಾಣಿಸುತ್ತದೆ.
ReplyDeleteಒಹ್ ಮೈನಾಗೆ ಗೊರವಂಕ ಅಂತಾರೆ ಅಂತ ಗೊತ್ತಿರ್ಲಿಲ್ಲ.
“ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ...” ಎಂದು ಕುವೆಂಪು ರವರ
ಪದ್ಯದಲ್ಲಿ ಓದಿದ ನೆನಪು. ತೆಲುಗಿನಲ್ಲಿ ಚಿಲಕ –ಗೊರಿಂಕ ಜೋಡಿ ಪದವಾಗಿ ತುಂಬಾ ಪ್ರಸಿಧ್ಧ
ಚೆನ್ನಾಗಿದೆ
ನಿಜ ಸ್ವರ್ಣ ಅವರೆ ಕುವೆಂಪು ಅವರ " ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ " ಎಂಬ ಸುಂದರ ಕವನದಲ್ಲಿ ಬರುತ್ತದೆ ಆ ಸಾಲು ...ಧನ್ಯವಾದಗಳು
Deleteಹೌದು, ನಮಗೆ ಏಳನೇ ಕ್ಲಾಸಿನ ಕನ್ನಡದಲ್ಲಿ ಆ ಪದ್ಯ ಇತ್ತು.
Deleteಗಿಳಿ ಗೊರವಂಕಗಳು ಒಟ್ಟಿಗೆ ಇರುವ ಗುಟ್ಟು ಈಗ ರಟ್ಟಾಯ್ತು. ಧನ್ಯವಾದಗಳು.
ReplyDeleteಅದೆಲ್ಲಿಂದಾ ತರ್ತೀರಿ ಇದ್ನೆಲ್ಲಾ...
ReplyDeleteಚೆನಾಗಿದೆ ಅಕ್ಕಾ :)..
ಬರೀತಾ ಇರಿ :)..
ಎಲ್ಲೆಲ್ಲಿಂದನೋ ಅಲ್ಲ ಚಿನ್ಮಯ್ ....ನಮ್ಮ ಸುತ್ತಮುತ್ತಾನೇ ಇರತ್ತೆ ...ಅದನ್ನೇ ಗಮನಿಸುತ್ತೇನಷ್ಟೇ ....ಇಷ್ಟಪಟ್ಟು , ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು :)
Delete