ಇಂದು "ಫಾದರ್ಸ್ ಡೇ" ಅಂತೆ . ಹೀಗೆ ಫಾದರ್ಸ್ ಡೇ , ಮದರ್ಸ್ ಡೇ , ವುಮನ್ಸ್ ಡೇ, ಬರ್ಥ್ ಡೇ , ಅಂತೆಲ್ಲ ವಿಶೇಷವಾಗಿ ಆಚರಿಸುವ ಪರಿಪಾಠ ನನ್ನದಲ್ಲ . ನನಗೆ ಗೊತ್ತು ಈ ರೀತಿಯ ವಿಶೇಷ ದಿನಗಳ ಬಗ್ಗೆ ನಿಮಗೂ ಗೊತ್ತಿರುವುದಿಲ್ಲ . ಆದರೂ ಇವತ್ತು ಯಾಕೋ ನಿಮ್ಮ ಬಗ್ಗೆ ಬರೆಯಬೇಕೆನ್ನಿಸಿತು ಅಪ್ಪ.
ಅಪ್ಪನ ಬಗ್ಗೆ ಬರೆಯಬೇಕೆಂದರೆ ಎಲ್ಲಿಂದ ಶುರು ಮಾಡಲಿ ಎಂಬ ಗೊಂದಲ . ಮಸುಕು ಮಸುಕಾಗಿ ನೆನಪಿರುವ ಐದು ವರ್ಷದವಳಾಗಿದ್ದಾಗಿನ ಘಟನೆ , ಅಮ್ಮ ಅಜ್ಜನ ಮನೆಯಲ್ಲಿದ್ದಳು. ನನಗೆ ಪುಟ್ಟ ತಮ್ಮನೊ , ತಂಗಿಯೋ ಹುಟ್ಟುತ್ತೆ ಅಂತ ಎಲ್ಲರೂ ಹೇಳ್ತಾ ಇದ್ರು. ನನಗೆ ಅಲ್ಲಿ ಅಮ್ಮನ ಜೊತೆಗೆ ಇರಲು ಬೇಜಾರಾಗುತ್ತಿತ್ತು . ಏಕೆಂದರೆ ಅಲ್ಲಿ ನೀವಿರಲಿಲ್ಲವಲ್ಲ ಅಪ್ಪ. ಸ್ವಲ್ಪ ದಿನಗಳಲ್ಲೇ ಪುಟ್ಟ ತಂಗಿ ಹುಟ್ಟಿದಳು. ಆದರೆ ಆಗ ಅವಳು ನನಗೆ ಇಷ್ಟವಾಗಲೇ ಇಲ್ಲ. ಸಾಲದ್ದಕ್ಕೆ ಎಲ್ಲರೂ ಅವಳನ್ನೇ ಮಾತನಾಡಿಸುತ್ತಿದ್ದರು . ನೀವು ಬಂದದ್ದೇ ನಾನು ನಿಮಗೆ ಅಂಟಿಕೊಂಡೆ , ಎರಡು ದಿನ ಬಿಟ್ಟು ನೀವು ಹೊರಟಾಗ ನನ್ನನ್ನೂ ಜೊತೆಗೆ ಕರೆದೊಯ್ಯುವಂತೆ ಹಠ ಹಿಡಿದೆ. ಅಲ್ಲಿ ಅಜ್ಜಿ, ಅಜ್ಜ, ಅಮ್ಮ ಎಲ್ಲರೂ ಬೇಡ ಅಪ್ಪಂಗೆ ತೊಂದರೆಯಾಗತ್ತೆ ಎಂದರು. ಆದರೆ ಅಪ್ಪ ನೀವು ನನ್ನನ್ನು ಎತ್ತಿಕೊಂಡು ತೊಂದರೆ ಏನಿಲ್ಲ ನಾನು ನೋಡಿಕೊಳ್ಳುತ್ತೇನೆ ಎಂದಾಗ ನನಗೆ ಸಿಕ್ಕ ಸಂತೋಷದ ನೆನಪು ನನಗಿನ್ನೂ ಇದೆ.
ಸ್ಕೂಲಿಗೆ ಹೋಗುವಾಗ ಹಾಕಿಕೊಳ್ಳುತ್ತಿದ್ದುದು ನೀವು ಹೊಲೆದುಕೊಟ್ಟ ಯೂನಿಫಾರ್ಂ , ಬ್ಯಾಗ್ , ನೀವೇ ಮಾಡಿದ ಹೊಸ ನಮೂನೆಯ ಹೇರ್ ಕಟ್ . ಇದೆಲ್ಲ ಅಪ್ಪ ಮಾಡಿದ್ದು ಎನ್ನುವುದು , ಗೆಳತಿಯರೆಲ್ಲರ ಅಸೂಯೆಗೆ ಕಾರಣವಾಗುತ್ತಿದ್ದುದು ನನಗೆಷ್ಟು ಹೆಮ್ಮೆಯೆನ್ನಿಸುತ್ತಿತ್ತು ಗೊತ್ತಾ ಅಪ್ಪ?
ಊರಿನಲ್ಲಿ ಯಾರ ಮನೆಯ ಪಂಪ್ ಸೆಟ್ , ಮಿಕ್ಸಿ , ಇತ್ಯಾದಿ ಹಾಳಾದರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಿಪೇರಿ ಮಾಡಿಕೊಡುವ , ಬಚ್ಚಲುಮನೆ ಅಡಿಗೆ ಮನೆ ಕಟ್ಟಕೊಡುವ , ಮದುವೆ ಮುಂಜಿಗಳಿಗೆ ಮಂಟಪ ಕಟ್ಟಿಕೊಡುವ , ಗಣಪತಿ ಹಬ್ಬಕ್ಕೆ ಮಣ್ಣಿನ ಗಣಪತಿ ಮಾಡಿಕೊಡುವ , ನಿಮ್ಮ ಮೇಲೆ ಎಲ್ಲರಿಗೂ ಗೌರವಭರಿತ ಪ್ರೀತಿ.
ಜನ , ಓ ಶೀನಣ್ಣನ ಮಗಳಾ ನೀನು ಎಂದು ಅಭಿಮಾನದಿಂದ ಕೇಳುವಾಗ , ಮಾತನಾಡಿಸುವಾಗ ನಿಮ್ಮ ಬಗ್ಗೆ ಎಂತಹ ಹೆಮ್ಮೆ ಎನ್ನಿಸುತ್ತಿತ್ತು ಗೊತ್ತಾ ಅಪ್ಪ?
ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಇನ್ನೊಂದು ವಿಚಾರಕ್ಕೆ ನನಗೆ ನಿಮ್ಮ ಬಗ್ಗೆ ತುಂಬ ಹೆಮ್ಮೆಯೆನ್ನಿಸುತ್ತಿತ್ತು. ಹೊಸದಾಗಿ ಪರಿಚಯವಾದವರೋ , ಸ್ಕೂಲಿನಲ್ಲಿನ ಗೆಳತಿಯರೋ , ಟೀಚರ್ಸ್ಗಳೋ ನೀವೆಷ್ಟು ಜನ ಮಕ್ಕಳು ಅಂತ ಕೇಳುತ್ತಿದುದು ಸಾಮಾನ್ಯ. ನಾನು ಮತ್ತು ನನ್ನ ತಂಗಿ ಇಬ್ಬರೇ ಎಂದಾಗಲೆಲ್ಲ ಅವರ ಕಣ್ಣಿನಲ್ಲಿ ಆಶ್ಚರ್ಯ! ಆಂ ಇಬ್ಬರೂ ಹೆಣ್ಣು ಮಕ್ಕಳಾ ? ಗಂಡು ಇಲ್ಲವಾ? ಎಂಬ ಅವರ ಪ್ರಶ್ನೆ ಬಹಳಷ್ಟನ್ನು ಹೇಳುತ್ತಿತ್ತು. ಒಂದು ದಿನವೂ ಅಂತಹ ಭಾವನೆ ತೋರದ ನಿಮ್ಮ ಮತ್ತು ಅಮ್ಮನ ಬಗ್ಗೆ ಹೆಮ್ಮೆ ಎನ್ನಿಸದಿರಲು ಸಾಧ್ಯವೆ?
ನಾನಾಗ ಹೈಸ್ಕೂಲಿನಲ್ಲಿದ್ದೆ. ಅದೇ ಆಗ ಹದಿಹರೆಯಕ್ಕೆ ಕಾಲಿಟ್ಟಿದ್ದೆ . ಒಂದು ದಿನ ಸ್ಕೂಲಿನಲ್ಲಿ ನನ್ನ ಹೆಸರಿಗೆ ಒಂದು ಪತ್ರ ಬಂತು. ಒಡೆದು ಓದಿದವಳಿಗೆ ಅಳು . ಮನೆಗೆ ಬಂದವಳೇ ಮೊದಲು ಅದನ್ನು ನಿಮಗೆ ಕೊಟ್ಟಿದ್ದೆ. ಯಾರೋ ಹುಡುಗ ಬರೆದ ಲವ್ ಲೆಟರ್ ಅದು. ಓದಿದ ನೀವು ಈ ವಯಸ್ಸಿಗೆ ಇಂತಹದ್ದೆಲ್ಲ ಪರಿಸ್ಥಿತಿ ಎದಿರಾಗೋದು ಸಹಜ , ಇದನ್ನ ನೆಗ್ಲೆಕ್ಟ್ ಮಾಡು ನನ್ನನ್ನು ಸಮಾಧಾನಿಸಿದಿರಿ. ಆದರೆ ಮತ್ತೆ ನಾಲ್ಕು ದಿನಕ್ಕೆ ಇನ್ನೊಂದು ಪತ್ರ ಬಂತು. ಆಗ ನಾನು ತುಂಬ ಭಯ ಪಟ್ಟಿದ್ದೆ. ಇನ್ನು ಹೀಗಾಗೋದಿಲ್ಲ , ತಲೆ ಕೆಡಿಸಿಕೊಳ್ಳಬೇಡ ಅಂತ ನನ್ನನ್ನು ಸಮಾಧಾನಿಸಿದ ನೀವು ಮಾರನೆಯ ದಿನವೇ ಸ್ಕೂಲಿಗೆ ಬಂದು ಪ್ರಿನ್ಸಿಪಾಲರ ಸಹಾಯದಿಂದ ಅದು ಯಾರ ಕೆಲಸವೆಂದು ಕಂಡುಹಿಡಿದು ಏನು ಹೇಳಿದಿರೋ ಗೊತ್ತಿಲ್ಲ , ಆದರೆ ಆಮೇಲೆ ನನಗೆ ಅಂತಹ ಪತ್ರ ಬರಲಿಲ್ಲ. ಈ ಘಟನೆಯ ನಂತರ ನನಗೆಂತಹ ಭದ್ರತಾಭಾವ ಉಂಟಾಯ್ತು ಗೊತ್ತಾ ಅಪ್ಪ? ನೀವಿದ್ದರೆ ಎಂತಹ ತೊಂದರೆಯೂ ನನ್ನನ್ನು ತಾಕಲಾರದು ಎಂಬ ನಂಬಿಕೆ.
ಕಾಲೇಜಿಗೆ ಹೋಗುವಾಗ ಐರನ್ ಮಾಡಿಕೊಳ್ಳಲು ಸೋಮಾರಿತನದಿಂದ ಹಾಗೇ ಮುದುರಿದ ಬಟ್ಟೆಯನ್ನೇ ಹಾಕಿಕೊಂಡು ಹೊರಡುತ್ತಿದ್ದವಳನ್ನು ತಡೆದು ಮೆಲ್ಲಗೆ ಗದರಿ ನೀವೇ ಐರನ್ ಮಾಡಿಕೊಟ್ಟ ದಿನಗಳಿಗೆ ಲೆಕ್ಕವಿದೆಯೆ?
ಊಟ ಮಾಡುವಾಗ ಅದು ಸೇರಲ್ಲ , ಇದು ಸೇರಲ್ಲ , ಅದ್ಯಾಕೆ ಮಾಡಿದೆ , ಇದ್ಯಾಕೆ ಮಾಡಲಿಲ್ಲ ಎಂದು ಅಮ್ಮನ ಬಳಿ ಗೊಣಗಿಕೊಳ್ಳುತ್ತಿದ್ದೆ , ಆಗೆಲ್ಲ ನೀವೆನ್ನುತ್ತಿದ್ದ ನೀನೆ ಅಡಿಗೆ ಮಾಡುವ ಕಾಲಕ್ಕೆ ನಿನಗೆ ಇದರ ಬೆಲೆ ಗೊತ್ತಾಗತ್ತೆ ಎಂಬ ಮಾತನ್ನು ಈಗ ನೆನಪು ಮಾಡಿಕೊಳ್ಳದ ದಿನವೇ ಇಲ್ಲ.
ಸಾಗರದ ಮಾರಿ ಜಾತ್ರೆಯಲ್ಲಿ ಅಮ್ಮನ ಜೊತೆಗೆ ಹೋದರೆ ಗಂಟೆಗಟ್ಟಲೆ ಅಂಗಡಿಗಳ ಮುಂದೆ ನಿಂತು ವ್ಯಾಪಾರ ಮಾಡುವಾಗ ಬೇಸರ ಬರುತ್ತದೆ ಎಂದು ನಾನು ಹೋಗುತ್ತಿರಲಿಲ್ಲ. ನಿಮ್ಮ ಜೊತೆ ಬಂದರೆ ಕೈ ಹಿಡಿದು ಜಾತ್ರೆ ಪೇಟೆಯಿಡೀ ಒಮ್ಮೆ ಸುತ್ತಿಸಿ , ದೊಡ್ಡ ತೊಟ್ಟಿಲು ಹತ್ತಿಸಿ , ಗೊಂಬೆಯಾಟ ತೋರಿಸಿ , ಹೋಟೆಲ್ನಲ್ಲಿ ಊಟ ಮಾಡಿಸಿ ರಾತ್ರಿ ಯಕ್ಷಗಾನಕ್ಕೆ ಕರೆದುಕೊಂಡು ಹೋಗುತ್ತಿದ್ದಿರಿ . ಜಾತ್ರೆಯಿರಲಿ, ಸಿನೆಮಾ ಇರಲಿ ಯಕ್ಷಗಾನವಿರಲಿ ನಿಮ್ಮ ಜೊತೆಗೆ ಹೋಗುವುದೆಂದರೆ ನನಗೆ ಇಷ್ಟವಾಗಿತ್ತು ಅಪ್ಪ.
ನೀವು ನೋಡಿ ಒಪ್ಪಿದ ಹುಡುಗನನ್ನು ಕಣ್ಣುಮುಚ್ಚಿಕೊಂಡು ಮದುವೆಯಾಗಿದ್ದೆ . ನಿಮ್ಮ ಆಯ್ಕೆಯ ಬಗ್ಗೆ ಪ್ರತಿ ದಿನವೂ ಹೆಮ್ಮೆ ಪಡುತ್ತಿದ್ದೇನೆ ಅಪ್ಪ. ಹೆಣ್ಣುಮಕ್ಕಳು ಅಪ್ಪನ ಗುಣಗಳನ್ನೇ ಗಂಡನಲ್ಲಿ ಹುಡುಕುತ್ತಾರಂತೆ. ನಿಮ್ಮ ಅಳಿಯ ನಿಮ್ಮ ತದ್ವಿರುದ್ಧ ಸ್ವಭಾವದವರು, ನೀವು ಬಯಲಿನಲ್ಲಿ ಹರಿವ ಶಾಂತ ನದಿಯಾದರೆ ಆತ ದುಮ್ಮಿಕ್ಕುವ ಜಲಪಾತದಂತವರು . ಆದರೆ ನಿಮ್ಮಲ್ಲಿರುವ ಅಂತ:ಕರಣ , ಪ್ರೀತಿ , ಬೇರೆಯವರಿಗೆ ಸಹಾಯ ಮಾಡುವ ಸ್ವಭಾವ , ಎಂತಹ ಕಷ್ಟಕ್ಕೂ ನಾನಿದ್ದೇನೆಂಬ ಭರವಸೆ ಕೊಡುವ ಗುಣ ಆತನಲ್ಲೂ ಇದೆ . ಇದೇ ಸ್ವಭಾವದಿಂದಾಗಿ ನಿಮ್ಮ ಜೊತೆಗಿದ್ದಾಗ ಇರುವ ಭದ್ರತಾಭಾವ ಅವರ ಜೊತೆಯಲ್ಲಿದ್ದಾಗಲೂ ಮೂಡುತ್ತದೆ ಅಪ್ಪ.
ನಮ್ಮ ಮನೆಗೆ ಬಂದಾಗ ಕಂಪ್ಯೂಟರ್ ಉಪಯೋಗಿಸುವುದನ್ನು ಕಲಿತದ್ದು , ತೆಲುಗು ಪುಸ್ತಕವೊಂದನ್ನು ನೋಡಿಕೊಂಡು ತೆಲುಗುಭಾಷೆ ಕಲಿತು ಅದರಲ್ಲೇ ಪತ್ರ ಬರೆದದ್ದು ಮನಸ್ಸು ಮಾಡಿದರೆ ಏನನ್ನಾದರೂ ಈ ಅರವತ್ತರ ಹೊಸಿಲಿನಲ್ಲೂ ನೀವು ಕಲಿಯಬಲ್ಲಿರಿ ಎಂಬುದಕ್ಕೆ ಸಾಕ್ಷಿ ಅಪ್ಪ . ಇಲ್ಲಿ ನೀವು ಬಂದಾಗ ಮಾಡಿಟ್ಟ ಎತ್ತಿನಗಾಡಿ , ಕರಟದ ಗಣಪತಿ , ಮೊಸಳೆ , ಗಿಳಿ ನವಿಲುಗಳನ್ನು ಮನೆಗೆ ಬಂದವರೆದುರು ಹೆಮ್ಮೆಯಿಂದ ತೋರಿಸಿ ನಮ್ಮ ಮಾವ ಮಾಡಿದ್ದು ಎಂದು ನಿಮ್ಮ ಅಳಿಯ ಹೇಳುವಾಗ ಎಷ್ಟು ಖುಷಿ ಆಗುತ್ತೆ ಗೊತ್ತಾ ಅಪ್ಪ?
ಕೇವಲ ಮಾನವೀಯತೆಯೊಂದೇ ಮುಖ್ಯ ಎಂಬ ನಿಮ್ಮ ಪರೋಪಕಾರಿ ಗುಣ , ಹಣ ಸಂಪಾದನೆ ಮಹತ್ವದ್ದಲ್ಲ ಎಂಬ ತತ್ವ , ನಿಮ್ಮ ಒಳ್ಳೆಯತನಗಳನ್ನು ಎಲ್ಲಿಯೂ ಹೇಳಿಕೊಳ್ಳದ ದೊಡ್ಡತನ , ಮಿತಭಾಷಿ ಸ್ವಭಾವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸಕ್ಕೆ ಬಾರದ ಸಂಗತಿಗಳೆಂದು ಹಳಿಯುವವರಿದ್ದಾರೆಂದು ನಾನು ಬಲ್ಲೆ ಅಪ್ಪ , ಆದರೆ ನಿಮ್ಮ ಈ ಗುಣಗಳನ್ನೇ ಇಷ್ಟಪಡುವರೂ ನನ್ನನ್ನೂ ಸೇರಿದಂತೆ ಅನೇಕರಿದ್ದಾರೆ. ನನ್ನ ಕಣ್ಣಿನಲ್ಲಂತೂ ನೀವು ಯಾವಾಗಲೂ ಹೀರೋನೆ ಅಪ್ಪ.
ಇಷ್ಟೆಲ್ಲವನ್ನೂ ನಮಗೆ ಕೊಟ್ಟ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆ ಈಗ ನಮ್ಮದಲ್ಲವೆ ಅಪ್ಪ? ಹೆಚ್ಚೇನೂ ನಮ್ಮಿಂದ ಸಾಧ್ಯವಾಗದಿರಬಹುದು , ನಿಮ್ಮ ಸಂತೋಷದಲ್ಲಿ ನಾವೂ ನಗುವ , ನಿಮ್ಮ ದುಖ: ಹಂಚಿಕೊಳ್ಳುವ ಹೆಗಲಾಗುವ , ನಿಮ್ಮ ಮನದ ಧ್ವನಿಗೆ ಕಿವಿಯಾಗುವ , ನಿಮ್ಮ ಬೇಸರಕ್ಕೆ ಮಾತಾಗುವ ಕೆಲಸವನ್ನಾದರೂ ಮಾಡುವ ಶಕ್ತಿ ನಮಗೆ ಬರಲೆಂದು ಈ ಫಾದರ್ಸ್ ಡೇ ದಿನದಲ್ಲಿ ಹಾರೈಸಿ ಅಪ್ಪ .
ಅಮ್ಮ - ಅಪ್ಪ |

ಅಪ್ಪ ಐಸ್ ಕ್ರೀಂ ಕಡ್ಡಿಯಲ್ಲಿ ಮಾಡಿದ ಎತ್ತಿನಗಾಡಿ |
ಊರಿನಲ್ಲಿ ಯಾರ ಮನೆಯ ಪಂಪ್ ಸೆಟ್ , ಮಿಕ್ಸಿ , ಇತ್ಯಾದಿ ಹಾಳಾದರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಿಪೇರಿ ಮಾಡಿಕೊಡುವ , ಬಚ್ಚಲುಮನೆ ಅಡಿಗೆ ಮನೆ ಕಟ್ಟಕೊಡುವ , ಮದುವೆ ಮುಂಜಿಗಳಿಗೆ ಮಂಟಪ ಕಟ್ಟಿಕೊಡುವ , ಗಣಪತಿ ಹಬ್ಬಕ್ಕೆ ಮಣ್ಣಿನ ಗಣಪತಿ ಮಾಡಿಕೊಡುವ , ನಿಮ್ಮ ಮೇಲೆ ಎಲ್ಲರಿಗೂ ಗೌರವಭರಿತ ಪ್ರೀತಿ.
ಜನ , ಓ ಶೀನಣ್ಣನ ಮಗಳಾ ನೀನು ಎಂದು ಅಭಿಮಾನದಿಂದ ಕೇಳುವಾಗ , ಮಾತನಾಡಿಸುವಾಗ ನಿಮ್ಮ ಬಗ್ಗೆ ಎಂತಹ ಹೆಮ್ಮೆ ಎನ್ನಿಸುತ್ತಿತ್ತು ಗೊತ್ತಾ ಅಪ್ಪ?
ಅಪ್ಪನ ಕೈಯಲ್ಲಿ ಅರಳಿದ ಗಣಪ , ಪ್ರಾಣಿಗಳು. |
ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಇನ್ನೊಂದು ವಿಚಾರಕ್ಕೆ ನನಗೆ ನಿಮ್ಮ ಬಗ್ಗೆ ತುಂಬ ಹೆಮ್ಮೆಯೆನ್ನಿಸುತ್ತಿತ್ತು. ಹೊಸದಾಗಿ ಪರಿಚಯವಾದವರೋ , ಸ್ಕೂಲಿನಲ್ಲಿನ ಗೆಳತಿಯರೋ , ಟೀಚರ್ಸ್ಗಳೋ ನೀವೆಷ್ಟು ಜನ ಮಕ್ಕಳು ಅಂತ ಕೇಳುತ್ತಿದುದು ಸಾಮಾನ್ಯ. ನಾನು ಮತ್ತು ನನ್ನ ತಂಗಿ ಇಬ್ಬರೇ ಎಂದಾಗಲೆಲ್ಲ ಅವರ ಕಣ್ಣಿನಲ್ಲಿ ಆಶ್ಚರ್ಯ! ಆಂ ಇಬ್ಬರೂ ಹೆಣ್ಣು ಮಕ್ಕಳಾ ? ಗಂಡು ಇಲ್ಲವಾ? ಎಂಬ ಅವರ ಪ್ರಶ್ನೆ ಬಹಳಷ್ಟನ್ನು ಹೇಳುತ್ತಿತ್ತು. ಒಂದು ದಿನವೂ ಅಂತಹ ಭಾವನೆ ತೋರದ ನಿಮ್ಮ ಮತ್ತು ಅಮ್ಮನ ಬಗ್ಗೆ ಹೆಮ್ಮೆ ಎನ್ನಿಸದಿರಲು ಸಾಧ್ಯವೆ?
ನಾನಾಗ ಹೈಸ್ಕೂಲಿನಲ್ಲಿದ್ದೆ. ಅದೇ ಆಗ ಹದಿಹರೆಯಕ್ಕೆ ಕಾಲಿಟ್ಟಿದ್ದೆ . ಒಂದು ದಿನ ಸ್ಕೂಲಿನಲ್ಲಿ ನನ್ನ ಹೆಸರಿಗೆ ಒಂದು ಪತ್ರ ಬಂತು. ಒಡೆದು ಓದಿದವಳಿಗೆ ಅಳು . ಮನೆಗೆ ಬಂದವಳೇ ಮೊದಲು ಅದನ್ನು ನಿಮಗೆ ಕೊಟ್ಟಿದ್ದೆ. ಯಾರೋ ಹುಡುಗ ಬರೆದ ಲವ್ ಲೆಟರ್ ಅದು. ಓದಿದ ನೀವು ಈ ವಯಸ್ಸಿಗೆ ಇಂತಹದ್ದೆಲ್ಲ ಪರಿಸ್ಥಿತಿ ಎದಿರಾಗೋದು ಸಹಜ , ಇದನ್ನ ನೆಗ್ಲೆಕ್ಟ್ ಮಾಡು ನನ್ನನ್ನು ಸಮಾಧಾನಿಸಿದಿರಿ. ಆದರೆ ಮತ್ತೆ ನಾಲ್ಕು ದಿನಕ್ಕೆ ಇನ್ನೊಂದು ಪತ್ರ ಬಂತು. ಆಗ ನಾನು ತುಂಬ ಭಯ ಪಟ್ಟಿದ್ದೆ. ಇನ್ನು ಹೀಗಾಗೋದಿಲ್ಲ , ತಲೆ ಕೆಡಿಸಿಕೊಳ್ಳಬೇಡ ಅಂತ ನನ್ನನ್ನು ಸಮಾಧಾನಿಸಿದ ನೀವು ಮಾರನೆಯ ದಿನವೇ ಸ್ಕೂಲಿಗೆ ಬಂದು ಪ್ರಿನ್ಸಿಪಾಲರ ಸಹಾಯದಿಂದ ಅದು ಯಾರ ಕೆಲಸವೆಂದು ಕಂಡುಹಿಡಿದು ಏನು ಹೇಳಿದಿರೋ ಗೊತ್ತಿಲ್ಲ , ಆದರೆ ಆಮೇಲೆ ನನಗೆ ಅಂತಹ ಪತ್ರ ಬರಲಿಲ್ಲ. ಈ ಘಟನೆಯ ನಂತರ ನನಗೆಂತಹ ಭದ್ರತಾಭಾವ ಉಂಟಾಯ್ತು ಗೊತ್ತಾ ಅಪ್ಪ? ನೀವಿದ್ದರೆ ಎಂತಹ ತೊಂದರೆಯೂ ನನ್ನನ್ನು ತಾಕಲಾರದು ಎಂಬ ನಂಬಿಕೆ.
ಕಾಲೇಜಿಗೆ ಹೋಗುವಾಗ ಐರನ್ ಮಾಡಿಕೊಳ್ಳಲು ಸೋಮಾರಿತನದಿಂದ ಹಾಗೇ ಮುದುರಿದ ಬಟ್ಟೆಯನ್ನೇ ಹಾಕಿಕೊಂಡು ಹೊರಡುತ್ತಿದ್ದವಳನ್ನು ತಡೆದು ಮೆಲ್ಲಗೆ ಗದರಿ ನೀವೇ ಐರನ್ ಮಾಡಿಕೊಟ್ಟ ದಿನಗಳಿಗೆ ಲೆಕ್ಕವಿದೆಯೆ?
ಊಟ ಮಾಡುವಾಗ ಅದು ಸೇರಲ್ಲ , ಇದು ಸೇರಲ್ಲ , ಅದ್ಯಾಕೆ ಮಾಡಿದೆ , ಇದ್ಯಾಕೆ ಮಾಡಲಿಲ್ಲ ಎಂದು ಅಮ್ಮನ ಬಳಿ ಗೊಣಗಿಕೊಳ್ಳುತ್ತಿದ್ದೆ , ಆಗೆಲ್ಲ ನೀವೆನ್ನುತ್ತಿದ್ದ ನೀನೆ ಅಡಿಗೆ ಮಾಡುವ ಕಾಲಕ್ಕೆ ನಿನಗೆ ಇದರ ಬೆಲೆ ಗೊತ್ತಾಗತ್ತೆ ಎಂಬ ಮಾತನ್ನು ಈಗ ನೆನಪು ಮಾಡಿಕೊಳ್ಳದ ದಿನವೇ ಇಲ್ಲ.
ಸಾಗರದ ಮಾರಿ ಜಾತ್ರೆಯಲ್ಲಿ ಅಮ್ಮನ ಜೊತೆಗೆ ಹೋದರೆ ಗಂಟೆಗಟ್ಟಲೆ ಅಂಗಡಿಗಳ ಮುಂದೆ ನಿಂತು ವ್ಯಾಪಾರ ಮಾಡುವಾಗ ಬೇಸರ ಬರುತ್ತದೆ ಎಂದು ನಾನು ಹೋಗುತ್ತಿರಲಿಲ್ಲ. ನಿಮ್ಮ ಜೊತೆ ಬಂದರೆ ಕೈ ಹಿಡಿದು ಜಾತ್ರೆ ಪೇಟೆಯಿಡೀ ಒಮ್ಮೆ ಸುತ್ತಿಸಿ , ದೊಡ್ಡ ತೊಟ್ಟಿಲು ಹತ್ತಿಸಿ , ಗೊಂಬೆಯಾಟ ತೋರಿಸಿ , ಹೋಟೆಲ್ನಲ್ಲಿ ಊಟ ಮಾಡಿಸಿ ರಾತ್ರಿ ಯಕ್ಷಗಾನಕ್ಕೆ ಕರೆದುಕೊಂಡು ಹೋಗುತ್ತಿದ್ದಿರಿ . ಜಾತ್ರೆಯಿರಲಿ, ಸಿನೆಮಾ ಇರಲಿ ಯಕ್ಷಗಾನವಿರಲಿ ನಿಮ್ಮ ಜೊತೆಗೆ ಹೋಗುವುದೆಂದರೆ ನನಗೆ ಇಷ್ಟವಾಗಿತ್ತು ಅಪ್ಪ.
ನೀವು ನೋಡಿ ಒಪ್ಪಿದ ಹುಡುಗನನ್ನು ಕಣ್ಣುಮುಚ್ಚಿಕೊಂಡು ಮದುವೆಯಾಗಿದ್ದೆ . ನಿಮ್ಮ ಆಯ್ಕೆಯ ಬಗ್ಗೆ ಪ್ರತಿ ದಿನವೂ ಹೆಮ್ಮೆ ಪಡುತ್ತಿದ್ದೇನೆ ಅಪ್ಪ. ಹೆಣ್ಣುಮಕ್ಕಳು ಅಪ್ಪನ ಗುಣಗಳನ್ನೇ ಗಂಡನಲ್ಲಿ ಹುಡುಕುತ್ತಾರಂತೆ. ನಿಮ್ಮ ಅಳಿಯ ನಿಮ್ಮ ತದ್ವಿರುದ್ಧ ಸ್ವಭಾವದವರು, ನೀವು ಬಯಲಿನಲ್ಲಿ ಹರಿವ ಶಾಂತ ನದಿಯಾದರೆ ಆತ ದುಮ್ಮಿಕ್ಕುವ ಜಲಪಾತದಂತವರು . ಆದರೆ ನಿಮ್ಮಲ್ಲಿರುವ ಅಂತ:ಕರಣ , ಪ್ರೀತಿ , ಬೇರೆಯವರಿಗೆ ಸಹಾಯ ಮಾಡುವ ಸ್ವಭಾವ , ಎಂತಹ ಕಷ್ಟಕ್ಕೂ ನಾನಿದ್ದೇನೆಂಬ ಭರವಸೆ ಕೊಡುವ ಗುಣ ಆತನಲ್ಲೂ ಇದೆ . ಇದೇ ಸ್ವಭಾವದಿಂದಾಗಿ ನಿಮ್ಮ ಜೊತೆಗಿದ್ದಾಗ ಇರುವ ಭದ್ರತಾಭಾವ ಅವರ ಜೊತೆಯಲ್ಲಿದ್ದಾಗಲೂ ಮೂಡುತ್ತದೆ ಅಪ್ಪ.
ನಮ್ಮ ಮನೆಗೆ ಬಂದಾಗ ಕಂಪ್ಯೂಟರ್ ಉಪಯೋಗಿಸುವುದನ್ನು ಕಲಿತದ್ದು , ತೆಲುಗು ಪುಸ್ತಕವೊಂದನ್ನು ನೋಡಿಕೊಂಡು ತೆಲುಗುಭಾಷೆ ಕಲಿತು ಅದರಲ್ಲೇ ಪತ್ರ ಬರೆದದ್ದು ಮನಸ್ಸು ಮಾಡಿದರೆ ಏನನ್ನಾದರೂ ಈ ಅರವತ್ತರ ಹೊಸಿಲಿನಲ್ಲೂ ನೀವು ಕಲಿಯಬಲ್ಲಿರಿ ಎಂಬುದಕ್ಕೆ ಸಾಕ್ಷಿ ಅಪ್ಪ . ಇಲ್ಲಿ ನೀವು ಬಂದಾಗ ಮಾಡಿಟ್ಟ ಎತ್ತಿನಗಾಡಿ , ಕರಟದ ಗಣಪತಿ , ಮೊಸಳೆ , ಗಿಳಿ ನವಿಲುಗಳನ್ನು ಮನೆಗೆ ಬಂದವರೆದುರು ಹೆಮ್ಮೆಯಿಂದ ತೋರಿಸಿ ನಮ್ಮ ಮಾವ ಮಾಡಿದ್ದು ಎಂದು ನಿಮ್ಮ ಅಳಿಯ ಹೇಳುವಾಗ ಎಷ್ಟು ಖುಷಿ ಆಗುತ್ತೆ ಗೊತ್ತಾ ಅಪ್ಪ?
ಕೇವಲ ಮಾನವೀಯತೆಯೊಂದೇ ಮುಖ್ಯ ಎಂಬ ನಿಮ್ಮ ಪರೋಪಕಾರಿ ಗುಣ , ಹಣ ಸಂಪಾದನೆ ಮಹತ್ವದ್ದಲ್ಲ ಎಂಬ ತತ್ವ , ನಿಮ್ಮ ಒಳ್ಳೆಯತನಗಳನ್ನು ಎಲ್ಲಿಯೂ ಹೇಳಿಕೊಳ್ಳದ ದೊಡ್ಡತನ , ಮಿತಭಾಷಿ ಸ್ವಭಾವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸಕ್ಕೆ ಬಾರದ ಸಂಗತಿಗಳೆಂದು ಹಳಿಯುವವರಿದ್ದಾರೆಂದು ನಾನು ಬಲ್ಲೆ ಅಪ್ಪ , ಆದರೆ ನಿಮ್ಮ ಈ ಗುಣಗಳನ್ನೇ ಇಷ್ಟಪಡುವರೂ ನನ್ನನ್ನೂ ಸೇರಿದಂತೆ ಅನೇಕರಿದ್ದಾರೆ. ನನ್ನ ಕಣ್ಣಿನಲ್ಲಂತೂ ನೀವು ಯಾವಾಗಲೂ ಹೀರೋನೆ ಅಪ್ಪ.
ಇಷ್ಟೆಲ್ಲವನ್ನೂ ನಮಗೆ ಕೊಟ್ಟ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆ ಈಗ ನಮ್ಮದಲ್ಲವೆ ಅಪ್ಪ? ಹೆಚ್ಚೇನೂ ನಮ್ಮಿಂದ ಸಾಧ್ಯವಾಗದಿರಬಹುದು , ನಿಮ್ಮ ಸಂತೋಷದಲ್ಲಿ ನಾವೂ ನಗುವ , ನಿಮ್ಮ ದುಖ: ಹಂಚಿಕೊಳ್ಳುವ ಹೆಗಲಾಗುವ , ನಿಮ್ಮ ಮನದ ಧ್ವನಿಗೆ ಕಿವಿಯಾಗುವ , ನಿಮ್ಮ ಬೇಸರಕ್ಕೆ ಮಾತಾಗುವ ಕೆಲಸವನ್ನಾದರೂ ಮಾಡುವ ಶಕ್ತಿ ನಮಗೆ ಬರಲೆಂದು ಈ ಫಾದರ್ಸ್ ಡೇ ದಿನದಲ್ಲಿ ಹಾರೈಸಿ ಅಪ್ಪ .
ಸುಮ, ಅಪ್ಪನ ದಿನ ಎನ್ನುವುದು ಅಪ್ಪ ಅಮ್ಮಂದಿರನ್ನು ದೂರ ಇಟ್ಟು ಯಾವಾಗಲೋ ಒಮ್ಮೆ ನೆನಪಿಸಿಕೊಳ್ಳುವ ಸಂಸ್ಕೃತಿಗಳಿಗೇ ಎನ್ನುವುದು ದಿಟ. ದಿನನಿತ್ಯ ಜೊತೆಗಿದ್ದು ನಮ್ಮ ಕೈಲಾದ ಸೇವೆ ಮಾಡೋ ನಾವು ಅಥವಾ ದೂರದಲ್ಲಿದ್ದರೆ ಒಂದಿಲ್ಲೊಂದು ರೀತಿಯಲ್ಲಿ ದಿನವೂ ನೆನ[ಪಿಸಿಕೊಳ್ಳುವ ನಮ್ಮ ಸಮಾಜಕ್ಕೆ ಅಪ್ಪ ಅಮ್ಮಂದಿರ ದಿನ ಎಂಬ ಆಚರಣೆಯೂ ಬೇಕೆ??
ReplyDeleteಈ ಎಲ್ಲಾ ಅಂಶಗಳನ್ನು ಮಂಥಿಸಿ ಸುಂದರ ನೆನಪುಗಳ ಅನಾವರಣದೊಂದಿಗೆ ಅಪ್ಪನ ಅಗೋಚರ ಶಕ್ತಿಯನ್ನು ಅನುಭವಿಸಿದ ಮನದ ಮಿಡಿತವನ್ನು ಸುಂದರವಾಗಿ ಹಂಚಿಕೊಂಡಿದ್ದೀರಿ...ಅಭಿನಂದನೆಗಳು.
ಅಪ್ಪನ ಕುರಿತಾದ ಮನೋಜ್ಞ ಬರಹವಿದು.
ReplyDeleteಅಪ್ಪನ ಸ್ಮೃತಿಯ ಮಧುರ ಕಾವ್ಯಕೆ ಏನೆಂದು ಪ್ರತಿಕ್ರಿಯಿಸಲಿ,,,,,, ಸುಮ್ಮನೆ ವಿಸ್ಮಿತ ಮೌನ,,,, (ಬಹಳ ಕಾಡುತ್ತವೆ ಭಾವನೆಗಳ ಅಕ್ಷರಗಳು)
ReplyDelete-- ನವೀನ್ ಜೀ ಕೇ
ಖಂಡಿತಾ ಅಪ್ಪ ಅಮ್ಮನನ್ನು ನೆನೆಸಿಕೊಳ್ಳಲು ಒಂದು ದಿನ ಬೇಕಾಗಿಲ್ಲ, ಅವರ ರಕ್ತಕಣದ ಅಣು ಅಣುವು ನಾವೇ ಆಗಿರುವಾಗ. ಹಾಗೇ ನಮ್ಮ ಬರಹವನ್ನು ಅವರು ಇಡುವುದು ಇಲ್ಲ . ನಮ್ಮ ನಡವಳಿಕೆ ಪ್ರೀತಿಯನ್ನಷ್ಟೇ ಬಯಸುವ ನಿಷ್ಕಲ್ಮಶ ಬೆಲೆಕಟ್ಟಲಾಗದ ಹೃದಯಗಳು.
ReplyDeleteಲೇಖನ ಓದಿ ಖುಶಿಯಾಯಿತು.
ReplyDeleteತುಂಬಾ ಚೆನ್ನಾಗಿದೆ ಸುಮಕ್ಕ ..., .. leetter ವಿಷಯದಲ್ಲಿ ಅಪ್ಪನ ವ್ಯಕ್ತಿತ್ವ ಇಷ್ಟ ಆಯಿತು .., ಈಗ ಹಾಗಿಲ್ಲವಾದರೂ , ಮಕ್ಕಳನ್ನೇ ಮೂದಲಿಸುವ ಅನುಮಾನಿಸುವ ಘಾಸಿಗೊಳಿಸುವ ವಾತಾವರಣವಿದ್ದ ಕಾಲವದು. ಇಂತ ಅಪ್ಪಂದಿರು ಎಲ್ಲರಿಗೂ ಸಿಗಬೇಕು
ReplyDelete