ಚಿಕ್ಕವಳಿದ್ದಾಗ ಅಡುಗೆ ಆಟ ನನ್ನ ಮೆಚ್ಚಿನ ಆಟವಾಗಿತ್ತು ( ಈಗ ಅಡುಗೆ ಮಾಡೋದು ಪರಮ ಬೋರು ಕೆಲಸ ಅನ್ನಿಸುವುದಿದೆ ಬಿಡಿ ). ತೆಂಗಿನ ಗರಟೆಯೆ ಪಾತ್ರೆ , ಅದರಲ್ಲಿ ಹುಡಿ ಮಣ್ಣಿನ ಅನ್ನ , ಹಾಲವಾಣ ಸೊಪ್ಪಿನ ಪಲ್ಯ , ಕೆಮ್ಮಣ್ಣಿನ ಸಾರು ......ಇದನ್ನೆಲ್ಲ ಮಾಡಲು ಮನೆಯ ಅಂಗಳದ ತುದಿಯಲ್ಲೊಂದು ತೆಂಗಿನ ಮಡಿಲು ಹೊದಿಸಿ ನಾವೇ ಕಟ್ಟಿಕೊಂಡ ನಮ್ಮ ಅರಮನೆ ...ಒಹ್ ಅದು ಸುಂದರ ಕಾಲ . ಹೀಗೆ ಆಟವಾಡುವಾಗ ನಮ್ಮ ದೃಷ್ಟಿಗೆ ಬೀಳುತ್ತಿದ್ದುದು ಮಣ್ಣಿನಲ್ಲಿ ಇರುತ್ತಿದ್ದ ಚಿಕ್ಕ ಚಿಕ್ಕ ಕುಳಿಗಳು. ಸುಂದರ ಹುಡುಗಿಯೊಬ್ಬಳ ಕೆನ್ನೆಯ ಗುಳಿಗಳಂತೆ ನುಣುಪಾದ ಮಣ್ಣಿನಲ್ಲಿನ ಈ ಕುಳಿಗಳು ಕಂಡರೆ ನಮ್ಮ ಉಳಿದೆಲ್ಲ ಆಟಗಳೂ ಹಿಂದೆ ಸರಿದು ಅದರಲ್ಲಿನ "ಗುಬ್ಬಚ್ಚಿ" ಹುಡುಕುವ ಆಟ ಪ್ರಾರಂಭವಾಗುತ್ತಿತ್ತು ! ಯಾರಿಗೆ ಹೆಚ್ಚು ಗುಬ್ಬಚ್ಚಿ ಸಿಗುತ್ತೋ ಅವರು ಗ್ರೇಟ್ . ಆ ಕುಳಿಯ ಬಳಿ ಕುಳಿತು ಹತ್ತಿರ ಮುಖವೊಡ್ಡಿ " ಗುಬ್ಬಚ್ಚಿ ಗುಬ್ಬಚ್ಚಿ ನಿಂಗೆ ಚಾಕ್ಲೇಟ್ ಕೊಡ್ತೀನಿ ಹೊರಗೆ ಬಾ , ಬಿಸ್ಕೆಟ್ ಕೊಡ್ತೀನಿ ಹೊರಗೆ ಬಾ , ನನ್ನ ಮನೆ ಕೊಡ್ತೀನಿ ನಿನ್ನ ಮನೆ ಕೊಡ್ತೀಯಾ ." ಇತ್ಯಾದಿಯಾಗಿ ಮೆಲ್ಲಗೆ ಮಾತನಾಡಿಸುತ್ತಾ ನಾಜೂಕಾಗಿ ಬೆರಳುಗಳಿಂದ ಆ ಕುಳಿಯನ್ನು ಕೆದಕಿ ಅದರೊಳಗೆ ಅಡಗಿರುವ ಪುಟ್ಟ ಕೀಟವನ್ನು ಹೊರತೆಗೆದು ಅಂಗೈ ಮೇಲಿಟ್ಟುಕೊಂಡಾಗಿನ ಸಂತೋಷ.... ವಿವರಿಸಲಾಗದ್ದು . ನಂತರ ಅದನ್ನು ಬೆಂಕಿಪೆಟ್ಟಿಗೆಯಲ್ಲಿಟ್ಟು ಸಾಕುತ್ತೇನೆಂದುಕೊಳ್ಳುವುದು ....ಆದರೆ ಏನು ಆಹಾರ ಕೊಡಬೇಕೆಂದು ತಿಳಿಯದೆ ಸಿಕ್ಕಿದ್ದೆಲ್ಲ ಹಾಕಿ ಅದು ಅಲ್ಲೆ ಸಾಯುವುದು , ಅದನ್ನು ನೋಡಿ ಅಳುತ್ತಾ ಕೂರುವುದು , ಅಮ್ಮ ಗದರಿಸುವುದು...ಒಹ್ ಎಷ್ಟೊಂದು ನೆನಪುಗಳು....
ಬಾಲ್ಯದ ಈ ಮೆಚ್ಚಿನ ಜೀವಿಯನ್ನು ನಾನು ಮರೆತೇ ಬಿಟ್ಟಿದ್ದೆ . ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ತಂಗಿಯೊಬ್ಬಳು ಇದನ್ನು ಹುಡುಕಿದ್ದರ ಫೋಟೋ ಹಾಕಿದಾಗಲೆ ಮತ್ತೆ ಇದು ನೆನಪಿಗೆ ಬಂದದ್ದು . ಈ ಬಾರಿ ಊರಿಗೆ ಹೋದಾಗ ಮಗಳನ್ನು ಕಟ್ಟಿಕೊಂಡು ಗುಬ್ಬಚ್ಚಿ ಹುಡುಕಿ ತೆಗೆದು ಸಂತಸ ಪಟ್ಟಿದ್ದಾಯ್ತು.
ಹಾಂ ..ಪಕ್ಷಿ ಜಾತಿಗೆ ಸೇರಿದ ಗುಬ್ಬಿಗೂ , ಕೀಟಗಳ ಜಾತಿಗೆ ಸೇರಿದ ಈ ಪುಟ್ಟ ಜೀವಿಗೂ ಯಾವ ರೀತಿಯಲ್ಲೂ ಸಂಭಂದವಿದ್ದಂತಿಲ್ಲ . ಆದರೂ ನಾವು ಇದನ್ನು ಕರೆಯುತ್ತಿದ್ದುದು " ಗುಬ್ಬಚ್ಚಿ " ಎಂದು . ಕನ್ನಡದಲ್ಲಿ ಇದಕ್ಕೆ ಬೇರೆ ಹೆಸರುಗಳೇನಿವೆಯೋ ಗೊತ್ತಿಲ್ಲ. ಇಂಗ್ಲಿಷ್‍ನಲ್ಲಿ ಇದರ ಹೆಸರು ಆಂಟ್ಲಯನ್ (Antlion ) . ಲೇಸ್‍ವಿಂಗ್ಸ್ ಎಂಬ ಕೀಟದ ಮರಿ (nymph ) ಇದು . ಎಲ್ಲ ಕೀಟಗಳ ಲಾರ್ವಾಗಳಿಗೂ ಭಯಂಕರ ಹಸಿವು . ಕಂಬಳೀಹುಳು ತನ್ನ ಗಾತ್ರಕ್ಕೆ ಅತಿ ಎನ್ನಿಸುವಷ್ಟು ತಿನ್ನುತ್ತಲ್ಲವೆ ಹಾಗೆ , ಈ ಪುಟ್ಟ ಮರಿಗಳಿಗೂ ಅಗಾಧ ಹಸಿವು. ಇರುವೆ , ಜೇಡ , ಚಿಕ್ಕ ಪುಟ್ಟ ಕೀಟಗಳು ಇದರ ಆಹಾರ. ಹೆಚ್ಚು ಕಡಿಮೆ ತನ್ನ ಗಾತ್ರದಷ್ಟೇ ಇರುವ ತನ್ನ ಆಹಾರಕೀಟವನ್ನು ಬೇಟೆಯಾಡಲು ಇದು ಬಳಸುವ ತಂತ್ರ ವಿಶಿಷ್ಟವಾದುದು.
ಹೆಣ್ಣು ಲೇಸ್‍ವಿಂಗ್ಸ್ ಕೀಟವು ಮಣ್ಣಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ತಿಂಗಳ ನಂತರ ಹೊರಬರುವ ಮರಿ " ಆಂಟ್ಲಯನ್ ಅಥವ ಗುಬ್ಬಚ್ಚಿ " ತಾಯಿಯನ್ನು ಹೋಲುವುದಿಲ್ಲ . ಮರಿಗೆ ರೆಕ್ಕೆಗಳಿಲ್ಲ. ಮೃದುವಾದ ದೇಹದಲ್ಲಿ ಹೆಡ್ , ಥೊರಕ್ಸ್ , ಮತ್ತು ಅಬ್ಡಮನ್ ಎಂಬ ಭಾಗಗಳಿದ್ದು ಮೂರು ಜೊತೆ ಕಾಲ್ಗಳು ಮತ್ತು ಒಂದು ಜೊತೆ ಸಧೃಡವಾದ ಕೊಂಬುಗಳಿವೆ.
ಮರಳುಮಿಶ್ರಿತ ಸಡಿಲವಾದ ಮಣ್ಣಿನಲ್ಲಿ ಈ ಗುಬ್ಬಚ್ಚಿ ತನ್ನ ಹಿಂಭಾಗದಿಂದ(ಹಿಮ್ಮುಖವಾಗಿ) ವೃತ್ತಾಕಾರವಾಗಿ ತಿರುಗುತ್ತಾ ಚಿಕ್ಕ ಕುಳಿಯನ್ನು ನಿರ್ಮಿಸುತ್ತದೆ. ಆ ಕುಳಿಯ ಕೆಳಭಾಗದ ಮಣ್ಣಿನಲ್ಲಿ ಕೊಂಬುಗಳನ್ನು ಮಾತ್ರ ಮೇಲೆ ಚಾಚಿ ಅಡಗಿ ಕೂರುತ್ತದೆ. ಇರುವೆಯಂತಹ ಚಿಕ್ಕ ಪುಟ್ಟ ಕೀಟಗಳು ಈ ಕುಳಿಯೊಳಗೆ ಬಿದ್ದಾಗ ಕೊಂಬುಗಳಿಂದ ಮಣ್ಣನ್ನೆರಚುತ್ತಾ ಅದು ಮೇಲೆ ಹತ್ತಿ ತಪ್ಪಿಸಿಕೊಳ್ಳದಂತೆ ತಡೆದು , ನಂತರ ಅವುಗಳ ಜೀವದ್ರವ್ಯವನ್ನು ಹೀರುತ್ತದೆ ಈ ಆಂಟ್‍ಲಯನ್ .
ಸುಮಾರು ಎರಡು ಮೂರು ವರ್ಷಗಳ ಕಾಲ ಬದುಕುವ ಈ ಗುಬ್ಬಚ್ಚಿಗಳು ನಂತರ ತನ್ನ ಸುತ್ತಲೂ ಕೋಶ ನಿರ್ಮಿಸಿಕೊಂಡು "ಪ್ಯೂಪ" ವಾಗುತ್ತದೆ. ಎರಡು ಮೂರು ವಾರಗಳಲ್ಲಿ ಸಂಪೂರ್ಣವಾಗಿ ರೂಪಾಂತರ ಹೊಂದಿ ಬೆಳೆದ ರೆಕ್ಕೆಗಳುಳ್ಳ ಕೀಟವಾಗಿ ಹೊರಬರುತ್ತದೆ. ಈ ಹಂತದಲ್ಲಿ ಇದು ಬದುಕುವುದು ಸುಮಾರು ನಲವತ್ತು ದಿನಗಳಷ್ಟೇ. ಅಂದರೆ ಈ ಲೇಸ್‍ವಿಂಗ್ಸ್ ಕೀಟಕ್ಕೆ ಅತೀ ದೀರ್ಘಾವಧಿಯ ಬಾಲ್ಯಕಾಲವೆಂದಾಯ್ತಲ್ಲವೆ. ನಮಗೂ ಹೀಗೆ ಇಷ್ಟು ದೀರ್ಘ ಬಾಲ್ಯ ಇದ್ದಿದ್ದರೆ !!!
ಈ ಕೀಟದ ಬಗ್ಗೆ ಮಾಹಿತಿ ಜಾಲಾಡುತ್ತಿರುವಾಗ ತಿಳಿದ ವಿಷಯವೆಂದರೆ ಪಾಶ್ಚಾತ್ಯ ದೇಶಗಳಲ್ಲೂ ಇದು ಚಿಣ್ಣರಿಗೆ ಇಷ್ಟವಾದ ಜೀವಿ. ಅಲ್ಲೂ ಸಹ ಇವನ್ನು ಹಿಡಿದು ವೈಜ್ಞಾನಿಕವಾಗಿ ಸಾಕುತ್ತಾರಂತೆ. ( ಆದರೆ ನಮ್ಮಂತೆ ಬೆಂಕಿಪೆಟ್ಟಿಗೆಯಲ್ಲಿಟ್ಟು ಸಾಕುವ ಸಾಹಸ ಅವರು ಮಾಡುವುದಿಲ್ಲ ಬಿಡಿ ) ಕೆಲವೊಂದು ಅಭ್ಯಾಸಗಳು ಹೇಗೆ ದೇಶ ಕಾಲ ಎಲ್ಲವನ್ನೂ ಮೀರಿದವುಗಳಾಗಿರುತ್ತವಲ್ಲವೆ?

ತುಂಬಾ ಚೆನ್ನಾಗಿದೆ ಮಾಹಿತಿ... ನಾವು ಚಿಕ್ಕವರಿರುವಾಗ ಹಿಂಗೇ ಮಾಡ್ತಾ ಇದ್ವಿ... ಜೀರ್ ಜಿಂಬೆ ಅಂತ ಸಿಕ್ತಾ ಇತ್ತಲ್ಲ ಅದನ್ನೂ ಬೆಂಕಿಪೊಟ್ಟಣದಲ್ಲಿಟ್ತು ಸಾಕ್ತಾ ಇದ್ವಿ ಹಹ
ReplyDeleteonde usirige udi mugiside..love uu sumakka..balyadalli nanna nimma asakti onde..endu helalu khushi..thankuuuuuuuu
ReplyDeleteಅಯ್ಯೋ! ನಾನು ಇದನ್ನೇ ಬೆಳೆದ ಕೀಟ ಅಂದುಕೊಂಡಿದ್ದೆ. ಇದು ಲಾರ್ವಾ ಅಂತ ಗೊತ್ತಿರಲಿಲ್ಲ. ಅದು ನುಣುಪಾದ ಮಣ್ಣೊಳಗೆ ಹೋಗುವುದನ್ನು ನೋಡುವುದೇ ಚಂದ.
ReplyDeleteಒಳ್ಳೆಯ ಮಾಹಿತಿಪೂರ್ಣ ಲೇಖನ ಸುಮಕ್ಕ.. ಯಾಥಾಪ್ರಕಾರ ಓದಲು ಖುಷಿ ಆಯ್ತು. ನಾವೂ ಗುಬ್ಬಚ್ಚಿ ಅಂತಲೇ ಕರೆದ ನೆನಪು. ಈ ಕುಳಿಗಳನ್ನು ನೋಡ್ತಾ, ಅದರೊಳಗಿದ್ದನ್ನು ನೋಡಿ ಆಶ್ಚರ್ಯ ಪಟ್ಟಿದ್ದಿದೆ. ಆದರೆ ಅದರ ಜೀವನ, ಆಹಾರಪದ್ದತಿಯ ಬಗ್ಗೆ ಎಲ್ಲಾ ಯೋಚಿಸಿರಲಿಲ್ಲ. ಬಾಲ್ಯ ಅನ್ನೋದು ಹೀಗೆಲ್ಲಾ ಯೋಚಿಸೋ ವಯಸ್ಸೂ ಅಲ್ಲ ಬಿಡಿ :-)
ReplyDeleteನಿಮ್ಮ ಲೇಖನ ಮತ್ತೆ ಬಾಲ್ಯದ ನೆನಪುಗಳನ್ನ ಮರುಕಳಿಸಿತು. ನಾವು ಇದನ್ನು ಬೆಂಕಿಪೊಟ್ಟಣದಲ್ಲಿ ಇಡಲಿಲ್ಲ. ಆದರೆ ಇನ್ನೊಂದು ಕೆಂಪು ಬಣ್ಣದ ಕೀಟ,ಅದನ್ನು ರೇಷ್ಮೆ ಹುಳು ಅಂತ ಕರೀತಿದ್ವಿ. (ವೈಜ್ನಾನಿಕ ಹೆಸರು ಗೊತ್ತಿಲ್ಲ).. ಅದನು ಬೆಂಕಿಪೊಟ್ಟಣದಲ್ಲಿಟ್ಟು ಕೊನೆಗೆ ಅದಕ್ಕೆ ಆಹಾರ ಸರಿ ಆಗದೆ, ಅದು ಸತ್ತಾಗ ಬೇಸರ ಪಟ್ಟಿದ್ದೂ ಇದೆ.
ಒಂದೊಳ್ಳೆಯ ಲೇಖನ ಓದೋ ಹೊತ್ತಿಗೆ ನವಿರಾದ ನೆನಪುಗಳಿಂದ ಸಂಜೆ ಮತ್ತೆ ಲವಲವಿಕೆ ಮೂಡಿತು ನೋಡಿ :-) ಧನ್ಯವಾದಗಳು :-)
ಇಷ್ಟಪಟ್ಟಿದ್ದಕ್ಕೆ ನನ್ಗೂ ಖುಷಿಯಾಯ್ತು ಪ್ರಶಸ್ತಿ :)
Deleteನೀನು ಹೇಳಿದ ಕೆಂಪು ಬಣ್ಣದ ಕೀಟವನ್ನು ನಾನೂ ಹಿಡಿಯುತ್ತಿದ್ದೆ. ರೇಷ್ಮೆಯಂತೆ ನುಣುಪಾದ ಅದರ ಮೇಲ್ಮೈ ನೋಡಿ ರೇಷ್ಮೆ ತಯಾರಿಸೋದು ಆದೇ ಕೀಟದಿಂದ ಅಂತ ಆಗ ಅಂದುಕೊಂಡಿದ್ದೆವು. ಅದೊಂದು ಉಣುಗಿನ ಜಾತಿಗ ಸೇರಿದ ಸೇರಿದ ಕೀಟ. ಇನ್ನಷ್ಟು ಮಾಹಿತಿಯನ್ನು ಇನ್ನೊಮ್ಮೆ ಬರೆಯುತ್ತೇನೆ :)
ಸುಮಕ್ಕಾ,
ReplyDeleteಗುಬ್ಬಚ್ಚಿ ಎಂದು ನಮ್ಮಿಂದ ಕರೆಯಲ್ಪಡುತ್ತಿದ್ದ ಈ ಜೀವಿ ನಮ್ಮ ಬಾಲ್ಯದ ಒಡನಾಡಿ ಅಂತಲೇ ಹೇಳಬಹುದು. ಆಗ ಈ ಕೀಟದೊಂದಿಗೆ ಆಡದ ದಿನಗಳೇ ಕಡಿಮೆ ಅನ್ನಿಸುತ್ತೆ. ಜೊತೆಗೆ ಮಳೆಗಾಲದಲ್ಲಿ ರೆಷ್ಮೆಹುಳು ಕೂಡ ನಮ್ಮ ಪಾರ್ಟ್ನರ್! (ಇವು ಹೆಚ್ಚಾಗಿ ಮಲೆನಾಡಿನಲ್ಲಿ ಮಾತ್ರ ಕಂಡುಬರುವುದು ಅಂತ ನನ್ನ ಅನಿಸಿಕೆ)
ಬಾಲ್ಯದ ನೆನಪೊಂದನ್ನು ಕೆದಕಿದ್ದಕ್ಕೆ ಧನ್ಯವಾದಗಳು.
ಹ್ಹೆ ಹ್ಹೆ ಹ್ಹೆ!
ReplyDeleteನಮ್ಮ ಸಣ್ಣಗಿರುವಾಗಿನ ಬಾಲ್ಯದ ಸವಿನೆನಪು ಕಾಡಿತು...
ಹಾಗು ಇಂದಿನ ಮಕ್ಕಳ ಕಾಂಕ್ರೀಟ್ ಕಾಡಿನ ಕಿಂಗ್'ಗಳಾಗಿದ್ದಾರೆ :(
ಆದರೆ ನಮ್ಮ ಬಾಲ್ಯದ ಮುಗ್ಧ ಯೋಚನೆಗಳೇ ವಿಚಿತ್ರ ನೆನೆಸಿಕೊಂಡರೆ ನಗು ಬರುತ್ತದೆ!
----------------------------------------------
ನಮ್ಮ ತಂದೆ ತಾಯಂದಿರು ರೇಡಿಯೋ [ಆಗ ಹೊಸತಾಗಿ ಬಂದ ಉಪಕರಣ ಅದು!!!] ನೋಡಿ ಅದರಿಂದ ಹಾಡು ಹೇಗೆ ಬರುತ್ತದೆ ಎಂದೇ ಆಶ್ಚರ್ಯ!!! ಒಂದು ದಿವನ ತಾಯಿಯ ಅಪ್ಪಯ್ಯ ಅದನ್ನ ಬಿಟ್ಟು ನೋಡಿದ್ದೇ ತಡ ಒಳಗೆ ಇರುವ ಕೆಂಪು - ನೀಲಿ - ಅರಿಶಣ ಬಣ್ಣದ ಚಿಕ್ಕ ಚಿಕ್ಕ ತುಂಡು ನೋಡಿ [ಈಗ so called resistors - inductors - capacitors - diodes"ಗಳನ್ನು ನೋಡಿ] ಇವೇ ಚಿಕ್ಕ ಚಿಕ್ಕ ಮಾನವರು, ಕೆಂಪಾಗಿರುವವು ಹುಡುಗರು, ನೀಲಿಯಾಗಿರುವವು ಹುಡುಗಿಯರು, ಅರಿಶಣ ಬಣ್ಣದ್ದು ಮ್ಯೂಸಿಕ್ ಬಾರಿಸುವವು ಮತ್ತು ದೊಡ್ಡ ದೊಡ್ಡ ತಲೆಯವು ದೊಡ್ಡ ದೊಡ್ಡ ಗಾಯಕರು ಎಂಬ ನಿರ್ಧಾರಕ್ಕೆ ಬಂದರಂತೆ!!!! :D :D :D
----------------------------------------------
ತದನಂತರದಲ್ಲಿ ಮೂಡಿದ ಯಕ್ಷಪ್ರಶ್ನಯೆಂದರೆ ಅವಕ್ಕೆ ಊಟ ಕೊಡುವವರಾರು? ನಿದ್ದೆ - ಸ್ನಾನ - ಇತ್ಯಾದಿಗಳನ್ನೆಲ್ಲ ಎಲ್ಲಿ ಹೇಗೆ ಯಾವಾಗ ಮಾಡುತ್ತಾರೆಂದು!!! :D :D :D
ಇಂಥ ಹಲವಾರು ಮುಗ್ಧ ಯೋಚನೆಗಳ ಆಗರವಾಗಿದ್ದ ಅವರ ಮನಸೇ ಧನ್ಯ!!!
naavu baalyadalli ee keetavannu hididu benkipottannadallittu saakuttiddevu. idara bage olle maahiti needi baalyavannu nenapisiddiraa.. thanks
ReplyDeleteಜೀರುಂಡೆ (ತುಂಬಾ ಹಸಿರಾಗಿದ್ದು ನೋಡಲು ಮುದ್ದಾಗಿರ್ತಿತ್ತು...) ಅದನ್ನ ಕೇರಿ ಹುಡುಗರ ಹತ್ರ ಬಳಪಾನೋ, ಹಳೆ ನೋಟ್ ಪುಸ್ತಕಾನೋ ಕೊಟ್ಟು ಬಾರ್ಟರ್ ಮಾಡ್ಕೋತಾ ಇದ್ವಿ ನಾವು... ಸುಗುಣ ಹೇಳಿದ ಹಾಗೆ ಬೆಂಕಿ ಪೊಟ್ನದಲ್ಲಿಟ್ಟು ಮೊಟ್ಟೆ ಇಡುಸ್ತಾ ಇದ್ವಿ...ಹಹಹ ಚನ್ನಾಗಿದೆ ಸುಮಾ ಲೇಖನ...
ReplyDeleteಮೇಡಮ್,
ReplyDeleteಆಂಟ್ ಲೈಯನ್ ಬಗ್ಗೆ ಕೀಟದ ಬಗ್ಗೆ ತುಂಬಾ ಮಕ್ಕಳ ಆಟದ ನೆನಪಿನಲ್ಲಿ ಚೆನ್ನಾಗಿ ವಿವರಿಸಿದ್ದೀರಿ. ನಾನು ಅನೇಕ ಕೀಟಗಳ ಫೋಟೊಗ್ರಫಿ ಮಾಡಿದ್ದೇನೆ. ಇದನ್ನು ಮಾಡಲಾಗಿಲ್ಲ. ಹುಡುಕುತ್ತಿದ್ದೇನೆ...
ಧನ್ಯವಾದಗಳು.
ಹಳೆ ನೆನಪುಗಳನೆಲ್ಲ ಬೊಂಬಾಟಾಗಿ ರಿವೈಂಡ್ ಮಾಡಿಕೊಟ್ರಿ. ಧನ್ಯವಾದಗಳು.
ReplyDeleteಒಳ್ಳೆ ಮಾಹಿತಿ ಪೂರ್ಣ ಬರಹ ಮೇಡಂ. ಸೂಪರ್ರೂ...
tumba ista patte salugalu... padabalake.. madam bhvavannu arthavattagi padagalalli ponisidarinda oduva manasu mattastu odabeku yema neerikshe idutide... thanka a lot....
ReplyDeleteHi Suma, Thumba chennagi barediddiya.. Baalyada aa keetavannu yedure nodidastu khushiyaythu.. Hats off to your explaining style and creating curiousness.
ReplyDeleteಮಾಹಿತಿಯುಕ್ತ ಬರಹ. ತುಂಬಾ ಇಷ್ಟವಾಯ್ತು ಸುಮ.
ReplyDeleteಪೀರ್ ಪೀರ್ ಮಂಗಣ್ಣ ಅಂತ ಇದರ ಸುತ್ತ ಬೆರಳಿಂದ ವೃತ್ತಾಕಾರದಲ್ಲಿ ಗೆರೆ ಎಳೆದರೆ ಅದು ಹಿಮ್ಮುಖವಾಗಿ ಸುತ್ತುತಿತ್ತು . ತಂಗಿಗೆ ನಾಲ್ಕೈದು ಮಂಗಣ್ಣ ನ್ನನ್ನು ಹುಡುಕಿ ಕೊಟ್ಟು ಅಣ್ಣನ ಸಾರ್ಥಕತೆ ಮೆರದ ದಿನಗಳು ಅವಿಸ್ಮರಣೀಯ
ReplyDelete