26 Oct 2009

ನಿರ್ಭಾವುಕ

ಅಗೋ ವಸಂತದ ಎಳೆ ಚಿಗುರಿನ ಮೋಹಕ ಬಣ್ಣ

ಕೀಟಗಳನ್ನು ಸೆಳೆಯುವ ಈ ಹೂವಿನ ಘಮ

ಹರಿಯುವ ಇರುವೆಗಳ ಸೈನಿಕ ಶಿಸ್ತು

ಹಾರುವ ಜೇನುಹುಳುಗಳ ಸಾಂಘಿಕ ಜೀವನ

ಮರಿಗೆ ಗುಟುಕು ನೀಡುವ ಹಕ್ಕಿಗಳ ಮಮತೆ

ಹದಿಹರೆಯದ ಹುಡುಗನ ದನಿಯ ಒಡಕು

ತುಂಬು ಜವ್ವನೆಯ ನಸು ನಾಚಿಕೆ

ಪಾರ್ಕನ ಪ್ರೇಮಿಗಳ ಸಿಹಿ ಚುಂಬನ

ಗಂಡನ ಬೆತ್ತಲೆ ಬಾಹುಗಳ ಬಿಸಿಯಪ್ಪುಗೆ

ನಿದ್ರೆಗೆಟ್ಟು ಎಳೆಮಗುವಿನ ಲಾಲನೆಗೈಯುವ ತಾಯ ಪ್ರೀತಿ

ಅಬ್ಬಾ!! ಈ ಲೋಕ ಎಷ್ಟು ಸುಂದರ!!

ಕಿಟಕಿಯಾಚೆ ನೋಡುತ್ತಾ ಭಾವುಕತೆಯಿಂದ ಉದ್ಗರಿಸಿದಳು ಆಕೆ

ವೈಜ್ಞಾನಿಕ ಗ್ರಂಥವೊಂದರಲ್ಲಿ ಹುದುಗಿಸಿದ್ದ ತಲೆಎತ್ತದೆ ಉತ್ತರಿಸಿದ ಆತ

"ಇವೆಲ್ಲಕ್ಕೂ ಕಾರಣ ಕೇವಲ ಹಾರ್ಮೋನುಗಳು".

15 comments:

  1. We should know both the worlds :)

    ReplyDelete
  2. ಸುಮಾ ಮೇಡಮ್,

    ಪ್ರತಿ ಸಾಲುಗಳು ಜೀವನ್ಮುಖಿ ಲೋಕಕ್ಕೆ ಕರೆದೊಯ್ಯುತ್ತವೆ. ಕೊನೆಯ ಸಾಲು ಮಾತ್ರ ಪಟ್ಟನೆ ನೆಲಕ್ಕೆಳೆದುಬಿಡುತ್ತದೆ.

    ಅಂಥವರು ಇರುತ್ತಾರಲ್ವಾ....

    ReplyDelete
  3. 'Men are fron MARS and Women are from Venus' ಅನ್ನೋ ಪುಸ್ತಕದಲ್ಲಿ ಇದನ್ನೇ ವಿವರಿಸಿದ್ದಾರೆ....ಹೆಣ್ಣು ಗಂಡಿನ ನಡುವೆ ಭಿನ್ನ ವಿಚಾರಧಾರೆಯ ಅಸ್ತಿತ್ವ ಯಾಕಿರುತ್ತೆ ಅಂತ!! ತುಂಬಾ ಚೆನ್ನಾಗಿದೆ ಕವನದ ಅಂತ್ಯ!!

    ReplyDelete
  4. ಜೀವನವನ್ನ ನೋಡುವ ವಿಭಿನ್ನ ದ್ರುಷ್ಠಿಕೋನವನ್ನ ಚೆನ್ನಾಗಿ ವಿವರಿಸಿದ್ದೀರ್‍ಆ!

    ReplyDelete
  5. yes sunaath sir he is right. but what about her emotions?

    ReplyDelete
  6. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಗುರುಮೂರ್ತಿಯವರೆ.

    ನಿಜ ಸುಧೀಂದ್ರ ಸುಂದರ ಲೋಕದ ಹಿಂದಿನ ಸತ್ಯ ಗೊತ್ತಿರಲೇಬೇಕು.

    ಶಿವು ಸರ‍್ ಅಂತವರು ಖಂಡಿತಾ ಇರುತ್ತಾರೆ.

    ಸುಮನಾ ಹೆಣ್ಣು ಗಂಡು ದೈಹಿಕವಾಗಷ್ಟೆ ಅಲ್ಲ ಮಾನಸಿಕವಗಿಯೂ ತುಂಬ ವಿಭಿನ್ನರು ಅಲ್ಲವೆ? ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

    ಸೀತಾರಾಂ ಸರ‍್ ಧನ್ಯವಾದಗಳು.

    ReplyDelete
  7. ತುಂಬಾ ಚೆನ್ನಾಗಿದೆ ಕವನ, ಹೆಣ್ಣು ಗಂಡಿನ ವಿಶ್ಲೇಷಣೆ ಚೆನ್ನಾಗಿದೆ. ಇಬ್ಬರ ಮನಸ್ಸು, ಭಾವನೆ, ನಡೆ ನುಡಿ ಎಲ್ಲವೊ ಭಿನ್ನವಾಗಿರುತ್ತೆ.

    ReplyDelete
  8. ಸುಮಾರವರೆ...

    ಬದುಕು ಯಾವಗಲೂ ಹೀಗೆಯೇ...!
    ದ್ವಂದ್ವಗಳೊಂದಿಗೆ...
    ವಿರೋಧಗಳೊಂದಿಗೆ ಇರಬೇಕು...
    ನಿರ್ಭಾಕರೊಂದಿಗೆ..
    ಭಾವುಕರಿಗೆ..

    ಹಾಗೇಯೆ...
    ಭಾವುಕರೊಂದಿಗೆ ನಿರ್ಭಾವುಕರಿಗೆ ಬಹಳ ಕಷ್ಟ ಅಲ್ಲವಾ..?

    ಬಹಳ ಸುಂದರವಾಗಿವೆ ಸಾಲುಗಳು...

    ಅಭಿನಂದನೆಗಳು...

    ReplyDelete
  9. ಅವರವರಿಗವರವರೇ ಸರಿ... ಇದು ಜ೦ಡರ್ ಟೈಪು...

    ReplyDelete
  10. ತುಂಬಾ ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  11. ಮನಸು ನಿಜ ಇಬ್ಬರ ಮನಸ್ಸು ಭಾವನೆ ನಡೆ ನುಡಿ ಎಲ್ಲವೂ ಭಿನ್ನವೆ.ಧನ್ಯವಾದಗಳು.

    ಪ್ರಕಾಶಣ್ಣ ಭಾವುಕರ ಯೋಚನಾಧಾಟಿ ನಿರ್ಭಾವುಕರಿಗೆ ಬೇಸರ ತರಿಸಿದರೆ, ನಿರ್ಭಾವುಕರ ವಸ್ತುನಿಷ್ಠತೆ ಭಾವುಕರಿಗೆ ನೀರಸವೆನಿಸುತ್ತದೆ. ಆದರೂ ಇಂತಹ ಎಷ್ಟೋ ಜೋಡಿಗಳು "ಹೇಗೊ ಸೇರಿ ಹೊಂದಿಕೊಂಡು" ಬದುಕುತ್ತಾರಲ್ಲವೆ? ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ವಿಜಯಕ್ಕ,ರಾಘು ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

    ReplyDelete
  12. ಸುಮಾ, science ನ ಆವರಣ ಕವನದ ಹೂರಣ...ಹೋಳಿಗೆ ತುಂಬಾ ಚನ್ನಾಗಿದೆ....hormones ಶರೀರಕ್ರಿಯೆಯ ಯಾವಿದೇ ಬದಲಾವಣೆಗೆ ಕಾರಣ.
    ಫೆರಾಮೊನ್ಸ್ ಗಂಡು ಹೆಣ್ಣಿನ ಆಕರ್ಷಣೆಗೆ ಮೂಲ ಎನ್ನುವುದು ವಿದಿತ ..ಹುಡುಗೀರನ್ನ ಚುಡಾಯಿಸೋ ಕಾಮಣ್ಣರಿಗೆ ಈ ಶಾಪ..ಅದೇ..ಪ್ರಕೃತಿಯಲ್ಲಿ ಸಂತಾನೋತ್ಪತ್ತಿಗೆ driving force..
    ನಿಮ್ಮ ಕವನ ತುಂಬಾ ಮೆಚ್ಚುಗೆಯಾಯ್ತು.

    ReplyDelete