ಇತ್ತೀಚೆಗೆ ನಮ್ಮ ಊರ ಕಡೇ ಯಾರನ್ನು ಕೇಳಿದರೂ ಹೇಳುವ ಸುದ್ದಿಯೆಂದರೆ "ನಮ್ಮನೆ ಮಾಣಿಗೊಂದು ಹೆಣ್ಣು ಸಿಕ್ತಲ್ಲೆ" . ಹಾಗೆಂದು ಹೆಣ್ಣುಮಕ್ಕಳೇ ಇಲ್ಲವೆಂದೇನೂ ಅಲ್ಲ. ಆದರೆ ಇರುವ ಹುಡುಗಿಯರು ಹೆಚ್ಚು ಹೆಚ್ಚು ಚೂಸಿಯಾಗಿದ್ದಾರೆ. ಗಂಡು ಸಿಕ್ಕರೆ ಸಾಕು , ಹೇಗಿದ್ದರೂ ಹೊಂದಿಕೊಳ್ಳಬಲ್ಲೆ ಎಂಬ ಮನಸ್ಥಿತಿಯಿಂದ ಹೊರಬಂದಿದ್ದಾರೆ. ಹೆಚ್ಚಿನ ಹೆಣ್ಣುಮಕ್ಕಳೀಗ ಸುಶಿಕ್ಷಿತರು . ಅಪ್ಪ ತೋರಿಸಿದ ಗಂಡಿನ ತಾಳಿಗೆ ಕೊರಳೊಡ್ಡಲು ಆಕೆಯೀಗ ತಯಾರಿಲ್ಲ. ಆಕೆಯ ಬೇಡಿಕೆಗಳ ಪಟ್ಟಿಯೀಗ ದೊಡ್ಡದಿದೆ.
ಗಂಡು ಕೆಲಸದಲ್ಲಿರಬೇಕು(ಬೆಂಗಳೂರಿನಲ್ಲಿದ್ದರೆ ಪ್ರಾಶಸ್ತ್ಯ!)
ಊರಲ್ಲಿ ಅಡಕೆ ತೋಟ ಇರಬೇಕು (ರಜೆ ಕಳೆಯಲು ಫಾರ್ಮ್ ಹೌಸ್ ಬೇಡವೆ?)
ಅಪ್ಪ ,ಅಮ್ಮ ಇದ್ದರೂ ಊರಿನಲ್ಲಿರಬೇಕು (ಮಕ್ಕಳಾದ ಮೇಲೆ ನೋಡಿಕೊಳ್ಳಲು ಬರಬಹುದು)
ಅಕ್ಕ ತಂಗಿಯರಿದ್ದರೆ ಮದುವೆಯಾಗಿರಬೇಕು (ಯಾಕೆ ತಲೆನೋವು!!)
ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು
ಎಲ್ಲ ಕೆಲಸಗಳಲ್ಲಿ ಸಹಕರಿಸಬೇಕು, ..................ಹೀಗೆ ಪಟ್ಟಿ ಮುಂದುವರೆಯುತ್ತದೆ.
ಸರಿ , ನಾನು ಹೆಣ್ಣಾಗಿ ಅವರ ವ್ಯಂಗವನ್ನು ಸಹಿಸಬಲ್ಲೆನೆ? ನನ್ನ ಕೊರೆತ ಪ್ರಾರಂಭಿಸಿದೆ.
" ಹೌದು ಅದರಲ್ಲೇನು ತಪ್ಪು? ಹೆಣ್ಣಿಗೆ ತನಗೆ ಬೇಕಾದ ಗಂಡನ್ನು ಆರಿಸಿಕೊಳ್ಳುವ ಅವಕಾಶವನ್ನು ಪ್ರಕೃತಿಯೇ ನೀಡಿದೆ ಗೊತ್ತೇ. ಇಷ್ಟೆಲ್ಲ ವರ್ಷ ಅವಳ ಆ ಹಕ್ಕನ್ನು ನೀವು ಕಸಿದುಕೊಂಡಿದ್ದಿರಿ , ಈಗ ಅವಳಿಗೆ ಅದರ ಅರಿವಾಗಿದೆ. ಅವಳು ಪ್ರಕೃತಿಯ ನಿಯಮದಂತೆ ನಡೆಯುತ್ತಿದ್ದಾಳಷ್ಟೇ ಎಂದೆ."
"ಅಕ್ಕಾ ಅದೇನು ಹೇಳಬೇಕೂಂತಿದ್ದಿ ಸ್ವಲ್ಪ ಬಿಡಿಸಿ ಹೇಳೆ " ಬೇಸರದಿಂದ ನುಡಿದನೊಬ್ಬ.
"ನೋಡಿ ಹೆಚ್ಚಿನ ಪ್ರಾಣಿಗಳಲ್ಲಿ ಆಯ್ಕೆಯ ಅವಕಾಶವಿರುವುದು ಹೆಣ್ಣಿಗೇ. ಅವಳನ್ನು ಒಲಿಸಿಕೊಳ್ಳಲು ಗಂಡು ಕಷ್ಟಪಡಲೇಬೇಕು. ಕೆಲವು ಉದಾಹರಣೆ ಹೇಳುತ್ತೇನೆ ಕೇಳಿ.
- ನವಿಲು ಮುಂತಾದ ಪಕ್ಷಿಗಳಲ್ಲಿ breeding season ಪ್ರಾರಂಭವಾಗುತ್ತಿದ್ದಂತೆ ಬಣ್ಣಬಣ್ಣದ ಗರಿಗಳಿಂದ ಗಂಡು ಅಲಕೃತವಾಗುತ್ತದೆ . ತನ್ನ ಸೌಂದರ್ಯವನ್ನು ಹೆಣ್ಣಿನ ಮುಂದೆ ನೃತ್ಯದ ಮೂಲಕವೋ ಹಾಗೇ ಸುಳಿದಾಡಿಯೊ ಪ್ರದರ್ಶಿಸುತ್ತದೆ . ಹೆಣ್ಣಿಗೆ ಅದರ ಸೌಂದರ್ಯ ಮೆಚ್ಚಿಗೆಯಾದರೆ ಮಾತ್ರ ಒಲಿಯುತ್ತದೆ.
- ಕೋಗಿಲೆಯಂತಹ ಪಕ್ಷಿಗಳು ತಮ್ಮ ಇಂಪಾದ ಧ್ವನಿಯಿಂದ ಹೆಣ್ಣನ್ನು ಒಲಿಸಿಕೊಳ್ಳುತ್ತವೆ.
- ಗೀಜಗ (wearver bird) ಸುರಕ್ಷಿತವಾದ ಸ್ಥಳದಲ್ಲಿ ಗೂಡನ್ನು ಅರ್ಧ ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ. ಆಕೆಗೆ ಇಷ್ಟವಾದರೆ ಮಾತ್ರ ಒಪ್ಪಿಗೆ ಸೂಚಿಸುತ್ತದೆ ,ಮತ್ತು ಗೂಡನ್ನು ಪೂರ್ಣಗೊಳಿಸಲು ಸಹಕರಿಸುತ್ತದೆ. ಗೂಡು ಸುರಕ್ಷಿತ ಜಾಗದಲ್ಲಿಲ್ಲದಿದ್ದರೆ , ಸರಿಯಾಗಿ ನಿರ್ಮಿಸದಿದ್ದರೆ ಗಂಡನ್ನೇ ತಿರಸ್ಕರಿಸುತ್ತದೆ.
- ಕೆಲವು ಜಾತಿಯ ಮೀನುಗಳು ಗೂಡನ್ನು ನಿರ್ಮಿಸಿ ಹೆಣ್ಣನ್ನು ಆಕರ್ಷಿಸುತ್ತವೆ.
- ಜಿಂಕೆಯಂತಹ ಕೆಲ ಸಸ್ತನಿಗಳಲ್ಲೂ ಗಂಡು ತನ್ನ ಸುಂದರವಾದ ಕೋಡುಗಳಿಂದ ಹೆಣ್ಣನ್ನು ಆಕರ್ಷಿಸುತ್ತದೆ. ಹೆಣ್ಣನ್ನು ಒಲಿಸಿಕೊಳ್ಳುವುದಕ್ಕಾಗೇ ಎರಡು ಗಂಡುಗಳ ಮಧ್ಯೆ ಬಲಪ್ರದರ್ಶನ , ಹೋರಾಟಗಳೂ ನಡೆಯುತ್ತವೆ. ಗೆದ್ದ ಶಕ್ತಿಶಾಲಿಗಷ್ಟೇ ಹೆಣ್ಣು ಒಲಿಯುತ್ತದೆ.
- ಇನ್ನು ಕೀಟಪ್ರಪಂಚದಲ್ಲಂತೂ ಹೆಣ್ಣೇ ಸಾರ್ವಭೌಮಿಣಿ. ಹೆಚ್ಚಿನ ಗಂಡುಕೀಟಗಳು ಪ್ರಥಮ ಮಿಲನದ ನಂತರ ಪ್ರಾಣವನ್ನೇ ಬಿಡುತ್ತವೆ. ಜೇನುಹುಳುಗಳು , ಗೆದ್ದಲು ಮೊದಲಾದ ಕೀಟಗಳಲ್ಲಿ ಹೆಚ್ಚು ವೇಗವಾಗಿ ಹಾರುವ ಗಂಡಿಗೆ ಹೆಣ್ಣು ಒಲಿಯುತ್ತದೆ .
- ಕೆಲವು ಜಾತಿಯ ಜೇಡಗಳಲ್ಲಿ ಗಂಡು ಬೇಟೆಯನ್ನು ಹಿಡಿದು ತನ್ನ ಸಿಲ್ಕಿನಲ್ಲಿ ಸುತ್ತಿ ಹೆಣ್ಣಿಗೆ ಗಿಫ್ಟ್ ಕೊಟ್ಟು ಒಲಿಸಿಕೊಳ್ಳುತ್ತದೆ. ಹೆಣ್ಣಿಗೆ ಒಪ್ಪಿಯಾದರೆ ಸರಿ , ಇಲ್ಲವಾದರೆ ಅದನ್ನು ತಿಂದುಬಿಡುವ ಸಾಧ್ಯತೆಯೂ ಉಂಟು.
ಹೀಗೆ ಪ್ರಕೃತಿ ಹೆಣ್ಣಿಗೇ ಆಯ್ಕೆಯ ಅವಕಾಶ ನೀಡಿರುವುದು . ಅದನ್ನು ಈಗ ಅವಳು ಉಪಯೋಗಿಸುತ್ತಿದ್ದಾಳಷ್ಟೇ."
ನನ್ನ ದೀರ್ಘ ಭಾಷಣ ಮುಗಿದಾಗ ಅವರೆಲ್ಲ ಎದ್ದು ಅಲ್ಲಿಂದ ಓಡಿದ್ದರು ನಾನು ಇನ್ನೆಲ್ಲಿ ಮತ್ತೆ ಕೊರೆಯಲು ಪ್ರಾರಂಭಿಸುತ್ತೇನೊ ಎಂದು.
(ಮುಂದುವರಿದ ಪ್ರಾಣಿಗಳೆನಿಸಿಕೊಳ್ಳುವ ಸಸ್ತನಿಗಳಲ್ಲಿ ,ಅದರಲ್ಲೂ ಮನುಷ್ಯನನ್ನು ಒಳಗೊಂಡಿರುವ ಪ್ರೈಮೇಟ್ ಗಳಲ್ಲಿ ಗಂಡೇ ಡಾಮಿನೆಂಟ್ ಅನ್ನುವ ವಿಚಾರವನ್ನು ಮಾತ್ರ ನಾನು ಉದ್ದೇಶಪೂರ್ವಕವಾಗಿ ಮರೆತೆ.)
ಮನುಷ್ಯ ಪ್ರಾಣಿಗಳಿಗಿಂತ ಜೀವವಿಕಾಸದಲ್ಲಿ ಮೇಲೆ ಬಂದಿದ್ದಾನೆ ಅಲ್ವಾ ಅಕ್ಕಾ? so.... ಈ choice theory doesn't hold good for human beings :):)
ReplyDeleteಸುಮಾ ಮೇಡಮ್,
ReplyDeleteಸದ್ಯ ನಾನಂತೂ ಬಚಾವ್! ನನ್ನ ಮದುವೆ ಆಗಿಬಿಟ್ಟಿದೆ. ನನ್ನಾಕೆ ಮದುವೆಗೆ ಮೊದಲು ಇದೆಲ್ಲಾ ಕಂಡಿಷನ್ ಹಾಕಿರಲಿಲ್ಲ. ಈಗ ಹಾಕಿದರೂ ಅದನ್ನೆಲ್ಲಾ ಖಂಡಿತ ಪೂರೈಸುತ್ತಿದ್ದೇನೆ.[ಮದುವೆಗೆ ಮೊದಲು ನಾನು ಕೇವಲ ದಿನಪತ್ರಿಕೆ ವಿತರಕ. ಸ್ವಲ್ಪ ಮಟ್ಟಿಗೆ ಫೋಟೊಗ್ರಾಫರ್. ಆದ್ರೆ ಈಗ ಕತೆ ಬರೆಯುತ್ತೇನೆ, ಫೋಟೊಗ್ರಫಿಯಲ್ಲಿ ಸಾಧನೆ, ಒಂದು ಪುಸ್ತಕವನ್ನು ಬರೆದಿದ್ದೇನೆ. ನನ್ನಾಕೆಗೆ ಇಷ್ಟವಾಗುವಂತ ಪುಟ್ಟ ಮನೆ, ನಾವಿಬ್ಬರೇ. ವಾರಕ್ಕೊಂದು ಸಿನಿಮಾ, ಅಲೆದಾಟ, ಎಲ್ಲಾ ಉಂಟು] ಇದನ್ನೆಲ್ಲಾ ಅವಳು ಕೇಳದಿದ್ದರೂ ಸಿಗುತ್ತಿದೆ. ಅವಾಗಿಗಿಂತ ಈಗ ಮದುವೆ ಯಾಗಿದ್ದರೆ ತುಂಬಾ ಚೆನ್ನಿತ್ತು ಅನ್ನಿಸುತ್ತದೆ ಅವಳಿಗೆ. ಅರೆರೆ...ಇದೇನು ನನ್ನನ್ನು ಹೊಗಳಿಕೊಳ್ಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದು ಸುಮ್ಮನೆ ನಮ್ಮ ಗಂಡು ಹುಡುಗರ ವಾದಕ್ಕೆ ಸಹಾಯವಷ್ಟೆ[ತಮಾಷೆಗೆ]
ಚೆಂದದ ಲೇಖನ ನನಗೆ ಇಷ್ಟೆಲ್ಲಾ ಪ್ರತಿಕ್ರಿಯಿಸುವಂತೆ ಮಾಡಿತು.
ಹ್ಹ ಹ್ಹ ಹ್ಹ... ತುಂಬಾ ಚೆನ್ನಾಗಿದೆ...ನೀವು ಇಸ್ಟೆಲ್ಲಾ example ಒಮ್ಮೆಲೇ ಹೇಳಿದರೆ ಪಾಪ ಏನ್ ಮಾಡ್ತಾರೆ ಮತ್ತೆ...? ಗಂಡು ಏನೆ ಮಾಡಲಿ ಹೆಣ್ಣು ಇಲ್ಲದೇನೆ ಏನು ಇಲ್ಲ.. ಹೆಣ್ಣುಮಕ್ಕಳೀಗ ಸುಶಿಕ್ಷಿತರು ನಮ್ಮ ಅಕ್ಕ ಪಕ್ಕದ ಸಮಾಜದಲ್ಲಿ.. ಆದರೆ ಹಲವು ಕಡೆ..ಕೆಲವು ದೇಶದಲ್ಲಿ ಇನ್ನು ಹೆಣ್ಣು ಕೇವಲ ಆಟದ ಬೊಂಬೆ ಅಸ್ಟೇ..ಗಂಡು ಹಾಕುವ ತಾಳಕ್ಕೆ ಹೆಜ್ಜೆ ಹಾಕುವ ಸಹನಾಮೂರ್ತಿ ಅಲ್ಲವೇ...?
ReplyDeleteಪ್ರಯತ್ನ ಚೆನ್ನಾಗಿದೆ... :)
ನಿಮ್ಮವ,
ರಾಘು.
ವಿಜ್ಞಾನದ ಒಳ್ಳೇ ವಿಷಯವನ್ನ ನವಿರಾಗಿ, ಸಧ್ಯದ ಮಾನವನ ಜೀವನದ ಶೈಲಿಗೆ ಹೋಲಿಕೆಮಾಡಿ, ಪುರುಸಾಹಪ್ರಧಾನ ವ್ಯವಸ್ಥೆಯ ಲೋಪಗಳನ್ನು ತೋರಿಸುವ ಉತ್ತಮ ಪ್ರಯತ್ನ. ಒಳ್ಳೇ ತ೦ತ್ರಾ೦ಶದ ಲೇಖನ.
ReplyDeleteಅ೦ದ ಹಾಗೇ ಆ ಹಳ್ಳಿ ಹುಡುಗರದು ತಪ್ಪಿಲ್ಲ. ಅವಕ್ಕೇ ಹುಡುಗಿ ಹುಡುಕಿ ಕೊಡಿ. ನಮ್ಮ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕಮಗಳೂರು-ಜಿಲ್ಲೆಯ ಒಳತೋಟ ಮನೆಗಳ ಕೃಷಿಕ ಮನೆತನದ ಹುಡುಗರಿಗೆ ಮದುವೆಯಾಗುವಲ್ಲಿ ತು೦ಬು ಸಮಸ್ಯೆಯಾಗಿದೆ ಈ ಹುಡುಗಿಯರ ಆಯ್ಕೆ ಪ್ರಕ್ರಿಯೆಯಲ್ಲಿ.
ಸುಮಾರವರೆ,
ReplyDeleteಒಳ್ಳೆಯ ಲೇಖನ. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬಂದಂತೆಲ್ಲ, ಗಂಡುಗಳ ದರ್ಪ, ಹಾರಾಟ ಕಡಿಮೆಯಾಗತೊಡಗಿದೆ. ಇದೀಗ ಅನೇಕ ಕಡೆ ‘ವರಪರೀಕ್ಷೆ’ಗಳು ನಡೆಯತೊಡಗಿದ್ದನ್ನು ನಾನು ನೋಡುತ್ತಿದ್ದೇನೆ.
ನಿಜ ತಮ್ಮ(ವಿ.ರಾ.ಹೇ)ವೈಜ್ಞಾನಿಕವಾಗಿ this theory doesn't hold good for humanbeings , ಅದನ್ನು ನಾನು ನನ್ನ ಲೆಖನದ ಕೊನೇ ಪ್ಯಾರದಲ್ಲಿ ಸೂಚಿಸಿದ್ದೇನೆ. ಆದರೆ ಸಾಮಾಜಿಕವಾಗಿ , ಸಂಗಾತಿ ಹೀಗಿರಬೆಕೆಂದು ಯೋಚಿಸುವ, ಅಯ್ದುಕೊಳ್ಳುವ ಅವಕಾಶ ಗಂಡು ,ಹೆಣ್ಣುಗಳಿಬ್ಬರಿಗೂ ಸಮಾನವಾಗಿರಬೇಕಲ್ಲವೆ :)
ReplyDeleteಶಿವು ಸರ್ ಈ ಎಲ್ಲವುಗಳಿಗಿಂತ ಮುಖ್ಯವೆಂದರೆ ಸಂಗಾತಿಯೊಂದಿಗಿನ ಉತ್ತಮ ಭಾಂದವ್ಯವಲ್ಲವೆ . ಅದಿದ್ದಾಗ ಬೇರೆಲ್ಲವೂ ಸೆಕೆಂಡರಿ.ನಿಮ್ಮೀರ್ವರಲ್ಲಿ ಅದಕ್ಕೆ ಕೊರತೆಯಿಲ್ಲವೆಂಬುದು ನಿಮ್ಮ ಬರಹಗಳಿಂದ ತಿಳಿಯುತ್ತದೆ :)
ನಿಜ ರಾಘೂ ಅವರೆ ಇನ್ನೂ ಎಷ್ಟೋ ಸಮಾಜದಲ್ಲಿ ಹೆಣ್ಣು ಸೂತ್ರದ ಗೊಂಬೆಯೆ. ಅನೆಕ ಸುಶಿಕ್ಷಿತ ಹೆಣ್ಣುಮಕ್ಕಳೂ ಇದಕ್ಕೆ ಹೊರತೇನಲ್ಲ. ಇಬ್ಬರೂ ಸಮಾನರೆನ್ನುವ ಮನಸ್ಥಿತಿ ಕೆಲವರಲ್ಲಾದರೂ ಮೂಡಿರುವುದು ಆಶಾಕಿರಣವಾಗಿದೆ.
ಸೀತರಾಂ ಸರ್ ನಮ್ಮ ಕಡೆ ಹಳ್ಳಿಯ ಹುಡುಗರಿಗೀಗ ಹೆಣ್ಣು ಸಿಗದೇ ಅಂತರ್ಜಾತೀಯ ವಿವಾಹಗಳಿಗೂ ಸಂಪ್ರದಾಯಸ್ಥ ಹಿರಿಯರ ಅನುಮತಿ ದೊರಕುತ್ತಿದೆ.
ಸುನಾಥ ಸರ್ , ಕೇವಲ ಗಂಡಿನ , ಗಂಡು ಹೆತ್ತವರ ದರ್ಪ ಹಾರಾಟ ಕಮ್ಮಿಯಾಗಿ ಎಲ್ಲರೂ ಸಮಾನರೆಂಬ ಭಾವನೆ ಮೂಡಿದರೆ ಸರಿ . ಆದರೆ ಈ ಸಮಸ್ಯೆಯೀಗ ವಧುದಕ್ಷಿಣೆಯಂತಹ ಇನ್ನೊಂದು ವಿಪರೀತಕ್ಕೆಳೆಸುವ ಎಲ್ಲ ಲಕ್ಷಣಗಳಿವೆ. ಅನೇಕ ಕಡೆ ಅಂತಹ ಮದುವೆಗಳಾಗಿವೆ ಎಂದು ಸುದ್ದಿ.
ತಮ್ಮೆಲ್ಲರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಇನ್ನೂ ಮದುವೆಯಾಗದವನು ನಾನು, ಏನೂ ಮಾತಾಡಲ್ಲಪ್ಪ !
ReplyDeleteಹ್ಹಾ ಹ್ಹಾ ಹ್ಹಾ....
ReplyDeleteಒಹ್ ದೇವರೇ, ನನ್ನಂತೆ ಇನ್ನು ಮದುವೆಯಾಗದಿರುವ ಹುಡುಗರನ್ನು ಕಾಪಾಡು...
ಸುಮಾ ಮೇಡಂ,
ReplyDeleteನಮಗೆ ಮದುವೆಯಾಗಿರುವುದು ಒಳ್ಳೆಯದೇ ಆಯಿತು,
ನಿಮ್ಮ ಲೇಖನ ಓದಿದ ಹುಡುಗಿಯರು ಇಲ್ಲದಿದ್ದರೆ ಹಾಗೆ ವಾದಕ್ಕೆ ಬರುತ್ತಿದ್ದರು :)
ತುಂಬಾ ನಿಜವಾದ ಮಾತು
ಅಕ್ಷರಶ: ಸತ್ಯ
ಹೆಣ್ಣು ಬಾಳಿಗೆ ಕಣ್ಣು
ಆ ಹುಡುಗರು ಇನ್ನು ಮದುವೆ ಯೋಚ್ನೇನೇ ಬಿಡುವ ಸಾಧ್ಯತೆ ಇದೆ....! ಬರಹ ಚೆನ್ನಾಗಿದೆ.
ReplyDeleteಸುಮಾ ಮೇಡಂ,
ReplyDeleteನನಗೂ ಗೊತ್ತಿರುವ ಕೆಲವು ಗೆಳೆಯರ ಗೋಳು ಇದೆ ಆಗಿದೆ..... ತುಂಬಾ ಚೆನ್ನಾಗಿದೆ ಲೇಖನ.....
ಚೆನ್ನಾಗಿದೆ ಸುಮಕ್ಕ, ಸ೦ಧರ್ಭಕ್ಕೆ ಹೊ೦ದಿಸಿ ನವಿರು ಹಾಸ್ಯದೊ೦ದಿಗೆ ಜೀವ-ವಿಜ್ನಾನದ ಕೆಲವು ಆಸಕ್ತಿಕರವಾದ ವಿಷಯಗಳನ್ನು ತಿಳಿಸಿದ್ದು ಚನ್ನಾಗಿದೆ. ಈ ವಿಚಾರದಲ್ಲಿ ನಮ್ಮನ್ನು ( ಹುಡುಗಿಯರನ್ನು) ಸಮರ್ಥಿಸಿಕೊಳ್ಳಲು ಬಹಳಷ್ಟು ಅ೦ಶಗಳಿವೆಯಾದರೂ, ಆಧುನಿಕ ಜೀವನಶೈಲಿ, ದುಡ್ಡು ಮು೦ತಾದವುಗಳ ಭ್ರಮೆಯಲ್ಲಿ ಹಳ್ಳಿಯ ನಿಷ್ಕಲ್ಮಶ ಮನಸ್ಸಿನ ಹುಡುಗರನ್ನು ಕಡೆಗಣಿಸುವುದು ಸರಿಯಲ್ಲ.
ReplyDeleteಹ್ಮ್.. ತುಂಬಾ ಚನ್ನಾಗಿ ಬರದ್ದೆ.. ಸದ್ಯ ನಂಗೆ ಚಿಂತೆ ಇಲ್ಲೆ.. ನವೆಂಬರ್ ಹದಿಮೂರಕ್ಕೆ ನನ್ನ ಮದ್ವೆ ಆತು :)
ReplyDeleteಹೆಣ್ಣುಗಳ ಪರದಾಟ ..ಈಗ ಹೆಣ್ಣುಗಳಿಗೆ ಪರದಾಟವೇ..?? ಏನಪ್ಪಾ ಇದು ಸುಮ ಹೀಗೂ ಒಂದು ಬಿಟ್ಟ್ರು ಬಾಣ...??!! ಅನ್ನೋ ವಾಗ್ಲೇ..ಇನ್ನೊಂದು ನೆನಪಾಗುತ್ತೆ...ಇದು ಕಲಿತ ಹೆಣ್ಣುಮಕ್ಕಳ ಮತ್ತು ಗಳಿಸೋ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ ಅನ್ನೊದೂ ಸತ್ಯ...ಕಾರಣ ಅವರಿಗೆ ಚಾಯ್ಸ್ ಇದೆ...ಚಾನ್ಸ್ ಕಾಲ ಹೋಯ್ತು...
ReplyDeleteಪ್ರಾಣಿ ಪ್ರಪಂಚದ ಮಾಹಿತಿಕೊಡ್ತಾ..ನಮ್ಮಲ್ಲಿ ಆಗುತ್ತಿರುವ ಬದಲಾವಣೆಗಳತ್ತ ನಮ್ಮ ಚಿಂತನೆಯನ್ನು ಕೊಂಡೊಯ್ಯುವಲ್ಲಿ ನಿಮ್ಮ ಲೇಖನ ಯಶಸ್ವೀ ಎನಿಸಿದೆ...
ನಿಮ್ಮ ಬಾಣ ಓದಿದ್ದು ಸ್ವಲ್ಪ ಲೇಟ್.. ಆದ್ರೂ ಹಾಸ್ಯ ಮಿಶ್ರಿತ ಪದಗಳಲ್ಲಿ ಉತ್ತಮ ವಿಚಾರವನ್ನೇ ತಿಳಿಸಿದ್ದೀರಿ. ನಂಗತೂ ಮದ್ವೆ ಆಗಿದ್ಯಪ್ಪಾ!!
ReplyDelete:) ಅನುಭವಿಸ್ತಾ ಇದೀನಿ
ReplyDelete