ಜೀವಜಗತ್ತಿನಲ್ಲಿ ಕೀಟಗಳದೊಂದು ಅತೀವ ವಿಸ್ಮಯ ಜಗತ್ತು. ಬದುಕಲು ಅವು ಕಂಡುಕೊಂಡಿರುವ ದಾರಿಗಳ ಮುಂದೆ ಬಹುಶಃ ಉಳಿದೆಲ್ಲ ಜೀವಿಗಳೂ ತಲೆಬಾಗಬೇಕು. ಅಷ್ಟೊಂದು ವೈವಿಧ್ಯಮಯ ಅಡಾಪ್ಟೇಷನ್ ಅವುಗಳದ್ದು.
|
ಕಪ್ಪೆಕೀಟ |
ಇದೊಂದು ಬದುಕಲು ಅದ್ಭುತವಾದ ತಂತ್ರ ಬಳಸುವ ಪುಟ್ಟ ಕೀಟ ಕಪ್ಪೆಕೀಟ (ಫ್ರಾಗ್ ಹಾಪರ್ ) . ಆಕಾರದಲ್ಲಿ ಕಪ್ಪೆಯನ್ನು ಹೋಲುವ ಈ ಕಪ್ಪೆಕೀಟ ಕಪ್ಪೆಯಂತೆಯೇ ಕುಪ್ಪಳಿಸುತ್ತದೆ. ಒಮ್ಮೆಗೆ ಗಾಳಿಯಲ್ಲಿ 70cm ನಷ್ಟು ದೂರ ಕುಪ್ಪಳಿಸಬಲ್ಲ ಕಪ್ಪೆಕೀಟ ಪ್ರಾಣಿಲೋಕದಲ್ಲಿ ಅತೀ ದೂರ ಕುಪ್ಪಳಿಸಬಲ್ಲ ಜೀವಿ ಎಂಬ ಖ್ಯಾತಿ ಪಡೆದಿದೆ .ಇವು
ತಮ್ಮ ದೇಹದ ಅಳೆತೆಯ ೧೦೦ರಷ್ಟು ದೂರ ಕುಪ್ಪಳಿಸಬಲ್ಲವು !! ವಿಶೇಷವಾಗಿ ರಚನೆಯಾಗಿರುವ ಹಿಂಗಾಲುಗಳು ಇವು ಹೀಗೆ ಹಾರಲು ಸಹಾಯ ಮಾಡುತ್ತವೆ.
|
ಮರಿಯ ನೊರೆಗೂಡು |
ಸಸ್ಯಸಾರವನ್ನು ಹೀರುವ ಈ ಕಪ್ಪೆಕೀಟಗಳು ಸಸ್ಯಗಳ ಕಾಂಡಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ. ಆ ಮೊಟ್ಟೆಯೊಡೆದಾಗ ಬೆಳೆದ ಕೀಟವನ್ನೇ ಹೋಲುವ ಮರಿಗಳು(ನಿಂಫ್) ಹೊರಬರುತ್ತವೆ. ಇವು ಸಸ್ಯಗಳ ಕಾಂಡವನ್ನು ತಮ್ಮ ಚೂಪಾದ ಬಾಯಿಯ ಅಂಗಗಳಿಂದ ಚುಚ್ಚಿ ಸಾರವನ್ನು ಹೀರುತ್ತವೆ. ನಂತರ ಗಿಡಗಳ ಕಾಂಡ ಅಥವಾ ಎಲೆಗಳ ಮೇಲೆ ಒಂದು ರೀತಿಯ ದ್ರವವನ್ನು ವಿಸರ್ಜಿಸಿ , ವಿಶೇಷ ಅಂಗದಿಂದ ಉಂಟಾಗುವ ಗಾಳಿಗುಳ್ಳೆಗಳನ್ನು ಸೇರಿಸುತ್ತವೆ. ಆಗ ಸಿದ್ಧವಾಗುವ ಮಾನವನ ಎಂಜಲಿನಂತಹ ನೊರೆನೊರೆಯಾದ ದ್ರಾವಣದೊಳಗೆ ಈ ಮರಿ ಅಡಗಿ ಕುಳಿತಿರುತ್ತವೆ.
|
ನೊರೆಯೊಳಗಿರುವ ಮರಿ |
ಈ ನೊರೆ ಕೀಟವನ್ನು ವೈರಿಗಳಿಂದ ರಕ್ಷಿಸುತ್ತದೆ. ನೊರೆ ಕೆಟ್ಟ ರುಚಿ ಹೊಂದಿರುವುದರಿಂದ ಯಾವ ಜೀವಿಯೂ ಅದರೊಳಗೆ ಅಡಗಿರುವ ಈ ಕೀಟವನ್ನು ತಿನ್ನಲು ಬರುವುದಿಲ್ಲ. ಅಲ್ಲದೆ ಈ ನೊರೆ ಕೀಟವನ್ನು ಬಿಸಿಲು , ಚಳಿಯಿಂದಲೂ ರಕ್ಷಿಸುತ್ತದೆ.
ನೂರಾರು ಜಾತಿಯ ಕಪ್ಪೆಕೀಟಗಳು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಇವೆ ಎನ್ನುತ್ತಾರೆ. ಇವು ಹೆಚ್ಚು ಸಂಖ್ಯೆಯಲ್ಲಿದ್ದಾಗ ಸಸ್ಯಗಳಿಗೆ ಹಾನಿಯೂ ಉಂಟಾಗಬಹುದು .
|
ಗಿಡ ಹೀಗೆ ಕಾಣಿಸುತ್ತದೆ |
ಇದರ ಬಗ್ಗೆ ಓದಿ ತಿಳಿದಾಗಿನಿಂದ ಕಂಡ ಕಂಡ ಗಿಡಗಳಲ್ಲಿ ಹುಡುಕುತ್ತಿದ್ದೇನೆ ...ಎಂಜಲಿನಂತಹ ನೊರೆ ಏನಾದರೂ ಕಾಣಿಸುತ್ತಾ ಅಂತ ..ನನಗೆ ಈ ಬೆಂಗಳೂರಿನಲ್ಲಂತೂ ಕಾಣಿಸಿಲ್ಲ .....ನಿಮಗಾರಿಗಾದರೂ ಇಂತಹ ಕೀಟ ಕಂಡಲ್ಲಿ ತಿಳಿಸುತ್ತೀರಾ?
ಈ ವಿಚಿತ್ರ ಕೀಟದ ಬಗೆಗೆ ಓದಿ ಅಚ್ಚರಿಯಾಯಿತು. ನೀವು ತೋರಿಸಿದಂತಹ ನೊರೆಯನ್ನು ನಾನು ನೋಡಿದಂತಿಲ್ಲ. ಈಗ ಕಾಣುವ ಬಯಕೆಯಾಗಿದೆ!
ReplyDeleteಧನ್ಯವಾದಗಳು ಸುಮಕ್ಕ... ನಾನು ಗಿಡಗಳ ಮೇಲೆ ನೊರೆ ಇರುತ್ತಿದ್ದನ್ನು ನೋಡಿ ಎಷ್ಟೋ ದಿನ ಇದೇನು ಹೀಗಿದೆ ಎಂದುಕೊಳ್ಳುತ್ತಿದ್ದೆ. ಈ ವಿಭಿನ್ನ ಕೀಟಗಳ ಬಗ್ಗೆ ಓದಿ ಖುಷಿಯಾಯಿತು.
ReplyDeleteಚೆಂದ ಇದ್ದು ಸುಮಕ್ಕ..ನಾನು ಮೊದಲ್ನೇ ಸಲ ಇದರ ಬಗ್ಗೆ ನೋಡ್ತಾ ಇರದು.. ಎಲ್ಲಾದ್ರೂ ಕಂಡ್ರೆ ತಿಳಸ್ತಿ :-) ಒಳ್ಳೆ ಮಾಹಿತಿ :-)
ReplyDelete