ಕಣಜ / ಕೊಣಜ ( wasp ) ಎಂಬ ಈ ಕೀಟವು ಜೇನುನೊಣಗಳ ಪಂಗಡಕ್ಕೇ ಸೇರಿದೆ. ನೋಡಲು ಸಹ (ಇದರ ಸೊಂಟ ಸ್ವಲ್ಪ ಸಣ್ಣಗಿರುವುದನ್ನು ಬಿಟ್ಟರೆ ) ಹೆಚ್ಚುಕಡಿಮೆ ಜೇನುನೊಣವನ್ನೇ ಹೋಲುತ್ತದೆ .
ಪ್ರಾಕೃತಿಕವಾಗಿ ಜೇನುನೊಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ಕಣಜಗಳು. ಆದರೂ ಸಹ ನಾವು ಮಾನವರು ಜೇನುನೊಣಗಳಿಗೆ ಕೊಡುವಷ್ಟು ಗೌರವವನ್ನು ಇವುಗಳಿಗೆ ಕೊಡುವುದಿಲ್ಲ. ಜೇನು ಗೂಡು ಕಂಡರೆ ಅದನ್ನು ಜತನದಿಂದ ಕಾಪಾಡುತ್ತೇವೆ. ಕಣಜದ ಗೂಡು ಮನೆಯ ಆಸುಪಾಸಿನಲ್ಲಿ ಕಂಡರೆ ಬೆಂಕಿಯಿಂದ ಸುಟ್ಟುಬಿಡುತ್ತೇವೆ. ಕಚ್ಚಿದರೆ( ಅದು ಹಲ್ಲುಗಳಿಂದ ಕಚ್ಚುವುದಿಲ್ಲ, ದೇಹದ ಹಿಂಭಾಗದಲ್ಲಿರುವ ಚೂಪಾದ ಕೊಂಡಿಯಿಂದ ಚುಚ್ಚುತ್ತದೆ.) ತುಂಬ ಉರಿಯೆಂಬ ಕುಖ್ಯಾತಿ ಕಣಜಗಳಿಗಿದೆ. ಆದರೆ ವಾಸ್ತವವಾಗಿ ಸುಮಾರು ಮುವತ್ತು ಸಾವಿರಕ್ಕೂ ಹೆಚ್ಚಿನ ಜಾತಿಯ ಕಣಜಗಳನ್ನು ಗುರುತಿಸಲಾಗಿದ್ದು , ಎಲ್ಲ ಜಾತಿಯ ಕಣಜಗಳೂ ಕಚ್ಚುವುದಿಲ್ಲ .
ವಿಧಗಳು
ಮುಖ್ಯವಾಗಿ ಎರಡು ರೀತಿಯ ಕಣಜಗಳಿವೆ . ಜೇನುನೊಣಗಳಂತೆ ಗುಂಪುಗುಂಪಾಗಿ ಸಂಸಾರ ನಡೆಸುವ ಕಣಜಗಳು ಮತ್ತು ಒಂಟಿಯಾಗಿ ಜೀವಿಸುವ ಕಣಜಗಳು.
ಸಂಘಜೀವಿ ಕಣಜಗಳು ( social wasp )
ಗುಂಪಾಗಿ ವಾಸಿಸುವ ಕಣಜಗಳು ಜೇನುನೊಣಗಳಂತೆಯೆ ದೊಡ್ಡ ಗೂಡನ್ನು ಕಟ್ಟುತ್ತವೆ. ಆದರೆ ಅವುಗಳಂತೆ ಇವುಗಳಲ್ಲಿ ಮೇಣ ಸ್ರವಿಸುವ ಗ್ರಂಥಿಗಳಿಲ್ಲ.
ಮಣ್ಣು , ಸಸ್ಯಗಳ ತಿರುಳು , ತಮ್ಮ ತ್ಯಾಜ್ಯ ಇತ್ಯಾದಿ ವಸ್ತುಗಳನ್ನು ಬಳಸಿ ಈ ಕಣಜಗಳು ಗೂಡು ಕಟ್ಟುತ್ತವೆ. ರಾಜ ಪರಿವಾರ , ಕೆಲಸಗಾರರು , ಸೈನಿಕರು ಇತ್ಯಾದಿ ವರ್ಗೀಕರಣ ಇವುಗಳಲ್ಲಿದೆ. ಮೊಟ್ಟೆ ಮರಿಗಳನ್ನು ಇವು ಪಾಲಿಸುತ್ತವೆ.
ಒಂಟಿ ಕಣಜಗಳು ( solitary wasp )
ಒಂಟಿಯಾಗಿ ವಾಸಿಸುವ ಹೆಚ್ಚಿನ ಕಣಜಗಳು ಬಾಲ್ಯಾವಸ್ಥೆಯನ್ನು ಬೇರೆ ಜೀವಿಗಳ ದೇಹದಲ್ಲಿ ಅಥವಾ ದೇಹದ ಮೇಲೆ ಕಳೆಯುವ ಪರೋಪಜೀವಿಗಳಾಗಿವೆ.
ಕೆಲವು ಜಾತಿಯ ಹೆಣ್ಣು ಕಣಜಗಳು , ಅದರ ಬಲಿ ಜೀವಿಯನ್ನು( ಕೀಟಗಳು , ಕಂಬಳಿಹುಳುಗಳು , ಜೇಡಗಳು ) ಹುಡುಕಿ ಅದನ್ನು ತನ್ನ ಕಿಣ್ವಗಳಿಂದ ನಿಷ್ಕ್ರಿಯಗೊಳಿಸಿ , ಅದರಲ್ಲಿ ಮೊಟ್ಟೆಗಳನ್ನಿಟ್ಟು ಸುತ್ತ ಗೂಡು ಕಟ್ಟಿ ಮುಚ್ಚಿಬಿಡುತ್ತವೆ. ಅಥವಾ ಗೂಡಿನೊಳಗೆ ಮೊಟ್ಟೆಯಿಟ್ಟು, ಅಲ್ಲೇ ಬಲಿಜೀವಿಯನ್ನು ಇಡುತ್ತದೆ ಹೊರಬರುವ ಮರಿ , ಬಲಿ ಜೀವಿಯನ್ನು ತಿನ್ನುತ್ತಾ ಬೆಳೆಯುತ್ತದೆ. ಸಂಪೂರ್ಣವಾಗಿ ಬೆಳೆದ ನಂತರ ಗೂಡನ್ನು ಒಡೆದು ಹೊರಬರುತ್ತವೆ.
ಇನ್ನು ಕೆಲವು ಜಾತಿಯ ಕಣಜಗಳು ಬಲಿ ಕೀಟಗಳ ಮೊಟ್ಟೆ , ಅಥವಾ ಕೋಶಾವಸ್ಥೆಯನ್ನು ಹುಡುಕಿ ಅದರೊಳಗೆ ತನ್ನ ಮೊಟ್ಟೆಯನ್ನಿಡುತ್ತವೆ. ಬಲಿ ಜೀವಿಯು ಬೆಳೆದು ಮರಿಯಾಗುತ್ತಿದ್ದಂತೆ ಅದರೊಳಗೇ ಕಣಜದ ಮೊಟ್ಟೆಯೂ ಒಡೆದು ಮರಿಯಾಗಿ ಬೆಳೆಯುತ್ತವೆ. ಕ್ರಮೇಣ ಕಣಜ ಬೆಳೆದಂತೆ ಅದಕ್ಕೆ ಬಲಿ ಜೀವಿ ಬಲಿಯಾಗುತ್ತದೆ.
ಕೆಲವು ಗಿಡಮರಗಳ ಕಾಂಡ ಎಲೆ , ಕಾಯಿಗಳ ಮೇಲೆ ಗಂಟು ಗಂಟಾದ ಆಕೃತಿ ಕಾಣುತ್ತದೆ . ಇದೂ ಸಹ ಕೆಲ ಜಾತಿಯ ಕಣಜಗಳ ಕೆಲಸ. ಕಣಜವು ಸಸ್ಯಕೋಶದೊಳಗೆ ಮೊಟ್ಟೆಗಳನ್ನಿಟ್ಟು ಆ ಸಸ್ಯಕೋಶವು ಅದರ ಸುತ್ತಲೂ ಇನ್ನಷ್ಟು ಪೋಷಕಾಂಶಗಳನ್ನು ಸಂಗ್ರಹಿಸುವಂತೆ ಮಾಡುತ್ತದೆ. ಹೊರಬರುವ ಮರಿಯು ಆ ಕೋಶಗಳನ್ನೇ ತಿಂದು ಬೆಳೆಯುತ್ತದೆ.
ಅಂಜೂರ ಕಣಜ ( fig wasp )
ಇವೆಲ್ಲಕ್ಕಿಂತಲೂ ಅತ್ಯಾಕರ್ಷಕವಾದ ಜೀವನಚಕ್ರ ಅಂಜೂರದ ಮರಗಳ ಜಾತಿಗೆ ಸೇರಿದ ಹಣ್ಣುಗಳಲ್ಲಿರುವ ಕಣಜಗಳದ್ದು. ಅಂಜೂರದ ಮರದಲ್ಲಿ ಕಾಯಿಯಂತೆ ತೋರುವುದು ವಾಸ್ತವವಾಗಿ ಗಂಡು ಮತ್ತು ಹೆಣ್ಣು ಹೂವುಗಳನ್ನೊಳಗೊಂಡಿರುವ ಹೂಗುಚ್ಛ. ಈ ಹೂಗುಚ್ಛದೊಳಗೆ ಹೋಗಲು ಚಿಕ್ಕದಾದ ಒಂದು ಕಿಂಡಿಯಿದೆ. ಈ ಕಿಂಡಿಯೊಳಗೆ ನುಸುಳುವ ಹೆಣ್ಣು ಕಣಜ , ಹೀಗೆ ನುಗ್ಗುವಾಗ ತನ್ನ ರೆಕ್ಕೆಗಳು , ಮೀಸೆ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಒಂದು ಹೂಗುಚ್ಚದಲ್ಲಿ ಗಂಡು ಹೂವು , ಉದ್ದನೆಯ ಹೆಣ್ಣು ಹೂವು ಮತ್ತು ಗಿಡ್ಡನೆಯ ಹೆಣ್ಣು ಹೂಗಳಿರುತ್ತವೆ.
ಉದ್ದನೆಯ ಹೂಗಳೇ ಹೆಚ್ಚಾಗಿದ್ದಲ್ಲಿ ಅಲ್ಲಿ ಆ ಕೀಟಕ್ಕೆ ಮೊಟ್ಟೆಯಿಡಲಾಗುವುದಿಲ್ಲ . ತನ್ನೊಡನೆ ತಂದ ಪರಾಗರೇಣುವಿನಿಂದ ಹೆಣ್ಣುಹೂವಿನಲ್ಲಿ ಪರಾಗಸ್ಪರ್ಶ ನಡೆಸುವ ಕಣಜ ನಂತರ ಅಲ್ಲೇ ಸಾಯುತ್ತದೆ. ಅದು ಸತ್ತೊಡನೆಯೇ ಕಿಣ್ವವೊಂದರ ಮೂಲಕ ಹೂವು ಅದನ್ನು ಕರಗಿಸಿಬಿಡುತ್ತದೆ. ಪರಾಗಸ್ಪರ್ಶವಾದ್ದರಿಂದ ಅದು ಮುಂದೆ ಬೆಳೆದು ಬೀಜೋತ್ಪತ್ತಿ ಆಗುತ್ತದೆ. ಇಂತಹ ಹಣ್ಣುಗಳು ತಿನ್ನಲು ಯೋಗ್ಯವಾಗಿರುತ್ತವೆ.
ಗಿಡ್ಡನೆಯ ಹೆಣ್ಣು ಹೂವುಗಳು ಹೆಚ್ಚಿರುವ ಹೂಗುಚ್ಛವಾದರೆ ಹೆಣ್ಣು ಅಲ್ಲಿ ತನ್ನ ಮೊಟ್ಟೆಗಳನ್ನಿಟ್ಟು ಸಾಯುತ್ತದೆ. ಮೊದಲು ಮೊಟ್ಟೆಯೊಡೆದು ಹೊರಬರುವ ಗಂಡು ಮರಿಗಳು , ಹೆಣ್ಣನ್ನು ಹುಡುಕಿ , ಸಂತಾನಕ್ರಿಯೆ ನಡೆಸುತ್ತವೆ. ಹೊರಬರಲು ದಾರಿ ಅಗೆಯುತ್ತಾ , ಅಲ್ಲೇ ಸಾಯುತ್ತವೆ. ನಂತರ ಹೊರಬರುವ ಹೆಣ್ಣು ಕಣಜ , ಆ ವೇಳೆಗೆ ಅರಳಿರುವ ಗಂಡು ಹೂವುಗಳಿಂದ ಪರಾಗರೇಣುಗಳನ್ನೂ ಸಂಗ್ರಹಿಸಿಕೊಂಡು ಅಲ್ಲಿಂದ ಹೊರಬೀಳುತ್ತವೆ. ಮತ್ತೆ ಹೊಸ ಮರ ಹುಡುಕಿ , ಅದರ ಹೂಗುಚ್ಛದೊಳಗೆ ನುಸುಳುತ್ತವೆ ಹೀಗೆ ಅವುಗಳ ಜೀವನಚಕ್ರ ಮುಂದುವರೆಯುತ್ತದೆ.
ಈ ಜಾತಿಗೆ ಸೇರಿದ ನೂರಾರು ಮರಗಳಿವೆ , ಪ್ರತಿಯೊಂದು ಮರಕ್ಕೂ ಅದರದೇ ಆದ ಒಂದು ಜಾತಿಯ ಕಣಜಗಳು ಪರಾಗಸ್ಪರ್ಶ ನಡೆಸುತ್ತವೆ.
ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಕಣಜಗಳದು ಬಹುಮುಖ್ಯ ಪಾಲಿದೆ .
ಅನೇಕ ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಸಿ ಬೀಜೋತ್ಪತ್ತಿಗೆ ಕಾರಣವಾಗುತ್ತದೆ .
ರೈತರ ಬೆಳೆ ಹಾನಿಗೆ ಕಾರಣವಾಗುವ ಅನೇಕ ಕೀಟಗಳು ಇದರ ಆಹಾರವಾಗಿರುವುದರಿಂದ ಇದೊಂದು ಉತ್ತಮ ಜೈವಿಕ ಕೀಟನಾಶಕ .
ಎಲ್ಲ ಕೀಟಗಳಂತೆ ಅತಿಯಾದ ಕೀಟನಾಶಕಗಳ ಬಳಕೆ , ಈ ಕೀಟಗಳನ್ನೂ ಸಂಕಷ್ಟಕ್ಕೆ ದೂಡಿದೆ.
ಈ ವಿಡಿಯೋ ತುಣುಕು fig wasp ಗಳ ಬಗ್ಗೆ ತಿಳಿಸುತ್ತದೆ .
https://www.youtube.com/watch?v=JfkiYfrStrU

ಹಳ್ಳಿಗಾಡಿನಿಂದ ಬಂದ ನನಗೆ ಕಣಜ ಪರಿಚಿತ ಹುಳು. ಅದರ ಭೀಮಾಕಾರ, ಸದ್ದು ಮತ್ತು ಗೂಡು ನಮಗೆ ಯಾವತ್ತೂ ವಿಸ್ಮಯವೇ.
ReplyDeleteತಮ್ಮ ಈ ಬರಹ ನನಗೆ ಸಂಪೂರ್ಣ ಮಾಹಿತಿ ದೊರಕಿಸಿಕೊಟ್ಟಿತು.
ಕಣಜಗಳ ಬದುಕಿನ ಮಾಹಿತಿಯನ್ನು ಸಂಗ್ರಹವಾಗಿ ಕೊಟ್ಟಿರುವಿರಿ. ಎಂತೆಂಥಾ ಜೀವನಕ್ರಮವನ್ನು ಹೊಂದಿರುವ ಜೀವಿಗಳು ಈ ಪ್ರಪಂಚದಲ್ಲಿ ಇವೆಯಲ್ಲಾ ಎಂದು ಆಶ್ಚರ್ಯವಾಯಿತು. ಕನ್ನಡಕ್ಕೆ ಕೆಲವು ಹೊಸ ಪರಿಭಾಷಾ ಪದಗಳನ್ನು (ಉದಾಹರಣೆಗೆ ‘ಬಲಿಪಶು’) ಹಾಗು ಉತ್ತಮ ಚಿತ್ರಗಳನ್ನು ಒಳಗೊಂಡ ಲೇಖನಕ್ಕಾಗಿ ಅಭಿನಂದನೆಗಳು; ಧನ್ಯವಾದಗಳು.
ReplyDeleteಕಣಜದ ಗೂಡಿನ ಬಗ್ಗೆ ಒಳ್ಳೆ ಮಾಹಿತಿ
ReplyDeleteಒಳ್ಳೆಯ ಮಾಹಿತಿ. ತುಂಬಾ ಧನ್ಯವಾದ. ಇನ್ನೂ ಹೆಚ್ಚು frequent ಆಗಿ ಬರೆಯಿರಿ
ReplyDelete