ಮನೆಯ ಹಿರಿಯರು , ಕಿರಿಯರು ಸಾಯಂಕಾಲದ ವೇಳೆಯಲ್ಲಿ ಟಿ ವಿ ಧಾರವಾಹಿಗಳಲ್ಲಿ ಕಳೆದು ಹೋಗಿರದಿದ್ದ ಕಾಲದ ಕತೆಯಿದು. ನಮ್ಮ ಮನೆಯಲ್ಲಿ ರಾತ್ರಿ ಏಳೂವರೆ- ಎಂಟು ಗಂಟೆಗೆಲ್ಲ ಊಟ ಮುಗಿಸಿ , ನಿದ್ರೆ ಬರುವವರೆಗೂ ಚೆಸ್ , ಕೇರಂ , ಇಸ್ಪೀಟ್ , ಪಗಡೆ , ಒಗಟುಗಳನ್ನು ಬಿಡಿಸುವುದು ಹೀಗೆ ಯಾವುದಾದರೊಂದು ಆಟ ಆಡುವುದು ರೂಢಿಯಾಗಿತ್ತು.
ಅಪ್ಪ , ಚಿಕ್ಕಪ್ಪಂದಿರು ಮತ್ತು ಇದಕ್ಕೆಂದೇ ಪಕ್ಕದ ಮನೆಯಿಂದ ಬರುತ್ತಿದ್ದ ರಮೇಶಣ್ಣ ಇವರು ಆಟದ ಗುಂಪಿನ ಖಾಯಂ ಸದಸ್ಯರು . ನಾನು,ತಂಗಿ, ಅಮ್ಮ , ಚಿಕ್ಕಮ್ಮಂದಿರು , ಅಜ್ಜಿ ಖಾಯಂ ಪ್ರೇಕ್ಷಕರು ಮತ್ತು ಕೆಲವೊಮ್ಮೆ ಎಕ್ಟ್ರಾ ಪ್ಲೇಯರ್ಸ್ ಕೂಡ ಆಗುತ್ತಿದ್ದೆವು.
ಅಪ್ಪ , ಚಿಕ್ಕಪ್ಪಂದಿರು ಮತ್ತು ಇದಕ್ಕೆಂದೇ ಪಕ್ಕದ ಮನೆಯಿಂದ ಬರುತ್ತಿದ್ದ ರಮೇಶಣ್ಣ ಇವರು ಆಟದ ಗುಂಪಿನ ಖಾಯಂ ಸದಸ್ಯರು . ನಾನು,ತಂಗಿ, ಅಮ್ಮ , ಚಿಕ್ಕಮ್ಮಂದಿರು , ಅಜ್ಜಿ ಖಾಯಂ ಪ್ರೇಕ್ಷಕರು ಮತ್ತು ಕೆಲವೊಮ್ಮೆ ಎಕ್ಟ್ರಾ ಪ್ಲೇಯರ್ಸ್ ಕೂಡ ಆಗುತ್ತಿದ್ದೆವು.
ಎಲ್ಲ ಆಟಗಳಲ್ಲಿ ಅತ್ಯಂತ ಕಳೆಕಟ್ಟುತ್ತಿದ್ದುದು ಪಗಡೆ ಆಟ. ನೆಲದ ಮೇಲೆ ಚಾಕ್ ಪೀಸ್ ನಲ್ಲಿ ಒಂಬತ್ತು ಚೌಕದ ಮನೆಗಳನ್ನು ಹಾಕಿ , ನಾಲ್ಕು ದಿಕ್ಕಿಗೆ ನಾಲ್ಕು ಜನ ಕುಳಿತು , ಒಂದೊಂದು ಬಣ್ಣದ ನಾಲ್ಕು ಕಾಯಿಗಳನ್ನಿಟ್ಟುಕೊಂಡು ಆಡುವ ಆಟದಲ್ಲಿ ನನಗೆ ತುಂಬ ಖುಷಿ ಕೊಡುತ್ತಿದ್ದುದು ಎಂಟು ಕವೆಡಗಳನ್ನು ಬೊಗಸೆಯಲ್ಲಿ ಕುಲುಕಿ ನೆಲಕ್ಕೆ ಹಾಕಿದಾಗ ಬರುವ ಶಬ್ದವಿದೆಯಲ್ಲ ಅದು.
ಹೊಳಪಾದ ಗಾಜಿನಂತಹ ಮೇಲ್ಮೈ ಇರುವ ಕುಲುಕಿ ನೆಲಕ್ಕೆ ಬೀಳಿಸಿದರೂ ಒಡೆಯದ ಈ ಕವಡೆಗಳ ಬಗ್ಗೆ ವಿಪರೀತ ಮೋಹವುಂಟಾಗುತ್ತಿತ್ತು . ಸಮುದ್ರದಲ್ಲಿ ವಾಸಿಸುವ ಒಂದು ಬಗೆ ಜೀವಿಯದು , ಆ ಗಟ್ಟಿ ಚಿಪ್ಪಿನೊಳಗೆ ಮೃದುವಾದ ಪ್ರಾಣಿ ಇರುತ್ತದೆ ಎಂದು ತಿಳಿದಾಗಲಂತೂ ಮನೆಯಲ್ಲಿದ್ದ ಅಷ್ಟೂ ಕವಡೆಗಳ ಒಳಗೆ ಹುಳಕ್ಕಾಗಿ ಹುಡುಕಿದ್ದೆ. ನಂತರ ಯಾವಾಗಲೋ ಕರಾವಳೀ ತೀರಕ್ಕೆ ಪ್ರವಾಸ ಹೋದಾಗ ಸಿಕ್ಕ ಸಿಕ್ಕ ಚಿಪ್ಪುಗಳನ್ನೆಲ್ಲಾ ಆಯ್ದು , ಕವಡೆಗಳಿಗಾಗಿ ಗಂಟೆಗಟ್ಟಲೆ ಹುಡುಕಿದರೂ ಸಿಗದೆ ನಿರಾಶಳಾಗಿದ್ದೆ.
ಈ ಕವಡೆಗಳನ್ನಿಟ್ಟುಕೊಂಡು ನಾವು ಆಡುತ್ತಿದ್ದ ಇನ್ನೊಂದು ಆಟ " ಗಿಜ್ಜಿ" ತುಂಬ ಮಜವಾಗಿತ್ತು ಇಬ್ಬರು ಆಡುವ ಆಟವದು. ನಾಲ್ಕು ಕವಡೆಗಳನ್ನು ಕೈಯಲ್ಲಿ ಕುಲುಕಿ ನೆಲಕ್ಕೆ ಹಾಕುವುದು ಕೆಳಮುಖವಾಗಿ ಬಿದ್ದ ಕವಡೆಗಳನ್ನು ಕೇರಂ ಪಾನ್ ಹೊಡೆದಂತೆ ಒಂದಕ್ಕೆ ಒಂದು ತಾಗಿಸುವುದು , ಆದರದು ಮೂರನೆಯದಕ್ಕೆ ತಾಗುವಂತಿಲ್ಲ.ಒಂದು ಹೊಡೆದರೆ ಹತ್ತು ಪಾಯಿಂಟ್ , ಒಟ್ಟು ನೂರು ಪಾಯಿಂಟಿಗೆ ಒಂದು ಹುಂಡಿ. ಎಲ್ಲವೂ ಮೇಲ್ಮುಖವಾಗಿ ಬಿದ್ದರೆ ಅದು "ಗಿಜ್ಜಿ" ಅದನ್ನು ಇಬ್ಬರೂ ಹಿಡಿಯಬಹುದು. ಯಾರಿಗೆ ಎಷ್ಟು ಕವಡೆ ಸಿಗುತ್ತದೋ ಅಷ್ಟು ಹುಂಡಿಯಾದಂತೆ. ಹೀಗೆ ಹಿಡಿಯುವಾಗ ಕೈಎಲ್ಲ ಗಾಯವಾದರೂ ಅದು ಲೆಕ್ಕಕ್ಕೇ ಬರದಂತೆ ಆಡಿದ್ದಿದೆ.
ಇಂತಹ ಕವಡೆಯ ಒಳಗಿನ ಹುಳುಗಳ ಬಗ್ಗೆ ಕೆಲ ಮಾಹಿತಿ
ಇಂತಹ ಕವಡೆಯ ಒಳಗಿನ ಹುಳುಗಳ ಬಗ್ಗೆ ಕೆಲ ಮಾಹಿತಿ
ಕವಡೆ ಆಟವನ್ನು ನಾನೂ ಸಹ ಆನಂದಿಸಿದ್ದೇನೆ. ಕವಡೆಯಂತೆಯೇ ನಿಮ್ಮ ಲೇಖನವೂ ಸಹ ಹೊಳಪಾಗಿದೆ, ಉಪಯುಕ್ತವಾಗಿದೆ.
ReplyDeleteಮಜಾ!!! ನಾವು ಬೇರೆ ರೀತಿ ಪಗಡೆ ಆಡುತ್ತಿದ್ದವು. ಅದರಲ್ಲಿ ದಾಳ ಇರುತ್ತಿತ್ತು. + ಆಕಾರದಲ್ಲಿ ಇರುತ್ತಿತ್ತು ಪಗಡೆ ಹಾಸು.
ReplyDeleteಕವಡೆ ಮತ್ತದರು ಕುರಿತಾದ ಮಾಹಿತಿಗೆ ವಂದನೆಗಳು.
ReplyDeleteಆಟಕ್ಕೂ ಜ್ಯೋತಿಷ್ಯಕ್ಕೂ ಕವಡೆ ಹೇಳಿ ಮಾಡಿಸಿದ ಪರಿಕರ.
ನುಡಿಗಟ್ಟು: ಕವಡೆ ಕಾಸಿನ ಕಿಮ್ಮತ್ತು!