ನಿಧಾನವಾಗಿ ಚಲಿಸುವುದರಲ್ಲಿ ಬಸವನಹುಳುವಿಗೇ ಸ್ಫರ್ಧೆಯೊಡ್ಡಬಲ್ಲ ಜೀವಿ ಇದು. ತನ್ನ ಉದ್ದನೆಯ ಕೈಗಳಿಂದ ಮರದ ಕೊಂಬೆಯನ್ನು ಹಿಡಿದುಕೊಂಡು ಸ್ಲೋ ಮೋಷನ್ನಲ್ಲಿ ಇದು ಮರವೇರುವುದನ್ನು ನೋಡುವಾಗ ನಾವೇ ಅದನ್ನ ಎತ್ತಿ ಮರದ ಮೇಲೆ ಬಿಟ್ಟುಬಿಡೋಣ ಎನ್ನಿಸಿಬಿಡುತ್ತದೆ. ಸದಾ ಮರದಲ್ಲಿಯೇ ವಾಸ. ದಿನದಲ್ಲಿ ಹೆಚ್ಚಿನ ಸಮಯ ಮರದ ಕೊಂಬೆಯಲ್ಲಿ ಬೇತಾಳನಂತೆ ಉಲ್ಟಾ ಜೋತಾಡುತ್ತಾ ನಿದ್ರಿಸುತ್ತಿರುತ್ತದೆ.
ಚಿತ್ರ ಕೃಪೆ - ವಿಕಿಪಿಡಿಯಾ |
ಸ್ಲಾತ್ ಎಂಬ ಈ ವಿಶಿಷ್ಟ ಜೀವಿ ದಕ್ಷಿಣ ಮತ್ತು ಮಧ್ಯ ಅಮೇರಿಕಾದ ಮಳೆಕಾಡುಗಳಲ್ಲಿ ವಾಸಿಸುತ್ತದೆ. ಮಂಗಗಳಂತೆಯೆ ಮರದ ಮೇಲೆಯೆ ವಾಸಿಸಿದರೂ ಇವು ಅವುಗಳಿಗಿಂತ ತುಂಬ ಭಿನ್ನವಾಗಿವೆ. ಇರುವೆ ಭಕ್ಷಕಗಳ ಹತ್ತಿರದ ಸಂಬಂಧಿಗಳಿವು.
ಚಿಕ್ಕ ಕಣ್ಣುಗಳು, ಸದಾ ಮುಗುಳ್ನಗುತ್ತಿರುವಂತೆ ತೋರುವ ಆಕಾರದ ಬಾಯಿಯಿಂದಾಗಿ ಇದು ಮುದ್ದಾಗಿ ಕಾಣುತ್ತದೆ. ಮೈತುಂಬಾ ಉದ್ದನೆಯ ಕೂದಲುಗಳಿವೆ. ಮುಂದಿನ ಕಾಲುಗಳು ಹಿಂದಿನ ಕಾಲುಗಳ ಎರಡರಷ್ಟು ಉದ್ದವಿರುತ್ತವೆ. ಮುಂದಿನ ಕಾಲುಗಳಲ್ಲಿರುವ ಬೆರಳುಗಳ ಆಧಾರದ ಮೇಲೆ ಇವುಗಳನ್ನು ಎರಡು ಬೆರಳುಳ್ಳ ಸ್ಲಾತ್ ಮತ್ತು ಮೂರು ಬೆರಳುಗಳ ಸ್ಲಾತ್ ಎಂಬುದಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ. ಬೆರಳುಗಳಲ್ಲಿ ಅತ್ಯಂತ ಬಲಿಷ್ಟವಾದ ಉದ್ದನೆಯ ಉಗುರುಗಳಿವೆ. ಈ ಉಗುರುಗಳ ಸಹಾಯದಿಂದಲೇ ಇದು ಮರದ ರೆಂಬೆಗಳನ್ನು ಭದ್ರವಾಗಿ ಹಿಡಿದುಕೊಳ್ಳುತ್ತದೆ.
ಎಲೆಗಳು ಇದರ ಮುಖ್ಯ ಆಹಾರ. ಕೆಲವೊಮ್ಮೆ ಕೀಟಗಳನ್ನು ಕೂಡ ತಿನ್ನುತ್ತದೆ. ಇದು ತಿನ್ನುವ ಎಲೆಗಳಿಂದ ಇದಕ್ಕೆ ಅತ್ಯಂತ ಕಡಿಮೆ ಪ್ರಮಾಣದ ಶಕ್ತಿ ದೊರೆಯುತ್ತದೆಯಾದ್ದರಿಂದ , ಕಡಿಮೆ ಶಕ್ತಿಯಲ್ಲೇ ಯಶಸ್ವಿಯಾಗಿ ಬದುಕಲು ಬೇಕಾದ ಉಪಾಯಗಳನ್ನು ಕಂಡುಕೊಂಡಿವೆ. ಜೀರ್ಣಕ್ರಿಯೆ ಅತ್ಯಂತ ನಿಧಾನ. ಸಸ್ತನಿಯಾದರೂ ದೇಹದ ಉಷ್ಣಾಂಶ ತುಂಬಾ ಕಡಿಮೆಯಿರುತ್ತದೆ. ಅತ್ಯಂತ ಕಡಿಮೆ ಚಲನೆಯಿಂದಾಗಿ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ. ವಾರಕ್ಕೊಮ್ಮೆ ವಿಸರ್ಜನೆಗಾಗಿ ಮರವನ್ನು ಇಳಿದು ಕೆಳಬರುವುದು ಬಿಟ್ಟರೆ ಉಳಿದೆಲ್ಲಾ ಸಮಯ ಮರದ ಮೇಲೆಯೆ ಕಳೆಯುತ್ತವೆ.
ಇದರ ದೇಹದ ಉದ್ದನೆಯ ಕೂದಲುಗಳು ಒಂದು ಜಾತಿಯ ಪತಂಗಗಳಿಗೆ ಮತ್ತು ಒಂದು ಜಾತಿಯ ಆಲ್ಗೆಗಳಿಗೆ ಆಶ್ರಯ ನೀಡಿವೆ. ಈ ಆಲ್ಗೆಗಳ ಹಸಿರು ಬಣ್ಣದಿಂದ ಸ್ಲಾತ್ ಮೈ ಕೂಡ ಮಾಸಲು ಹಸಿರು ಬಣ್ಣ ಹೊಂದಿ, ಮರಗಳ ಹಸಿರು ಬಣ್ಣದೊಂದಿಗೆ ಮಿಳಿತವಾಗುವುದರಿಂದಾಗಿ ಅದರ ವೈರಿಗಳಿಗೆ ಸುಲಭವಾಗಿ ಕಾಣುವುದಿಲ್ಲ. ಸ್ಲಾತ್ ಮರದಿಂದ ಇಳಿದು ವಿಸರ್ಜಿಸಿದಾಗ ಇದರ ದೇಹದಲ್ಲಿನ ಪತಂಗಗಳು ಅದರಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆ ಮರಿಗಳು ಬೆಳೆದು ಪತಂಗಗಳಾಗಿ ಮತ್ತೆ ಅದೇ ಸ್ಲಾತ್ ನ ದೇಹವನ್ನು ಆಶ್ರಯಿಸುತ್ತವೆ.
ಹೆಚ್ಚಾಗಿ ಒಂಟೊಂಟಿಯಾಗಿಯೇ ವಾಸಿಸುವ ಸ್ಲಾತ್ ಸಂತಾನೋತ್ಪತ್ತಿಗಾಗಿ ಸಂಗಾತಿಯ ಜೊತೆಗೂಡುತ್ತದೆ. ವರ್ಷಕ್ಕೊಮ್ಮೆ ಒಂದೇ ಮರಿ ಹಾಕುವ ಹೆಣ್ಣು ಸ್ಲಾತ್ ಮರಿಗಳನ್ನು ಮಂಗಗಳಂತೆ ಅವುಚಿಕೊಂಡೇ ಸಾಕುತ್ತದೆ.
ಚಿರತೆಗಳು, ಹದ್ದುಗಳು ಇದರ ಭಕ್ಷಕಗಳು. ಬೇರೆ ಸಮಯದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಸ್ಲಾತ್ ವೈರಿಯೆದುರಾದಾಗ ವೇಗವಾಗಿ ಚಲಿಸಬಲ್ಲದು.
ತನ್ನವಿಶಿಷ್ಟ ಜೀವನಕ್ರಮ, ಪತಂಗ ಮತ್ತು ಆಲ್ಗೆಗಳೊಂದಿಗಿನ ಸಂಕೀರ್ಣ ಸಹಜೀವನ ಮೊದಲಾದವುಗಳಿಂದ ಈ ಸ್ಲಾತ್ ತನ್ನ ಸ್ವಾಭಾವಿಕ ವಾಸಾಸ್ಥಾನವನ್ನು ಬಿಟ್ಟು ಬೇರೆಡೆ ಜೀವಿಸುವುದು ಕಷ್ಟ. ಆದ್ದರಿಂದಲೇ ಇದನ್ನು ಜೂಗಳಲ್ಲಿ ಸಾಕಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ನಮ್ಮ ಭಾರತದ ಜೂಗಳಲ್ಲಿ ಇವುಗಳನ್ನು ಕಾಣಲಾರೆವು.

ಐಸ್ ಏಜ್ ಚಿತ್ರದ ಸಿಡ್ ಇದು :) ಇದರ ಹಸಿರು ಬಣ್ಣಕ್ಕೆ ಕಾರಣ ತಿಳಿದು ಆಶ್ಚರ್ಯ ಆಯ್ತು.
ReplyDeleteಪಾಪ ಎನಿಸಿತು ಈ ಜೀವಿಯ ಬದುಕನ್ನು ಓದಿ!
ReplyDeleteಪ್ರತಿ ವಿವರವು ಅದ್ಭುತವಾಗಿದೆ. ಭೂರಮೆಯಲ್ಲಿ ಕಾಣುವ ಪ್ರತಿ ಚಿತ್ರಗಳು ವಿಶಿಷ್ಟ
ReplyDeleteನೀವು ಹೆಕ್ಕಿ ತೆಗೆದು ಅದರ ಬಗ್ಗೆ ವಿವರ ಬಡಿಸುವ ರೀತಿ ಸುಂದರವಾಗಿದೆ
ಸ್ಲಾತ್ ಒಂದು ವಿಭಿನ್ನ ಬಗೆಯ ಜೀವಿ ಎಂದು ಸಾರಿ ಸಾರಿ ಹೇಳುವ ಈ ಲೇಖನ.. ಸ್ಲಾತ್ ನಷ್ಟೇ ಅನುಪಮಾ
ಸುಂದರ ಲೇಖನ ಮೇಡಂ