14 Jan 2010

ಕಾಲ


ನಿನ್ನೆ .....
ಮಹಾಕಾವ್ಯಗಳ ಸಾಲುಗಳನ್ನೇ ಉದಾಹರಿಸುತ್ತ
ಅನೇಕರ ಗೊಂದಲಗಳನ್ನು ಪರಿಹರಿಸುತ್ತ
ಮೊಮ್ಮಕ್ಕಳ ನಡುವೆ ನಲಿಯುತ್ತ
ಜೀವಂತಿಕೆಯೇ ಮೂರ್ತಿವೆತ್ತಂತ್ತಿದ್ದವರು
ಇಂದು ....
ಸದ್ದಿಲ್ಲದೇ ಮಾತು ಬಾರದವರಂತೆ ಮಲಗಿದ್ದಾರೆ
ಹೃದಯಕ್ಕೆ ಸುಸ್ತಾಗಿದೆ ವೈದ್ಯರೆನೋ ಹೇಳುತ್ತಾರೆ
ನಿನಗೊಂದು ನೆಪ ಬೇಕಿದೆ ಅಷ್ಟೇ
ನಿನ್ನ ಶಕ್ತಿಗೆ ಸಮನಾರು?
ಎಂತಹ ವ್ಯಕ್ತಿತ್ವವನ್ನೂ ಮಸುಕಾಗಿಸಬಲ್ಲೆ
ಸೂರ್ಯನನ್ನೇ ಮರೆಮಾಚುವ ಮೋಡದಂತೆ
ಇರಬಹುದು ನಮ್ಮಲ್ಲಿ ವಿಜ್ಞಾನ , ತಂತ್ರಜ್ಞಾನ , ದುಡ್ಡು ಕಾಸು
ತರಲಾದೀತೆ ಸಂದ ಕಾಲವನ್ನು ವಾಪಸು?

13 comments:

  1. ಸುಮ, ನಿನ್ನೆ ಮತ್ತು ಇಂದಿನ ನಡುವಣ ಬಂಧದ ಮಂಥನ ಕವನವಾಗಿ ಹರಿದಿದೆ....ಅಭಿನಂದನೆಗಳು.

    ReplyDelete
  2. ನಿಜ ...ಸಂದ ಕಾಲವನ್ನು ಯಾರೂ ವಾಪಸು ತರಲಾಗುವುದಿಲ್ಲ. "ನಿನಗೊಂದು ನೆಪ ಬೇಕಿದೆ " ಸಾಲು ಇಷ್ಟವಾಯ್ತು. ಕವನ ಚೆನ್ನಾಗಿದೆ. ಧನ್ಯವಾದಗಳು

    ReplyDelete
  3. ಕಾಲನ ಮು೦ದೆ ನಾವೆಲ್ಲಾ ಯಾರು?
    ಚೆ೦ದದ ಕವನ ಸುಮಾರವರೇ...

    ReplyDelete
  4. ಸುಮಾ.. ಎಂತಹ ಆನೂಹ್ಯವಾದ ಮಾತು ಇದು! ಹೋದ ಕಾಲವನ್ನು ಮತ್ತೆ ಮರಳಿಸುವಂತಿದ್ದರೆ ನಮ್ಮ ಎಷ್ಟೋ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ಸಿಗುತ್ತಿತ್ತು ಅಲ್ಲ್ವ???ಹಾಗೆಯೇ.. 'ಕಾಳಾಯ ತಸ್ಮೈ ನಮಹ' ಅನ್ನುವ ಹಾಗೆ ಕಾಲಕ್ಕೆ ತಲೆ ಬಾಗಲೇ ಬೇಕು!

    ReplyDelete
  5. ಸುಮಾ ಅವರೆ, ಕಾಲ ದ ಬಗೆಗಿನ ಕವನ ಸೊಗಸಾಗಿದೆ. ಕಾಲಕ್ಕೆ ಸಮನಾರು? ಕಾಲವನ್ನು ಕಾಲನೇ ತಡೆಯಲಾರನು.

    ReplyDelete
  6. ನಿಜ. ಕಾಲೋ ಜಗದ್ಭಕ್ಷಕಃ!

    ReplyDelete
  7. howdu, kAla ennuvudu nennpin Aagara.....

    ReplyDelete
  8. ಸುಮ ಮೇಡಮ್,

    ಕಾಲದ ಬಗೆಗಿನ ಕವನ ತುಂಬಾ ಚೆನ್ನಾಗಿದೆ. ಹೋದ ಕಾಲ ಮತ್ತೆ ಬಂದಿದ್ದರೇ ಎಷ್ಟು ಚೆನ್ನಾ ಅಲ್ವಾ..

    ReplyDelete
  9. ಸುಮಾ ಮೇಡಂ
    ಕಾಲ ಎಷ್ಟು ವಿಚಿತ್ರ ಅಲ್ಲವ
    ಮಗು ಇಷ್ಟೇ ಹೊತ್ತಿಗೆ ಹುಟ್ಟತ್ತೆ ಅಂತ ಹೇಳಬಹುದೇನೋ
    ಆದರೆ ಇಷ್ಟೇ ಹೊತ್ತಿಗೆ ನೀನು ಸಾಯ್ತಿಯ ಅಂತ ಹೇಳೋಕೆ ಯಾರಿಂದನು ಸಾದ್ಯ ಇಲ್ಲ ಅಲ್ಲವ
    ನಿಮ್ಮ ಕವನ ಬಹಳಷ್ಟು ವಿಚಾರಕ್ಕೆ ಎದೆ ಮಾಡುತ್ತೆ
    ತುಂಬಾ ಚಿಂತನಪೂರ್ಣ ಕವನ

    ReplyDelete
  10. ನಿಜ...ನಮ್ಮ ಜೀವಿತ ಕಾಲ ಎಷ್ಟು ಕ್ಸ್ಲುಲ್ಲಕ !

    ReplyDelete
  11. ಸುಮಾ ಅವರೇ ಒಳ್ಳೆಯ ಕವನ...
    ನಿಮ್ಮವ,
    ರಾಘು.

    ReplyDelete
  12. ಏನು ಮಾಡಿದರೂ ಹಿಂದೆ ಹೋದ ಕಾಲವನ್ನು ಮತ್ತೆ ತರಲಾಗುವುದಿಲ್ಲ

    ReplyDelete