ಚಿಗಳಿ ಕಚ್ಚುವುದರ ಅನುಭವವಿಲ್ಲದ ಇವಳು ... "ಏ ಹೋಗೊ ಸಾಕು , ಆ ಇರುವೆಗೆ ಹೆದರ‍್ತ್ಯಲೋ .. ಸುಮ್ನೆ ಹತ್ತಿ ಪುನ್ನೇರಲ ಹಣ್ಣು ಕೊಯ್ಯಿ.." ಎಂದು ದಬಾಯಿಸುತ್ತಿದ್ದಳು.
ಅವನೇನೂ ಸುಮ್ಮನಿರುವ ಅಸಾಮಿಯೇನಲ್ಲ "ಹೆದರದು ಯಾಕೆ ತೋರಿಸ್ತಿ ತಡಿ " ಎಂದು ಇರುವೆಗಳಿದ್ದ ಎಲೆಯನ್ನು ಕಿತ್ತು ಅವಳ ಮೈಮೇಲೆಸೆದ . ಕೊಡವಿಕೊಂಡಳಾದರೂ ಉಳಿದ ಒಂದೆರಡು ಇರುವೆಗಳು ಕಚ್ಚಿದಾಗ ಮಗಳು ಅಲ್ಲೇ ಇದ್ದ ನನ್ನ ಬಳಿ ಓಡಿ ಬಂದಳು . " ಇದೆಂತಾ ಉರಿ ಅಮ್ಮಾ ಅದು ಹ್ಯಾಗೆ ಇಷ್ಟು ಉರಿಯಾಗುವ ಹಾಗೆ ಕಚ್ಚುತ್ತೆ? ....’ ಅವಳ ತನಿಖೆ ಪ್ರಾರಂಭವಾಯಿತು.
ಬೇರೆ ಇರುವೆಗಳಂತೆ ಈ ಕೆಂಜಿರುವೆ ಅಥವ ಚಿಗಳಿಗೆ ಸ್ಟಿಂಗ್ ಇರುವುದಿಲ್ಲ . ಅದು ಕಚ್ಚಿದ ಜಾಗದಲ್ಲಿ "ಫಾರ್ಮಿಕ್ ಆಸಿಡ್ " ಸ್ರವಿಸುವುದರಿಂದ ಹೆಚ್ಚಿನ ಉರಿಯಾಗುತ್ತದೆ.
ಅವಳಿಗೆ ಅಲ್ಲೇ ಬಳಿಯಲ್ಲಿದ್ದ ಆ ಇರುವೆಯ ಗೂಡನ್ನು ತೋರಿಸಿದೆ . ಅದನ್ನು ನೋಡಿ ತನ್ನ ದೊಡ್ಡ ಕಣ್ಣುಗಳನ್ನು ಇನ್ನಷ್ಟು ದೊಡ್ಡದು ಮಾಡಿಕೊಂಡು "ಈ ಚಿಕ್ಕ ಜೀವಿ ಹ್ಯಾಗೆ ಇಷ್ಟು ದೊಡ್ಡ ಗೂಡು ಕಟ್ಟುತ್ತಮ್ಮ? ನಾವಿಷ್ಟು ದೊಡ್ಡ ಇದ್ದರು ನಮಗೆ ಆಟ ಆಡಲು ಮನೆ ಕಟ್ಟೋಣವೆಂದರೆ ಬರಲಿಲ್ಲವಲ್ಲ?" ಎಂದಳು.
ಟೈಲರ್ ಅಥವಾ ವೀವರ್ ಇರುವೆ ಎಂಬ ಅನ್ವರ್ಥನಾಮವಿರುವ ಈ ಇರುವೆಗಳು ಹನ್ನೆರಡುಸಾವಿರಕ್ಕೂ ಹೆಚ್ಚಿರುವ ಇರುವೆಗಳ ಜಾತಿಯಲ್ಲೆ ಬೇರಾವ ಇರುವೆಗಳೂ ರಚಿಸದ ಅತೀ ವಿಶಿಷ್ಟವಾದ ಗೂಡನ್ನು ನಿರ್ಮಿಸುತ್ತವೆ.
ಎಲ್ಲ ಇರುವೆಗಳಂತೆಯೆ ಸಂಘಜೀವಿಗಳಾದ ಈ ಚಿಗಳಿಗಳ ಒಂದು ಗುಂಪಿನಲ್ಲಿ - ಒಂದೆರಡು ರಾಣಿ ಯರು , ಕೆಲವು ಗಂಡು ಮತ್ತು ಲಕ್ಷಗಟ್ಟಲೆ ಹಿರಿ ,ಕಿರಿಯ ಕೆಲಸಗಾರ ಇರುವೆಗಳಿರುತ್ತವೆ.
ಮೊಟ್ಟೇಯಿಡುವುದಷ್ಟೇ ರಾಣಿಯ ಕೆಲಸ.
ಗೂಡು ಕಟ್ಟುವುದು , ಆಹಾರ ತರುವುದು , ವೈರಿಗಳಿಂದ ಗೂಡನ್ನು ರಕ್ಷಿಸುವುದು ಮೊದಲಾದ ಕೆಲಸಗಳು ಹಿರಿಯ ಕೆಲಸಗಾರರದು.
ಮೊಟ್ಟೆಗಳು ,ಮರಿಗಳನ್ನು ಪೋಷಿಸುವುದು ರಾಣಿಗೆ ಆಹಾರ ನೀಡುವುದು , ಗೂಡನ್ನು ಸ್ವಚ್ಛಗೊಳಿಸುವುದು ಮೊದಲಾದ ಕೆಲಸಗಳು ಕಿರಿಯ ಕೆಲಸಗಾರ ಇರುವೆಗಳದು.
ಹೆಚ್ಚಾಗಿ ಮರ ಗಿಡಗಳ ಮೇಲೆ ವಾಸಿಸುವ ಇವುಗಳ ಆಹಾರ ಸಸ್ಯಗಳು ಮತ್ತು ಕೆಲ ಕೀಟಗಳು ಸ್ರವಿಸುವ ಸಿಹಿದ್ರವ , ಚಿಕ್ಕ ಪುಟ್ಟ ಕೀಟಗಳು ಇತ್ಯಾದಿ.
ಸಾವಿರಾರು ಇರುವೆಗಳು ಕೂಡಿ ಜೀವಂತ ಎಲೆಗಳಿಂದ ಗೂಡು ಕಟ್ಟುವ ಪರಿ ನಿಜಕ್ಕೂ ಅನನ್ಯ. ದೃಡವಾದ ಎಲೆಗಳನ್ನು ಆಯ್ದುಕೊಂಡು ಅವುಗಳನ್ನು ಸೇರಿಸಿ ಗೂಡು ಕಟ್ಟುತ್ತವೆ.
ಮೊದಲಿಗೆ ಎಲೆಯ ಅಂಚಿನುದ್ದಕ್ಕೂ ಸಾಲಾಗಿ ಸೇರುವ ಇರುವೆಗಳು ತಮ್ಮ ಶಕ್ತಿಯನ್ನು ಪ್ರಯೋಗಿಸಿ ಆ ಎಲೆಯನ್ನು ಬೇಕಾದ ಹಾಗೆ ಬಾಗಿಸುತ್ತವೆ. ಒಂದು ಇರುವೆ ಮರಿ(ಲಾರ್ವ)ಯನ್ನು ಹಿಡಿದು ಮೃದುವಾಗಿ ತಟ್ಟುತ್ತದೆ ಆಗ ಆ ಮರಿ ಸ್ರವಿಸುವ ಸಿಲ್ಕ್ ನಿಂದ ಎರಡು ಎಲೆಗಳ ಅಂಚನ್ನು ಜೋಡಿಸುತ್ತವೆ. ಹೀಗೆ ಅನೇಕ ಎಲೆಗಳನ್ನು ಬಳಸಿ ದೊಡ್ದ ಗೂಡನ್ನು ಸಹ ನಿರ್ಮಿಸಬಲ್ಲವು.
ಲಾರ್ವ್ ಸ್ರವಿಸುವ ಸಿಲ್ಕ್ ನಿಂದ ಎಲೆಗಳನ್ನು ಜೋಡಿಸಿರುವುದು
ಈ ರೀತಿಯ ಕ್ಲಿಷ್ಟ ಕಾರ್ಯವನ್ನು ಕರಾರುವಕ್ಕಾಗಿ ಸಾಂಘಿಕವಾಗಿ ನಿರ್ವಹಿಸಲು ಸಾಧ್ಯವಾಗುವುದು ಕೆಮಿಕಲ್ ಮೆಸೆಂಜರ್ ಗಳಾದ ಹಾರ್ಮೋನ್ ಗಳಿಂದ. ಇವುಗಳ ಈ ಗುಣವೀಗ ರೊಬೊಟಿಕ್ ವಿಜ್ಞಾನಿಗಳ ಗಮನ ಸೆಳೆದಿದೆ , ಇದೇ ತತ್ವವನ್ನಾಧರಿಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ರೊಬೊಟ್ ರಚಿಸುವದರಲ್ಲಿದ್ದಾರಂತೆ
"ಅಮ್ಮ ಅದೆಲ್ಲಾ ಸರಿ ಆದರೆ ಈ ಮರಕ್ಕೆ ಅದರಿಂದ ತೊಂದರೆಯಲ್ವಾ" ಮಗಳ ಪ್ರಶ್ನೆ ತಾಯಾರಿತ್ತು.
ಹಾಗನ್ನಿಸುತ್ತದೆ ನಿಜ ಆದರೆ ಅದರಿಂದ ಉಪಯೋಗವೇ ಹೆಚ್ಚು. ಸಸ್ಯಗಳನ್ನು ಬಾಧಿಸುವ ಕೆಲ ಕೀಟಗಳನ್ನು ಇದು ತಿನ್ನುತ್ತದೆ. ಅಲ್ಲದೆ ಇವುಗಳ ಭಯದಿಂದ ಸೊಪ್ಪು ತಿನ್ನುವ ಸಸ್ತನಿಗಳೂ ಇವಿರುವ ಮರಗಿಡಗಳ ಬಳಿ ಸುಳಿಯುವುದಿಲ್ಲ.
ಆದ್ದರಿಂದಲೇ ಪುರಾತನ ಚೀನೀಯರು ತಮ್ಮ ತೋಟದಲ್ಲಿ ಈ ಇರುವಗೆಳ ಬೆಳವಣಿಗೆಗೆ ಸಹಕರಿಸುತ್ತಿದ್ದರಂತೆ. ಈಗಲೂ ಸಹ ಕೆಲವು ಕಡೆ ಇವುಗಳನ್ನು ನೈಸರ್ಗಿಕ ಕೀಟನಾಶಕಗಳಂತೆ ಬಳಸುತ್ತಾರಂತೆ.
ಅನೇಕ ಕಡೆಗಳಲ್ಲಿ ಈ ಇರುವೆ ಮತ್ತು ಇವುಗಳ ಮೊಟ್ಟೆಗಳಾನ್ನು ಆಹಾರವಾಗಿಯೂ ಬಳಸುತ್ತಾರೆ.
ಆದರೆ ಕೆಲವು ಸಸ್ಯಗಳಿಗೆ ಇವು ಮಾರಕವೂ ಹೌದು. "ಎಪಿಡ್ " ಎಂಬ ಸಸ್ಯರಸವನ್ನು ಹೀರುವ ಪರಾವಲಂಬಿ ಕೀಟಗಳೊಡನೆ ಈ ಟೈಲರ್ ಇರುವೆಗಳಿಗೆ ಗೆಳೆತನವಿದೆ. ಎಪಿಡ್ ಗಳು ಸ್ರವಿಸುವ ಸಿಹಿದ್ರವ ಇವುಗಳಿಗೆ ತುಂಬ ಪ್ರಿಯವಾದ ಸತ್ವಯುತ ಆಹಾರ. ಬದಲಿಗೆ ಇವು ಆ ಕೀಟಗಳನ್ನು ಅವುಗಳ ನೈಸರ್ಗಿಕ ವೈರಿಗಳಿಂದ ರಕ್ಷಿಸಿ ಅವುಗಳ ಸಂಖ್ಯೆ ಹೆಚ್ಚಿಸುತ್ತವೆ. ಇದು ಆ ಸಸ್ಯಕ್ಕೆ ಮಾರಕವಾಗುತ್ತದೆ.
ಇರುವೆ , ಜೇನುಹುಳು , ಗೆದ್ದಲು ಮುಂತಾದ ಕೀಟಗಳ ಸಾಂಘಿಕ ಜೀವನಕ್ರಮ ,ಶಿಸ್ತು , ಸಾಮುದಾಯಿಕ ಹಿತಚಿಂತನೆ , ಗೂಡು ನಿರ್ಮಿಸುವ ಕೌಶಲ , ಮರಿಗಳ ಪೋಷಣೆಯಲ್ಲಿ ತೋರುವ ಜವಾಬ್ದಾರಿ - ನಾವೇ ದೊಡ್ಡ ಸಂಘಜೀವಿಗಳು, ನಾಗರೀಕರು ಎಂದು ಜಂಬ ಪಡುವ ಮಾನವರಿಗೆ ಬುದ್ಧಿಹೇಳುವಂತಿದೆ.
Excellent! ತುಂಬಾ ಉಪಯುಕ್ತ ಮಾಹಿತಿಗಳನ್ನು ಸಚಿತ್ರವಾಗಿ ನೀಡಿದ್ದೀರಿ. ಬಹು ಇಷ್ಟವಾಯಿತು. ಧನ್ಯವಾದಗಳು. ನಿಮ್ಮ ಇಂತಹ ಲೇಖನಗಳು ಸಂಗ್ರಹಯೋಗ್ಯವಾಗಿವೆ. ಮುಂದುವರಿಸಿ.
ReplyDelete[ಅಂದಹಾಗೆ ಟೈಟಲ್ ಜಾಗದಲ್ಲಿ ನೀವು ಹಾಕಿದ ನದಿಯ ದೊಡ್ಡ ಚಿತ್ರ ತುಂಬಾ ಇಷ್ಟವಾಯಿತು. ಒಮ್ಮೆಯಾದರೂ ಆ ನದಿಯ ಜಾಗಕ್ಕೆ ಭೇಟಿಕೊಡಬೇಕೆಂದಿನಿಸಿದೆ. ಎಲ್ಲಿದೆ ಎಂದು ಮೈಲ್ ಮಾಡಿ ತಿಳಿಸಬೇಕಾಗಿ ವಿನಂತಿ]
ಉಪಯುಕ್ತ ಮಾಹಿತಿ. ಇರುವೆಗಳ ಬಗ್ಗೆ ವಿವರವಾಗಿ ತಿಳಿಸುತ್ತಾ ಸಾ೦ಘಿಕ ಹಾಗೂ ಶಿಸ್ತಿನ ಜೀವನ ನಡೆಸಲು ಸ್ಫೂರ್ತಿಯನ್ನ್೦ಟು ಮಾಡಿದ್ದಿರಾ ಧನ್ಯವಾದಗಳು.
ReplyDeleteಇರುವೆಗಳ ಬಗ್ಗೆ ಅಲ್ಪ ತಿಳಿದುಕೊಂಡಿದ್ದೆ
ReplyDeleteನಿಮ್ಮ ಬ್ಲಾಗ್ ನಿಂದ ಇನ್ನು ಸ್ವಲ್ಪ ಹೆಚ್ಚು ತಿಳಿದುಕೊಂಡೆ,
ಉತ್ತಮ ಮಾಹಿತಿ
ಧನ್ಯವಾದಗಳು :) :-)
ಮಕ್ಕಳಿಗೆ ಕತೆ ಹೇಳುವ ರೂಪದಲ್ಲಿ ವೈಜ್ಞಾನಿಕ ವಿವರಗಳನ್ನು ಸರಳವಾಗಿ, ಸುಲಭವಾಗಿ
ReplyDeleteತಿಳಿಸಿದ್ದೀರಿ. ತುಂಬ ಇಷ್ಟವಾಯಿತು.
ಮೇಡಮ್,
ReplyDeleteಇರುವೆಗಳ ಬಗ್ಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಚಿತ್ರ ಸಹಿತ ನೀಡಿದ್ದೀರಿ..ಮಗುವಿಗೆ ಕಥೆ ಹೇಳುವ ರೀತಿಯಲ್ಲಿ ಪ್ರಾರಂಭಿಸಿ ಅನೇಕ ವಿವರಗಳನ್ನು ಕೊಟ್ಟಿದ್ದೀರಿ. ನನಗೂ ಆರೆಂಜ್ ಕೌಂಟಿಯವರಿಗೆ ಫೋಟೊಗ್ರಫಿ ಅಸೈನ್‍ಮೆಂಟಿಗೆ ಅಲ್ಲಿ ಮೂರ್ನಾಲ್ಕು ತರಹದ ಇರುವೆಗಳ ಫೋಟೊ ತೆಗೆದಿರುವ ನಿಮ್ಮ ಲೇಖನವನ್ನು ನೋಡಿ ಅವುಗಳ ಬಗ್ಗೆ ಬರೆಯಬೇಕೆನಿಸುತ್ತದೆ...
ಧನ್ಯವಾದಗಳು.
ಮಾಹಿತಿ ತು೦ಬಾ ಚೆನ್ನಾಗಿದೆ, ಖುಷಿ ಆಯ್ತು, ಒಮ್ಮೆ ನನ್ನ ಬ್ಲಾಗ್ ಮನೆಗೂ ಬನ್ನಿ, ಮತ್ತು ನಿರ೦ತರ ಬರುತ್ತಿರಿ.
ReplyDeletehttp://www.nirpars.blogspot.com/
ನೈಸ್.. :-)
ReplyDeleteನಂಗೆ ಊರಲ್ಲಿದ್ದಾಗ ತೋಟಕ್ ಹೋಗಿ ಕಾಫಿ ಹಣ್ಣು ಕೊಯ್ಯಕ್ಕರೆಲ್ಲ ಸಿಕ್ಕಾಪಟ್ಟೆ ಕಾಟ ಕೊಡ್ತಿದ್ದದ್ದು ಅಂದ್ರೆ ಈ ಚಿಗಳಿಯೇಯಾ (ಲೋಫರ್!). :x ಅದ್ಕೇ, ಅಡ್ಕೆ ಹೆಕ್ಯಂಬಾ ಅಂದ್ರೆ ಬೇಕರೆ ಹೋಗ್ತಿದಿದ್ದಿ; ಕಾಫಿ ಹಣ್ ಕೊಯ್ಕಂಬಾ ಅಂದ್ರೆ ಆಗದೇ ಇಲ್ಲೆ ಅಂತ ಗಲಾಟಿ ಮಾಡ್ತಿದಿದ್ದಿ ಮನೇಲಿ. :D
ಸುಮಾ ಮೇಡಂ,
ReplyDeleteಅಯ್ಯೋ ಈ ಇರುವೆಗಳೆಂದರೆ ನಂಗೆ ಭಯ ....... ಚಿಕ್ಕವನಿದ್ದಾಗ ತುಂಬಾ ಸಾರಿ ಕಚ್ಚಿಸಿಕೊಂಡಿದ್ದೇನೆ...... ಹ್ಹಾ ಹ್ಹಾ.... ತುಂಬಾ ಉಪಯುಕ್ತ ಲೇಖನ ಮೇಡಂ.... ಇಷ್ಟೆಲ್ಲಾ ವಿವರ ಎಲ್ಲಿಂದ ಸಂಗ್ರಹಿಸುತ್ತೀರಿ ಮೇಡಂ.....
ಸುಮಾ ಮೇಡಂ,
ReplyDeleteನನ್ನ ಬ್ಲಾಗ್ ನಲ್ಲಿ ಒಂದು ಲೇಖನ ಬರೆದಿದ್ದೇನೆ..... ಓದಿ, ಕಾಮೆಂಟ್ ಬರೆಯಿರಿ....... ನಿಮ್ಮ ಅನಿಸಿಕೆ ನನಗೆ ಉಪಯುಕ್ತ ಇದೆ.....
ಅಜ್ಜಿ ಮನೆಗೆ ಹೋದಾಗ, ಚಕ್ಕೋತ ಉದುರಿಸೋದಕ್ಕೆ ಮರ ಹತ್ತಿ ಚಿಗಳಿಗಳ ಜೊತೆ ಗುದ್ದಾಡ್ತಾ ಇದ್ದದ್ದು ನೆನಪಾಯ್ತು.
ReplyDeleteಚೆನ್ನಾಗಿ ಬರೆದಿದ್ದೀರಾ
ಉತ್ತಮ ಮಾಹಿತಿ ಒದಗಿಸಿಕೊಟ್ಟಿದ್ದೀರಿ...ಧನ್ಯವಾದಗಳು.
ReplyDeleteಇರುವೆ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸುಮಾ ಅವರೆ....
ReplyDeleteVery nicely put, informative article. Thanks for sharing with us.
ReplyDeleteಅಬ್ಬಾ..ಏನು ಮಾಹಿತಿ ಕೊಟ್ಟಿದ್ಯೆ ಮಾರಾಯ್ತಿ!! ಇಷ್ಟೆಲ್ಲಾ ಚಿಗಳಿ ಬಗ್ಗೆ ಸುಮಾರಿಗೆ ಯಾರಿಗೂ ಗೊತ್ತಿಲ್ಲೆ ಬಿಡು!! goodwork..keep doing!!
ReplyDeleteಲೇಖನವನ್ನು ಮೆಚ್ಚಿದ ತೇಜಸ್ವಿನಿ , ಸೀತಾರಾಂ , ದೊಡ್ಡಮನಿ ಮಂಜು, ಸುನಾಥ ಕಾಕ , ಶಿವು ಅವರಿಗೆ ಧನ್ಯವಾದಗಳು.
ReplyDeleteಪರಾಂಜಪೆ ಸರ‍್ ಮತ್ತು ದಿನಕರ್ ಅವರೆ ಧನ್ಯವಾದಗಳು . ನಾನು ನಿಮ್ಮ ಬ್ಲಾಗ್ ಓದಿದ್ದೇನೆ . ಕಮೆಂಟ್ ಮಾಡಿದ್ದೇನೆ ಕೂಡ. "ಸುಮ" ಎಂಬ ಹೆಸರಿನಲ್ಲಿ ಕಮೆಂಟ್ ಇದೆ ನೋಡಿ.
ReplyDeleteಸುಶ್ರುತ ಥ್ಯಾಂಕ್ಸು:) . ಈ ಬಾರಿ ಊರಿಗೆ ಹೋದಾಗ ತೋಟಕ್ಕೆ ಹೋಗಿ ಇರುವೆ ಕಚ್ಚಿಸಿಕೊಂಡು ಬರೊಹಂಗೆ ಆಗ್ಲಿ ಅಂತ ಹಾರೈಸ್ತಿ.
ReplyDeleteಉಮೇಶ್ , ಸುಮಾಬೀನಾ , ಮತ್ತು ಸುಮನಕ್ಕ ಧನ್ಯವಾದಗಳು.
ReplyDeleteಆನಂದ್ ಅವರೆ ಲೇಖನವನ್ನು ಮೆಚ್ಚಿದ್ದಕ್ಕೆ ದನ್ಯವಾದಗಳು.
ReplyDeletevery good information and pictures. thank you..
ReplyDeleteತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿದ್ದಿರಿ.
ReplyDeleteಸುಮಾ ಮೇಡಂ, ಟೈಲರ್ ಇರುವೆಗಳ ಜೀವನಕ್ರಮ ಮತ್ತು ಮಾಹಿತಿಗಾಗಿ ಧನ್ಯವಾದಗಳು. ಸರಳವಾದ ಮತ್ತು ಉಪಯುಕ್ತ ಮಾಹಿತಿ ನೀಡಿದ್ದೀರಿ.
ReplyDeleteಸ್ನೇಹದಿಂದ,
ನಾವು ದಿನನಿತ್ಯ ತೋಟದಲ್ಲಿ ಈ ಚಿಗಳಿಯನ್ನ ನೋಡ್ತು ಆದ್ರೆ ಅದರ ಬಗ್ಗೆ ಅಷ್ಟೆಲ್ಲ ಗಮನ ಕೊಡ್ತ್ವಲ್ಲೆ. ಲೇಖನದ ಮೂಲಕ ಒಳ್ಲೆ ಮಾಹಿತಿ ಕೊಟ್ಟಿದ್ದಿ.
ReplyDeleteನಮ್ಮ ಸಾಗರ ಪ್ರಾಂತ್ಯದಲ್ಲಿ ಇದನ್ನ ಕೊಣಜಿ ಹೇಳೂ ಕರಿತ.
ತುಂಬಾ ಚಂದದ ಬರಹ
ReplyDeleteಫೋಟೋಗಳೂ ಸೂಪರ್
ತೇಜಸ್ವಿನಿಯವರು ಅಂದಂತೆ ಸಂಗ್ರಹಣಾಯೋಗ್ಯ ಲೇಖನ
ಸುಮ, terrotorial behaviour, ಅಥವಾ ಸಾಂಘಿಕ ನಡುವಳಿಕೆ ಪ್ರಾಣಿಗಳಲ್ಲಿ ಬಹು ವಿಶಿಷ್ಠವಾದುದು, ಇದನ್ನು ಆಧರಿಸಿ ರೊಬೋಟ್ ಸುಧಾರಣೆಮಾಡಲಿರುವ ವಿಷಯ ತಿಳಿಸಿದಿರಿ ..scientific curiocity ಗೆ ಇದು ಒಂದು ಉದಾಹರಣೆ ಅಷ್ಟೆ..ಮಿಡತೆಗಳ ನಡೆಯನ್ನು ಆಧರಿಸಿ ರೊಬೋಟ್ ಚಲನ-ವಲನ ಸುಧಾರಣೆಯಾದದ್ದು ಎಲ್ಲರಿಗೂ ತಿಳಿದಿದೆ. ಈ ಇರುವೆಗಳನ್ನು ನಮ್ಮಲ್ಲಿ ಮಾವಿನ ಮರದ ಮೇಲೆ ಬಹಳ ಕಾಣುತ್ತಿದ್ದೆವು..ಹೆದರುತ್ತಿದ್ದೆವು ಸಹಾ..ಆದರೂ ಮಾವಿನ ಹಣ್ಣು..ಮಾಲಿ ಬರುವವೇಳೆಗೆ ಹೇಗೋ ಕದ್ದೂ ಬಿಡುತ್ತಿದ್ದೆವು...ಹಹಹ..ಮಾಹಿತಿ ಜೊತೆ ಚಿತ್ರ ಮತ್ತು ಮಗುವಿನ ಕುತೂಹಲವನ್ನು ಶಮನಗೊಳಿಸಿ ಮಾಹಿತಿಯನ್ನು ಬಿತ್ತರಿಸುವ ರೀತಿ ಮೆಚ್ಚುಗೆಯಾಯಿತು.
ReplyDeleteವಿ.ರಾ.ಹೆ , ಉಮಾ , ಚಂದ್ರು ಅವರಿಗೆ ಧನ್ಯವಾದಗಳು.
ReplyDelete*ಮೂರ್ತಿಯವರೆ ನಮ್ಮ ಸುತ್ತಮುತ್ತಲೂ ವಾಸಿಸುವ ಅನೇಕ ಜೀವಿಗಳನ್ನು ನಾವು ಎಷ್ಟೋ ವೇಳೆ ಗಮನಿಸಿಯೇ ಇರುವುದಿಲ್ಲ. ಅದರಲ್ಲೂ ಮಲೆನಾಡಿನ ಜೀವವೈವಿಧ್ಯವಂತೂ ಗಮನಿಸಲು ಸಾಧ್ಯವೂ ಆಗದಷ್ಟಿವೆ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
*ಗುರುಮೂರ್ತಿಯವರೆ ದನ್ಯವಾದಗಳು.
* ಜಲನಯನ ಸರ್ ಅನೇಕ ವೈಜ್ಞಾನಿಕ ಸಂಶೂಧನೆಗಳಿಗೆ ಪ್ರೇರಣೆ ಪ್ರಕೃತಿಯೆಂಬುದು ರಹಸ್ಯವೇನಲ್ಲ.
ಹಾಂ.. ಮಕ್ಕಳಾದ ಮೇಲೆ ಹೆಂಗಸರು ಬುಧ್ಧಿವಂತರಾಗುತ್ತಾರಂತೆ ..... ಬಹುಶಃ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹುಡುಕಿಯೇ ಇರಬೇಕು.
ಒಳ್ಳೆಯ ಮಾಹಿತಿ ಕೊಟ್ಟಿದೆ... ನಂಗೆ ಇದೆಲ್ಲ ಗೊತ್ತಿರಲೇ.. :) ಚಿಕಳಿ ಕೊಟ್ಟೆ ಸುಮಾರು ಸಲ ತೊಂದರೆ ಕೊಟ್ಟಿದ್ದು ನನ್ಗಕ್ಕೆ, ಪೇರಳೆ ಹಣ್ಣು ಕೊಯ್ಯಲೇ ಕೊಡ್ತಿರ್ಲೆ...
ReplyDeleteಶರಶ್ಚಂದ್ರ ಕಲ್ಮನೆ
ತೋಟಕ್ಕೆ ಹೋದಾಗ ಮೈಗೆ ಹತ್ತಿವ ಸೌಳಿಯ ಬಗ್ಗೆ ಚನ್ನಾಗಿಬರೆದಿದ್ದೀರ.ಬರವಣಿಗೆ ಶೈಲಿ ಖುಶಿ ಕೊಟ್ಟಿತು.ಧನ್ಯವಾದಗಳು.
ReplyDeleteಇದಕ್ಕೆ ಸಿರಸಿ ಕಡೆ "ಸೌಳಿ" ಹೇಳ್ತೇವೆ.ನಾವು ಸಣ್ಣವರಿದ್ದಾಗ, ನಮ್ಮನೇಲಿ ಕೆಲಸಕ್ಕೆ ಇದ್ದ "ಹುಲಿಯ" ಎನ್ನುವ ಮುದುಕ ಇದನ್ನು ಹಿಡದು ತಿನ್ನುತ್ತಿದ್ದ. ಎಲ್ಲಿ ಇದರ ಗೂಡು ಕಂಡಲ್ಲಿ "ಹುಲಿಯ"ನ ಕರೆದು ತಿನ್ನು ಹೇಳುತ್ತಿದ್ದೆವು. ಅಂವ ಮೈಮೇಲಿದ್ದ ಇರುವೆ ಎಲ್ಲ ತಿನ್ನ್ಓದು ನೋಡೋದು ನಮಗೆ ಒಂಥರಾ ಖುಷಿ!
ReplyDeleteಇದು ತುಂಬಾ ಹೆಚ್ಆದರೆ, ಅಲ್ಲಿ ಕಬ್ಬಿನ ಸಿಪ್ಪೆ ಹಾಕಿದರೆ, "ಜಾಲ " ಎನ್ನುವ ಇನ್ನೊಂದು ಜಾತಿಯ ಕಚ್ಚದೇ ಇರುವ ಇರುವೆ ಸಂಖ್ಯೆ ಹೆಚ್ಚಾಗುತ್ತದೆ. ಇವುಗಳ ಸಂಖ್ಯೆ ಕಡಿಮೆ ಆಗುತ್ತದೆ.
ಧನ್ಯವಾದಗಳು,
meaningful, one must learn from these ants on how to live in undivided family ,ಚೆನ್ನಾಗಿದೆ
ReplyDeleteIt was a decade ago! Adike gidada budakke bidda soge kochta iddaaga "Souli Kottene" Kaimele biddittu. Kailidda kattiyinda savridaaga untaada marku nanna edagai mele permanent aagi iruvaangaaytu! Aadre souli bagge istond maahiti iralilla! estu chennaagi barediddeeri. Thanks for the lovely information. ondu vishaya souli kottege ondu vishishta reetiya smell iruttadalla yaake?
ReplyDeleteThank you very much for sharing such a wonderful information. Looking for more such kind of info.
ಮಾಹಿತಿ ಪೂರ್ಣ ಲೇಖನ, ಅಂದ ಹಂಗೆ ಫಾರ್ಮಿಕ್ ಆಸಿಡ್ ಚಿಗಳಿಯಲ್ಲಿ ಇರೋದ್ರಿಂದ ಹುಳಿ ಹುಳಿಯಾಗಿ ನೀವು ಹೇಳಿದಂತೆ ಚಿಗಳಿಯನ್ನು ಕೆಲವರು ತಿನ್ನುತ್ತಾರೆ, ಚಿಗಳಿ ಕೊಟ್ಟೆಯನ್ನು(ಅದರಲ್ಲಿರುವ ಮೊಟ್ಟೆಗಳು ಇನ್ನೂ ರುಚಿಕರವಂತೆ!) ಅರೆದು ಚಟ್ನಿ ಮಾಡಿ ತಿನ್ನುತ್ತಾರೆ ಎಂದು ಕೇಳಿದ್ದೇನೆ.
ReplyDelete@ಮೂರ್ತಿ ಹೊಸಬಾಳೆ
ಕೊಣಜವೇ ಬೇರೆ... ಚಿಗಳಿಯೇ ಬೇರೆ.. ಕೊಣಜ ಹಸಿ ಎಲೆಗಳನ್ನು ಸೇರಿಸಿ ಗೂಡು ಕಟ್ಟೋದಿಲ್ಲ, ಅದು ಸಗಣಿ ಮತ್ತು ಮಣ್ಣಿನಿಂದ ಗೂಡು ಕಟ್ಟುತ್ತದೆ.
ನಮಸ್ಕಾರ, ನಿಮ್ಮ ಪ್ರೊಫೈಲ್ನ ಜೀವಶಾಸ್ತ್ರ ಪದ, ಹೋಂ ಪೇಜಿನಲ್ಲಿರೋ ಈ ಲೇಖನ ಮೊದಲು ಸೆಳೀತು ನನ್ನ. ತುಂಬಾ ಚೆನ್ನಾಗಿ ಬರ್ದಿದಿರ. ಇದಕ್ಕೆ ನಮ್ಮ ಕಡೆ (ಉಡುಪಿ) ಚವ್ಳಿ ಅಂತಾರೆ. ಇದರ ಕ್ಲೊಸ್-ಅಪ್ ಫೋಟೋ ಒಂದ್ ತೆಗ್ದಿದೀನಿ..
ReplyDeletehttp://www.flickr.com/photos/palachandra/3867173696
ಅಂದಹಾಗೆ ಈ ಇರುವೆ ಮತ್ತೆ ಜೇನಿನ ಬೇರೆ ಬೇರೆ ಅವತಾರಗಳ ಬಗ್ಗೆ (ಕೆಲಸಗಾರ, ರಾಣಿ, ಗಂಡು) ಇನ್ನೊಂದ್ ಸ್ವಲ್ಪ ವಿವರಣೆ ಕೊಡಬಹುದೇ. ಈ ರೀತಿಯ ವರ್ಗೀಕರಣಕ್ಕೆ ಪ್ರಕೃತಿಯ ಯಾವ ಗುಣ ಇನ್ಫ್ಲುಯೆನ್ಸ್ ಆಗಿರಬಹುದು.
ನನ್ನ ಅಕ್ಕ ಚಿಕ್ಕವಳಿರಬೇಕಾದ್ರೆ, ಈ ಇರುವೆನ್ನಾ ಹಿಸುಕಿ ಒಸರೋ ಫಾರ್ಮಿಕ್ ಆಸಿಡ್ ಹಣೆಗೆ ಇಟ್ಕೊಂಡು ತುಂಬಾ ದಿನ ಉಳಿಯೋ ಬೊಟ್ಟು ಇಟ್ಕಂತಿದ್ಲು. ಫಾರ್ಮಿಕ್ ಆಸಿಡ್ಡಿಗೆ ಹೆಸ್ರು ಬಂದಿರೋದು ಫಾರ್ಮಿಕಾ ಪ್ರಜಾತಿಗೆ ಸೇರಿರೋ ಇರ್ವೆಗಳಿಂದ.