4 Feb 2010

ಕೀಟಗಳಲ್ಲಿ ಪಾಲಿಮಾರ್ಫಿಸಮ್

ಇದು ಕೊಣಜದ(wasp) ಗೂಡು.

ಟೈಲರ್ ಇರುವೆಯ ಬಗ್ಗೆ ನಾನು ಬರೆದ ಲೇಖನವನ್ನು ಮೆಚ್ಚಿ ಅನೇಕರು ಕಮೆಂಟಿಸಿದ್ದಾರೆ . ಮುರ್ತಿ ಹೊಸಬಾಳೆಯವರು ಸಾಗರದ ಕಡೆ ಇದಕ್ಕೆ ಕೊಣಜ ಎಂದೂ ಹೇಳುತ್ತಾರೆ ಎಂದಿದ್ದರು . ಆದರೆ ಅದನ್ನು ಅಲ್ಲಗೆಳೆದಿರುವ ಮನಸ್ವಿಯವರು ಕೊಣಜ ಸಗಣಿ ಮತ್ತು ಮಣ್ಣನ್ನು ಉಪಯೋಗಿಸಿ ಗೂಡು ಕಟ್ಟುವುದಾಗಿ ತಿಳಿಸಿದ್ದರು. ಇದು ನಿಜ . ಸಗಣಿ, ಮಣ್ಣು , ಮರದ ಪುಲ್ಪ್ ಜೊತೆಗೆ ಅದರ ಜೊಲ್ಲುರಸವನ್ನು ಸೇರಿಸಿ ಇದು ಗೂಡು ಕಟ್ಟುತ್ತದೆ. ಅನೇಕ ಪರಾವಲಂಬಿ ಕೀಟಗಳನ್ನು ತಿಂದು ಇದು ಜೀವಿಸುವುದರಿಂದ ರೈತರಿಗೆ ತುಂಬ ಉಪಕಾರಿ . ನೈಸರ್ಗಿಕ ಕೀಟನಾಶಕ.ವಸಂತ್ ಅವರು ಟೈಲರ್ ಇರುವೆಯ ಗೂಡಿಗಿರುವ ವಿಶಿಷ್ಠ ವಾಸನೆಯ ಬಗ್ಗೆ ಕೇಳಿದ್ದರು. ಅನೇಕ ಜಾತಿಯ ಇರುವೆಗಳನ್ನು ಹೊಸಕಿದಾಗ ವಿಶಿಷ್ಠವಾದ ವಾಸನೆ ಹೊರಹೊಮ್ಮುತ್ತದೆ. ಇದು ಅದರಲ್ಲಿ ತಯಾರಾಗುವ ಎಚ್ಚರಿಕೆ ನೀಡುವ ರಸಾಯನಿಕಗಳಿಂದ (ಅಲರಾಂ ಫೆರಾಮೋನ್) ಬರುವ ವಾಸನೆಯಾಗಿದೆ . ಇತರ ಇರುವೆಗಳಿಗೆ ಇದರಿಂದ ಅಪಾಯದ ಸೂಚನೆ ದೊರೆಯುತ್ತದೆ.ಇನ್ನು ಪಾಲಚಂದ್ರ ಅವರು ಇರುವೆ , ಜೇನು ಮೊದಲಾದವುಗಳಲ್ಲಿರುವ ಪಾಲಿಮಾರ್ಫಿಸಂ ಅಥವಾ ಬಹುರೂಪಗಳ ಬಗ್ಗೆ ವಿವರಣೆ ಬಯಸಿದ್ದರು . ನನಗೆ ತಿಳಿದ ಮಟ್ಟಿಗೆ ವಿವರಿಸಲು ಯತ್ನಿಸುತ್ತೇನೆ.ಗೆದ್ದಲು , ಇರುವೆ, ಜೇನು ಮತ್ತು ಕೊಣಜ (wasp)ಗಳನ್ನು social insect ಎಂದು ಹೇಳುತ್ತಾರೆ. ಒಂದೇ ಗುಂಪಿನಲ್ಲಿ ಅಥವಾ ಗೂಡಿನಲ್ಲಿ ವಿವಿಧ ರೀತಿಯ ಕೆಲಸ ನಿರ್ವಹಿಸುವ , ದೈಹಿಕವಾಗಿಯೂ ವಿಭಿನ್ನವಾಗಿರುವ ಜೀವಿಗಳು ಒಟ್ಟಾಗಿ ಜೀವಿಸುತ್ತವೆ. ಇವುಗಳ ಒಂದು ಗುಂಪಿನ ಸದಸ್ಯರ ಸಂಖ್ಯೆ ಲಕ್ಷಕ್ಕೂ ಮೀರಿಯೂ ಇರಬಹುದು. ಅಷ್ಟೊಂದು ಸಂಖ್ಯೆಯಲ್ಲಿದ್ದರೂ ಪ್ರತಿಯೊಂದು ಸದಸ್ಯನೂ ನಿರ್ದಿಷ್ಟವಾದ, ಸಮುದಾಯದ ಹಿತಕ್ಕಾಗಿಯೆ ಕಾರ್ಯ ನಿರ್ವಹಿಸುತ್ತವೆಯಾದ್ದರಿಂದ ಇವುಗಳನ್ನು ಸೋಶಿಯಲ್ ಇನ್ಸೆಕ್ಟ್ ಎನ್ನುತ್ತಾರೆ.

ಜೀವನಚಕ್ರದಲ್ಲಿ ಮೊಟ್ಟೆ , ಲಾರ್ವ , ನಿಂಫ್ , ಅಡಲ್ಟ್ ಎಂಬ ನಾಲ್ಕು ಹಂತಗಳಿವೆ.

ಇವುಗಳ ಒಂದು ಗುಂಪಿನಲ್ಲಿ ಮುಖ್ಯವಾಗಿ ೩ ಜಾತಿಯಿರುತ್ತದೆ. ಗುಂಪಿನ ಮುಖ್ಯಸ್ಥೆ ರಾಣಿ , ಗಂಡು ಮತ್ತು ಕೆಲಸಗಾರ . ಕೆಲವೊಂದು ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಎಲ್ಲ ಸೊಶಿಯಲ್ ಇನ್ಸೆಕ್ಟ್ ಗಳಲ್ಲಿ ಇವುಗಳ ರೀತಿ ನೀತಿಗಳು ಒಂದೇ ಆಗಿವೆ.
ರಾಣಿ :
ದೈಹಿಕವಾಗಿ ಇದು ಉಳಿದ ಸದಸ್ಯರಿಗಿಂತ ದೊಡ್ಡದಿರುತ್ತದೆ.
ಇದು ಮೊಟ್ಟೆಯಿಡುವ ಕಾರ್ಖಾನೆ. ತನ್ನ ಜೀವಿತಾವಧಿಯಲ್ಲಿ ಲಕ್ಷಾಂತರ ಮೊಟ್ಟೆಯಿಡುತ್ತವೆ .
ಒಂದು ಮರಿ ರಾಣಿಯಾಗಿ ಬೆಳೆಯುವುದು ಅದಕ್ಕೆ ಕೆಲಸಗಾರರು ನೀಡುವ ವಿಶಿಷ್ಠವಾದ ಆಹಾರದಿಂದ.
ತನ್ನ ಜೀವಿತಾವಧಿಯಲ್ಲಿ ಕೇವಲ ಒಂದೇ ಬಾರಿ ಗಂಡಿನೊಂದಿಗೆ ಮಿಲನಗೊಳ್ಳುವ ರಾಣಿ ಅದರ ವೀರ್ಯವನ್ನು ತನ್ನ ದೇಹದಲ್ಲಿನ ಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡು ಮೊಟ್ಟೆಯಿಡುವಾಗ ಉಪಯೋಗಿಸುತ್ತದೆ.
ಮೊಟ್ಟೆಯಿಡುವುದು ಮತ್ತು ಕೆಲ ಹಾರ್ಮೋನುಗಳ ಮುಖಾಂತರ ಕೆಲಸಗಾರನ್ನು ನಿಯಂತ್ರಿಸುವುದು ಬಿಟ್ಟರೆ ಬೇರಾವ ಕೆಲಸವನ್ನೂ ರಾಣಿ ಮಾಡಾಲಾರದು . ಆಕೆ ಗೂಡನ್ನು ಬಿಟ್ಟು ಹೊರಬರುವುದು ಕೂಡಾ ಮಿಲನಕ್ರಿಯೆಗಾಗಿ ಮತ್ತು ಹೊಸ ಗೂಡು ಕಟ್ಟುವುದಕ್ಕಾಗಿಯಷ್ಟೆ.
ಜೇನು ಹುಳುಗಳಲ್ಲಿ ರಾಣಿಯ ಜೀವಿತಾವಧಿ ಆಕೆಯ ಮೊಟ್ಟೆಯಿಡುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಅದು ಸಂಗ್ರಹಿಸಿದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಂತೆ ಮೊಟ್ಟೆಯಿಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಆಗ ಅದನ್ನು ಉಳಿದ ಕೆಲಸಗಾರ ಹುಳುಗಳೇ ಸಾಯಿಸಲೂಬಹುದು.

ಗಂಡು :
ಒಂದು ಗುಂಪಿನಲ್ಲಿ ಕೆಲವೆ ಗಂಡು ಇರುತ್ತವೆ.
ಗುಂಪಿನ ಪರಮ ಸೋಮಾರಿ ಜೀವಿ.
ರಾಣಿಯ ಜೊತೆ ಒಂದೇ ಬಾರಿ ನಡೆಸುವ ಮಿಲನಕ್ರಿಯೆಯೆ ಇದರ ಜೀವನದ ಪರಮೋದ್ದೇಶ. ಅನೇಕ ಜಾತಿಯಲ್ಲಿ ಮಿಲದ ನಂತರ ಸತ್ತೇ ಹೋಗುತ್ತವೆ.
ಬೇರಾವುದೇ ಕೆಲಸವನ್ನೂ ಇದು ಮಾಡುವುದಿಲ್ಲ .

ಕೆಲಸಗಾರ:
ಗುಂಪಿನ ಆತ್ಯಂತ ಕ್ರಿಯಾಶೀಲ ಹೆಣ್ಣು ಜೀವಿ.
ನರ್ಸಿಂಗ್ , ಕ್ಲೀನಿಂಗ್ , ಗೂಡುಕಟ್ಟುವುದು , ರಕ್ಷಣೆ , ಆಹಾರ ಸಂಗ್ರಹಣೆ , ಮೊದಲಾದ ಎಲ್ಲ ಜವಾಬ್ದಾರಿ ಇವುಗಳದ್ದು .
ಲೈಂಗಿಕ ಸಾಮರ್ಥ್ಯವಿಲ್ಲ.
ಅದರ ಕೆಲಸಗಳಿಗೆ ಅನುಕೂಲವಾಗುವಂತೆಯೆ ಅದರ ದೇಹರಚನೆಯಿರುತ್ತದೆ.
ಅಡಲ್ಟ್ ಆಗಿ ಬೆಳೆದ ಪ್ರಥಮ ದಿನದಿಂದಲೇ ಅದರ ಕೆಲಸಗಳು ಪ್ರಾರಂಭಾವಾಗುತ್ತವೆ. ಮೊದಲ ಕೆಲ ದಿನಗಳು ಮೊಟ್ಟೆ ಮರಿಗಳನ್ನು ನೋಡಿಕೊಳ್ಳುವುದು ಅವಕ್ಕೆ ಆಹಾರ ನೀಡುವ ಕೆಲಸ ಮಾಡುತ್ತವೆ . ನಂತರ ಗೂಡಿನ ಸ್ವಚ್ಛತೆ ,ಗೂಡು ನಿರ್ಮಿಸುವುದು ಮೊದಲಾದ ಕೆಲಸ ಮಾಡುತ್ತವೆ . ಸ್ವಲ್ಪ ದಿನಗಳಾದ ಮೇಲೆ ಗೂಡಿನ ರಕ್ಷಣೆ ಮಾಡುತ್ತವೆ . ನಂತರ ಆಹಾರ ಸಂಗ್ರಹಿಸಲು ಹೊರಹೋಗುತ್ತವೆ. ಹೀಗೆ ವಯಸ್ಸಿಗೆ ತಕ್ಕಂತೆ ಕೆಲಸದ ಹಂಚಿಕೆ ನಡೆಯುತ್ತದೆ.
ಯಾವುದೋ ಕಾರಣದಿಂದ ರಾಣಿ ಇಲ್ಲವಾದರೆ ತಕ್ಷಣ ಮರಿಗೆ ರಾಯಲ್ ಫುಡ್ ನೀಡಿ ರಾಣಿಯನ್ನು ತಯಾರು ಮಾಡುತ್ತವೆ.
ವೈರಿಗಳಿಂದ ಗೂಡಿಗೆ ತೊಂದರೆಯುಂಟಾದಾಗ ತಮ್ಮನ್ನು ಬಲಿಕೊಟ್ಟಾದರೂ ಮೊಟ್ಟೆ ಮರಿಗಳನ್ನು , ರಾಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತವೆ.
ಬಹುಶಃ ಮಾನವನಿಗೆ ವಾಸಕ್ಕಾಗಿ ಮನೆ ನಿರ್ಮಿಸಿಕೊಳ್ಳುವ ಯೋಚನೆ ಬರುವುದಕ್ಕಿಂತಲೂ ಎಷ್ಟೋ ವರ್ಷ ಮೊದಲೇ ಈ ಕೀಟಗಳು ತಮಗಾಗಿ ಸುಂದರ ಗೂಡು ಕಟ್ಟಲು ಕಲಿತಿವೆ. ಗೂಡಿನ ಉಷ್ಣತೆಯನ್ನು ನಿಯಂತ್ರಿಸುವ ವಿಧಾನ ತಿಳಿದಿದೆ . ಜೇನಿನ ಗೂಡಿನಲ್ಲಿ ಕೆಲಸಗಾರ ಹುಳುಗಳು ತಮ್ಮ ರೆಕ್ಕೆ ಬೀಸುವುದರಿಂದ ಉಷ್ಣತೆಯನ್ನು ನಿಯಂತ್ರಿಸುತ್ತವೆ!!
ಸಮುದಾಯಕ್ಕಾಗಿ ಆಹಾರ ಸಂಗ್ರಹಿಸುವುದು , ಅವುಗಳನ್ನು ಕಾಯ್ದಿಡುವುದನ್ನು ಅರಿತಿವೆ. ಅನೇಕ ಇರುವೆಗಳು, ಗೆದ್ದಲುಗಳು ತಮ್ಮ ಗೂಡಿನಲ್ಲಿ ಆಹಾರಕ್ಕಾಗಿ ಶಿಲೀಂದ್ರಗಳನ್ನು ಬೆಳೆಸುತ್ತವೆ.

ಪ್ರಕೃತಿಯಲ್ಲಿ ತನ್ನ ಉಳಿವಿಗಾಗಿ ಪ್ರತಿಯೊಂದು ಜೀವಿಯು ಅನೇಕ ರೀತಿಯಲ್ಲಿ ಹೋರಾಟ ನಡೆಸುತ್ತದೆ . ಇಂತಹ ಹೋರಾಟವೇ ಬಹುಶಃ ಈ ಕೀಟಗಳ ಸಂಘಜೀವನಕ್ಕೆ ಕಾರಣವಿರಬಹುದು.

16 comments:

 1. Wonderful narration and useful info. Thanks for informative writing. I started transfering the same story to my little kids. I'll also take the print out and post on the notice board of my children's school!

  ReplyDelete
 2. ಸಂಗ್ರಹಯೋಗ್ಯ ಬರಹ....ನಿಮ್ಮ ಜೀವಶಾಸ್ತ್ರದ ಪರವಾದ ಆಸಕ್ತಿ ನಮಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸುತ್ತಿದೆ...:) ಧನ್ಯವಾದಗಳು

  ReplyDelete
 3. ಸುಮ...

  ಬಹಳಷ್ಟು ತಿಳಿಯದಿರುವ ಮಾಹಿತಿಗಳನ್ನು ಒದಗಿಸಿದ್ದೀರಿ..

  "ಹೆಣ್ಣು" ಎಲ್ಲಾಕಡೆಯಲ್ಲೂ ಚಟುವಟಿಕೆಯಿಂದಿರುವ ಜೀವಿ
  ಗಂಡು ಸೋಮಾರಿ...

  ಸಿಂಹಗಳಲ್ಲೂ ಇದೇ ರೀತಿ ಅಂತ ಕೇಳಿದ್ದೇನೆ..

  ಪಕ್ಷಿಗಳಲ್ಲೂ ಹಾಗೆ...

  ಪುಟ್ಟ ಮರಿಗೆ ಆಹಾರ...
  ಹಾರುವದನ್ನು ಕಲಿಸುವದು ತಾಯಿ ಹಕ್ಕಿಯಂತೆ...

  ಕೆಲವೊಂದು ವಿಷಯ ಸೋಜಿಗ ಅಲ್ಲವಾ...?

  ReplyDelete
 4. ಸುಮಾ ಮೇಡಮ್,

  ಕೀಟಗಳ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ. ನಾನು ಚಿಟ್ಟೆಗಳ ಹಿಂದೆ ಬಿದ್ದು ಅವಗಳ ಮಾಹಿತಿಯನ್ನು ಕಲೆಹಾಕುತ್ತೇನೆ. ಇದರಿಂದ ಫೋಟೊಗ್ರಫಿ ಸುಲಭ. ನನಗೆ ಚಿಟ್ಟೆಗಳ ಬಗ್ಗೆ ಇಂಥ ಅನೇಕ ಮಾಹಿತಿಗಳನ್ನು ಕೊಟ್ಟಿದ್ದು ಖ್ಯಾತ ಛಾಯಾಗ್ರಾಹಕರು, ಪರಿಸರಪ್ರೇಮಿಗಳು ಆದ "ಟಿ.ಎನ್.ಪೆರುಮಾಳ್‍"ರವರು ಬರೆದ "south indian butterflies" ಪುಸ್ತಕದಿಂದ. ಅದು ನಿಜಕ್ಕೂ ಚಿಟ್ಟೆಗಳ ಬಗ್ಗೆ ಮಾಹಿತಿಯ ಗಣಿ. ಈಗ ಮತ್ತೆ ಅದೇ ತಂಡದವರು "Indian Insects" ಎನ್ನುವ ಪುಸ್ತಕವನ್ನು ಹೊರತರುತ್ತಿದ್ದಾರೆ. ಸಂಪೂರ್ಣವಾಗಿ ಎಲ್ಲಾ ಕೀಟಗಳ ಬಗ್ಗೆ ಅದ್ಭುತವಾದ ಮಾಹಿತಿಯನ್ನು ಹೊಂದಿರುವ ಪುಸ್ತಕ. ಇದು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬಹುದು. ಅದನ್ನು ಖಂಡಿತ ತಿಳಿಸುತ್ತೇನೆ. ಪ್ರತಿಯೊಬ್ಬರ ಮನೆಯಲ್ಲೂ ಇರಬೇಕಾದ ಪುಸ್ತಕವಿದು.
  ಧನ್ಯವಾದಗಳು.

  ReplyDelete
 5. Suma, Just I had been to my children's school. Its a unique school named as Bala Balaga, situated at a picturesque place at Dharwad. Today they have a programme called Jeeva Vaividhya! I suggested to display all your writings on these subject during the function. Kindly visit www.baalabalaga.org Also kindly send your mail address so that the school will send you a thanks through mail!

  ReplyDelete
 6. 'ಸುಮಾ ' ಅವರೇ..,

  ಉಪಯುಕ್ತ ಮಾಹಿತಿಯನ್ನೇ ನೀಡಿರುವಿರಿ, ಹೀಗೆಯೇ ಇನ್ನೂ ಬೇರೆ ಬೇರೆ ಜೀವಿಗಳ ಬಗ್ಗೆ ಬರೆಯುತ್ತಿರಿ..

  ನನ್ನ 'ಮನಸಿನಮನೆ'ಗೆ...:http//manasinamane.blogspot.com

  ReplyDelete
 7. ಉತ್ತಮ ಮಾಹಿತಿಯನ್ನು ರಂಜಕವಾಗಿ ನೀಡಿದ್ದೀರಿ. ತುಂಬಾ ಧನ್ಯವಾದಗಳು.

  ReplyDelete
 8. ಸರಳ, ಸಮಗ್ರ ಹಾಗೂ ಸು೦ದರ ವಿವರಣೆಯೊಡನೆ ಸ೦ಗ್ರಹಯೋಗ್ಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ತಮ್ಮ ಶೈಲಿ ವಿಭಿನ್ನ ಹಾಗೂ ವಿಶಿಷ್ಟ. ನಾನ೦ತೂ ತಮ್ಮ ಅಭಿಮಾನಿಯಾಗಿದ್ದೆನೆ.

  ReplyDelete
 9. ಸುಮಾ ಮೇಡಂ
  ತುಂಬಬ ಸರಳವಾಗಿ ತಿಳಿಸಿದ್ದಿರಿ
  ವಿಜ್ಞಾನದ ಬಗೆಗಿನ ನಿಮ್ಮ ಲೇಖನಗಳು ಬಹಳಷ್ಟು ಸಂಗ್ರಹಯೋಗ್ಯವಾಗಿದೆ

  ReplyDelete
 10. ಸುಮಾ ಮೇಡಂ,
  ತುಂಬಾ ದಿನಗಳಿಂದ ಕೇಳಬೇಕೆಂದು ಇದ್ದೆ ..... ಎಲ್ಲಿಂದ ಇಷ್ಟೆಲ್ಲಾ ಮಾಹಿತಿ ತೆಗಿತೀರಿ ...... ತುಂಬಾ ಉಪಯುಕ್ತ ಮಾಹಿತಿ.... ಧನ್ಯವಾದಗಳು....

  ReplyDelete
 11. ಸುಮಾ ಬಹಳ ಚನ್ನಾಗಿ ವಿವರಣೆ ನೀಡಿದ್ದೀರಿ, ಕೀಟಗಳ ಜೀವವಿಕಾಸ ಸರಣಿಯಲ್ಲಿ ಸಾಮಾಜಿಕ ಹೊಣೆಗಾರಿಕೆ (social responsibilities) ಎನ್ನುವುದು ಬಹಳ ಮಂದಿ ಸಂಶೋಧಕರನ್ನು ಆಕರ್ಷಿಸಿದ ವಿಷಯ. ಗೂಡು ಕಟ್ಟುವೆಕೆ, ಕೆಲಸದ ವಿತರಣೆ, ಗಂಡು ಹೆಣ್ಣುಗಳ ಸಂಬಂಧಗಳು, ಶಿಸ್ತು..ಇತ್ಯಾದಿ. ಫೆರಾಮೋನ್ ಬಗ್ಗೆ ಅಧ್ಯಯನಕ್ಕೂ ಕೀಟಗಳೇ ಪ್ರಮುಖ ಕಾರಣ ಎನ್ನಬಹುದು. ಒಳ್ಳೆಯ ಮಾಹಿತಿ. ಇದನ್ನೆಲ್ಲ ಶೇಖರಿಸಿಡಿ...ಮುಂದಿನ ನಮ್ಮ ಕೆಲಸಕ್ಕೆ ಬಹಳ handy ಆಗುತ್ತೆ ಎದೆಲ್ಲಾ.

  ReplyDelete
 12. This comment has been removed by the author.

  ReplyDelete
 13. Suna mail check maadidiraa? ondu contact needidde! nimage upayuktavaagabahudendu. anekaru nimma abhimaanigalaaguttiddaare! congratulations! nanna e-mail: vbhats13@gmail.com

  ReplyDelete
 14. ತುಂಬಾ ಚೆನ್ನಾಗಿದೆ ಲೇಖನ. ಬಹು ಮಾಹಿತಿಪೂರ್ಣ ಕೂಡ. ಕೀಟಗಳಲ್ಲಿರುವ ಶಿಸ್ತು, ಸ್ವಂತಿಕೆ, ಸ್ವಾವಲಂಬನೆ ನಮ್ಮಲ್ಲಿ ಇಲ್ಲ! ಅತಿ ಬುದ್ಧಿವಂತ ಮಾನವ ತನ್ನವರಿಗೇ ಕೇಡು ಬಯಸುತ್ತಾನೆ. ಹೋರಾಡಿ ಕಾಪಾಡುವುದು ದೂರದ ಮಾತು ಎಷ್ಟೋ ಕಡೇ ತನ್ನ ಮನೆಯನ್ನು, ಮನೆಯವರನ್ನೇ ಪಣಕ್ಕಿಟ್ಟು ನಾಶಗೈಯುತ್ತಾನೆ.

  ನಿಜಕ್ಕೂ ಮನುಜರು ಪ್ರಕೃತಿಯ ಮುಂದೆ ತುಂಬಾ ಅಲ್ಪರು. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.

  ReplyDelete
 15. ಸರಳವಾಗಿ,ಎಲ್ಲ ಮಾಹಿತಿಯನ್ನು ಕೊಟ್ಟಿದ್ದೆ ಸುಮಾ.. ಹೀಗೆ ಮುಂದೆಯೂ ಕೊಡ್ತಾ ಇರು!!

  ReplyDelete