ಬೇಸಿಗೆ ರಜಾ ಪ್ರಾರಂಭವಾಗುವುದರಲ್ಲಿದೆ. ಮಕ್ಕಳಿಗೆ ಊರಿಗೋ ಅಥವಾ ಪ್ರವಾಸಕ್ಕೋ ಹೋಗುವ ಸಂಭ್ರಮ. ಮನೆಯಲ್ಲಿ ಎಲ್ಲರೂ ನಾಲ್ಕಾರು ದಿನಗಳ ಮಟ್ಟಿಗೆ ಹೊರಗೆ ಹೋಗಬೇಕೆಂದರೆ ಎದುರಾಗುವ ಸಮಸ್ಯೆಗಳು ಹಲವು. ಈ ನಗರದ ಪುಟ್ಟಪುಟ್ಟ ಮನೆಗಳಲ್ಲಿ ಮನ ತಣಿಸಲೆಂದೇ ಕುಂಡದಲ್ಲಿ ತುಳಸಿ, ಕರಿಬೇವು, ಬಸಲೆ, ಸೇವಂತಿಗೆ ಇತ್ಯಾದಿ ಗಿಡಗಳನ್ನು ಬೆಳೆಸಿರುತ್ತೇವೆ. ಈ ಬೇಸಗೆಯ ಝಳಕ್ಕೆ ನಾಲ್ಕಾರು ದಿನಗಳವರೆಗೆ ನೀರು ಹಾಕದಿದ್ದರೆ ಎಲ್ಲವೂ ಒಣಗಿ ಕರಕಲಾಗಿರುತ್ತವೆ. ಇದಕ್ಕೊಂದು ಉಪಾಯ ಸರಳವಾಗಿ ನಾವೇ ಮಾಡಿಕೊಳ್ಳಬಹುದಾದ ಹನಿ ನೀರಾವರಿ ಸಾಧನ.
ಮುಚ್ಚಳವಿರುವ ಬಕೆಟ್ ತೆಗೆದುಕೊಂಡು ಕೆಳಭಾಗದಲ್ಲಿ ಒಂದು ಫಿಟಿಂಗ್ ಪೈಪ್ ತೂರಬಹುದಾದಷ್ಟು ದೊಡ್ಡದಾಗಿ ಕೊರೆದು ಫಿಟ್ಟಿಂಗ್ ಪೈಪ್ ತೂರಿಸಿ ಎಂಸೀಲ್ ನಿಂದ ಅಂಟಿಸುವುದು. ನಂತರ ಇದಕ್ಕೆ ಪ್ಲಾಸ್ಟಿಕ್ ಟ್ಯೂಬ್ ಅನ್ನು ಜೋಡಿಸಿಕೊಳ್ಳಬೇಕು. ಬಕೆಟ್ ಸ್ವಲ್ಪ ಮೇಲ್ಭಾಗದಲ್ಲಿರಿಸಿ ಕೆಳಗೆ ನೀರಿನ ಅವಶ್ಯಕತೆ ತೀರಾ ಹೆಚ್ಚಿರುವ ಗಿಡಗಳಿರುವ ಕುಂಡಗಳನ್ನು ಸಾಲಾಗಿ ಇರಿಸಬೇಕು. ನೀರಿನ ಟ್ಯೂಬ್ ಅನ್ನು ಕುಂಡಗಳ ಮೇಲೆ ಇರಿಸಿ ಪ್ರತೀ ಗಿಡಗಳಿಗೂ ನೀರು ತಾಗುವಂತೆ ಟ್ಯೂಬಿನಲ್ಲಿ ಚಿಕ್ಕ ತೂತೊಂದನ್ನು ಕೊರೆಯಬೇಕು. ಟ್ಯೂಬಿನ ತುದಿಯನ್ನು ಲಂಬವಾಗಿ ನಿಲ್ಲಿಸಿದ ಕೋಲೊಂದಕ್ಕೆ ಬಿಗಿಯಾಗಿ ಕಟ್ಟಬೇಕು. ಬಕೆಟ್ ತುಂಬಾ ನೀರು ತುಂಬಿಸಿದೊಡನೆ ಟ್ಯೂಬ್ ಗಳಲ್ಲಿ ನೀರು ಹರಿಯುತ್ತದೆ. ಅದರಲ್ಲಿನ ಚಿಕ್ಕ ತೂತಿನ ಮೂಲಕ ಗಿಡಕ್ಕೆ ಹನಿಹನಿಯಾಗಿ ನೀರು ತಲುಪುತ್ತದೆ. ಈ ತೂತುಗಳಲ್ಲಿ ಚಿಕ್ಕದೊಂದು ಕಡ್ಡಿಯನ್ನು ತೂರಿಸುವುದರ ಮೂಲಕ ಬೇಕಾದ ಪ್ರಮಾಣದ ಹನಿಯನ್ನು ಪಡೆಯಬಹುದು.
(ಊರಿನಲ್ಲಿ ನಿಮಿಷ ಬಿಡುವಿಲ್ಲದೆ ತೋಟದ ಕೆಲಸದಲ್ಲಿ ಮುಳುಗುವ ಅಪ್ಪನಿಗೆ, ಈ ಬೆಂಗಳೂರಿನ ನಮ್ಮ ಮನೆಗೆ ಬಂದಾಗೆಲ್ಲ ಹೊತ್ತು ಕಳೆಯುವುದೇ ಕಷ್ಟವಾಗಿಬಿಡುತ್ತದೆ. ಹೊತ್ತು ಕಳೆಯಲು ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿ ಏನನ್ನಾದರೂ ಮಾಡುವ ಅಭ್ಯಾಸವಿರುವ ಅಪ್ಪ ಈ ಬಾರಿ ಬಂದಾಗ ಈ ಮಿನಿ ಹನಿ ನೀರಾವರಿ ಸಾಧನವನ್ನ ಮಾಡಿಕೊಟ್ಟಿದ್ದಾರೆ.)

ತುಂಬ ಉತ್ತಮವಾದ ಹಾಗು ಸರಳ ಉಪಾಯವನ್ನು ತಿಳಿಸಿದ್ದಕ್ಕಾಗಿ ನಿಮ್ಮ ತಂದೆಯವರಿಗೆ ಹಾಗು ನಿಮಗೆ ಧನ್ಯವಾದಗಳು.
ReplyDeleteThank you kaka
Deleteಸೂಪರ್ ಮೇಡಂ..
ReplyDeleteಸರಳವಾಗಿದೆ.. ಮತ್ತು ಎಲ್ಲರೂ ಅನುಸರಿಸಬಹುದಾದ ಪರಿಹಾರ.
ಸಾಮಾನ್ಯ ಜನರ ಸಮಸ್ಯೆ ಇದು.. ಮನೆಯಿಂದ ಹೊರಗೆ ಹೋದಾಗ ಏನೂ ಮಾಡೋದು ಅಂತ.. ಅದಕ್ಕೆ ತಕ್ಕ ಉತ್ತರ ಇಲ್ಲಿದೆ
Thanks Srikanth
Delete